ನವದೆಹಲಿ: ಒಡಿಶಾದ ಬಿಜು ಜನತಾದಳ ಪಕ್ಷದ 6 ಶಾಸಕರು ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯ ವೇಳೆ ಅಡ್ಡ ಮತದಾನ ನಡೆಸಿದ್ದು, ಇದರಿಂದ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿದ ಆರೋಪದಡಿ ಅವರನ್ನು ಅಮಾನತುಗೊಳಿಸಲಾಗಿದೆ. ಪಕ್ಷದ ನಿಮಯಗಳಿಗೆ ವಿರುದ್ಧ ಈ ಶಾಸಕರು ನಡೆದುಗೊಂಡಿದ್ದು, ಈ ಹಿನ್ನೆಲೆ ಶೋಕಾಸ್ ನೊಟೀಸ್ ನೀಡಲಾಗಿತ್ತು. ರಾಜ್ಯಸಭಾ
ಮಾರ್ಚ್ 20 ರೊಳಗೆ ಸೂಕ್ತ ಪ್ರತಿಕ್ರಿಯೆ ನೀಡುವಂತೆ ತಿಳಿಸಿತ್ತು. ಆದರೆ ಬಿಜೆಡಿ ಶಿಸ್ತು ಸಮಿತಿಗೆ ನೀಡಿದ ಉತ್ತರ ತೃಪ್ತಿ ನೀಡದ ಹಿನ್ನೆಲೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ದದ ಲೈಂಗಿಕ ಕಿರುಕುಳದ ಆರೋಪ ಸುಳ್ಳು: ಕಮಿಷನರ್ ಸ್ಪಷ್ಟನೆ
ಬಲಿಗುಡದ ಶಾಸಕ ಚಕ್ರಮಣಿ ಕನ್ಹಾರ್, ಜಯದೇವ್‌ನ ಶಾಸಕ ನಬಾ ಕಿಶೋರ್ ಮಲ್ಲಿಕ್, ಚೌದ್ವಾರ-ಕಟಕ್‌ನ ಶಾಸಕ ಸೌವಿಕ್ ಬಿಸ್ವಾಲ್, ಬಸ್ತಾದ ಶಾಸಕ ಸುಬಾಸಿನಿ ಜೆನಾ, ತಿರ್ಟೋಲ್‌ನ ಶಾಸಕ ರಮಾಕಾಂತ ಭೋಯ್,ಬಂಕಿಯ ಶಾಸಕ ದೇವಿ ರಂಜನ್ ತ್ರಿಪಾಠಿ ಅಮಾನತುಗೊಂಡವರಾಗಿದ್ದಾರೆ .
ರಾಜ್ಯಸಭೆಯ 37 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಕೂಟವು 30 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ141ಸ್ಥಾನಗಳನ್ನು ಹೆಚ್ಚಿಸಿದೆ. INDIA ಕೂಟವು 6 ಸ್ಥಾನಗಳಲ್ಲಿ ಜಯಗಳಿಸಿದ್ದು, ಬಲವನ್ನು 75ಕ್ಕೆ ಏರಿಸಿಕೊಂಡಿದೆ.
ಇದನ್ನೂ ನೋಡಿ: ಮುಟ್ಟಿನ ರಜೆಜೆ ಏಕಿಷ್ಟು ಸಿಟ್ಟು , ಅದು ನಮ್ಮ ಹುಟ್ಟಿನ ಗುಟ್ಟು – ಕೆ.ಎಸ್. ವಿಮಲಾ Janashakthi Media
