ಹೈದರಾಬಾದ್‌| ಕಲಬೆರಕೆ ಹಾಲು ಸೇವಿಸಿ 16 ಜನರು ಮೃತ

ಅಮರಾವತಿ: ಶಂಕಿತ ಕಲಬೆರಕೆ ಹಾಲು ಸೇವಿಸಿ ಮೃತಪಟ್ಟವರ ಸಂಖ್ಯೆ ಹೈದರಾಬಾದ್‌ನ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ  ಏರುತ್ತಲೇ ಇದೆ. ಫೆಬ್ರವರಿ 16ರಿಂದ ಮಾರ್ಚ್ 21ರವರೆಗೆ ಒಟ್ಟು 20 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ 16 ಜನರು ಮೃತಪಟ್ಟಿದ್ದಾರೆ, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಒಬ್ಬರು ಚೇತರಿಸಿಕೊಂಡಿದ್ದಾರೆ.

ಅಂಗಡಿಯೊಂದರಲ್ಲಿ ಹಾಲು ಖರೀದಿಸಿದ ಹಲವು ಮಂದಿಯಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಿತ್ತು. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಾಲು ಕಲಬೆರಕೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಪ್ರಕರಣದಡಿಯಲ್ಲಿ ಅಂಗಡಿ ಮಾಲೀಕ ಎ.ಗಣೇಶ್ವರರಾವ್‌ (33) ಎಂಬುವವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹೊಸ ಜಾಹೀರಾತು ನೀತಿ ವಿರುದ್ಧ ಆಕ್ರೋಶ: ಸಣ್ಣ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆ

ಮೃತರಾದ 16 ಮಂದಿ ಕೂಡ ವಿಷಕಾರಿ ಏಥೆನಾಲ್‌ ಗ್ಲೈಕಾಲ್‌ ಸೇರಿದ್ದ ಹಾಲು ಸೇವನೆ ಮಾಡಿದ್ದರಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಪ್ರಯೋಗಾಲಯದ ವರದಿಯಲ್ಲಿ ಕಂಡುಬಂದಿದೆ ಎಂದು ಡಿಎಸ್‌ಪಿ ಜಿ.ದೇವಕುಮಾರ್ ತಿಳಿಸಿದ್ದಾರೆ.

ಕಾಕಿನಾಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಡಿ ಕೃಷ್ಣವೇಣಿ (76) ಅವರು ಮೃತಪಟ್ಟ ಬಳಿಕ ಕಲಬೆರಕೆ ಹಾಲು ಪ್ರಕರಣ ಬೆಳಕಿಗೆ ಬಂದಿತ್ತು.

ಮೃತ ಮಹಿಳೆಯ ಮಗ ನೀಡಿದ ದೂರಿನ ಆಧಾರದಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ನೋಡಿ: ಮುಟ್ಟಿನ ರಜೆಜೆ ಏಕಿಷ್ಟು ಸಿಟ್ಟು , ಅದು ನಮ್ಮ ಹುಟ್ಟಿನ ಗುಟ್ಟು – ಕೆ.ಎಸ್.‌ ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *