ವೆನೆಜುವೇಲಾ ಅಧ್ಯಕ್ಷ ಮದುರೊ ಅಪಹರಣದ ವಿರುದ್ಧ ಜಗದಗಲಕ್ಕೂ ಪ್ರತಿಭಟನಾ ಪ್ರದರ್ಶನಗಳು

– ವಸಂತರಾಜ ಎನ್.ಕೆ

ಇದು ವೆನೆಜುವೇಲಾದ ಮೇಲೆ ದಾಳಿ ಮತ್ತು ಅಧ್ಯಕ್ಷ ಮದುರೊ ಅವರ ಅಪಹರಣದ ವಿರುದ್ಧ ಯು.ಎಸ್ ನ ಮಹಾನಗರ ಚಿಕಾಗೊದಲ್ಲಿ ನಡೆದ ಬೃಹತ್ ಪ್ರತಿಭಟನಾ ಪ್ರದರ್ಶನದ ಚಿತ್ರ. ಲ್ಯಾಟಿನ್ ಅಮೆರಿಕ, ಯು.ಎಸ್, ಯುರೋಪ್, ಆಸ್ಟ್ರೇಲಿಯ ಸೇರಿದಂತೆ ಜಗದಗಲಕ್ಕೂ ಭಾರೀ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. ಈ ಕುರಿತು ವರದಿ ಮಾಡದೆ ಯು.ಎಸ್ ಬಾಲಬಡುಕ ಜಾಗತಿಕ ಮಾಧ್ಯಮಗಳು ಯು.ಎಸ್, ಯುರೋಪ್ ಗಳಲ್ಲಿ ನೆಲೆಸಿರುವ ಕೆಲವು ವಲಸಿಗ ವೆನೇಜುವೇಲನ್ನರು ಸಂತೋಷ ಪ್ರದರ್ಶಿಸಿದ್ದನ್ನು ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದು ಗಮನಾರ್ಹವಾದದ್ದು.

ವೆನೆಜುವೇಲಾದ ಮೇಲೆ 40ಕ್ಕೂ ಹೆಚ್ಚು ಜನರ ಬಲಿ ತೆಗೆದುಕೊಂಡ ಬರ್ಬರ ದಾಳಿ ಮಾಡಿ ಚುನಾಯಿತ ಅಧ್ಯಕ್ಷ ಮದುರೊ ಮತ್ತು ಅವರ ಪತ್ನಿಯನ್ನು ಮಧ್ಯರಾತ್ರಿಯಲ್ಲಿ ಅಪಹರಣದ ಕೃತ್ಯಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಶ್ಯ. ಚೀನಾ, ಮೆಕ್ಸಿಕೊ, ಕ್ಯೂಬಾ, ಬ್ರೆಜಿಲ್, ಇರಾನ್, ಕೊಲಂಬಿಯ, ಮತ್ತು ಇತರ ಹಲವು ಲ್ಯಾಟಿನ್ ಅಮೆರಿಕದ ದೇಶಗಳ ಸರಕಾರಗಳು ಒಂದು ದೇಶದ ಸಾರ್ವಭೌಮತ್ವ ಮತ್ತು  ಅಂತರರಾಷ್ಟ್ರೀಯ ಕಾನೂನು-ನಿಯಮಗಳ ಉಲ್ಲಂಘನೆಯೆಂದು  ಕಟುವಾಗಿ ಖಂಡಿಸಿವೆ. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸಹ ಇದು ಅಂತರರಾಷ್ಟ್ರೀಯ ಕಾನೂನು-ನಿಯಮಗಳ ಉಲ್ಲಂಘನೆ ಎಂದಿದ್ದಾರೆ.  ಯು.ಎಸ್ ನ ಸಹಚರ ದೇಶಗಳಾದ ಕೆನಡಾ, ಯುರೋ ಕೂಟದ ದೇಶಗಳೂ ತಕ್ಷಣ ಪ್ರತಿಕ್ರಿಯಿಸದೆ ಬಹಳ ತಡವಾಗಿ ಪ್ರತಿಕ್ರಿಯಿಸಿದ್ದು, ಇದನ್ನು ‘ಕಳವಳಕಾರಿ ಬೆಳವಣಿಗೆ’ಯೆಂದು ಕರೆದಿವೆ.  ಯು.ಕೆ, ಜರ್ಮನಿ, ಫ್ರಾನ್ಸ್, ಇಟಲಿ ಯಂತಹ ಪ್ರಮುಖ ದೇಶಗಳು ಯು.ಎಸ್ ಕಾರ್ಯಾಚರಣೆಯನ್ನು ಖಂಡಿಸದಿದ್ದರೂ, ಈ ಸಂಘರ್ಷ ಮುಂದೊಯ್ಯಬಾರದು ಶಾಂತಿಯುತವಾಗಿ ಈ ಸಮಸ್ಯೆ ಬಗೆಹರಿಸಬೇಕು ಎಂಭರ್ಥ ಬರುವಂತೆ ಹೇಳಿಕೆ ನೀಡಿವೆ. ಯು.ಎಸ್ ಕಾರ್ಯಾಚರಣೆಯಿಂದ ತಮ್ಮ ದೂರವನ್ನು ಕಾಯ್ದುಕೊಂಡಿವೆ. ಯು.ಕೆ ಪ್ರಧಾನಿ ಈ ಕಾರ್ಯಾಚರಣೆಯಲ್ಲಿ ತಮ್ಮ ದೇಶದ ಯಾವುದೇ ಪಾತ್ರವಿರಲಿಲ್ಲ ಎನ್ನುವಷ್ಟು ಮುಂದೆ ಹೋಗಿದ್ದಾರೆ. ಸ್ಪೈನ್ ಈ ಕಾರ್ಯಾಚರಣೆ ಸಮರ್ಥನೀಯವಲ್ಲ ಎಂದು, ಮುಂದೆ ಇದನ್ನು ಶಾಂತಿಯುತವಾಗಿ ಬಗೆಹರಿಸಲು ತಾನು ಮಧ್ಯಸ್ತಿಕೆ ನಡೆಸಲು ಸಿದ್ಧವೆಂದು ಹೇಳಿದೆ.

