ಕೇರಳ ಚುನಾವಣೆ | ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಪಿಣರಾಯಿ ವಿಜಯನ್ ತೀವ್ರ ತಿರುಗೇಟು

ತಿರುವನಂತಪುರಂ :ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು  ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಭೇದಾಭಿಪ್ರಾಯಗಳನ್ನು ವೈಯಕ್ತಿಕ ಅವಹೇಳನಗಳ ಮೂಲಕ ವ್ಯಕ್ತಪಡಿಸುವುದು ಪ್ರಜಾಸತ್ತಾತ್ಮಕ ಸಂಸ್ಕೃತಿಗೆ ವಿರುದ್ಧ ಎಂದು ಹೇಳಿದ್ದಾರೆ. ಮತ್ತೊಂದು ರಾಜ್ಯದ ಮುಖ್ಯಮಂತ್ರಿ ಕೇರಳ ಸರ್ಕಾರದ ವಿರುದ್ಧ ವೃತ್ತಾ ಆರೋಪಗಳನ್ನು ಮಾಡುವುದನ್ನು ಅವರು ಆ ಹುದ್ದೆಯ ಗೌರವಕ್ಕೆ ಧಕ್ಕೆಯೆಂದು ಅಭಿಪ್ರಾಯಪಟ್ಟಿದ್ದಾರೆ. ಕೇರಳ

ಕೇರಳದಲ್ಲಿ ಯುಡಿಎಫ್ ಪರ ಪ್ರಚಾರ ನಡೆಸಿದ ರೇವಂತ್ ರೆಡ್ಡಿ, ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ವಿರುದ್ಧ ಮಾಡಿದ್ದ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಪಿಣರಾಯಿ ಕಠಿಣ ಟೀಕೆ ಮಾಡಿದ್ದು,

ಎಲ್‌ಡಿಎಫ್ ಸರ್ಕಾರದ ಕಾರ್ಯಶೈಲಿಯನ್ನು ವಿವರಿಸಿದ ಅವರು, ತಮ್ಮ ಆಡಳಿತವು ಕೇವಲ ಚುನಾವಣೆಗೆ ಸೀಮಿತವಾಗಿಲ್ಲ, ಜನರ ಪ್ರಗತಿಗಾಗಿ ನಿರಂತರ ಹೋರಾಟ ನಡೆಸುತ್ತದೆ ಎಂದು ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸರ್ಕಾರ ತನ್ನ ಕಾರ್ಯಗಳ ಯಶಸ್ಸು–ವಿಫಲತೆಗಳನ್ನು ಜನರಿಗೆ ತಿಳಿಸುವ ಪ್ರಗತಿ ವರದಿಗಳನ್ನು ಪ್ರಕಟಿಸುತ್ತಿದ್ದು, ಇದು ಪ್ರಜಾಸತ್ತಾತ್ಮಕ ಹೊಣೆಗಾರಿಕೆಯ ಭಾಗವೆಂದು ತಿಳಿಸಿದ್ದಾರೆ. ಕೇರಳದ ಸಾಮಾಜಿಕ ಸಾಧನೆಗಳಿಗೆ ಕಾಂಗ್ರೆಸ್ ಶ್ರೇಯಸ್ಸು ನೀಡಲು ಮಾಡುವ ಪ್ರಯತ್ನ ಇತಿಹಾಸವನ್ನು ವಕ್ರಗೊಳಿಸುವುದಾಗಿದೆ ಎಂದು ಟೀಕಿಸಿದ್ದಾರೆ. ಕೇರಳ

ಇತಿಹಾಸದ ಹಿನ್ನೆಲೆಯನ್ನು ಉಲ್ಲೇಖಿಸಿದ ಅವರು, ಭೂಸುಧಾರಣೆ ಜಾರಿಗೆ ತಂದ ಕಮ್ಯುನಿಸ್ಟ್ ಸರ್ಕಾರವನ್ನು ಅಂದಿನ ಕಾಂಗ್ರೆಸ್ ಸರ್ಕಾರವೇ ಕೆಡವಿದುದನ್ನು ನೆನಪಿಸಿದರು. ವಿಕೇಂದ್ರೀಕೃತ ಆಡಳಿತ, ಸಾಕ್ಷರತಾ ಚಳವಳಿ ಹಾಗೂ ಜನಕಲ್ಯಾಣ ಯೋಜನೆಗಳ ಮೂಲಕ ಕೇರಳ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ನವಕೇರಳ ಮಿಷನ್‌ಗಳ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದೂ ವಿವರಿಸಿದರು. ಕೇರಳ

ಇದನ್ನೂ ಓದಿ : 2021ರ ಚುನಾವಣಾ ಭರವಸೆಗಳಲ್ಲಿ ಶೇ 97 ರಷ್ಟು ‘ಈಡೇರಿವೆ’ – ಕೇರಳ ಸಿಎಂ ಪಿಣರಾಯಿ ವಿಜಯನ್ ಕೇರಳ

ಆರೋಗ್ಯ ಕ್ಷೇತ್ರದಲ್ಲಿ ‘ಆರ್ಧ್ರಂ ಮಿಷನ್’ ಮೂಲಕ ನೂರಾರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಹೈಟೆಕ್ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿದ್ದು, ಡಿಜಿಟಲ್ ವ್ಯವಸ್ಥೆಗಳನ್ನೂ ಬಲಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಸೂಚ್ಯಂಕಗಳನ್ನು ಉಲ್ಲೇಖಿಸಿದ ಅವರು, ಭ್ರಷ್ಟಾಚಾರ ಕಡಿಮೆ ಇರುವ ರಾಜ್ಯಗಳಲ್ಲಿ ಕೇರಳ ಮುಂಚೂಣಿಯಲ್ಲಿದ್ದು, ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲೂ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ. ಕೇರಳ

ಮೂಲಸೌಕರ್ಯ ಅಭಿವೃದ್ಧಿ ವಿಷಯದಲ್ಲಿಯೂ ಹಿಂದಿನ ಕಾಂಗ್ರೆಸ್ ಸರ್ಕಾರಗಳ ವಿಳಂಬವನ್ನು ಟೀಕಿಸಿದ ಅವರು, ಪ್ರಮುಖ ಯೋಜನೆಗಳನ್ನು ಪುನರುಜ್ಜೀವನಗೊಳಿಸಿ ಕಾರ್ಯಗತಗೊಳಿಸಿದದ್ದು ಎಲ್‌ಡಿಎಫ್ ಸರ್ಕಾರವೇ ಎಂದು ಹೇಳಿದರು. ಐಟಿ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷಿ ಗುರಿಗಳನ್ನು ಹೊಂದಿದ್ದು, ಡಿಜಿಟಲ್ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ, ಕೇರಳವು ಅತಿ ದಾರಿದ್ರ್ಯ ನಿರ್ಮೂಲನೆಗೆ ಪ್ರಮುಖ ಹೆಜ್ಜೆ ಇಟ್ಟಿದ್ದು, ಸಾವಿರಾರು ಕುಟುಂಬಗಳನ್ನು ದಾರಿದ್ರ್ಯದಿಂದ ಹೊರತೆಗೆದಿರುವುದಾಗಿ ಹೇಳಿದ್ದಾರೆ. ಜೊತೆಗೆ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಗಳ ಹಕ್ಕುಗಳ ವಿಷಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವುದನ್ನೂ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ, ರೇವಂತ್ ರೆಡ್ಡಿಯ ಟೀಕೆಗಳಿಗೆ ಸಮಗ್ರ ಉತ್ತರ ನೀಡಿರುವ ಪಿಣರಾಯಿ ವಿಜಯನ್, ಕೇರಳದ ಅಭಿವೃದ್ಧಿ ಮಾದರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ರಾಜಕೀಯದಲ್ಲಿ ಶಿಸ್ತಿನ ಮಿತಿಗಳನ್ನು ಪಾಲಿಸಬೇಕೆಂಬ ಸಂದೇಶವನ್ನು ನೀಡಿದ್ದಾರೆ.

ಇದನ್ನೂ ನೋಡಿ : ಕೇರಳ ಚುನಾವಣೆ | ಎಲ್‌ಡಿಎಫ್ vs ಯುಡಿಎಫ್ ನೆಕ್‌ ಟು ನೆಕ್ ಫೈಟ್ – ಗೇಮ್‌ಚೇಂಜರ್ ಆಗುವ ಮತದಾರರು ಯಾರು?

Donate Janashakthi Media

Leave a Reply

Your email address will not be published. Required fields are marked *