ಏಪ್ರಿಲ್ 1ರಂದು ‘ಕರಾಳ ದಿನ’: ಕಾರ್ಮಿಕ ಸಂಹಿತೆಗಳಿಗೆ ದೇಶವ್ಯಾಪಿ ವಿರೋಧ

ಹಾಸನ: ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ನಿಯಮಗಳನ್ನು ಜಾರಿಗೆ ತರುವುದನ್ನು ವಿರೋಧಿಸಿ, ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ಇಂದು ‘ಕರಾಳ ದಿನ’ ಆಚರಿಸಿವೆ. ಕೇಂದ್ರ ಕಾರ್ಮಿಕ ಸಂಘಟನೆಗಳು, ಅಖಿಲ ಭಾರತ ನೌಕರರ ಫೆಡರೇಷನ್‌ಗಳು ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ವೇದಿಕೆ ಈ ಪ್ರತಿಭಟನೆಗೆ ಕರೆ ನೀಡಿದ್ದವು. ಏಪ್ರಿಲ್ 

‘ವ್ಯವಹಾರ ಸುಲಭಿಕರಣ’ ಹೆಸರಿನಲ್ಲಿ ಜಾರಿಗೆ ತರಲಾಗುತ್ತಿರುವ ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿ ಹಾಗೂ ಮಾಲೀಕರ ಪರವಾಗಿವೆ ಎಂದು ಸಂಘಟನೆಗಳು ಆರೋಪಿಸಿವೆ. ಕಾರ್ಮಿಕರ ಹಕ್ಕುಗಳನ್ನು ಕುಂಠಿತಗೊಳಿಸುವ ಈ ಕ್ರಮವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿವೆ.

2026ರ ಫೆಬ್ರವರಿ 12ರಂದು ನಡೆದ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರದ ಬಳಿಕವೂ ಕೇಂದ್ರ ಸರ್ಕಾರ ಯಾವುದೇ ಸಮಗ್ರ ಚರ್ಚೆಗೆ ಮುಂದಾಗಿಲ್ಲ. ಕಾರ್ಮಿಕ ಸಂಹಿತೆಗಳ ರಚನೆಯ ಹಂತದಲ್ಲಿಯೇ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದಿರುವುದು ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆ ಎಂದು ಜಂಟಿ ಸಮಿತಿ ಅಭಿಪ್ರಾಯಪಟ್ಟಿದೆ.

ಈ ಸಂಹಿತೆಗಳು ಕಾರ್ಮಿಕರನ್ನು ಮತ್ತೆ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳತ್ತ ತಳ್ಳಲಿವೆ ಎಂದು ಸಂಘಟನೆಗಳು ಎಚ್ಚರಿಸಿವೆ. ಸ್ವಾತಂತ್ರ್ಯಪೂರ್ವದಿಂದಲೂ ಹೋರಾಟಗಳ ಮೂಲಕ ಗಳಿಸಿದ ಸಂಘಟನೆ ಹಕ್ಕು, ಮುಷ್ಕರ ಹಕ್ಕು, ಸಮರ್ಪಕ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ಅನೇಕ ಹಕ್ಕುಗಳು ಹಿಂಪಡೆಯಲ್ಪಡುವ ಭೀತಿ ವ್ಯಕ್ತವಾಗಿದೆ.

ಇದನ್ನೂ ಓದಿ : ಫ್ಯಾಕ್ಟ್ ಚೆಕ್ | ಮೋದಿ–ಸೋನಿಯಾ ಆಸ್ಪತ್ರೆ ಭೇಟಿ: ವೈರಲ್ ಫೋಟೋ ನಿಜವೇ ಅಥವಾ ನಕಲಿಯೇ? ಏಪ್ರಿಲ್ 

ಪ್ರಮುಖ ಆಕ್ಷೇಪಣೆಗಳು:

  • ಕಾರ್ಮಿಕ ಸಂಘಟನೆಗಳ ನೋಂದಣಿ ಕಠಿಣ, ರದ್ದತಿ ಸುಲಭ
  • ಕೆಲಸದ ಗಂಟೆಗಳಿಗೆ ಮಿತಿ ಇಲ್ಲದ ಸಾಧ್ಯತೆ
  • ಮುಷ್ಕರ ಹಕ್ಕಿಗೆ ನಿರ್ಬಂಧ
  • ಖಾಯಂ ಉದ್ಯೋಗದ ಅವಕಾಶಗಳ ಕುಗ್ಗುವಿಕೆ
  • ಸಾಮಾಜಿಕ ಭದ್ರತೆ ದುರ್ಬಲಗೊಳಿಸುವಿಕೆ
  • ಕನಿಷ್ಠ ವೇತನ ವ್ಯವಸ್ಥೆಯಲ್ಲಿ ಹಿನ್ನಡೆ

ದೇಶದಾದ್ಯಂತ ಕಾರ್ಮಿಕರು ಕಪ್ಪು ಬ್ಯಾಡ್ಜ್ ಧರಿಸಿ, ಕಪ್ಪು ಪಟ್ಟಿಗಳನ್ನು ಕಟ್ಟಿಕೊಂಡು, ಕೆಲಸದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದರು. ಊಟದ ವಿರಾಮದ ವೇಳೆ ಘೋಷಣೆ ಕೂಗುವುದು, ಧರಣಿ, ಮೆರವಣಿಗೆ, ಸೈಕಲ್ ಮತ್ತು ಮೋಟಾರ್‌ಸೈಕಲ್ ಜಾಥಾ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳು ನಡೆದವು.

ಹಾಸನ ಜಿಲ್ಲೆಯಲ್ಲಿಯೂ ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿ ಕಪ್ಪು ಪಟ್ಟಿಗಳನ್ನು ಧರಿಸಿ ವಿರೋಧ ವ್ಯಕ್ತಪಡಿಸಿದರು. ನಗರದ ಮಾಹಾವೀರ ವೃತ್ತದಲ್ಲಿ ಜಂಟಿ ವೇದಿಕೆ ನೇತೃತ್ವದಲ್ಲಿ ಕರಾಳ ದಿನಾಚರಣೆ ನಡೆಸಲಾಯಿತು. ಏಪ್ರಿಲ್ 

ಕಾರ್ಮಿಕರ ಹಕ್ಕುಗಳನ್ನು ಉಳಿಸಲು ಸಮಾಜದ ಎಲ್ಲಾ ವರ್ಗಗಳು ಬೆಂಬಲ ನೀಡಬೇಕು ಎಂದು ಸಂಘಟನೆಗಳ ಜಂಟಿ ಸಮಿತಿ ಜನತೆಗೆ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ನಾಯಕರರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ನವೀನ್‌ ಕುಮಾರ್‌, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ., ದಲಿತ ನಾಯಕ ಹುಲಿಕಲ್‌ ರಾಜಶೇಖರ್‌, ಸಾಹಿತಿ ಹರೀಶ್‌ ಕಟ್ಟೆಬೆಳಗುಲಿ, ಸಿಐಟಿಯು ಮುಖಂಡ ಅರವಿಂದ್‌, ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರಮೇಶ್‌ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಇದನ್ನೂ ನೋಡಿ : ಫ್ಯಾಕ್ಟ್ ಚೆಕ್ | ಮೋದಿ–ಸೋನಿಯಾ ಆಸ್ಪತ್ರೆ ಭೇಟಿ: ವೈರಲ್ ಫೋಟೋ ನಿಜವೇ ಅಥವಾ ನಕಲಿಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *