ಮೇ ದಿನ | ಬಜಾಲ್‌ನಲ್ಲಿ ಮೊಳಗಿದ ಕಾರ್ಮಿಕರ ಕಹಳೆ

ಮಂಗಳೂರು: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಬಜಾಲ್ ಪ್ರದೇಶದಲ್ಲಿ ಯುವ ಕಾರ್ಮಿಕರು ಪ್ರಭಾತ್ ಫೇರಿ ನಡೆಸಿ ಮೇ ದಿನದ ಸಂದೇಶವನ್ನು ಜನತೆಗೆ ಹಂಚಿಕೊಂಡರು. ಬೆಳಗಿನ ಜಾವವೇ ಆರಂಭವಾದ ಈ ಫೇರಿಯಲ್ಲಿ ಭಾಗವಹಿಸಿದವರು ಘೋಷಣೆಗಳನ್ನು ಕೂಗಿ ಕಾರ್ಮಿಕರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಿದರು. ಮೇ ದಿನ

8 ಗಂಟೆಗಳ ಕೆಲಸದ ಹಕ್ಕಿಗಾಗಿ ಹುಟ್ಟಿದ ಮೇ ದಿನದ ಮಹತ್ವವನ್ನು ಸಾರುವ ಈ ಪ್ರಭಾತ್ ಫೇರಿ ಸುಮಾರು 2 ಕಿಲೋಮೀಟರ್ ದೂರ ಸಂಚರಿಸಿ ಪಕ್ಕಲಡ್ಕ ಜಂಕ್ಷನ್‌ನಲ್ಲಿ ಅಂತ್ಯಗೊಂಡಿತು. ಬಳಿಕ ಕೆಂಬಾವುಟ ಹಾರಿಸುವ ಮೂಲಕ ಮೇ ದಿನಾಚರಣೆಯನ್ನು ಆಚರಿಸಲಾಯಿತು.

ಕಮ್ಯುನಿಸ್ಟ್ ಚಳುವಳಿಯ ಹಿರಿಯ ನಾಯಕ ಕೇಶವ ಭಂಡಾರಿ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮೇ ದಿನದ ಸಂದೇಶವನ್ನು ನೀಡಿದರು. ಮೇ ದಿನ

ಇದನ್ನೂ ಓದಿ : ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

ಈ ಸಂದರ್ಭದಲ್ಲಿ ಡಿವೈಎಫ್‌ಐ ಜಿಲ್ಲಾ ನಾಯಕ ಸಂತೋಷ್ ಬಜಾಲ್, ಸಿಐಟಿಯು ಜಿಲ್ಲಾ ನಾಯಕರು ದೀಪಕ್ ಬಜಾಲ್, ಅಶೋಕ್ ಸಾಲ್ಯಾನ್, ಲೋಕೇಶ್ ಎಂ., ಜಯಪ್ರಕಾಶ್ ಜಲ್ಲಿಗುಡ್ಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಥಳೀಯ ಯುವ ನಾಯಕರಾದ ಯಶ್ ರಾಜ್, ದೀಕ್ಷಿತ್ ಭಂಡಾರಿ, ಅಶೋಕ್, ರಿತೇಶ್, ಪ್ರೀತೇಶ್, ಅನಿಲ್ ನಾಯಕ್, ಪ್ರಕಾಶ್ ಶೆಟ್ಟಿ, ವರಪ್ರಸಾದ್, ಉದಯ ಮುಂತಾದವರು ಭಾಗವಹಿಸಿದ್ದರು. ಮೇ ದಿನ

ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ಪ್ರಚಲಿತಗೊಂಡ ಪ್ರಭಾತ್ ಫೇರಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವುದು ವಿಶೇಷವಾಗಿದೆ.

ಇದನ್ನೂ ನೋಡಿ :“(ಲೇಬರ್‌ ಕೋಡ್ಸ್‌) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media

Donate Janashakthi Media

Leave a Reply

Your email address will not be published. Required fields are marked *