ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಕೇವಲ 60 ದಿನಗಳಲ್ಲಿ ₹1308ರಷ್ಟು ಭಾರೀ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ವಾಣಿಜ್ಯ ಗ್ಯಾಸ್ ಮೇಲಿನ ಶೇ.18ರ ಜಿಎಸ್‌ಟಿಯನ್ನು ಕಡಿತಗೊಳಿಸುವಂತೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (BBHA) ಆಗ್ರಹಿಸಿದೆ. ವಾಣಿಜ್ಯ ಗ್ಯಾಸ್
ಸಂಘದ ಅಧ್ಯಕ್ಷರು ನೀಡಿದ ಮಾಹಿತಿಯಂತೆ, ಮಾರ್ಚ್ 1ರಿಂದ ಮೇ 1ರವರೆಗೆ ವಾಣಿಜ್ಯ ಸಿಲಿಂಡರ್ ದರ ಹಂತ ಹಂತವಾಗಿ ಏರಿಕೆಯಾಗಿದ್ದು, ಇತ್ತೀಚಿನ ಏರಿಕೆಯಿಂದ ಬೆಲೆ ₹3000ಕ್ಕೂ ಮೀರಿದೆ. ಇಷ್ಟೊಂದು ವೇಗವಾಗಿ ದರ ಏರಿಕೆ ಆಗಿರುವುದು ಹೋಟೆಲ್ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.
ದರ ಏರಿಕೆಯ ಹೊರೆ ತಾಳಲಾಗದ ಪರಿಸ್ಥಿತಿಯಲ್ಲಿ ಹೋಟೆಲ್‌ಗಳು ಊಟ-ತಿಂಡಿ ಬೆಲೆಗಳನ್ನು ಹೆಚ್ಚಿಸುವ ಅನಿವಾರ್ಯತೆ ಎದುರಿಸುತ್ತಿವೆ. ಇದರಿಂದ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬೀಳಲಿದೆ. ಒಂದೆಡೆ ಗ್ಯಾಸ್ ದರ ಏರಿಕೆ, ಮತ್ತೊಂದೆಡೆ ಜಿಎಸ್‌ಟಿ ಭಾರದಿಂದ ಉದ್ಯಮದ ಮೇಲೆ ಎರಡು ಮುಖಗಳಿಂದ ಒತ್ತಡ ಉಂಟಾಗಿದೆ ಎಂದು ಸಂಘ ಅಸಮಾಧಾನ ವ್ಯಕ್ತಪಡಿಸಿದೆ.ವಾಣಿಜ್ಯ ಗ್ಯಾಸ್
ಇದನ್ನೂ ಓದಿ : ಕೌಲುದಾರ ರೈತರ ಹೋರಾಟ ತೀವ್ರಗೊಳಿಸಲು ಕರೆ: ಎಪಿಯಲ್ಲಿ ಭಾರೀ ಸಮ್ಮೇಳನ
ಈ ಹಿನ್ನೆಲೆಯಲ್ಲಿ ವಾಣಿಜ್ಯ ಗ್ಯಾಸ್ ಮೇಲಿನ ಜಿಎಸ್‌ಟಿಯನ್ನು 18 ಶೇಕಡೆಯಿಂದ 5 ಶೇಕಡಿಗೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಘ ನಿರ್ಧರಿಸಿದೆ. ಜಿಎಸ್‌ಟಿ ಕಡಿತವಾದರೆ ಸಿಲಿಂಡರ್ ಬೆಲೆಯಲ್ಲಿ ₹350ರಿಂದ ₹400ರವರೆಗೆ ಇಳಿಕೆ ಸಾಧ್ಯವಾಗಿದ್ದು, ಹೋಟೆಲ್ ಉದ್ಯಮಕ್ಕೆ ಸ್ವಲ್ಪ ಮಟ್ಟಿನ ಉಸಿರಾಟ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಇತ್ತೀಚಿನ ದರ ಏರಿಕೆಗಳು ಮುಂದುವರಿದರೆ ಹೋಟೆಲ್ ಕ್ಷೇತ್ರದ ಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಸಂಘ ಎಚ್ಚರಿಕೆ ನೀಡಿದೆ.
