ಸಿಬಿಐ ಅರ್ಜಿ ವಿಚಾರಣೆ; ನ್ಯಾಯಮೂರ್ತಿ ವಿರುದ್ಧ ಅರವಿಂದ್‌ ಕೇಜ್ರಿವಾಲ್‌ ಆಕ್ಷೇಪ

ವದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಖುಲಾಸೆ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಹಿಂದೆ ಸರಿಯಬೇಕು ಎಂದು ಕೋರಿ ಏಪ್ರಿಲ್‌ 6ರಂದು ದೆಹಲಿ ಹೈಕೋರ್ಟ್‌ಗೆ ಕೇಜ್ರಿವಾಲ್‌ ಖುದ್ದಾಗಿ ವಾದ ಮಂಡಿಸಿದರು.

ಈ ಪ್ರಕರಣವನ್ನು ಹೈಕೋರ್ಟ್‌ನ ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಹಿಂಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾದ ನಂತರ, ಕೇಜ್ರಿವಾಲ್ ಅವರ ಅರ್ಜಿಯನ್ನು ದಾಖಲಿಸಿಕೊಂಡ ನ್ಯಾ. ಶರ್ಮಾ, ಏ.13 ಕ್ಕೆ ವಿಚಾರಣೆಯನ್ನು ನಿಗದಿಪಡಿಸಿದರು.

ಇದನ್ನೂ ಓದಿ: ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿ; ರಾಷ್ಟ್ರಪತಿ ಅಂಕಿತ

ಇದಕ್ಕೂ ಮುನ್ನ ಸಿಬಿಐ ಅರ್ಜಿಯನ್ನು ಪುರಸ್ಕರಿಸಿದ್ದ ಶರ್ಮಾ, ವಿಚಾರಣಾ ನ್ಯಾಯಾಲಯದ ಕೆಲವು ಅವಲೋಕನಗಳು ಮೇಲ್ನೋಟಕ್ಕೆ ತಪ್ಪಾಗಿ ಕಂಡುಬರುತ್ತಿವೆ ಎಂದು ಹೇಳಿದ್ದರು.

ಇದನ್ನೂ ನೋಡಿ: ಜನಾರೋಗ್ಯದಲ್ಲಿ ಕೇರಳ ಮಾದರಿ – ಪ್ರಸನ್ನ ಸಾಲಿಗ್ರಾಮ, ಕೆ.ಎಸ್.‌ ವಿಮಲಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *