ಎಸ್‌ಎಫ್‌ಐ 16ನೇ ಜಿಲ್ಲಾ ಸಮ್ಮೇಳನ ಮಾ.30ಕ್ಕೆ: ಸಾರ್ವಜನಿಕ ಶಿಕ್ಷಣ ಬಲಪಡಿಸಲು ಒತ್ತಾಯ

ಬೆಂಗಳೂರು: ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್‌ಐ) ಬೆಂಗಳೂರು 16ನೇ ಸಮ್ಮೇಳನದ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಮಾಧ್ಯ ಮಿತ್ರರಲ್ಲಿ ತಿಳಿಸುವುದೇನೆಂದರೆ, ದೇಶದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಸ್ವಾತಂತ್ರ‍್ಯ, ಪ್ರಜಾಪ್ರಭುತ್ವ, ಸಮಾಜವಾದದ ಆಶಯಗಳನ್ನೊತ್ತು, ವಿದ್ಯಾರ್ಥಿಗಳನ್ನು ಅಭ್ಯಾಸ ಮತ್ತು ಹೋರಾಟ ಎಂಬ ಘೋಷವಾಕ್ಯದಡಿಯಲ್ಲಿ, ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ದುಡಿಯುವಂತೆ ಮಾಡಲು ಅಣಿನೇರಿಸುತ್ತಿದೆ. ನಾಡಿನ ಶಾಂತಿ, ಸೌಹಾರ್ದತೆಯ ಉಳಿವಿಗಾಗಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿರುವಂತಹ ಪ್ರಗತಿಪರ ವಿದ್ಯಾರ್ಥಿ ಸಂಘಟನೆಯಾಗಿ ಬೆಳೆದು ಬರುತ್ತಿದೆ.

1970 ಡಿಸೆಂಬರ್ 29 ರಂದು ಎಸ್.ಎಫ್.ಐ ಆರಂಭಗೊಂಡಿತು. ಅಂದಿನಿಂದ ಇಂದಿನವರೆಗು ಲಕ್ಷಾಂತರ ವಿದ್ಯಾರ್ಥಿ ಯುವಜನರನ್ನು ಅಸಮಾನನತೆಯ ವಿರುದ್ಧ ಜಾಗೃತಗೊಳಿಸಿ “ಸರ್ವರಿಗೂ ಸಮಾನ ಶಿಕ್ಷಣ, ಸರ್ವರಿಗೂ ಉದ್ಯೋಗ” ದೊರೆಯುವಂತೆ ಮಾಡುವುದಕ್ಕಾಗಿ ಹಗಲಿರುಳು ದುಡಿಯುತ್ತಿದೆ ಇಂತಹ ದೇಶ ಪ್ರೇಮಿ ವಿದ್ಯಾರ್ಥಿ ಸಂಘಟನೆಯ 16ನೇ ಜಿಲ್ಲಾ ಸಮ್ಮೇಳನವನ್ನು ಬೆಂಗಳೂರು ನಗರದ ಸೌಹಾರ್ಧ ಸಭಾಂಗಣದಲ್ಲಿ ಮಾಡಲಾಗುತ್ತದೆ ಎಂದು ಸ್ವಾಗತ ಸಮಿತಿಯ ಕಾರ್ಯದರ್ಶಿ ಎಸ್.ಎಫ್.ಯ ರಾಜ್ಯ ಸಮಿತಿ ಸದಸ್ಯೆಯಾದ ಅರ್ಪಿತಾ ಗ್ರೇಸಿ ಅವರು ಮಾಯನಾಡಿದರು.

ಇದನ್ನೂ ಓದಿ: ವೇತನ ಹೆಚ್ಚಳ, ಸೇವಾ ಭದ್ರತೆ ಬೇಡಿಕೆ: ಕಾರ್ಯಕರ್ತೆಯರ ಪರ ಶಾಸಕರ ಒತ್ತಾಯ

ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ಮುನಿರಾಜು ಅವರು ಮಾತನಾಡಿ ಎಸ್‌ಎಫ್‌ಐ 16ನೇ ಸಮ್ಮೇಳನ ಮೂರು ಘೋಷಣೆಗಳ ಮೇಲೆ ನಡೆಯುತ್ತಿದೆ.

1. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಿ, ೨. ಶಿಕ್ಷಣದ ಹಕ್ಕನ್ನು ಖಾತ್ರಿಗೊಳಿಸಲು ಒತ್ತಾಯಿಸಿ, ೩. ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ಆರಂಬಿಸಲು ಒತ್ತಾಯಿಸಿ:  ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಿ: ಎಸ್‌ಎಫ್‌ಐ ಆರಂಭದಿಂದಲೂ ಸಾರ್ವಜಿಕ ಶಿಕ್ಷಣ ಬಲಗೊಳ್ಳಬೇಕು ಎಂದು ಹೇಳುತ್ತಿದೆ. ಮತ್ತು ಅದಕ್ಕಾಗಿ ಹೋರಾಟಗಳನ್ನು ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತ ಬರುತ್ತಿದೆ. ಇಂದು ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಆಸಕ್ತಿ ತೋರದೆ, ಶಾಲೆಗಳ ವಿಲೀನಮಾಡಲು ಮುಂದಾಗಿದೆ. 25000ಕ್ಕೂ ಅಧಿಕ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಹಳ್ಳಿಯ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. 59000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. 30ಕ್ಕೂ ಅಧಿಕ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರ ಮತ್ತು ಪ್ರಾಧ್ಯಾಪಕರನ್ನು ನೇಮಕ ಮಾಡಿಕೊಂಡಿಕೊಳ್ಳುತ್ತಿಲ್ಲ. ಹಾಗೂ 7000 ಏಕೋಪಾಧ್ಯಾಯ ಶಾಲೆಗಳಿವೆ. ಹಾಗೂ ಶಿಕ್ಷಕರು ಇಲ್ಲದೆ ಕೇವಲ ಅತಿಥಿ ಉಪನ್ಯಾಸಕರ ಮೇಲೆ ಹಲವು ಶಾಳೆಗಳು ನಡೆಯುತ್ತಿವೆ ಇಂತಹ ಸಂರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ.

2. ಶಿಕ್ಷಣದ ಹಕ್ಕನ್ನು ಖಾತ್ರಿಗೊಳಿಸಲು ಒತ್ತಾಯಿಸಿ: ಇಂದು ರಾಜ್ಯದಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣ ಕಲಿಯುವ ಮಕ್ಕಳು ಪದವಿ ಪೂರ್ವ ಶಿಕ್ಷಣಕ್ಕೆ ಸೇರುವ ಯಾವ ಗ್ಯಾರಂಟಿಯೂ ಇಲ್ಲ. ಹಾಗಿದ್ದೆ ಆ ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ? ಇದು ನಮ್ಮನ್ನಾಳುವ ಸರ್ಕಾರದ ಜವಾಬ್ದಾರಿ ಅಲ್ಲವೇ? ಅದಕ್ಕಾಗಿ ಶಿಕ್ಷಣದ ಹಕ್ಕನ್ನು ಖಾತ್ರಿಗೊಳಿಸಿ ಎಂದು ಹೇಳಿತ್ತಿದೆ.

3. ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ಆರಂಬಿಸಲು ಒತ್ತಾಯಿಸಿ: 2004 ಮೊದಲು ವಿದ್ಯಾರ್ಥಿ ಸಂಘದ ಚುನಾವಣೆಗಳು ರಾಜ್ಯದಲ್ಲಿ ನಡೆಯುತ್ತಿದ್ದವು. ಕ್ಷುಲ್ಲಕ ಕಾರಣಕ್ಕಾಗಿ ಚುನಾವಣೆಗಳು ಅಂದಿನಿಂದ ಇಂದಿನವರೆಗೆ ನಡೆಯಲಿಲ್ಲ. ಇಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ದಾಳಿ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿವೆ. ಶುಲ್ಕಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಕಾಲೇಜು ಉನ್ನತ ಸಮಿತಿಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಇಲ್ಲದೇ ಇದರುವುದು ಆಡಳಿತ ಮಂಡಳಿಗಳು ತಮಗೆ ಬಂದಂತೆ ನಿಯಮಗಳನ್ನು ರೂಪಿಸಿಕೊಂಡಿವೆ. ಕಾಲೇಜುಗಳು ಜೈಲುಗಳಾಗಿವೆ. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳು ರಕ್ಷಣೆಯಾಗಲು ವಿದ್ಯಾರ್ಥಿ ಚುನಾವಣೆಗಳು ನಡೆಯಬೇಕಿದೆ. ಅದಕ್ಕಾಗಿ ಎಸ್‌ಎಫ್‌ಐ ಹೋರಾಟಗಳನ್ನು ರೂಪಿಸಿದ ಭಾಗವಾಗಿ ಸರ್ಕಾರದ ಗಮನ ಸೆಳೆದಿದೆ. ವಿದ್ಯಾರ್ಥಿಗಳ ನಾಯಕತ್ವ ಅತ್ಯಗತ್ಯವಾಗಿದೆ ಅದರ ಭಾಗವಾಗಿ ಇಂದು ಸಮ್ಮೇಳನದ ಮೂಲಕ ಚುನಾವಣೆಗಳನ್ನು ಆರಂಭಿಸಲು ಒತ್ತಾಯಿಸಲಾಗುತ್ತಿದೆ.

ಎಸ್ಎಫ್‌ಐ ರಾಜ್ಯ ಅಧ್ಯಕ್ಷರಾದ ಶಿವಪ್ಪ ಎನ್.ಅಂಬ್ಲಿಕಲ್‌ ಅವರು ಮಾತನಾಡಿ ಬೆಂಗಳೂರಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ನಡುವೆ ಎಸ್.ಎಫ್‌.ಐ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ. ೧೨ ವರ್ಷಗಳಿಂದ ಬೇಸಿಗೆ‌ ಶಿಬಿರಗಳನ್ನು ಆಯೋಜಿಸಿ, ಹಲವು ವರ್ಷಗಳಿಂದ ಉಚಿತ ಕಂಪ್ಯೂಟರ್‌ ತರಬೇತಿ ನೀಡುವ ಮೂಲಕ, ಮೂಢ ನಂಬಿಕೆಗಳ ವಿರುದ್ಧದ ಕಾರ್ಯಕ್ರಮಗಳನ್ನು ರೂಪಿಸಿ ಕಾಲೇಜುಗಳಲ್ಲಿ ಸ್ವಾತಂತ್ರ‍್ಯ ಚಳುವಳಿಯ ಹಾಗೂ ಹೋರಾಟಗಾರರ ಆಶಯಗಳನ್ನು ಮುನ್ನೆಲೆಗೆ ತರಲು ವಿದ್ಯಾರ್ಥಿಗಳಲ್ಲಿ ವೈಚಾರಿಕ ಮನೋಭಾವ ಮೂಡಿಸಲು ಚರ್ಚೆ, ಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸತ್ತಾ ಬಂದಿದೆ.

ಇಂದು ಎಸ್.ಎಫ್‌.ಐ 16ನೇ ಬೆಂಗಳೂರು ಜಿಲ್ಲಾ ಸಮ್ಮೇಳನವನ್ನು ಮಾರ್ಚ್‌ 30ರಂದು ಬೆಂಗಳೂರು ನಗರದ ಸೌಹಾರ್ದ ಸಭಾಂಗಣದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ಮಾತನಾಡಲಾಗುತ್ತದೆ ಹಾಗೂ ಮುಂದಿನ ದಿನದಲ್ಲಿ ಹೋರಾಟಗಳನ್ನು ರೂಪಿಸಲು ಹೊಸ ಸಮಿತಿಯನ್ನು ರಚಿಸಲಾಗುವುದು ಎಂದರು.

ಇದನ್ನೂ ನೋಡಿ: ₹1ಕ್ಕೆ 1 ಲೀಟರ್ ಹಾಲು – ಫ್ಲಿಪ್‌ಕಾರ್ಟ್ ವಿರುದ್ಧ ಸಿಡಿದೆದ್ದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *