ಕ್ಯೂಬಾ ತಲುಪಿದ ರಷ್ಯಾದ ತೈಲ!

ಅಮೆರಿಕದ ದಿಗ್ಬಂಧನದ ನಡುವೆಯೂ ತೈಲ ರವಾನೆ ಮಾಡಿರುವುದನ್ನು ರಷ್ಯಾ ದೃಢೀಕರಿಸಿದೆ. ತಲುಪಿದ

– ಟಿ. ಸುರೇಂದ್ರರಾವ್

ಜಗತ್ತಿನಾದ್ಯಂತ ಎಲ್ಲಾ ದೇಶಗಳ ಮಾನವೀಯ ನೆಲೆಯ ಜನರು ಕ್ಯೂಬಾಕ್ಕೆ ದೋಣಿಗಳಲ್ಲಿ, ಹಡಗುಗಳಲ್ಲಿ ತೆರಳಿ ತಮ್ಮ ಕೈಲಾದ ಸಹಾಯಹಸ್ತ ಚಾಚಿದ್ದಾರೆ. ಈ ಮುಂಚೆ ವೆನಿಜೂಲಾ ದೇಶವು ಕ್ಯೂಬಾಕ್ಕೆ ತೈಲ ರಫ್ತು ಮಾಡುತ್ತಿತ್ತು. ಮೂರುತಿಂಗಳ ಹಿಂದೆ ಅಮೆರಿಕಾವು ವೆನಿಜೂಲಾದ ಮೇಲೆ ರಾತ್ರೋರಾತ್ರಿ ದಾಳಿ ಮಾಡಿ ಅದರ ಅಧ್ಯಕ್ಷ ನಿಕೊಲಾಸ್ ಮಡುರೊ ಹಾಗೂ ಅವರ ಪತ್ನಿಯನ್ನು ಅಪಹರಣ ಮಾಡಿ ಅಮೆರಿಕದ ಜೈಲಿನಲ್ಲಿ ಬಂಧಿಸಿ ಇಟ್ಟಿದೆ. ತಲುಪಿದ

ಈ ಬೆಳವಣಿಗೆಯಿಂದಾಗಿ ಕ್ಯೂಬಾಕ್ಕೆ ವೆನಿಜೂಲಾದ ತೈಲ ಪೂರೈಕೆ ಜನವರಿಯಿಂದ ಸಂಪೂರ್ಣವಾಗಿ ನಿಂತಿದೆ. ಈ ದಿಗ್ಬಂಧನದಿಂದ ವಿದ್ಯುತ್ ಕೊರತೆ ಉಂಟಾಗಿ ನೀರನ್ನು ಸಾರ್ವಜನಿಕರಿಗೆ ಪೈಪುಗಳಲ್ಲಿ ಪೂರೈಕೆ ಮಾಡಲೂ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಮಂಗಳೂರು| ಆರಿಫ್ ಹತ್ಯೆ ಪ್ರಕರಣದ ತನಿಖೆ ಸಿಸಿಬಿ ಯ ಎಸಿಪಿ ಗೆ ವರ್ಗಾವಣೆ

ಒಂದು ದೇಶದ ಜನರು ತಾವು ಎಂತಹ ಆಡಳಿತವನ್ನು ಹೊಂದಬೇಕು ಎಂದು ತೀರ್ಮಾನಿಸಿ ಸ್ವಾತಂತ್ರ್ಯ ಗಳಿಸಿದ ನಂತರ ಅಂತಿಮವಾಗಿ ಸಮಾಜವಾದಿ ದೇಶವನ್ನಾಗಿ ಕ್ಯೂಬಾದ ಜನರು ತೀರ್ಮಾನ ಮಾಡಿದ್ದೇ ಅಮೆರಿಕಾ ದೇಶಕ್ಕೆ ತಡೆಯಲಾರದ ಕೋಪ ಮತ್ತು ದ್ವೇ಼ಷವನ್ನು ಉಂಟುಮಾಡಿದೆ. ಕಳೆದ ಆರು ದಶಕಗಳಿಂದಲೂ ಅಮೆರಿಕಾ ಕ್ಯೂಬಾದ ಮೇಲೆ ಹಗೆ ಸಾಧಿಸುತ್ತಿದೆ. ಆರ್ಥಿಕ ದಿಗ್ಬಂಧನ ವಿಧಿಸಿದೆ.

ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ತನ್ನನ್ನು ಕರೆದುಕೊಳ್ಳುವ ಅಮೆರಿಕಾ ಒಂದು ಪುಟ್ಟ ದೇಶ ಕ್ಯೂಬಾದ ಮೇಲೆ ಈ ಅಮಾನವೀಯ ರೀತಿಯಲ್ಲಿ ವರ್ತಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸುವ ಎಲ್ಲಾ ಮನಸ್ಸುಗಳೂ ಅಮೆರಿಕಾದ ಈ ಅಮಾನವೀಯ ಧೋರಣೆಯನ್ನು ಖಂಡಿಸಬೇಕು ಮತ್ತು ಅಮೆರಿಕಾ ತನ್ನ ಈ ಅಮಾನುಷ ಧೋರಣೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಬೇಕು ಕೂಡ.

ಇದನ್ನೂ ನೋಡಿ: ಬೇರೆ ಜಾತಿಯಾಗಿದ್ದರೆ ಟಿಪ್ಪುಗೆ ಇಂದಿನ ಪರಿಸ್ಥಿತಿ ಬಂದಿರುತ್ತಿತ್ತೇ? – ಮುನೀರ್‌ ಕಾಟಿಪಳ್ಳ Janashakthi Media

Donate Janashakthi Media

Leave a Reply

Your email address will not be published. Required fields are marked *