E20 ಪೆಟ್ರೋಲ್ ವಿವಾದ: ಭೂತಾನ್ ಏಕೆ ‘ನೋ’ ಹೇಳಿತು?

ನವದೆಹಲಿ: ಭೂತಾನ್ ಭಾರತದಿಂದ ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಆಮದು ಮಾಡಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಚರ್ಚೆಗೆ ಕಾರಣವಾಗಿದೆ. ಥಿಂಪು ಮೂಲದ ‘ದಿ ಭೂತಾನೀಸ್’ ಪತ್ರಿಕೆ ಈ ವಿಷಯವನ್ನು ಎತ್ತಿಹಿಡಿದಿದ್ದು, ಭಾರತ ಸರ್ಕಾರ ಮತ್ತು ಭೂತಾನ್ ಅಧಿಕಾರಿಗಳ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.

ಈ ಕುರಿತು ಭೂತಾನ್ ವ್ಯಾಪಾರ ಇಲಾಖೆ ಸ್ಪಷ್ಟಪಡಿಸಿದ್ದು, ದೇಶವು ಪ್ರಸ್ತುತ E20 ಪೆಟ್ರೋಲ್ ಆಮದು ಮಾಡಿಕೊಳ್ಳುತ್ತಿಲ್ಲ. ಭಾರತೀಯ ತೈಲ ಕಂಪನಿಗಳು (IOCL, BPCL, HPCL) E20 ಪೂರೈಕೆ ಮಾಡುವ ಆಫರ್ ನೀಡಿದ್ದರೂ, ಭೂತಾನ್ ಇದನ್ನು ತಿರಸ್ಕರಿಸಿದೆ ಎಂದು ವರದಿ ಹೇಳಿದೆ.

ಆದರೆ ಭಾರತದ ಪೆಟ್ರೋಲಿಯಂ ಸಚಿವಾಲಯ ಈ ವರದಿಯನ್ನು ತಳ್ಳಿಹಾಕಿ, ಭೂತಾನ್ಗೆ E20 ಪೂರೈಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದೆ. ಇದಕ್ಕೆ ಪ್ರತಿಯಾಗಿ ‘ದಿ ಭೂತಾನೀಸ್’ ಭೂತಾನ್ ವ್ಯಾಪಾರ ಇಲಾಖೆಯಿಂದ ಪಡೆದ ಲಿಖಿತ ಉತ್ತರವನ್ನು ಪ್ರಕಟಿಸಿದ್ದು, ಗೊಂದಲ ಮತ್ತಷ್ಟು ಗಾಢವಾಗಿದೆ.

ಇದನ್ನೂ ಓದಿ: ಜುಲೈ 20ರಿಂದ ಸಂಸತ್ ಮುಂಗಾರು ಅಧಿವೇಶನ; ಆಗಸ್ಟ್‌ 13ರವರೆಗೆ ಕಲಾಪ

ಈ ನಡುವೆ ಪ್ರಮುಖ ಪ್ರಶ್ನೆಗಳು ಉದ್ಭವಿಸಿವೆ: ಭಾರತ ಇತರೆ ದೇಶಗಳಿಗೆ ಮಿಶ್ರಣವಿಲ್ಲದ ಪೆಟ್ರೋಲ್ ಪೂರೈಕೆ ಮಾಡುತ್ತಿದೆಯೇ? ಮತ್ತು ಭೂತಾನ್ E20 ಅನ್ನು ನಿರಾಕರಿಸಿದ್ದರೆ, ಅದರ ಹಿಂದಿರುವ ಕಾರಣವೇನು?

ವರದಿ ಪ್ರಕಾರ, ಭೂತಾನ್ ಅನೇಕ ಪೆಟ್ರೋಲ್ ಸಂಗ್ರಹ ಟ್ಯಾಂಕ್‌ಗಳು ಹಳೆಯದಾಗಿದ್ದು, ಭೂಗರ್ಭ ಜಲ ಸೋರಿಕೆ ಸಮಸ್ಯೆ ಇದೆ. ಎಥನಾಲ್ ಮಿಶ್ರಿತ ಪೆಟ್ರೋಲ್ ನೀರನ್ನು ಸುಲಭವಾಗಿ ಹೀರಿಕೊಳ್ಳುವುದರಿಂದ, ಇಂತಹ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿದರೆ ಇಂಧನದ ಗುಣಮಟ್ಟ ಹದಗೆಡುವ ಸಾಧ್ಯತೆ ಇದೆ.

ಅಧಿಕಾರಿಯೊಬ್ಬರು ವಿವರಿಸಿದಂತೆ, ನೀರು ಮಿಶ್ರಣವಾದರೆ ಇಂಧನದ ರಾಸಾಯನಿಕ ಗುಣಲಕ್ಷಣಗಳು ಬದಲಾಗುತ್ತವೆ, ಇದರಿಂದ ವಾಹನಗಳ ಎಂಜಿನ್ ಸಮಸ್ಯೆಗಳು ಉಂಟಾಗಬಹುದು ಮತ್ತು ವಾಹನವೇ ಕಾರ್ಯನಿರ್ವಹಿಸದ ಸ್ಥಿತಿ ಎದುರಾಗಬಹುದು.

ಭೂತಾನ್ ಅಧಿಕಾರಿಗಳು ಭಾರತದಿಂದ ಮುಂಚಿತ ಮಾಹಿತಿ ನೀಡುವಂತೆ ಕೂಡ ಕೇಳಿಕೊಂಡಿದ್ದಾರೆ. ಭವಿಷ್ಯದಲ್ಲಿ E20 ಅಥವಾ ಹೆಚ್ಚಿನ ಎಥನಾಲ್ ಮಿಶ್ರಿತ ಇಂಧನವನ್ನು ಕಡ್ಡಾಯಗೊಳಿಸಿದರೆ, ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸಲು ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಭೂತಾನ್ನ  ಪ್ರಮುಖ ಇಂಧನ ವಿತರಕ ಸಂಸ್ಥೆಯೂ ಈ ಅಭಿಪ್ರಾಯವನ್ನು ಬೆಂಬಲಿಸಿದ್ದು, ಪ್ರಸ್ತುತ ದೇಶದ ಇಂಧನ ಕೇಂದ್ರಗಳು E20 ನಿಭಾಯಿಸಲು ತಯಾರಾಗಿಲ್ಲವೆಂದು ಹೇಳಿದೆ. ಹಿಮಾಲಯ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳನ್ನು ಗಮನಿಸಿದರೆ, E20 ಇಂಧನ ವಾಹನಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡುವುದಿಲ್ಲ ಎಂಬ ಆತಂಕವೂ ವ್ಯಕ್ತವಾಗಿದೆ.

ಈ ವಿಚಾರ ಎರಡು ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ: ಭಾರತದಲ್ಲಿ ಪರ್ವತ ಪ್ರದೇಶಗಳಲ್ಲಿ E20 ಕಾರ್ಯಕ್ಷಮತೆಯನ್ನು ಸಮರ್ಪಕವಾಗಿ ಪರೀಕ್ಷಿಸಲಾಗಿದೆವೇ? ಮತ್ತು ದೇಶದ ಒಳಗಿನ ಪೆಟ್ರೋಲ್ ಡೀಲರ್‌ಗಳಿಗೆ ಅಗತ್ಯ ಮೂಲಸೌಕರ್ಯ ಬದಲಾವಣೆಗಾಗಿ ಸಾಕಷ್ಟು ಮುಂಚಿತ ಸೂಚನೆ ನೀಡಲಾಗಿದೆಯೇ?

ಇದನ್ನೂ ನೋಡಿ: ನವ ಉದಾರವಾದಿ ಆರ್ಥಿಕತೆಯಲ್ಲಿ ನಿರುದ್ಯೋಗದ ಬಿಕ್ಕಟ್ಟು -ನಾಗರಾಜ ಶಾನಭೋಗ Janashakthi Media

Donate Janashakthi Media

Leave a Reply

Your email address will not be published. Required fields are marked *