ಖಾಲಿ ಹುದ್ದೆಗಳ ಸಂಕಷ್ಟ: 86 ಸಾವಿರ ನಿವೃತ್ತಿ, ನೇಮಕಾತಿ ವಿಳಂಬದಿಂದ ಒತ್ತಡ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ಸರ್ಕಾರವೇ ನೀಡಿದ ಮಾಹಿತಿಯಂತೆ  2.80 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಆದರೆ ಈಗ 86,000 ಸಿಬ್ಬಂದಿಗಳು ನಿವೃತ್ತಿ ಅಂಚಿಗೆ ತಲುಪಿದ್ದು, ಸರ್ಕಾರಿ ನೌಕರರ ಮೇಲೆ ಕೆಲಸದ ಹೊರೆ ಅಧಿಕವಾಗಲಿದೆ. ಮತ್ತೊಂದು ಕಡೆ ಸರ್ಕಾರ ನೇಮಕಾತಿಗೆ ವಿಳಂಬ ಮಾಡುತ್ತಿದ್ದು, ಸರ್ಕಾರಿ ಕೆಲಸದಲ್ಲಿರುವ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ.
2026-20230ರ ತನಕ 86,398 ಸಿಬ್ಬಂದಿಗಳು ನಿವೃತ್ತರಾಗಲಿದ್ದಾರೆ. ಆದರೆ ರಾಜ್ಯ ಸರ್ಕಾರ ಈಗಿರುವ ಖಾಲಿ ಹುದ್ದೆಗಳ ಜೊತೆಗೆ ಇಷ್ಟು ನೇಮಕಾತಿ ಮಾಡಲಿದೆಯೇ?, ಮಾಡದಿದ್ದರೆ ಸರ್ಕಾರಿ ನೌಕರರ ಮೇಲೆ ಅಧಿಕ ಕಾರ್ಯ ದೊತ್ತಡ ಉಂಟಾಗಲಿದೆ.

ಈಗಾಗಲೇ ವಿವಿಧ ಇಲಾಖೆಗಳಲ್ಲಿ2.84 ಲಕ್ಷ ಹುದ್ದೆಗಳು ಖಾಲಿ ಇವೆ. ಈಗ ಸುಮಾರು 1 ಲಕ್ಷ ಜನರು ವಯೋನಿವೃತ್ತಿ ಹೊಂದಿದರೆ ಸರ್ಕಾರದ ಆಡಳಿತ ಯಂತ್ರದ ಮೇಲೆ ಪರಿಣಾಮ ಉಂಟಾಗಲಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ಸರ್ಕಾರ ಆದ್ಯತೆಯ ಮೇಲೆ ಗಮನ ಕೊಡಬೇಕಿದೆ.

ಇದನ್ನೂ ಓದಿ: ದೇಹದ ಹಕ್ಕಿನ ಮೇಲೆ ರಾಜ್ಯ-ನ್ಯಾಯಾಲಯದ ಹಿಡಿತ

ಯಾವ ವರ್ಷ ಎಷ್ಟು?; ಸದ್ಯದ ಮಾಹಿತಿ ಪ್ರಕಾರ 2026ರಲ್ಲಿ 16,513, 2027ರಲ್ಲಿ 16,800, 2028ರಲ್ಲಿ 17,726, 2029ರಲ್ಲಿ 18,100 ಮತ್ತು 2030ರಲ್ಲಿ 17,259 ಸಿಬ್ಬಂದಿಗಳು ವಯೋನಿವೃತ್ತಿ ಹೊಂದಲಿದ್ದಾರೆ.

ಸರ್ಕಾರದ ಮುಂದಿರುವ ಈಗಿನ ದಾರಿ ಒಳ ಮೀಸಲಾತಿ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರವನ್ನು ಹುಡುಕಿ ನೇಮಕಾತಿಯನ್ನು ಮಾಡುವುದು. ಯುಪಿಎಸ್‌ ಮಾದರಿಯಲ್ಲಿ ವಾರ್ಷಿಕ ಎಷ್ಟು ನೇಮಕಾತಿ ಮಾಡಬೇಕು? ಎಂಬ ಕ್ಯಾಲೆಂಡರ್ ತಯಾರು ಮಾಡುವುದು.

ನೇಮಕಾತಿ ಅಧಿಸೂಚನೆಗಳು ಕೋರ್ಟ್ ಮೆಟ್ಟಿಲೇರಿ ವಿಳಂಬವಾಗುವುದನ್ನು ಮೊದಲೇ ತಡೆಯುವುದು. ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದ ವಿವಿಧ ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಇವೆ. ನಿಗಮ/ ಮಂಡಳಿಗಳಲ್ಲಿ 1,01,295 ಹುದ್ದೆಗಳು ಖಾಲಿ ಇವೆ.

ಕಳೆದ ಮೂರು ವರ್ಷಗಳ ನೇಮಕಾತಿ ನೋಡಿದರೆ. 2023-24ರಲ್ಲಿ ಕೆಪಿಎಸ್‌ಸಿ ಮೂಲಕ ಹೊರಡಿಸಿದ ಅಧಿಸೂಚನೆ 10, 1,603 ಹುದ್ದೆಗಳು. ಕೆಇಎ ಮೂಲಕ 2023-24ರಲ್ಲಿ ಹೊರಡಿಸಲಾದ ಅಧಿಸೂಚನೆ 17, 6,554 ಹುದ್ದೆಗಳು.

ಪ್ರತಿ ವರ್ಷ ಸುಮಾರು 17 ಸಾವಿರ ನೌಕರರು ವಯೋನಿವೃತ್ತಿ ಹೊಂದುತ್ತಾರೆ. ಆದರೆ ಸರ್ಕಾರ ಅಷ್ಟು ನೇಮಕಾತಿ ಮಾಡುವುದಿಲ್ಲ. ಹೊರ ಗುತ್ತಿಗೆ, ಪ್ರಭಾರ ಹುದ್ದೆ ಎಂದು ಇರುವ ನೌಕರರ ಮೇಲೆ ಕಾರ್ಯ ದೊತ್ತಡ ಜಾಸ್ತಿ ಮಾಡುತ್ತದೆ.

ಧಾರವಾಡದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡುವಂತೆ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆಯಿತು. ಆಗ ಸರ್ಕಾರ 56,000 ಹುದ್ದೆಗಳ ನೇಮಕಾತಿ ಮಾಡುವುದಾಗಿ ಘೋಷಣೆ ಮಾಡಿದೆ.

ಆದರೆ ಒಳ ಮೀಸಲಾತಿ, ಚುನಾವಣಾ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಕ್ಕೆ ಈ ಘೋಷಣೆ ಹಾಗೆಯೇ ಉಳಿದಿದೆ. ಆಡಳಿತ ಯಂತ್ರ ಚುರುಕುಗೊಳಿಸಲು ಸರ್ಕಾರ ನೇಮಕಾತಿಗಳನ್ನು ಪ್ರಾರಂಭಿಸುವುದು ತುರ್ತು ಅಗತ್ಯವಾಗಿದೆ. ಇಲ್ಲವಾದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಲಿದೆ.

ಇದನ್ನೂ ನೋಡಿ: “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media

Donate Janashakthi Media

Leave a Reply

Your email address will not be published. Required fields are marked *