VB-G-RAM-G ಮಸೂದೆ MGNREGA ನ್ನು ರದ್ದುಗೊಳಿಸುವ ದುಷ್ಟಪಿತೂರಿ – RSS ಅಜೆಂಡಾವನ್ನು ವಿರೋಧಿಸಿ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಬದಲಿಗೆ ‘ವಿಕಸಿತ್ ಭಾರತ್ – ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ, 2025’ (VB-GRAMG ಮಸೂದೆ) ನ್ನು ತರುತ್ತಿರುವುದು ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದ ಒಂದು ದುಷ್ಟ ನಡೆ ಎಂದು ಅಖಿಲ ಭಾರತ ಕಿಸಾನ್‍ ಸಭಾ (ಎಐಕೆಎಸ್‍) ಖಂಡಿಸಿದೆ.

ಆರೆಸ್ಸೆಸ್‍ನ RSS ನ ಆಜ್ಞೆಯ ಮೇರೆಗೆ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿ G-RAM-G ಎಂದು ಓದಬಹುದಾದ ಸಂಕ್ಷಿಪ್ತ ರೂಪದೊಂದಿಗೆ ಬದಲಾಯಿಸುವ ಈ ನಡೆ ದುರುದ್ದೇಶಪೂರಿತವಾಗಿದೆ; ಪ್ರಸ್ತಾವಿತ ಮಸೂದೆಯು ಮೂಲ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ ಮತ್ತು ಅದರಿಂದ ಖಾತರಿಪಡಿಸಲಾದ ಕೆಲಸದ ಹಕ್ಕನ್ನು ಸೀಮಿತಗೊಳಿಸುತ್ತದೆ. ಇಂತಹ ಮೋಸದ ಮಸೂದೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಎಐಕೆಎಸ್‍ ಆಗ್ರಹಪಡಿಸಿದೆ.

ಕೃಷಿ ಕೂಲಿಕಾರರ ಮತ್ತು ರೈತರ ಸಂಘಟನೆಗಳ ಹೋರಾಟಗಳ ಪರಿಣಾಮವಾಗಿ MGNREGA ಜಾರಿಗೆ ಬಂದಿದ್ದು, ವರ್ಷವಿಡೀ ಬೇಡಿಕೆ ಆಧಾರಿತ ಕಾನೂನಾಗಿ ಇದನ್ನು ಅನ್ವಯಿಸುವಲ್ಲಿ ಎಡಪಂಥೀಯರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಕೃಷಿ ಕೆಲಸ ಇಲ್ಲದಿದ್ದಾಗ ಅಥವಾ ಬರಗಾಲದಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ, ಕೆಲಸದ ಬೇಡಿಕೆ ಹೆಚ್ಚಾಗುತ್ತದೆ; ಇದು ಬೇಡಿಕೆ ಆಧಾರಿತವಾಗಿರುವುದರಿಂದ, ಬೇಡಿಕೆಯನ್ನು ಪೂರೈಸಲು ಬಜೆಟ್ ಹಂಚಿಕೆಯನ್ನು ಹೆಚ್ಚಿಸುವುದು ಕಡ್ಡಾಯವಾಗಿತ್ತು.

ಇದನ್ನೂ ಓದಿ: ಕೇರಳ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶಗಳು: ಅನಿರೀಕ್ಷಿತ ಹಿನ್ನಡೆ, ಶತ್ರುಗಳ ಬೆಳವಣಿಗೆ ಅಲ್ಲ!

ಈ ಮಸೂದೆಯಲ್ಲಿ “ಕೃಷಿಯ ಪೀಕ್‍ ಸೀಸನ್ನಿ”ನಲ್ಲಿ; ಕೆಲಸವನ್ನು ನಿಷೇಧಿಸಿರುವುದು ಅಂತಿಮವಾಗಿ MGNREGA ಯ ಉದ್ದೇಶವನ್ನು ನಿಷ್ಪ್ರಯೋಜಕಗೊಳಿಸುತ್ತದೆ.

“ಕೃಷಿ ಫೀಕ್‍ ಸೀಸನ್” ಮುಂಗಾರು ಮತ್ತು ಹಿಂಗಾರು ಋತುಗಳಲ್ಲಿ ಬಿತ್ತನೆ ಮತ್ತು ಕೊಯ್ಲು ಋತುಗಳನ್ನು ಒಳಗೊಳ್ಳಬಹುದು ಮತ್ತು ಕೆಲವು ಕೃಷಿ ವಲಯಗಳು ಮೂರು ಬೆಳೆಗಳನ್ನು ಹೊಂದಿರುತ್ತವೆ. ಈ ಫೀಕ್‍ ಸೀಸನ್ ಎಂಬುದನ್ನು ಹೇಗೆ ಬೇಕಾದರೂ ಬಳಸಬಹುದು ಮತ್ತು ಪ್ರಸ್ತಾವಿತ ಶಾಸನದ ಅಡಿಯಲ್ಲಿ ಕೆಲಸವನ್ನು ನಿರಾಕರಿಸಲು ವರ್ಷದ ಬಹುಪಾಲು ಸಮಯಕ್ಕೆ ಅಕ್ಷರಶಃ ವಿಸ್ತರಿಸಬಹುದು.

ಇನ್ನು, ಬೇಡಿಕೆ ಆಧಾರಿತ MGNREGA ಯಡಿಯಲ್ಲಿ ವರ್ಷವಿಡೀ ಕೆಲಸ ಖಾತರಿಪಡಿಸುವ ಅಡಿಯಲ್ಲಿಯೂ ಸಹ, ವಾಸ್ತವವಾಗಿ ಕೆಲಸ ದೊರೆತ ಸರಾಸರಿ ಅವಧಿ 50 ಕ್ಕಿಂತಲೂ ಕಡಿಮೆಯೇ ಇರುವಾಗ, 125 ದಿನಗಳ ಕೆಲಸವನ್ನು ಒದಗಿಸುವುದಾಗಿ ಹೇಳಿಕೊಳ್ಳುವುದು ಬೋಗಸ್ ಎಂದು ಎಐಕೆಸ್‍ ವರ್ಣಿಸಿದೆ. ಇದರ ಬದಲು . ಮನರೇಗವನ್ನು ಬಲಪಡಿಸಿ ವರ್ಷದಲ್ಲಿ 200 ದಿನಗಳ ಕೆಲಸವನ್ನು ಖಾತ್ರಿಪಡಿಸಬೇಕು ಎಂದು ಎಐಕೆಎಸ್ ಒತ್ತಾಯಿಸಿದೆ.

ದೇಶಾದ್ಯಂತ, ಈ ಪೀಕ್ ಸೀಸನ್‌ಗಳು ಎಂದು ಕರೆಯಲ್ಪಡುವ ಸಮಯಗಳಲ್ಲಿಯೂ ಸಹ, ಯಾಂತ್ರೀಕರಣದಿಂದಾಗಿ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ. MGNREGA ಅಡಿಯಲ್ಲಿ ಕೆಲಸ ಮಾಡುವ ಆಯ್ಕೆಯು ಗ್ರಾಮೀಣ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪಡೆಯುವ ಮತ್ತು ಕೃಷಿ ಚಟುವಟಿಕೆಗಳಲ್ಲಿ ಕೆಲಸ ಮಾಡುವಾಗ ಉತ್ತಮ ಕೂಲಿಯನ್ನು ಖಚಿತಪಡಿಸಿಕೊಳ್ಳಲು ಚೌಕಾಶಿ ಮಾಡುವ ಶಕ್ತಿಯನ್ನು ಹೊಂದುವ ಖಾತರಿಯಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೂಲಿಯನ್ನು ಇದರ ಅಡಿಯಲ್ಲಿ ಖಾತರಿಪಡಿಸಲಾಯಿತು ಆದರೆ ಕೃಷಿ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಎಂದಿಗೂ ಪುರುಷರಿಗೆ ಸಮಾನವಾಗಿ ಕೂಲಿ
ನೀಡಲಾಗುವುದಿಲ್ಲ. ಗ್ರಾಮೀಣ ಶ್ರೀಮಂತರು ಮತ್ತು ಭೂಮಾಲೀಕರು ಯಾವಾಗಲೂ MGNREGA ವಿರುದ್ಧ ನಿಲುವು ತೆಗೆದುಕೊಂಡಿದ್ದಾರೆ ಮತ್ತು ಬಿಜೆಪಿ ನೇತೃತ್ವದ ಎನ್‍ಡಿಎ ಈ ಮಸೂದೆಯನ್ನು ತರುವ ಮೂಲಕ ತನ್ನ ವರ್ಗ ಸ್ವರೂಪವನ್ನು ತೋರಿಸುತ್ತಿದೆ ಎಂದು ಎಐಕೆಎಸ್‍ ಹೇಳಿದೆ.

ಕೆಲಸದ ನಿರಾಕರಣೆ ಮತ್ತು ಶೋಷಣೆಗೆ ಕಾರಣವಾದ ಡಿಜಿಟಲ್ ಹಾಜರಾತಿಯಂತಹ ಹಿಂದಿನ ಬದಲಾವಣೆಗಳನ್ನು ಪ್ರಸ್ತಾವಿತ ಮಸೂದೆಯು ಕಾನೂನುಬದ್ಧಗೊಳಿಸಿದೆ.

ಕಳೆದ 11 ವರ್ಷಗಳಲ್ಲಿ, ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು MGNREGA ಗೆ ಹಣದ ಕೊರತೆಯನ್ನುಂಟುಮಾಡಿತು ಮತ್ತು ಈ ಮಸೂದೆಯ ಮೂಲಕ ರಾಜ್ಯಗಳು ವೆಚ್ಚದ 40 ಪ್ರತಿಶತವನ್ನು ಭರಿಸುವಂತೆ ಬಲವಂತ ತರುತ್ತಿದೆ. ಇದು ನಿರ್ಧಾರ ಪ್ರಕ್ರಿಯೆಯನ್ನು ಕೇಂದ್ರೀಕರಿಸುತ್ತಿದೆ ಮತ್ತು ರಾಜ್ಯಗಳ ಒಕ್ಕೂಟ ಹಕ್ಕುಗಳನ್ನು ನಿರಾಕರಿಸುತ್ತಿದೆ.

ಎನ್‌ಡಿಎ ಸರ್ಕಾರವು ರಾಜ್ಯಗಳನ್ನು, ವಿಶೇಷವಾಗಿ ವಿರೋಧ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳನ್ನು ಆರ್ಥಿಕವಾಗಿ ಕತ್ತು ಹಿಸುಕಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಇಂತಹ ನಿಬಂಧನೆಯು ಈ ಯೋಜನೆಯನ್ನು ಮುಗಿಸಿ ಬಿಡುವ ಕೊನೆಯ ಏಟು ಆಗಿದೆ ಎಂದು ಟೀಕಿಸಿರುವ ಎಐಕೆಎಸ್, ಈ ಮಸೂದೆಯು ಕಾರ್ಮಿಕ ವಿರೋಧಿ ಕಾರ್ಮಿಕ ಕಾನೂನುಗಳಂತೆಯೇ ಎಂಬುದು ಸ್ಪಷ್ಟವಾಗಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಮೀಣ ಕಾರ್ಮಿಕರನ್ನು ಉದ್ಯೋಗಾವಕಾಶಗಳಿಂದ ವಂಚಿಸುತ್ತದೆ ಮತ್ತು ಇದು ಹತಾಶ ವಲಸೆಗೆ ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ಎಲ್ಲಾ ಜನ ವಿಭಾಗಗಳು ಈ ದುಷ್ಟ ನಡೆಯನ್ನು ವಿರೋಧಿಸಿ ಎದ್ದು ನಿಲ್ಲಬೇಕೆಂದು ಕರೆ ನೀಡಿರುವ ಅಖಿಲ ಭಾರತ ಕಿಸಾನ್‍ ಸಭಾ ಈ ಹೋರಾಟದಲ್ಲಿ ಕೃಷಿ ಕಾರ್ಮಿಕರು, ಕಾರ್ಮಿಕರು, ಮಹಿಳೆಯರು ಮತ್ತು ಯುವಕರ ಸಂಘಟನೆಗಳೊಂದಿಗೆ ಕೈಜೋಡಿಸುತ್ತದೆ ಎಂದು ಆಶ್ವಾಸನೆ ನೀಡಿದೆ.

ಇದನ್ನೂ ನೋಡಿ: Karnataka Legislative Assembly Day 07 Live | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

Donate Janashakthi Media

Leave a Reply

Your email address will not be published. Required fields are marked *