ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯು ಏಪ್ರಿಲ್ 9ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ ಎಂದು ನಿಗದಿಯಾಗಿದೆ.. ಈ ನಡುವೆ, ಚುನಾವಣಾ ಆಯೋಗದಿಂದ ಒಂದು ಎಡವಟ್ಟಾಗಿದೆ. ಇದನ್ನು, ಕಾಂಗ್ರೆಸ್ ಮತ್ತು ಎಡಪಕ್ಷಗಳು ಪ್ರಶ್ನಿಸಿವೆ. ಚುನಾವಣೆ
UDF – LDF – NDA ಮೈತ್ರಿಕೂಟದ ನಡುವೆ ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎಡಪಕ್ಷಗಳು, ಕೇರಳದಲ್ಲಿ ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಯಾಗಿದ್ದಾರೆ. ಅಷ್ಟೇ ಅಲ್ಲದೇ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್’ಅನ್ನು ಬಿಜೆಪಿಯ ಬಿಟೀಂ ಎಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ಲೇವಡಿ ಮಾಡಿದ್ದಾರೆ.
ಏನಿದು ಚುನಾವಣಾ ಆಯೋಗದ ವಿವಾದ?
ಕೇರಳದ ಮುಖ್ಯ ಚುನಾವಣಾಧಿಕಾರಿಯವರ (CEO) ಕಚೇರಿಯಿಂದ ವಿವಿಧ ರಾಜಕೀಯ ಪಕ್ಷಗಳಿಗೆ ಅಧಿಕೃತ ಪತ್ರವನ್ನು ಕಳುಹಿಸಲಾಗಿತ್ತು. ಆ ಪತ್ರದಲ್ಲಿ ’ಬಿಜೆಪಿ ಕೇರಳ’ ಘಟಕದ ಸೀಲ್ ಕಂಡು ಬಂದಿದೆ. ಇದು, ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸಿಪಿಐ(ಎಂ) ಮತ್ತು ಕಾಂಗ್ರೆಸ್ ಪಾರ್ಟಿಗಳು, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದೆ.
ಇದನ್ನೂ ಓದಿ: ಸ್ಥಳೀಯ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಬಳಕೆ: ವಿಧೇಯಕ ಅಂಗೀಕಾರ
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳ (FAQ) ಕುರಿತು, 2019ರಲ್ಲಿ ನಡೆಸಿದ್ದ ಕಮ್ಯೂನಿಕೇಶನ್ ಸಂಬಂಧಿಸಿದಂತೆ, ಮಾರ್ಚ್ 210ರಂದು, ಚುನಾವಣಾ ಆಯೋಗ, ಎಲ್ಲಾ ರಾಜಕೀಯ ಪಾರ್ಟಿಗಳಿಗೆ ಪತ್ರವನ್ನು ಕಳುಹಿಸಲಾಗಿತ್ತು. ಅದರಲ್ಲಿ, ಬಿಜೆಪಿ ಕೇರಳ ಘಟಕದ ಅಧಿಕೃತ ಸೀಲ್ ಇತ್ತು. ಇದು, ವಿವಾದಕ್ಕೆ ಕಾರಣವಾಗಿದೆ.
ಸಿಪಿಐ (ಎಂ) ಮತ್ತು ಕಾಂಗ್ರೆಸ್ ಆರೋಪವೇನು?
ಬಿಜೆಪಿಯು, ಚುನಾವಣಾ ಆಯೋಗ ಮತ್ತು ತಮ್ಮ ಪಾರ್ಟಿಯನ್ನು ಶಕ್ತಿ ಕೇಂದ್ರದಂತೆ ನಿರ್ವಹಿಸುತ್ತಿದೆ ಎಂದು ಹಿಂದೆಯೂ ಆರೋಪ ಮಾಡಿದ್ದೆವು. ಈಗಿನ ವಿದ್ಯಮಾನವು ನಮ್ಮ ಆರೋಪಕ್ಕೆ ಇನ್ನಷ್ಟು ಪುಷ್ಠಿಯನ್ನು ನೀಡಿದೆ. ಚುನಾವಣಾ ಆಯೋಗವು ಮತ್ತದೇ ತಮ್ಮ ಹಿಂದಿನ ಶೈಲಿಯಲ್ಲಿ ಸ್ಪಷ್ಟನೆಯನ್ನು ನೀಡಿದೆ ಎಂದು ಆಡಳಿತಾರೂಢ ಸಿಪಿಐ (ಎಂ) ಟ್ವೀಟ್ ಮೂಲಕ ಆರೋಪಿಸಿದೆ.
ಚುನಾವಣಾ ಆಯೋಗವು ಬಿಜೆಪಿ ಕಚೇರಿಯಿಂದ ಕಾರ್ಯನಿರ್ವಹಿಸುತ್ತಿದೆಯಾ? ಅಥವಾ ಚುನಾವಣಾ ಆಯೋಗದ ಲೆಟರ್’ಹೆಡ್ ನಲ್ಲಿ, ವಿವಿಧ ಪಾರ್ಟಿಗಳಿಗೆ ಬಿಜೆಪಿ ಕಳುಹಿಸಿರುವ ಪತ್ರವೇ ಇದು ಕಾಂಗ್ರೆಸ್ ಪ್ರಶ್ನಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕೇರಳ ಚುನಾವಣಾ ಆಯೋಗದ ಸ್ಪಷ್ಟನೆ
ಕೇರಳದ ಮುಖ್ಯ ಚುನಾವಣಾ ಆಯುಕ್ತರಾದ ರತನ್ ಕೇಲ್ಕರ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. “ಇದೊಂದು ತಾಂತ್ರಿಕ ದೋಷವಾಗಿದೆ, ಈ ಪತ್ರವನ್ನು ಈಗಾಗಲೇ ವಾಪಸ್ ಪಡೆಯಲಾಗಿದೆ. ನಮ್ಮ ಕಚೇರಿಯಲ್ಲಿ ಈ ಕೆಲಸವನ್ನು ನಿರ್ವಹಿಸುತ್ತಿರುವ ಅಧಿಕಾರಿಯನ್ನು ಅಮಾನತಿನಲ್ಲಿ ಇಡಲಾಗಿದೆ’ ಎಂದು ಹೇಳಿದ್ದಾರೆ.
ಬಿಜೆಪಿಯ ನಿಯೋಗವೊಂದು ಕೆಲವು ಸ್ಪಷ್ಟನೆಗಳಿಗಾಗಿ ಚುನಾವಣಾ ಆಯೋಗದ ಕಚೇರಿಗೆ ಬಂದಿತ್ತು. ಆವೇಳೆ, ಸಲ್ಲಿಸಿದ ಮನವಿಯೊಂದಿಗೆ 2019ರ ಪತ್ರವೂ ಸೇರಿತ್ತು, ನಮ್ಮ ಅಧಿಕಾರಿಗಳು ತಪ್ಪಾಗಿ ಆ ಪತ್ರವನ್ನು ಎಲ್ಲಾ ಪಾರ್ಟಿಗಳಿಗೆ ಇಮೇಲ್ ಮಾಡಿದ್ದಾರೆ ಎಂದು ರತನ್ ಕೇಲ್ಕರ್ ವಿವರಣೆಯನ್ನು ನೀಡಿದ್ದಾರೆ.
ಇದನ್ನೂ ನೋಡಿ: ಓದು ಕಾರ್ಯಾಗಾರ | ವಿದ್ಯಾರ್ಥಿಗಳ ಕಣ್ಣಲ್ಲಿ ಕುವೆಂಪು Janashakthi Media
