ಪ್ರೊ.ಪ್ರಭಾತ್ ಪಟ್ನಾಯಕ್
ಭಾರತದಂತಹ ದೇಶಗಳು ತಮ್ಮ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸುವಂತೆ ಮಾಡಲು ಯು.ಎಸ್. ಸುಂಕದ ಬೆದರಿಕೆಯನ್ನು ಬಳಸುತ್ತಿದೆ. ತನಗೆ ಯಾವುದು ಅನುಕೂಲಕರ ಎಂಬುದನ್ನು ಅವಲಂಬಿಸಿ ಇತರ ದೇಶಗಳು ಏನನ್ನು ಮಾಡಬೇಕು ಅಥವಾ ಏನನ್ನು ಮಾಡಬಾರದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ತಾನು ಹೊಂದಿರುವೆ ಎಂಬ ಸೊಕ್ಕಿನಿಂದ ಅದು ವರ್ತಿಸುತ್ತದೆ. ಅದರ ಈ ರೀತಿಯ ಕೈ ತಿರುಚುವ ನಡವಳಿಕೆಗೆ ಉತ್ತರವನ್ನು ಚೀನಾ ಕಂಡುಕೊಂಡಿದೆ. ಇದೇ ರೀತಿಯ ಪ್ರತಿದಾಳಿ ಒತ್ತಡವನ್ನು ಭಾರತವೂ ಹಾಕಬಹುದು. ಇರಾನ್ ಯುದ್ಧದ ದುರಂತವು ನೀಡಿದ ಒಂದು ಕೊಡುಗೆಯೆಂದರೆ, ದೃಢ ಪ್ರತಿರೋಧವನ್ನು ಒಡ್ಡುವ ಒಂದು ಆಳ್ವಿಕೆಯ ಎದುರು ಅಮೆರಿಕ ಅದೆಷ್ಟು ದುರ್ಬಲವಾಗುತ್ತದೆ ಎಂಬುದರ ಪ್ರದರ್ಶನ. ಅಂತಹ ಒಂದು ಪ್ರತಿರೋಧವನ್ನು ಕೈತಿರುಚುವ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತದಂತಹ ದೇಶವು ಪ್ರದರ್ಶಿಸದಿದ್ದರೆ ಅದೊಂದು ದುರಂತವೇ ಸರಿ. ರಷ್ಯಾ
ಅನು:ಕೆ.ಎಂ.ನಾಗರಾಜ್
ಅಮೆರಿಕ ಸಂಯುಕ್ತ ಸಂಸ್ಥಾನ(ಯು.ಎಸ್.) ಸೆನೆಟ್ ಆಗಸ್ಟ್ 7 ರಂದು ಒಂದು ಮಸೂದೆಯನ್ನು ಬಹುಮತದಿಂದ (86-11) ಅಂಗೀಕರಿಸಿದೆ. ಈ ಮಸೂದೆಯು, ರಷ್ಯಾದ ವಿರುದ್ಧ ಯು.ಎಸ್. ವಿಧಿಸಿರುವ ಏಕಪಕ್ಷೀಯ ನಿರ್ಬಂಧಗಳನ್ನು ಉಲ್ಲಂಘಿಸಿ, ರಷ್ಯಾದಿಂದ ಗಣನೀಯ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 100 ರಷ್ಟು ಸುಂಕವನ್ನು ವಿಧಿಸುವ ಅಧಿಕಾರವನ್ನು ಯು.ಎಸ್. ಆಡಳಿತಕ್ಕೆ ನೀಡುತ್ತದೆ. ರಷ್ಯಾದಿಂದ ಗಣನೀಯ ಪ್ರಮಾಣದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಮತ್ತು ಈ ಮಸೂದೆಯ ಗುರಿಯಾಗಿರುವ ಐದು ದೇಶಗಳೆಂದರೆ, ಭಾರತ, ಚೀನಾ, ಹಂಗೇರಿ, ಸ್ಲೋವಾಕಿಯಾ ಮತ್ತು ಅಜೆರ್ಬೈಜಾನ್. ತನ್ನ ಏಕಪಕ್ಷೀಯ ನಿರ್ಬಂಧಗಳನ್ನು ಉಲ್ಲಂಘಿಸಿದವರಿಗೆ ಇಷ್ಟೊಂದು ಅಧಿಕ ಸುಂಕಗಳನ್ನು ವಿಧಿಸಿದ್ದಕ್ಕಾಗಿ ಅಮೆರಿಕದ ಸರ್ಕಾರ ಮುಂದಿಟ್ಟಿರುವ ವಾದವೆಂದರೆ, ಈ ದೇಶಗಳಿಗೆ ಬೃಹತ್ ಪ್ರಮಾಣದ ತೈಲವನ್ನು ರಫ್ತು ಮಾಡುವ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾ ಹಣ ಒದಗಿಸಿಕೊಳ್ಳುತ್ತಿದೆ ಎಂಬುದು.
