ದಾವಣಗೆರೆ: ಮುಂಬರುವ ಉಪ ಚುನಾವಣೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಟಿ. ಶ್ರೀನಿವಾಸ (Srinivas .T) ಅವರು ಮಾರ್ಚ್ 20ರಂದು ತಮ್ಮ ನಾಮಪತ್ರ ಸಲ್ಲಿಸಿದ್ರು. ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ಒಟ್ಟು ಆಸ್ತಿ ಬಗ್ಗೆ ಘೋಷಣೆ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಟಿ ಶ್ರೀನಿವಾಸ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಮಪತ್ರದ ಜೊತೆ ತಮ್ಮ ಹೆಸರಿನಲ್ಲಿರೋ ಆಸ್ತಿಗಳ ಮೌಲ್ಯವನ್ನು ಘೋಷಣೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಟಿ ಶ್ರೀನಿವಾಸ ಅವರ ಒಟ್ಟು ಆಸ್ತಿ 5.76 ಕೋಟಿ ರೂಪಾಯಿ ಎಂದು ವರದಿ ಆಗಿದೆ.
ಅಭ್ಯರ್ಥಿ ಶ್ರೀನಿವಾಸ ಅವರ ಹೆಸರಿನಲ್ಲಿ 34.79 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 5.41 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳಿವೆ. ಸ್ಥಿರಾಸ್ತಿಯಲ್ಲಿ 1.13 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಕೃಷಿ ಭೂಮಿ ಹಾಗೂ 4.27 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿಗಳು ಸೇರಿವೆ. ಕೈಯಲ್ಲಿ 3.60 ಲಕ್ಷ ರೂ. ನಗದು ಇರುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭಾ ಕ್ಷೇತ್ರ ಉಪಚುನಾವಣೆ: ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ
ಟಿ ಶ್ರೀನಿವಾಸ್ ಶಿಕ್ಷಣ ಮತ್ತು ವೃತ್ತಿ
45 ವರ್ಷ ಪ್ರಾಯದ ಶ್ರೀನಿವಾಸ ಅವರು ಕೃಷಿ ಮತ್ತು ವ್ಯವಹಾರವನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, ಇವರು 1999-2000ನೇ ಸಾಲಿನಲ್ಲಿ ನಗರದ ಎ.ಆರ್.ಎಂ. ಸೈನ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ಪೂರ್ಣಗೊಳಿಸಿದ್ದಾರೆ.
ಸಾಲದ ವಿವರ:
ಅಭ್ಯರ್ಥಿಯ ಹೆಸರಿನಲ್ಲಿ ತುಂಬಿಗೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2.96 ಲಕ್ಷ ರೂ. ಸಾಲ ಬಾಕಿ ಇರುವುದಾಗಿ ಅಫಿಡವಿಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಹಾಗೂ ಯಾವುದೇ ಶಿಕ್ಷೆಯಾಗಿಲ್ಲ ಎಂದು ಅವರು ಪ್ರಮಾಣೀಕರಿಸಿದ್ದಾರೆ.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಂಕೇತಿಕವಾಗಿ ಐದು ಜನ ಆಕಾಂಕ್ಷಿಗಳು ಒಟ್ಟಾಗಿ ಬಂದು ನಾಮಪತ್ರ ಸಲ್ಲಿಸಿದ್ದೇವೆ. ನಮ್ಮ ಮುಖಂಡರೊಂದಿಗೆ ಮಾತಾಡಿ, ಮತ್ತೊಂದು ಬಾರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸುತ್ತೇವೆ. ರಾಜ್ಯ, ರಾಷ್ಟ್ರ ನಾಯಕರು, ಜಿಲ್ಲೆಯ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದಿದ್ದಾರೆ.
ಇದನ್ನೂ ನೋಡಿ: “ಯುಗಾದಿ: ಕಾವ್ಯದಲ್ಲಿ ಮೂಡುವ ಜೀವನದ ನಂಟು” Janashakthi Media
