ಇರಾನ್ ಮೇಲೆ ಯು. ಎಸ್- ಇಸ್ರೇಲ್ ಯುದ್ಧದ ನಾಲ್ಕು ವಾರಗಳ ನಂತರ, ಜಗತ್ತು ಶಾಂತಿ ಮಾತುಕತೆ ಮತ್ತು ಯುದ್ಧದ ಇನ್ನಷ್ಟು ಉಲ್ಬಣದ ಸಾಧ್ಯತೆ ನಡುವೆ ಹೊಯ್ದಾಡುತ್ತಿದೆ. ಯು. ಎಸ್
– ವಸಂತರಾಜ ಎನ್.ಕೆ
ಮಾರ್ಚ್ 26 : ಇರಾನ್ ಮೇಲೆ ಯು. ಎಸ್ – ಇಸ್ರೇಲ್ ಯುದ್ಧದ ದಿನ 27ರಂದು (ನಾಲ್ಕು ವಾರಗಳ ಕೊನೆಯಲ್ಲಿ) ಅಧ್ಯಕ್ಷ ಟ್ರಂಪ್ ಅವರ ಶಾಂತಿ ಮಾತುಕತೆಯ ಪ್ರಸ್ತಾಪ ಒಂದು ಕಡೆ, ಎರಡೂ ಕಡೆಗಳಿಂದ ದಾಳಿಗಳು ಮತ್ತು ಯುದ್ಧ ಉಲ್ಬಣಗೊಳ್ಳುತ್ತಿರುವುದು ಇನ್ನೊಂದು ಕಡೆ – ಇಂತಹ ವಿಚಿತ್ರ ಪರಿಸ್ಥಿತಿಯಿದೆ.
ಕಳೆದ ಕೆಲವು ದಿನಗಳಲ್ಲಿ ಯುದ್ಧದ ಪ್ರಮುಖ ಘಟನೆಗಳು ಹೀಗಿವೆ :
*ಯು.ಎಸ್-ಇಸ್ರೇಲ್ ಇರಾನ್ ಮೇಲೆ ಈ ವರೆಗೆ 9000 ಗುರಿಗಳ ಮೇಲೆ ದಾಳಿ ನಡೆಸಿದೆ. ಇರಾನಿನ ಶೇಕಡಾ 85 ಇರಾನ್ ವಾಯುದಾಳಿ ನಿರೋಧಕ ಸ್ಥಾವರಗಳನ್ನು ಶೇಕಡಾ 70 ಕ್ಷಿಪಣಿ ಉಡಾವಣಾ ವೇಧಿಕೆಗಳನ್ನು ನಾಶ ಮಾಡಿದೆ. ಯುದ್ಧ ಆರಂಭದಲ್ಲಿದ್ದ (ಫೆಬ್ರುವರಿ 28) ಇರಾನಿನ ಕ್ಷಿಪಣಿ ಉಡಾವಣಾ ಸಾಮರ್ಥ್ಯದ ಶೇಕಡಾ 90 ಕಡಿತವಾಗಿದೆ. ಮೊದಲ ವಾರದಲ್ಲಿ ಇರಾನ್ 2000 ಡ್ರೋನ್ ಮತ್ತು 500 ಕ್ಷಿಪಣಿ ದಾಳಿಯಿಂದ ಆರಂಭಿಸಿತ್ತು. ಆ ದರದ ದಾಳಿಯನ್ನು ಇರಾನ್ ಆಮೇಲೆ ಮಾಡಲು ಆಗಿಲ್ಲ. ಡ್ರೋನ್-ಕ್ಷಿಪಣಿ ದಾಳಿಯ ದರ ಗಮನಾರ್ಹವಾಗಿ ಕಡಿಮೆಯಾಗಿದೆ. ಯು. ಎಸ್
ಆದರೂ ಇರಾನಿಗೆ ಮಾರ್ಚ್ 23ರಂದು (ದಿನ 24) ಒಂದೇ ರಾತ್ರಿಯಲ್ಲಿ ಡ್ರೋನ್/ಕ್ಷಿಪಣಿ ಯ 7 ಪ್ರವಾಹಗಳನ್ನು ಹರಿಯ ಬಿಡಲು ಸಾಧ್ಯವಾಗಿದೆ. ಇಸ್ರೇಲ್, ಕೊಲ್ಲಿ ದೇಶಗಳಲ್ಲಿರುವ ಯು.ಎಸ್ ಮಿಲಿಟರಿ ನೆಲೆಗಳು, ಕಂಪನಿಗಳ ಸ್ಥಾವರಗಳ ಮೇಲೆ ನಿರ್ಣಾಯಕ ದಾಳಿಗಳನ್ನು ಮಾಡಲು ಸಾಧ್ಯವಾಗಿದೆ. ಕೊಲ್ಲಿ ದೇಶಗಳಲ್ಲಿನ ನೆಲೆಗಳಲ್ಲಿದ್ದ ವಾಯುದಾಳಿಗಳ (ವಿಮಾನ, ಕ್ಷಿಪಣಿ, ಡ್ರೋನ್) ಕಣ್ಗಾವಲು ಇಟ್ಟು, ಗುರುತಿಸಿ, ಗುರಿಯಿಟ್ಟು ನಾಶ ಮಾಡುವ “ಥಡ್” ಎಂಬ ದುಬಾರಿ ರಾಡಾರ್ ಮತ್ತು ನಿರೋಧಕ ಕ್ಷಿಪಣಿ ಉಡಾವಣಾ ಕೇಂದ್ರಗಳ ಹಲವು ಭಾಗಗಳನ್ನು ನಾಶ ಮಾಡಿದೆ. ಯು. ಎಸ್
ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಲಾಲು ಪ್ರಸಾದ್ ಯಾದವ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
* ಇರಾನಿನ ನೌಕಾಸೇನೆಯ 140 ವಾಹಕಗಳನ್ನು ಯು.ಎಸ್-ಇಸ್ರೇಲ್ ಮುಳುಗಿಸಿದೆ. ಯು.ಎಸ್ ನ ದೈತ್ಯ ವಿಮಾನವಾಹಕ ಯುದ್ಧಹಡಗುಗಳಾಧ ‘ಯು.ಎಸ್.ಎಸ್ ಅಬ್ರಹಾಂ ಲಿಂಕನ್” ಮತ್ತು “ಯು.ಎಸ್.ಎಸ್ ಗೆರಾಲ್ಡ್ ಫೋರ್ಡ” ಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸಿ ಕಾರ್ಯಕ್ಷಮತೆಗೆ ತೀವ್ರ ಹಾನಿಯುಂಟು ಮಾಡಿದೆ ಎಂದು ಹೇಳಿದೆ. ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ, ಕಾರ್ಯಕ್ಷಮತೆಗೆ ಧಕ್ಕೆಯಾಗದ ಕೆಲವು ಸಣ್ಣ ಹಾನಿ ಮಾತ್ರ ಆಗಿದೆ ಎಂದು ಯು.ಎಸ್ ಹೇಳಿದೆ. ಆದರೆ
ಹೊರ್ಮುಝ್ ಹತ್ತಿರವಿದ್ದ ‘ಯು.ಎಸ್.ಎಸ್ ಅಬ್ರಹಾಂ ಲಿಂಕನ್” ಇನ್ನಷ್ಟು ದಾಳಿ ತಪ್ಪಿಸಲು ಹಿಂದೂ ಮಹಾಸಾಗರದತ್ತ ದೂರ ಸರಿದಿದೆ. ಇದರಿಂದಾಗಿ ಮತ್ತು ಕ್ಷಿಪಣಿ ದಾಳಿಯಿಂದ ಆದ ಹಾನಿಯಿಂದ ಕಾರ್ಯಕ್ಷಮತೆಗೆ ಕುಗ್ಗಿದೆ ಎಂದು ಸ್ವತಂತ್ರ ವರದಿಗಳೂ ತಿಳಿಸಿವೆ. “ಯು.ಎಸ್.ಎಸ್ ಗೆರಾಲ್ಡ್ ಫೋರ್ಡ” ಮೇಲೆ ಸಹ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು ಅದರ ಕಾರ್ಯಕ್ಷಮತೆಗೆ ತೀವ್ರ ಧಕ್ಕೆಯಾಗಿದೆ ಎಂದು ಹೇಳಲಾಗಿದೆ. 30 ಸಾವಿರ ಕ್ಷಿಪಣಿಗಳನ್ನು ತರುತ್ತಿದ್ದ ಯು.ಎಸ್ ನೌಕಾಸೇನೆಯ ಸಾಗಾಣಿಕೆ ಹಡಗನ್ನು ಮುಳುಗಿಸಲಾಗಿದೆ ಎಂದು ಇರಾನ್ ಹೇಳಿದೆ.