ಉಕ್ರೇನ್ ಯುದ್ಧದಲ್ಲಿ ಅಮೆರಿಕ ಇತ್ತೀಚೆಗೆ ಹೆಚ್ಚು ಹೆಚ್ಚು ತೊಡಗಿಸಿಕೊಂಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಉಕ್ರೇನ್ ಸರ್ಕಾರದ ಹೆಚ್ಚುತ್ತಿರುವ ಯುದ್ಧಕೋರತನದ ಹಿಂದಿರುವ ಕಾರಣವೂ ಹೌದು. ರಷ್ಯಾದ ಮೇಲೆ ಉಕ್ರೇನ್ ಇತ್ತೀಚೆಗೆ ನಡೆಸಿದ ವಾಯುದಾಳಿಗಳು ಸಾಧ್ಯವಾಗಿರುವುದು ಯುಎಸ್ ಅಮೂಲ್ಯ ಗುಪ್ತಚರ ಮಾಹಿತಿಯನ್ನು ಒದಗಿಸಿರುವುದರಿಂದಾಗಿಯೇ. ಈ ಸಂಗತಿಯೊಂದಿಗೆ, ಜರ್ಮನಿಯ ಮರುಶಸ್ತ್ರೀಕರಣ ಹಾಗೂ ಅದು ಹೊಸದಾಗಿ ಕಂಡುಕೊಂಡ ಆಕ್ರಮಣಶೀಲತೆಯಿಂದ ಮತ್ತಷ್ಟು ಉತ್ತೇಜಿತಗೊಂಡಿರುವ ರಷ್ಯಾದ ಮೇಲೆ ಯುರೋಪಿನ ಎಂದೂ ತಣಿಯದಂತಿರುವ ಹಗೆತನ, ಯುದ್ಧದಲ್ಲಿ ಅಮೆರಿಕ ಹೆಚ್ಚು ಹೆಚ್ಚು ತೊಡಗಿಸಿಕೊಂಡಿರುವುದು ಯುದ್ಧವನ್ನು ಲಂಬಿಸುವುದು ಮಾತ್ರವಲ್ಲದೆ, ಅದು ಪರಮಾಣು ಸಂಘರ್ಷವಾಗಿ ಉಲ್ಬಣಗೊಳ್ಳುವ ಅಪಾಯವನ್ನು ಸಹ ವಾಸ್ತವಗೊಳಿಸುತ್ತದೆ.
ರಷ್ಯಾದ ಮೇಲೆ ಪಶ್ಚಿಮ ದೇಶಗಳ ಈ ಅವಿವೇಕದ ಹಗೆತನಕ್ಕೆ ರಷ್ಯನ್ನರು ಮತ್ತು ಉಕ್ರೇನಿಯನ್ನರು ಇಬ್ಬರೂ ಈಗಾಗಲೇ ಭಾರೀ ಬೆಲೆ ತೆತ್ತಿದ್ದಾರೆ, ಅನೇಕ ಜೀವಗಳನ್ನು ಕಳೆದುಕೊಂಡಿದ್ದಾರೆ ಮತ್ತು ಕಳೆದುಕೊಳ್ಳುತ್ತಲೇ ಇದ್ದಾರೆ. ಈ ಜೀವಹಾನಿಯನ್ನು ಪಶ್ಚಿಮ ದೇಶಗಳ ಪ್ರಚಾರ-ಯಂತ್ರವು ರಷ್ಯಾದ ಆಕ್ರಮಣಕಾರಿ ಉದ್ದೇಶಗಳತ್ತ ಬೊಟ್ಟುಮಾಡುವ ಮೂಲಕ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಈ ಪ್ರಚಾರದಲ್ಲಿ ಹುರುಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಷ್ಯಾದ ವಿರುದ್ಧ ಪಶ್ಚಿಮ ದೇಶಗಳ ಈ ಆಕ್ರಮಣಕಾರೀ ನಿಲುವಿನ ಹಿಂದಿರುವ ನಿಜ ಅಂಶವೆಂದರೆ, ರಷ್ಯಾದ ಅಪಾರ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವು ಹೊಂದಿರುವ ದುರಾಸೆಯೇ. ಸೋವಿಯತ್ ಒಕ್ಕೂಟವು ಪತನಗೊಂಡನಂತರ ಅವನ್ನೆಲ್ಲ ಬಾಚಿಕೊಳ್ಳಬಹುದೆಂದು ಅವು ನಿರೀಕ್ಷಿಸಿದ್ದವು, ಆದರೆ ವ್ಲಾಡಿಮಿರ್ ಪುಟಿನ್ ಅಧಿಕಾರ ಹಿಡಿದ ನಂತರ ಆ ಸಂಪನ್ಮೂಲಗಳು ಬಹುಪಾಲು ರಷ್ಯಾದ ನಿಯಂತ್ರಣದೊಳಗೇ ಉಳಿದವು. ರಷ್ಯಾ
ನೈಸರ್ಗಿಕ ಸಂಪನ್ಮೂಲಗಳನ್ನು ಬಾಚಿಕೊಳ್ಳುವ ಅಪ್ರಾಮಾಣಿಕತೆ