ಈ ದೇಶಗಳ ಸರಕಾರಗಳು ಅಧಿಕೃತವಾಗಿ ಏನೇ ಹೇಳಲಿ ಬಿಡಲಿ, ಅಲ್ಲಿನ ಜನ ಭಾರೀ ಪ್ರತಿಭಟನೆಗಳ ಮೂಲಕ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ. ಯು.ಎಸ್, ಯುರೋಪಿನ ಹೆಚ್ಚಿನ ರಾಜಧಾನಿ ಮತ್ತು ಪ್ರಮುಖ ನಗರಗಳಲ್ಲಿ ಸ್ವಯಂ-ಸ್ಫೂರ್ತ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. “ವೆನೆಜುವೇಲಾದ ವಿರುದ್ಧ ಯುದ್ಧ ಬೇಡ”, “ಫ್ಯಾಸಿಸ್ಟ್ ಟ್ರಂಪ್ ಗೆ ಧಿಕ್ಕಾರ” ಮುಂತಾದ ಘೋಷಣೆಗಳು ಕಂಡು ಬಂದಿವೆ. ಕೇಳಿಸಿವೆ.  ಈ ಕುರಿತು ವರದಿ ಮಾಡದೆ ಯು.ಎಸ್ ಬಾಲಬಡುಕ ಜಾಗತಿಕ ಮಾಧ್ಯಮಗಳು ಯು.ಎಸ್, ಯುರೋಪ್ ಗಳಲ್ಲಿ ನೆಲೆಸಿರುವ ಕೆಲವು ವಲಸಿಗ ವೆನೇಜುವೇಲನ್ನರು ಸಂತೋಷ ಪ್ರದರ್ಶಿಸಿದ್ದನ್ನು ಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಿಳಿಯುವುದು ಅಗತ್ಯ.

ಇದನ್ನೂ ಓದಿ :ವೆನೆಜುವೆಲಾ ಅಧ್ಯಕ್ಷರ ಅಪಹರಣ-ಸಿಪಿಐ(ಎಂ) ಪ್ರತಿಭಟನೆ

ಯು.ಎಸ್, ಯುರೋಪ್, ಲ್ಯಾಟಿನ್ ಅಮೆರಿಕ, ಆಸ್ಟ್ರೇಲಿಯಗಳಲ್ಲಿ ಪ್ರತಿಭಟನಾ ಪ್ರದರ್ಶನಗಳ ಸ್ಯಾಂಪಲ್  ವಿಡಿಯೊ ಮತ್ತು ಚಿತ್ರಗಳು ಇಲ್ಲಿವೆ. ಏಶ್ಯಾ ಮತ್ತಿತರ ಕಡೆ ಪ್ರದರ್ಶನ ನಡೆದ ವರದಿಗಳು ಬಂದಿವೆ. ಚಿತ್ರಗಳು ಲಭ್ಯವಾಗಿಲ್ಲ.

ಜಗದಗಲಕ್ಕೂ ಪ್ರತಿಭಟನಾ ಪ್ರದರ್ಶನಗಳ ವಿಡಿಯೊ

ವಿಡಿಯೊ : ಕೃಪೆ ಎ,ಎನ್.ಐ ನ್ಯೂಸ್

ಯು.ಎಸ್ ರಾಜಧಾನಿ  ವಾಶಿಂಗ್ ಟನ್ ನಲ್ಲಿ ಅಧ್ಯಕ್ಷರ ನಿವಾಸಸ್ಥಾನ ಶ್ವೇತ ಭವನದ ಎದುರಿನಲ್ಲೇ ಪ್ರತಿಭಟನೆ

    ಮದುರೊ ರನ್ನು ಬಂಧಿಸಿಟ್ಟಿರುವ ನ್ಯೂ ಯಾರ್ಕ್ ನಲ್ಲಿ ಭಾರೀ ಪ್ರದರ್ಶನ – “ಟ್ರಂಪ್ ಬಂಧಿಸಿ’ ಬ್ಯಾನರ್ ನೊಂದಿಗೆ

ಯು.ಎಸ್ ಮಹಾನಗರ ಬೋಸ್ಟನ್ ನಲ್ಲಿ ಪ್ರತಿಭಟನಾ ಪ್ರದರ್ಶನ

ಗ್ರೀಸ್ ರಾಜಧಾನಿ ಅಥೆನ್ಸ್ ನಲ್ಲಿ ಯು.ಎಸ್ ರಾಯಭಾರ ಕಚೇರಿಯ ಮುಂದೆ ಯು.ಎಸ್ ಧ್ವಜ ಸುಟ್ಟು ಪ್ರತಿಭಟನೆ

ಹವಾನಾ ಪ್ರತಿಭಟನಾ ಸಭೆಯಲ್ಲಿ ಕ್ಯೂಬಾ ಅಧ್ಯಕ್ಷ

ಕ್ಯೂಬಾ ರಾಜಧಾನಿ ಹವಾನಾದಲ್ಲಿ ಪ್ರತಿಭಟನಾ ಮೆರವಣಿಗೆ

ಯು.ಕೆ ಯ ಲಿವರ್ ಪೂಲ್ ನಗರದಲ್ಲಿ ಪ್ರತಿಭಟನಾ ಪ್ರದರ್ಶನ

ಐರ್ಲೆಂಡ್ ರಾಜಧಾನಿ ಡಬ್ಲಿನ್ ನಲ್ಲಿ ಪ್ರತಿಭಟನಾ ಪ್ರದರ್ಶನ

ಚಿಲಿಯಲ್ಲಿ ಪ್ರತಿಭಟನಾ ಪ್ರದರ್ಶನ

ಆಸ್ಟ್ರೇಲಿಯದ ಮಹಾನಗರ ಸಿಡ್ನಿಯಲ್ಲಿ ಪ್ರತಿಭಟನಾ ಪ್ರದರ್ಶನ

ಇದನ್ನೂ ನೋಡಿ : ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media

 

 

Donate Janashakthi Media

Leave a Reply

Your email address will not be published. Required fields are marked *