‘ಆಪರೇಷನ್ ರಾಮ ಮಂದಿರ?’: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ

ಮುಂಬೈ: ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ರಾಮ ಮಂದಿರ ದೇಣಿಗೆ ದುರುಪಯೋಗ ಪ್ರಕರಣವನ್ನು ರಾಜಕೀಯ ಪಕ್ಷಗಳನ್ನು ಒಡೆಯಲು ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಆಪರೇಷನ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರು ಮತ್ತು ಶಾಸಕರನ್ನು ಪಕ್ಷಗಳಿಂದ ಬೇರ್ಪಡಿಸುವ ಕಾರ್ಯಾಚರಣೆಗೆ “ಆಪರೇಷನ್ ರಾಮ ಮಂದಿರ” ಎಂಬ ಹೆಸರಿನಲ್ಲಿ ಬಿಜೆಪಿ ಕೈಹಾಕಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದರು.

“ಸಂಸದರು ಮತ್ತು ಶಾಸಕರನ್ನು ಒಡೆಯುವ ಕೆಲಸ ನಡೆಯುತ್ತಿದೆ. ಇದನ್ನು ಕಾರ್ಯಾಚರಣೆ ಎಂದು ಕರೆಯಲಾಗುತ್ತಿದೆ. ಬಿಜೆಪಿ ‘ಆಪರೇಷನ್ ರಾಮ ಮಂದಿರ’ ನಡೆಸುತ್ತಿದ್ದೆಯೇ?” ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ರಾಜ್ಯ ಸಾರಿಗೆ ನೌಕರರಿಗೆ ಶೇ.12.5 ವೇತನ ಹೆಚ್ಚಳ: 1.05 ಲಕ್ಷ ಸಿಬ್ಬಂದಿಗೆ ಲಾಭ

ರಾಮ ಮಂದಿರದ ಹಣದ ದುರುಪಯೋಗದ ಬಗ್ಗೆ ಸಾಕ್ಷ್ಯಗಳಿವೆ ಎಂದು ಹೇಳಿದ ಠಾಕ್ರೆ, “ಕೆಲವರು ರಾಮ ಮಂದಿರದಿಂದ ಕಳವಾದ ಹಣವನ್ನು ರಾಜಕೀಯ ಪಕ್ಷಗಳನ್ನು ಒಡೆಯಲು ಬಳಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಹಿಂದೂಗಳು ಇನ್ನು ಬಲಿಯಾಗುವುದಿಲ್ಲ ಎಂದಿದ್ದರು. ಇಂದು ನಾನು ಹೇಳುತ್ತೇನೆ—ಮಂದಿರಗಳನ್ನು ಲೂಟಿ ಮಾಡುವವರನ್ನು ಹಿಂದೂಗಳು ಕ್ಷಮಿಸುವುದಿಲ್ಲ,” ಎಂದು ಕಿಡಿಕಾರಿದರು.

ಅಮಿತ್ ಶಾ ಅವರೊಂದಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ತಯಾರಿರುವುದಾಗಿ ಹೇಳಿದ ಅವರು, “ಬಿಜೆಪಿ ಮತ್ತೆ ರಥಯಾತ್ರೆ ಕೈಗೊಂಡರೆ ಶಿವಸೇನೆ ಸಹ ಭಾಗವಹಿಸುತ್ತದೆ,” ಎಂದು ತಿಳಿಸಿದರು.

ರಾಮ ಮಂದಿರ ಚಳವಳಿಯಲ್ಲಿ ಶಿವಸೈನಿಕರು ಮತ್ತು ಅನೇಕ ಹಿಂದೂಗಳು ಭಾಗವಹಿಸಿದ್ದರು ಎಂದು ಸ್ಮರಿಸಿದ ಠಾಕ್ರೆ, “ಈ ಚಳವಳಿಗೆ ಮೊದಲು ಬಿಜೆಪಿಗೆ ಕೇವಲ ಎರಡು ಸಂಸದರು ಮಾತ್ರ ಇದ್ದರು. ಈಗ ರಾಮ ಮಂದಿರ ಬೇರೆ ಕಾರಣಕ್ಕೆ ಸುದ್ದಿಯಲ್ಲಿರುವುದು ದುಃಖಕರ,” ಎಂದು ಹೇಳಿದರು.

ಇತ್ತೀಚೆಗೆ ಅವರ ಪಕ್ಷದ ಆರು ಸಂಸದರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಘಟಕಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

ಇದರ ನಡುವೆ, ಪಕ್ಷದ ಒಳಗಿನ ಅಸಮಾಧಾನದ ಬಗ್ಗೆ ಸಂಸದ ಸಂಜಯ್ ರಾವತ್ ಹೇಳಿಕೆ ನೀಡಿ, “ಕೆಲವರಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ, ಇದು ನಿಷ್ಠಾವಂತರಿಗೆ ನೋವುಂಟುಮಾಡುತ್ತಿದೆ,” ಎಂದು ಆತ್ಮಪರಿಶೀಲನೆಗೆ ಕರೆ ನೀಡಿದ್ದಾರೆ. ಈ ಅಭಿಪ್ರಾಯವನ್ನು ಯುಬಿಟಿ ಸೇನೆಯ ಸುನೀಲ್ ಶಿಂಧೆಯೂ ಬೆಂಬಲಿಸಿದ್ದಾರೆ.

ಈ ಸಂದರ್ಭದಲ್ಲೇ, ರಾಜ್ಯದಾದ್ಯಂತ ‘ರಾಮ ರಕ್ಷಾ’ ಚಳವಳಿಯನ್ನು ಆರಂಭಿಸಿರುವ ಠಾಕ್ರೆ, ಮುಂಬೈನ ದಾದರ್ ಪಶ್ಚಿಮದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಭಾನುವಾರ ಸಂಜೆ ರಾಮ ರಕ್ಷಾ ಸ್ತೋತ್ರ, ಮಾರುತಿ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಪಠಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

“ರಾಮ ಮಂದಿರದ ಹೆಸರಿನಲ್ಲಿ ನಡೆದ ಲೂಟಿಗೆ ಆಕ್ರೋಶಗೊಂಡಿರುವ ಎಲ್ಲಾ ರಾಮಭಕ್ತರು ಈ ಚಳವಳಿಯಲ್ಲಿ ಭಾಗವಹಿಸಬೇಕು,” ಎಂದು ಅವರು ರಾಜಕೀಯ ಭೇದವಿಲ್ಲದೆ ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

ಇದನ್ನೂ ನೋಡಿ: ‘ಅರ್ಬುದನ ಡೈರಿ’ | ಕ್ಯಾನ್ಸರ್ ಪೀಡಿತರಿಗೆ ವಿಶ್ವಾಸ ತುಂಬುವ ಅನುಭವ ಕಥನ Janashakthi Media

Donate Janashakthi Media

Leave a Reply

Your email address will not be published. Required fields are marked *