ಉಕ್ರೇನ್ ಯುದ್ಧವನ್ನು ಮುಂದುವರೆಸಿಕೊಂಡೇ ಹೋಗಲಾಗುತ್ತಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಏಕಪಕ್ಷೀಯ ನಿರ್ಬಂಧಗಳನ್ನು ವಿಧಿಸಿವೆ. ಆದರೂ, ಸ್ವತಃ ಈ ದೇಶಗಳೇ ರಷ್ಯಾದ ನೈಸರ್ಗಿಕ ಸಂಪನ್ಮೂಲಗಳ ಖರೀದಿಯನ್ನು ಮುಂದುವರೆಸುತ್ತಿವೆ. ಹಾಗೆ ನೋಡಿದರೆ ಯು.ಎಸ್. ಪ್ರಸ್ತುತ ಹೊಂದಿರುವ ನಿಲುವಿನ ಹಿಂದೆ ಒಂದು ಬಲವಾದ ಅಪ್ರಾಮಾಣಿಕತೆಯ ಅಂಶವಿದೆ. ರಷ್ಯಾದಿಂದ ಭಾರತ ಮತ್ತು ಇತರ ದೇಶಗಳ ಆಮದುಗಳು ಉಕ್ರೇನ್ ವಿರುದ್ಧದ ಯುದ್ಧಕ್ಕೆ ಹಣ ಒದಗಿಸಿಕೊಳ್ಳಲು ರಷ್ಯಾಕ್ಕೆ ಸಹಾಯಕವಾಗುತ್ತವೆ ಎಂಬ ಕಾರಣದ ಮೇಲೆ ಈ ಆಮದುಗಳನ್ನು ನಿರ್ಬಂಧಿಸಲು ಅಮೆರಿಕ ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ, ಸ್ವತಃ ಅಮೆರಿಕವೇ ರಷ್ಯಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಮತ್ತು ಅದನ್ನು ಮುಂದುವರೆಸಿದೆ ಕೂಡ. 2021 ರಲ್ಲಿ ಸುಮಾರು $ 17 ಬಿಲಿಯನ್ ಮೌಲ್ಯದ ಕಚ್ಚಾ ತೈಲವನ್ನು ರಷ್ಯಾದಿಂದ ಅಮೆರಿಕ ಮಾಡಿಕೊಳ್ಳುತ್ತಿದ್ದ ಆಮದು ಸಂಪೂರ್ಣವಾಗಿ ನಿಂತುಹೋಗಿದೆ ಎಂಬುದು ಖಂಡಿತವಾಗಿಯೂ ನಿಜ, ಏಕೆಂದರೆ, ಅದು ತನ್ನದೇ ಈಗ ತನ್ನ ಸಂಪನ್ಮೂಲಗಳನ್ನು ಸಂರಕ್ಷಿಸಿಕೊಳ್ಳುವುದರ ಬದಲು ಅವುಗಳನ್ನು ಹೊರತೆಗೆಯುತ್ತಿದೆ ಮತ್ತು ರಫ್ತು ಮಾಡಲು ಆರಂಭಿಸಿದೆ. ಆದರೆ ಅಮೆರಿಕವು ರಷ್ಯಾದಿಂದ ಮಾಡಿಕೊಳ್ಳುವ ಇತರ ಪ್ರಮುಖ ವಸ್ತುಗಳ ಆಮದುಗಳನ್ನು ಮುಂದುವರೆಸಿದೆ. ಅವುಗಳ ಆಮದು ಕಡಿಮೆಯಾಗುತ್ತಿದೆ, ಇನ್ನೇನು ಕೆಲವೇ ಸಮಯದಲ್ಲಿ ನಿಂತುಹೋಗಬಹುದು ಎಂದೂ ಹೇಳಿಕೊಳ್ಳುವಂತಿಲ್ಲ. ತದ್ವಿರುದ್ಧವಾಗಿ, ರಷ್ಯಾದಿಂದ ಯು.ಎಸ್. ಮಾಡಿಕೊಳ್ಳುವ ಒಟ್ಟು ಆಮದುಗಳಲ್ಲಿ ಸುಮಾರು ಶೇ. 90ರಷ್ಟು ಪಾಲನ್ನು ಹೊಂದಿರುವ ರಸಗೊಬ್ಬರಗಳು, ಪಲ್ಲಾಡಿಯಮ್ ಮತ್ತು ಯುರೇನಿಯಂ ಈ ಮೂರು ವಸ್ತುಗಳ ಆಮದುಗಳು 2021 ರಿಂದಲೂ ಹೆಚ್ಚುತ್ತಿವೆ. ಇದು “ರಷ್ಯಾ ಮತ್ತು ಯು.ಎಸ್. ಬಹುತೇಕ ಒಟ್ಟಿಗೆ ಯಾವುದೇ ವ್ಯವಹಾರವನ್ನೂ ಮಾಡುವುದಿಲ್ಲ” ಎನ್ನುವ ಟ್ರಂಪ್ ದಾವೆಗೆ ತದ್ವಿರುದ್ಧವಾಗಿದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ಯು.ಎಸ್.ನ ಕಾರ್ಯತಂತ್ರವೆಂದರೆ- ಉಕ್ರೇನಿನಲ್ಲಿ ಯುದ್ಧ ನಡೆಯುತ್ತಿರುವಾಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಷ್ಯಾದ ತೈಲದ ಬದಲು ತನ್ನ ತೈಲವನ್ನು ಮಾರುವುದು, ಅದೇ ವೇಳೆಯಲ್ಲಿ ರಷ್ಯಾದಿಂದ ಇತರ ವಸ್ತುಗಳ ಆಮದು ಅವಲಂಬನೆ ಮುಂದುವರಿಸುವುದು, ಮತ್ತು ತೈಲ ಮತ್ತು ಅನಿಲ ನಿಕ್ಷೇಪಗಳೂ ಸೇರಿದಂತೆ ಸೇರಿದಂತೆ ರಷ್ಯಾದ ನೈಸರ್ಗಿಕ ಸಂಪನ್ಮೂಲಗಳನ್ನು ಬಾಚಿಕೊಳ್ಳಲು ಸರ್ವಪ್ರಯತ್ನ ನಡೆಸುವುದು.
ಇರಾನ್ ವಿರುದ್ಧದ ಯುದ್ಧದ ಕಾರಣದಿಂದಾಗಿ, ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆಗಳ ಹೋಲಿಕೆಯಲ್ಲಿ ರಷ್ಯಾದ ಕಚ್ಚಾ ತೈಲವು ಅಗ್ಗದ ದರದಲ್ಲಿ ಲಭಿಸುತ್ತಿದ್ದ ಕಾರಣದಿಂದಾಗಿ, ರಷ್ಯಾದಿಂದ ತನ್ನ ತೈಲ ಆಮದುಗಳ ಶೇ. 35-40 ರಷ್ಟನ್ನು ಖರೀದಿಸುತ್ತಿದ್ದ ಅವಧಿಯಲ್ಲಿ ಭಾರತವು 17 ಶತಕೋಟಿ ಡಾಲರ್‌ಗಳ ವಿದೇಶಿ ವಿನಿಮಯವನ್ನು ಉಳಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಹೀಗೆ, ಭಾರತದಂತಹ ದೇಶಗಳು ತನ್ನ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸುವಂತೆ ಮಾಡಲು ಅಮೆರಿಕ ಸುಂಕದ ಬೆದರಿಕೆಯನ್ನು ಬಳಸುತ್ತಿದೆ.
ಭಾರತದಂತಹ ಒಂದು ದೇಶಕ್ಕೆ ಅಮೆರಿಕದ ತೈಲವು ರಷ್ಯಾದ ತೈಲಕ್ಕಿಂತ ಹೆಚ್ಚು ದುಬಾರಿಯಾಗುತ್ತದೆ (ನಿಜ, ರಷ್ಯಾದ ದರಗಳು, ಅದು ನಿರ್ಬಂಧಗಳನ್ನು ಎದುರಿಸುತ್ತಿರುವ ಕಾರಣದಿಂದಾಗಿ ನೀಡುತ್ತಿರುವ ರಿಯಾಯಿತಿಯಿಂದಾಗಿ ಅಗ್ಗವಾಗಿವೆ). ರಷ್ಯಾದ ತೈಲದ ಬದಲಿಗೆ ಅಮೇರಿಕದ ತೈಲವನ್ನು ಕೊಳ್ಳುವುದರಿಂದ ಭಾರತದ ತೈಲ ಆಮದು ವೆಚ್ಚವು ವಾರ್ಷಿಕ ಅಂದಾಜು 9-12 ಶತಕೋಟಿ ಡಾಲರ್‌ಗಳಷ್ಟು ಅಧಿಕವಾಗುತ್ತದೆ. ಇರಾನ್ ವಿರುದ್ಧದ ಯುದ್ಧದ ಕಾರಣದಿಂದಾಗಿ, ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆಗಳ ಹೋಲಿಕೆಯಲ್ಲಿ ರಷ್ಯಾದ ಕಚ್ಚಾ ತೈಲವು ಅಗ್ಗದ ದರದಲ್ಲಿ ಲಭಿಸುತ್ತಿದ್ದ ಕಾರಣದಿಂದಾಗಿ, ರಷ್ಯಾದಿಂದ ತನ್ನ ತೈಲ ಆಮದುಗಳ ಶೇ. 35-40 ರಷ್ಟನ್ನು ಖರೀದಿಸುತ್ತಿದ್ದ ಅವಧಿಯಲ್ಲಿ ಭಾರತವು 17 ಶತಕೋಟಿ ಡಾಲರ್‌ಗಳ ವಿದೇಶಿ ವಿನಿಮಯವನ್ನು ಉಳಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಹೀಗೆ, ಭಾರತದಂತಹ ದೇಶಗಳು ತನ್ನ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸುವಂತೆ ಮಾಡಲು ಅಮೆರಿಕ ಸುಂಕದ ಬೆದರಿಕೆಯನ್ನು ಬಳಸುತ್ತಿದೆ. ರಷ್ಯಾ
ಇದನ್ನೂ ಓದಿ : ವಿಮಾನಯಾನ ಕ್ಷೇತ್ರವನ್ನೂ ಅದಾನಿಗೆ ಒಪ್ಪಿಸಲು ಮೋದಿ ಸರ್ಕಾರದ ಹೊಸ ಯೋಜನೆ?
ಯು.ಎಸ್.ನ ಸೊಕ್ಕಿನ ವರ್ತನೆ
ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ವಿರುದ್ಧ ಅಧಿಕ ಸುಂಕ ಹೇರುವ ಅಮೆರಿಕದ ಬೆದರಿಕೆಯಿಂದಾಗಿ, ರಷ್ಯಾವು ತನ್ನ ಕಚ್ಚಾ ತೈಲವನ್ನು ಇನ್ನಷ್ಟು ರಿಯಾಯಿತಿ ದರದಲ್ಲಿ ನೀಡುವುದರಿಂದಾಗಿ, ಅಮೆರಿಕದ ನಿರ್ಬಂಧಗಳಿಗೆ ಹೊಂದಿಕೊಂಡರೆ, ಭಾರತಕ್ಕೆ ಉಂಟಾಗುವ ವಿದೇಶಿ ವಿನಿಮಯ ನಷ್ಟವು ಇನ್ನೂ ಹೆಚ್ಚಾಗುತ್ತದೆ. ಆದರೆ, ರಷ್ಯಾ ಪಶ್ಚಿಮ ದೇಶಗಳ ನಿರ್ಬಂಧಗಳನ್ನು ಎದುರಿಸುತ್ತಿರುವ ಅವಧಿಯಲ್ಲೇ ಏಷ್ಯಾದ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಮತ್ತು ಅನಿಲ ಮಾರಾಟಗಾರನಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿರುವುದು ಆಶ್ಚರ್ಯದ ವಿಷಯವೇನಲ್ಲ.
ರಷ್ಯಾದ ತೈಲವನ್ನು ಖರೀದಿಸದೇ ಇರುವುದು ಭಾರತದ ಹಣದುಬ್ಬರದ ದರದ ಏರಿಕೆಗೆ ಕಾರಣವಾಗುತ್ತದೆ. ಅದಕ್ಕೆ ಎರಡು ಕಾರಣಗಳಿವೆ: ಮೊದಲನೆಯದು, ಭಾರತವು ಆಮದು ಮಾಡಿಕೊಳ್ಳುವ ಪ್ರತಿ ಯೂನಿಟ್ ತೈಲದ ಡಾಲರ್ ಬೆಲೆ ಏರಿಕೆಯಾಗುವುದರಿಂದ ಮತ್ತು ಈ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವುದರಿಂದ ಹಣದುಬ್ಬರ ಏರಿಕೆಯಾಗುತ್ತದೆ. ಎರಡನೆಯ ಕಾರಣವೆಂದರೆ, ತೈಲ ಬೆಲೆಗಳ ಮಟ್ಟದಲ್ಲಿ ಏರಿಕೆಯಾದ ಕಾರಣದಿಂದ ಉಂಟಾಗುವ ವಿದೇಶಿ ವಿನಿಮಯದ ಸೋರಿಕೆಯು ರೂಪಾಯಿಯ ವಿನಿಮಯ ದರದ ಇಳಿಕೆಗೆ ಕಾರಣವಾಗುತ್ತದೆ. ರೂಪಾಯಿ ಮೌಲ್ಯದ ಈ ಇಳಿಕೆಯು ಎಲ್ಲ ಆಮದುಗಳ ರೂಪಾಯಿ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಈ ಅಂಶವು ಹಣದುಬ್ಬರವನ್ನು ಮತ್ತಷ್ಟು ಮೇಲಕ್ಕೆ ಒಯ್ಯುತ್ತದೆ. ಏರಿಕೆಯಾದ ಬೆಲೆ-ಮಟ್ಟದಲ್ಲಿ ತೈಲವನ್ನು ಆಮದು ಮಾಡಿಕೊಂಡಾಗ ಮತ್ತು ಆ ಏರಿಕೆಯನ್ನು ಸರ್ಕಾರವು ಬಳಕೆದಾರರಿಗೆ ವರ್ಗಾಯಿಸುವುದರ ಬದಲು, ತೈಲ ಕಂಪನಿಗಳಿಗೆ ಸಬ್ಸಿಡಿಯನ್ನು ಒದಗಿಸಿದರೆ, ಹಣದುಬ್ಬರವು ಉಲ್ಬಣಗೊಳ್ಳುವ ಕಾರಣಗಳಲ್ಲಿ ಮೊದಲನೆಯದನ್ನು ತಡೆಯಬಹುದು. ಆದರೆ ಈ ಕ್ರಮವು, ಸರ್ಕಾರವು ಮುಖ್ಯವಾಗಿ ಮಾಡಲೇಬೇಕಾದ ಕೆಲವು ವೆಚ್ಚಗಳ ಕಡಿತಕ್ಕೆ ಕಾರಣವಾಗುವುದರಿಂದ, ಅದು ಬೇರೊಂದು ಮಾರ್ಗದ ಮೂಲಕ ಜನರ ಮೇಲಿನ ದಾಳಿಗೆ ಕಾರಣವಾಗುತ್ತದೆ. ಅದೇ ರೀತಿಯಲ್ಲಿ, ನಮ್ಮ ವಿದೇಶಿ ವಿನಿಮಯ ಮೀಸಲುಗಳನ್ನು ಇಳಿಕೆ ಮಾಡಿಕೊಳ್ಳುವ ಮೂಲಕ ರೂಪಾಯಿಯು ಅಪಮೌಲ್ಯಗೊಳ್ಳುವುದನ್ನು ತಡೆಯಬಹುದು. ಆದರೆ ಈ ಕ್ರಮವು, ಭವಿಷ್ಯದಲ್ಲಿ ರೂಪಾಯಿಯ ಮೌಲ್ಯವು ಕುಸಿತವಾಗುವ ನಿರೀಕ್ಷೆಗಳನ್ನು ಬಲಪಡಿಸುವುದರಿಂದ, ಹೆಚ್ಚೆಂದರೆ ಒಂದು ಅಲ್ಪ ವಿರಾಮದ ನಂತರ, ರೂಪಾಯಿ ಮೌಲ್ಯದ ನಿಜ ಕುಸಿತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಕಡಿಮೆ ಬೆಲೆಯ ರಷ್ಯನ್ ತೈಲವನ್ನು ದುಬಾರಿ ಬೆಲೆಯ ಅಮೇರಿಕನ್ ತೈಲದೊಂದಿಗೆ ಬದಲಾಯಿಸುವ ಕ್ರಮವು ಭಾರತದ ಜನತೆಯ ಮೇಲೆ ಒಂದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಈ ರೀತಿಯಲ್ಲಿ, ಸಾವಿರಾರು ಮಂದಿ ರಷ್ಯನ್ನರು ಮತ್ತು ಉಕ್ರೇನಿಯನ್ನರ ಜೀವಗಳನ್ನು ಹಾಗೂ ಭಾರತ ಮತ್ತು ಇತರೆಡೆಗಳಲ್ಲಿ ಲಕ್ಷಾಂತರ ಜನರ ಜೀವನ ಮಟ್ಟವನ್ನು ಬಲಿ ಕೊಡುವ ಮೂಲಕ ಸಾಮ್ರಾಜ್ಯಶಾಹಿಯು ಇಂದು ರಷ್ಯಾದ ಸಂಪನ್ಮೂಲಗಳನ್ನು ಕಸಿದುಕೊಳ್ಳ ಬಯಸುತ್ತದೆ.
ತನ್ನ ದೃಷ್ಟಿಯಲ್ಲಿ ಯಾವುದು ಅನುಕೂಲಕರ ಎಂಬುದನ್ನು ಅವಲಂಬಿಸಿ ಇತರ ದೇಶಗಳು ಏನನ್ನು ಮಾಡಬೇಕು ಅಥವಾ ಏನನ್ನು ಮಾಡಬಾರದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ತಾನು ಹೊಂದಿರುವೆ ಎನ್ನುವ ರೀತಿಯ ಸೊಕ್ಕಿನಿಂದ ಯು.ಎಸ್. ವರ್ತಿಸುತ್ತದೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಯುದ್ಧವು ಒಂದು ಅಪಾಯದ ಸ್ಥಿತಿಯನ್ನು ತಲುಪಿದ ಸನ್ನಿವೇಶದಲ್ಲಿ, ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚುವುದರಿಂದ ಉಂಟಾಗುವ ತೈಲ ಬೆಲೆಗಳ ಏರಿಕೆಯು ಒಂದು ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಮತ್ತು ಅದು ತನ್ನ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಭಯ ಉಂಟಾದ ಸನ್ನಿವೇಶದಲ್ಲಿ, ರಷ್ಯಾದ ವಿರುದ್ಧ ತಾನು ಹೇರಿದ ನಿರ್ಬಂಧಗಳನ್ನು ಅಮೆರಿಕವು “ಸಡಿಲಗೊಳಿಸಿತು” ಮತ್ತು ಅದಾಗಲೇ ಸಮುದ್ರದಲ್ಲಿ ಸಾಗುತ್ತಿದ್ದ ರಷ್ಯಾದ ತೈಲವನ್ನು ಏಕಪಕ್ಷೀಯ ಯುಎಸ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪವಿಲ್ಲದೆ ಕೊಂಡೊಯ್ಯಲು ಅದು ಎಲ್ಲ ದೇಶಗಳಿಗೂ “ಅನುಮತಿಸಿತು” ಎಂಬ ಅಂಶವು ಮಹತ್ವಪೂರ್ಣವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ತನ್ನ ದೃಷ್ಟಿಯಲ್ಲಿ ಯಾವುದು ಅನುಕೂಲಕರ ಎಂಬುದನ್ನು ಅವಲಂಬಿಸಿ ಇತರ ದೇಶಗಳು ಏನನ್ನು ಮಾಡಬೇಕು ಅಥವಾ ಏನನ್ನು ಮಾಡಬಾರದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ತಾನು ಹೊಂದಿರುವೆ ಎನ್ನುವ ರೀತಿಯ ಸೊಕ್ಕಿನಿಂದ ಯು.ಎಸ್. ವರ್ತಿಸುತ್ತದೆ.
ವ್ಯಾಪಾರ ಮಾತುಕತೆಗಳಲ್ಲಿ ಷರತ್ತು ಹಾಕಬೇಕು
ಅಮೆರಿಕದ ಈ ರೀತಿಯ ಕೈ ತಿರುಚುವ ನಡವಳಿಕೆಗೆ ಉತ್ತರವನ್ನು ಚೀನಾ ಕಂಡುಕೊಂಡಿದೆ. ಈ ಉತ್ತರವನ್ನು ಅದು ಹಿಂದೆ ಬಳಸಿತ್ತು ಮತ್ತು ಈಗಲೂ ಬಳಸುತ್ತದೆ. ಅಪರೂಪದ ಭೂ-ಖನಿಜಗಳ ರಫ್ತಿನಲ್ಲಿ ಬಹುತೇಕ ಏಕಸ್ವಾಮ್ಯವನ್ನು ಚೀನಾ ಈಗ ಹೊಂದಿದೆ. ಈ ಹಿಡಿತವನ್ನು ಅದು ಈ ಹಿಂದೆ ಚೀನಾದ ಸರಕುಗಳ ಮೇಲೆ ಅಧಿಕ ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದಾಗ ಬಳಸಿತ್ತು. ಅಪರೂಪದ ಭೂ-ಖನಿಜಗಳು ಮತ್ತು ಅವುಗಳಿಂದ ತಯಾರಿಸಿರುವ ಸರಕುಗಳ ರಫ್ತಿನ ಮೇಲೆ ಅದು ರಫ್ತು ನಿರ್ಬಂಧಗಳು ಮತ್ತು ಪರವಾನಗಿ ಅವಶ್ಯಕತೆಗಳನ್ನು ಕಟ್ಟುನಿಟ್ಟಾಗಿ ವಿಧಿಸಿತ್ತು. ಈ ಕ್ರಮವು ಅಮೆರಿಕದಲ್ಲಿ ಸಾಕಷ್ಟು ಅಡಚಣೆಗಳನ್ನು ಸೃಷ್ಟಿಸಿತು ಮತ್ತು ಅಮೆರಿಕವು ಚೀನಾದೊಂದಿಗೆ ಒಂದು ರೀತಿಯ ಒಡಂಬಡಿಕೆಗೆ ಬರುವಂತೆ ಮಾಡಿತು. ಈ ಪ್ರತಿದಾಳಿ ಒತ್ತಡವನ್ನು ಚೀನಾವು ಈಗಲೂ ಹೇರಬಹುದು. ಒಂದು ಕೆನ್ನೆಗೆ ಹೊಡೆದರೆ “ಇನ್ನೊಂದು ಕೆನ್ನೆಯನ್ನು ಒಡ್ಡುವ” ಬದಲು, ಇದೇ ರೀತಿಯ ಪ್ರತಿದಾಳಿ ಒತ್ತಡವನ್ನು ಅಮೆರಿಕದ ಮೇಲೆ ಭಾರತವೂ ಹೇರಬಹುದು. ನಿಜ, ಚೀನಾ ಹೊಂದಿರುವ ರೀತಿಯ ಹತೋಟಿಯನ್ನು ನಿರ್ಣಾಯಕ ಸರಕುಗಳ ರಫ್ತಿನ ಮೇಲೆ ಭಾರತ ಹೊಂದಿಲ್ಲ. ಆದಾಗ್ಯೂ, ಅದು ಹೊಂದಿರುವ ಯಾವುದೇ ಹತೋಟಿಯನ್ನೂ ಬಳಸಬೇಕು.
ಆರಂಭಿಕವಾಗಿ, ಯುಎಸ್ ಜೊತೆ ವ್ಯಾಪಾರ ಮಾತುಕತೆಗಳನ್ನು ಮುಂದುವರಿಸಲು, ರಷ್ಯಾದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದುಗಳು ಮುಂದುವರಿಯುತ್ತವೆ, ಅವುಗಳ ಮೇಲೆ ಯು.ಎಸ್. ದಂಡನಾ ಸುಂಕಗಳನ್ನು ವಿಧಿಸಬಾರದು ಎಂಬ ಒಂದು ಷರತ್ತನ್ನು ಹಾಕಬೇಕು.
ಆರಂಭಿಕವಾಗಿ, ಯುಎಸ್ ಜೊತೆ ವ್ಯಾಪಾರ ಮಾತುಕತೆಗಳನ್ನು ಮುಂದುವರಿಸಲು, ರಷ್ಯಾದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದುಗಳು ಮುಂದುವರಿಯುತ್ತವೆ, ಅವುಗಳ ಮೇಲೆ ಯು.ಎಸ್. ದಂಡನಾ ಸುಂಕಗಳನ್ನು ವಿಧಿಸಬಾರದು ಎಂಬ ಒಂದು ಷರತ್ತನ್ನು ಹಾಕಬೇಕು. ಟ್ರಂಪ್ ವಿಧಿಸಿದ ಸುಂಕಗಳನ್ನು ರದ್ದುಪಡಿಸುವ ತೀರ್ಪು ನ್ಯಾಯಾಲಯದಿಂದ ಹೊರ ಬರುವ ಮೊದಲು ಭಾರತ-ಅಮೆರಿಕಾ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದವು ಒಂದು “ಅಸಮಾನ ಒಪ್ಪಂದ”ವಾಗಿತ್ತು. ಈ ಒಪ್ಪಂದದ ಪ್ರಕಾರ, ಭಾರತದ ರಫ್ತುಗಳ ಮೇಲೆ ಅಧಿಕ ಸುಂಕಗಳನ್ನು ವಿಧಿಸುವ ಅವಕಾಶವನ್ನು ಅಮೆರಿಕ ಹೊಂದಿದೆ. ಆದರೆ, ಅಮೆರಿಕದ ರಫ್ತಿನ ಮೇಲೆ ಯಾವುದೇ ಸುಂಕಗಳನ್ನು ವಿಧಿಸುವ ಅವಕಾಶವನ್ನು ಭಾರತ ಹೊಂದಿಲ್ಲ. ಭಾರತವು ಅಮೇರಿಕದಿಂದ ಕೊಳ್ಳಬೇಕಾದ ಸರಕುಗಳ ಮೌಲ್ಯದ ಮೊತ್ತವನ್ನು ನಿಗದಿಪಡಿಸಲಾಗಿದೆ. ಆದರೆ, ಅಮೆರಿಕವು ಭಾರತದಿಂದ ಕೊಳ್ಳಬೇಕಾದ ಸರಕುಗಳ ಮೌಲ್ಯದ ಮೊತ್ತವನ್ನು ನಿಗದಿಪಡಿಸಿಲ್ಲ. ಸ್ವತಂತ್ರ ಭಾರತದ ಮೇಲೆ ಇಂತಹ ಅಸಮಾನ ಒಪ್ಪಂದಗಳನ್ನು ಹೇರಲಾಗದು. ಮತ್ತು ನಿರ್ದಿಷ್ಟವಾಗಿ, ಅಮೆರಿಕ ಸರ್ಕಾರದಿಂದ ಬೃಹತ್ ಸಬ್ಸಿಡಿ ಪಡೆಯುವ ಅಮೆರಿಕದ ಕೃಷಿ ಸರಕುಗಳ ದಾಳಿಯಿಂದ ಭಾರತದ ಕೃಷಿಯನ್ನು ರಕ್ಷಿಸಬೇಕು. ಇದಲ್ಲದೆ, ಅಂತಹ ಯಾವುದೇ ವ್ಯಾಪಾರ ಮಾತುಕತೆಯು ಮೂರನೇ ದೇಶಗಳ ವಿರುದ್ಧ ಅಮೆರಿಕದ ಏಕಪಕ್ಷೀಯ ನಿರ್ಬಂಧಗಳನ್ನು ಭಾರತ ಪಾಲಿಸಲು ಬದ್ಧವಾಗದ ರೀತಿಯಲ್ಲಿ ಅಥವಾ ಅಂತಹ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡನಾ ಸುಂಕ ದರಗಳನ್ನು ಎದುರಿಸಲು ಬದ್ಧವಾಗದ ರೀತಿಯಲ್ಲಿ ನಡೆಯಬೇಕು.
ಇರಾನ್ ಯುದ್ಧದ ದುರಂತವು ನೀಡಿದ ಒಂದು ಕೊಡುಗೆಯೆಂದರೆ, ಅದು ಒಂದು ದೃಢ ಪ್ರತಿರೋಧವನ್ನು ಒಡ್ಡುವ ಆಳ್ವಿಕೆಯ ಎದುರು ಅಮೆರಿಕ ಅದೆಷ್ಟು ದುರ್ಬಲ ಎಂಬುದರ ಪ್ರದರ್ಶನ. ಅಂತಹ ಒಂದು ಪ್ರತಿರೋಧವನ್ನು ಕೈ ತಿರುಚುವ ಸಾಮ್ರಾಜ್ಯಶಾಹಿಯ ವಿರುದ್ಧ ಭಾರತದಂತಹ ಒಂದು ದೇಶವು ಪ್ರದರ್ಶಿಸದಿದ್ದರೆ ಅದು ಒಂದು ದುರಂತವೇ ಸರಿ.
ಇದನ್ನೂ ನೋಡಿ : RSS ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಬದಲು ‘ವಂದೇ ಮಾತರಂ’ ಹಾಡಿ! ಪ್ರಿಯಾಂಕ್ ಖರ್ಗೆ ಸವಾಲು Janashakthi Media