* ಇರಾನಿನ ಇನ್ನೆರಡು ಹಿರಿಯ ಮಿಲಿಟರಿ/ರಾಜಕೀಯ ನಾಯಕರನ್ನು ಯು.ಎಸ್-ಇಸ್ರೇಲ್ ನಿಖರ ದಾಳಿಯ ಮೂಲಕ ಹತ್ಯೆ ಮಾಡಿದೆ. ಸರ್ವೋಚ್ಛ ನಾಯಕ ಮೊರ್ತಾಬಾ ಖಮೇನಿ ಮೇಲೆ ಎರಡನೇ ಹತ್ಯೆ ಪ್ರಯತ್ನವನ್ನು ಯು.ಎಸ್-ಇಸ್ರೇಲ್ ಮಾಡಿದೆ. ಅವರು ಸಾರ್ವಜನಿಕವಾಗಿ ಆಗಲಿ, ಅವರ ಅಡಿಯೊ/ವಿಡಿಯೊ ಆಗಲಿ ಪ್ರಸಾರವಾಗದಿರುವುದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಯು. ಎಸ್
* ಇರಾನ್ ಮತ್ತು ಲೆಬನಾನ್ ನಾಗರಿಕರ ಮೇಲೂ ಯು.ಎಸ್-ಇಸ್ರೇಲ್ ತೀವ್ರ ದಾಳಿ ನಡೆಸಿದ್ದು ಭಾರೀ ಸಾವು ನೋವುಗಳಿಗೆ ಕಾರಣವಾಗಿದೆ. ಅಲ್ ಇಸ್ರೇಲ್, ಇರಾಕ್, ಕೊಲ್ಲಿ ದೇಶಗಳಲ್ಲೂ ಸಾವು-ನೋವುಗಳಾಗಿವೆ. ಜಜೀರಾ ವರದಿ ಪ್ರಕಾರ ಇರಾನಿನಲ್ಲಿ 1500, ಲೆಬನಾನ್ ನಲ್ಲಿ 1072, ಇಸ್ರೇಲ್ ನಲ್ಲಿ 18, ಇರಾಕ್ ನಲ್ಲಿ 82, ಕೊಲ್ಲಿ ದೇಶಗಳಲ್ಲಿ 22 ಜನ, ಸಿರಿಯಾದಲ್ಲಿ 4 ಜನ ಸತ್ತಿದ್ದಾರೆ. ಯು.ಎಸ್ ಸೈನಿಕರಲ್ಲಿ 13 ಸಾವು ಆಗಿದೆ. ಇರಾನಿನಲ್ಲಿ 18,551, ಲೆಬನಾನ್ ನಲ್ಲಿ 2966, ಇಸ್ರೇಲ್ ನಲ್ಲಿ 4829, ಇರಾಕ್ ನಲ್ಲಿ 40+, ಜೋರ್ಡಾನ್ ನಲ್ಲಿ 28, ಕೊಲ್ಲಿ ದೇಶಗಳಲ್ಲಿ 196 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಯು.ಎಸ್ ಸೈನಿಕರಲ್ಲಿ 200 ಜನ ಗಾಯಾಳುವಾಗಿದ್ದಾರೆ.
* ಕಳೆದ ಒಂದು ವಾರದಲ್ಲಿ ಯುದ್ಧ ಇನ್ನಷ್ಟು ಉಲ್ಬಣಗೊಂಡಿದೆ. ಯು.ಎಸ್-ಇಸ್ರೇಲ್ ದಾಳಿಯನ್ನು ಹಂತ ಹಂತವಾಗಿ ಉಲ್ಬಣದ ಹಾದಿಯಲ್ಲೇ ಇರಾನ್ ಸಹ ತನ್ನ ದಾಳೀಯನ್ನು ಅನುಸರಿಸಿದೆ. ಇಸ್ರೇಲ್ ಇರಾನಿನ ಬುಶೇರ್ ಅಣು ಸ್ತಾವರಗಳ ಮೇಲೆ ತೀವ್ರ ದಾಳಿ ಮಾಡಿದ್ದು, ಇಸ್ರೇಲಿನ ಅಣು ಸ್ತಾವರಯಿದೆ ಎನ್ನಲಾಗುವ ಡಿಮೊನಾ ಮೇಲೆ ಇರಾನ್ ದಾಳಿ ಮಾಡಿದೆ. ಇಸ್ರೇಲ್ ಇರಾನಿನ ಹಲವು ತೈಲಸ್ಥಾವರಗಳ ಮೇಲೆ ದಾಳಿ ಮಾಡಿದ್ದು, ಇರಾನ್ ಇಸ್ರೇಲಿನ ಹೈಫಾ, ಕಟಾರ್, ಸೌದಿ
ಅರೇಬಿಯ, ಬಹ್ರೈನ್, ಕುವೈತ್ ನ ತೈಲ ಸ್ಥಾವರಗಳ ಮೇಲೆ ದಾಳಿ ಮಾಡಿದೆ. ಇರಾನಿನ ಪ್ರಮುಖ ತೈಲ ಭಂಡಾರ ಮತ್ತು ಅದರ ರಫ್ತಿನ ಪ್ರಮುಖ ಬಂದರು ಇರುವ ಪರ್ಶಿಯನ್ ಕೊಲ್ಲಿಯ ಉತ್ತರ ತುದಿಗೆ ಇರುವ ಖರ್ಗ್ ದ್ವೀಪದ ಮೇಲೆ ಯು.ಎಸ್- ಇಸ್ರೇಲ್ ತೀವ್ರ ವಿಮಾನ ದಾಳಿ ನಡೆಸಿವೆ. ಇರಾನಿನ ಕೆಲವು ವಿದ್ಯುತ್ ಜನಕ ಕೇಂದ್ರ ಮತ್ತು ಗ್ರಿಡ್ ಗಳ ಮೇಲೆ ದಾಳಿ ಮಾಡಿದ್ದು, ಇರಾನ್ ಇಸ್ರೇಲಿನ ಮತ್ತು ಕೆಲವು ಕೊಲ್ಲಿ ದೇಶಗಳ ಸ್ಥಾವರ/ಗ್ರಿಡ್ ಗಳ ಮೇಲೆ ದಾಳಿ ಮಾಡಿದೆ. ಯು. ಎಸ್
* ನಾಲ್ಕು ವಾರಗಳ ಕಾಲವೂ ಹೊರ್ಮುಝ್ ಜಲಸಂಧಿ ಹೆಚ್ಚು ಕಡಿಮೆ ಮುಚ್ಚುವಿಕೆಯಿಂದ ಆರಂಭಿಸಿ, ಇರಾನ್ ಆಯ್ಕೆಯ ಸಾಗಾಣಿಕೆ ಹಡಗುಗಳನ್ನು ಮಾತ್ರ ದಾಟಲು ಬಿಡುವವರೆಗೆ ಇರುವ ಪರಿಸ್ಥಿತಿ ಇರಾನ್ ಯು.ಎಸ್ ಮತ್ತು ಅವರ ಸಹಚರ ಕೊಲ್ಲಿ ದೇಶಗಳ ಮೇಲೆ ಹರಿಯಬಿಟ್ಟ ಅತ್ಯಂತ ಪರಿಣಾಮಕಾರಿಯಾದ ಆರ್ಥಿಕ ಅಸ್ತ್ರ. ಮೊದಲ ವಾರದಲ್ಲಿ ವಿಮಾ ಕಂಪನಿಗಳು ವಿಮೆ ವಿಪರೀತವಾಗಿ ಹೆಚ್ಚಿಸಿದ್ದು ಅಥವಾ ನಿರಾಕರಿಸಿದ್ದರಿಂದ ಹಡಗು ಸಾಗಾಟ ನಿಂತು ಹೋಗಿತ್ತು. ಅಧಿಕೃತವಾಗಿ ಹೊರ್ಮುಝ ಜಲಸಂಧಿಯನ್ನು ನಾವೇನೂ ಮುಚ್ಚಿಲ್ಲ. ಯು.ಎಸ್-ಇಸ್ರೇಲ್ ದಾಳಿ ಉಂಟು ಮಾಡಿದ ಪರಿಸ್ಥಿತಿಯಿಂದ ಅದು ಮುಚ್ಚಿದೆಎಂದು ಹೇಳಿತು. ಕ್ರಮೇಣ ಯು.ಎಸ್-ಇಸ್ರೇಲ್, ಕೊಲ್ಲಿ ದೇಶಗಳ ಮತ್ತು ಅವರ ಬೆಂಬಲಿಗ ದೇಶಗಳ ಅಥವಾ ಅಲ್ಲಿಂದ ಬಂದ ಅಥವಾ ಅಲ್ಲಿಗೆ ಹೋಗುತ್ತಿರುವ ಹಡಗುಗಳಿಗೆ ಚಲಿಸದಂತೆ ಎಚ್ಚರಿಕೆ ನೀಡಲಾಯಿತು. ಯು. ಎಸ್
ಇದನ್ನು ಉಲ್ಲಂಘಿಸಿದ ಯು.ಎಸ್ ಹಡಗುಗಳು ಸೇಋದಂಯೆ 8-9 ಹಡಗುಗಳ ಮೇಲೆ ದಾಳಿ ನಡೆದಿದೆ ಇರಾನ್ ತಾನೇ ಈ ದಾಳಿ ಮಾಡಿದೆ ಎಂದು ಹೇಳಿಕೊಂಡಿಲ್ಲ. ಇರಾನ್ ಅನುಮತಿ ಕೊಡುವ ಜಲಸಂಧಿಯ ಮೂಲಕ ಹಾದು ಹೋಗುವ ಹಡಗುಗಳು ಯೂವಾನ್ ನಲ್ಲಿ 10-20 ಲಕ್ಷ ಡಾಲರ್ ನಷ್ಟು ಸುಂಕ ಕೊಡಬೇಕು ಎಂದು ವಿಧಿಸಿದೆ. ಹೊರ್ಮುಝ್ ಜಲಸಂಧಿಯಲ್ಲಿ ಸಾಗಾಣಿಕೆಯ ಮೇಲಿನ ನಿರ್ಬಂಧಗಳಿಂದಾಗಿ ತೈಲ, ಅದರ ಉತ್ಪನ್ನಗಳ ಬೆಲೆಗಳು ಏರಲು ಮತ್ತು ಲಭ್ಯತೆಯ ಕೊರತೆ ಆರಂಭವಾಗಿದೆ. ಇದರಿಂದಾಗಿ ಟ್ರಂಪ್ ಸರಕಾರದ ಮೇಲೆ ಅದರ ಸಹಚರರ ಒತ್ತಡ ತೀವ್ರವಾಗಿದೆ. ತೈಲದ ಪೂರೈಕೆ ಅಭಾವ ಕಡಿಮೆ ಮಾಡಿ ಬೆಲೆ ತಗ್ಗಿಸಿ ನಿಯಂತ್ರಣದಲ್ಲಿಡಲು, ಟ್ರಂಪ್ ಸರಕಾರ ತಾತ್ಕಾಲಿಕವಾಗಿ ರಶ್ಯ ಮತ್ತು ಇರಾನ್ ತೈಲ ರಫ್ತಿನ ಮೇಲೆ ದಿಗ್ಬಂಧ ತೆಗೆಯಬೇಕಾಗಿ ಬಂದಿದೆ. ಹೊರ್ಮುಝ್ ಜಲಸಂಧಿಯನ್ನು ತೆರೆಯುವುದು ಟ್ರಂಪ್ ಸರಕಾರಕ್ಕೆ ದೊಡ್ಡ ಮಿಲಿಟರಿ ಮತ್ತು ಆರ್ಥಿಕ ಸವಾಲಾಗಿದೆ. ಯು. ಎಸ್
* ಈ ನಡುವೆ ಯು.ಎಸ್-ಇಸ್ರೇಲ್ ಕೂಟಕ್ಕೆ ವಾಯುದಾಳಿ-ನಿರೋಧಕ ಕ್ಷಿಪಣಿ ಮತ್ತು ಬೇರೆ ಬಾಂಬು, ಮದ್ದು ಗುಂಡುಗಳ ಕೊರತೆ ಎದುರಾಗಿದೆ ಎಂದು ವರದಿಯಾಗಿದೆ. ಇರಾನ್ ಗೂ ಈ ಕೊರತೆ ಉಂಟಾಗಿದ್ದರೂ ಹೆಚ್ಚಿನ ಕ್ಷಮತೆಯ ಉಚ್ಛ ಮಟ್ಟದ ಕ್ಷಿಪಣಿಗಳ ದಕ್ಷ ಬಳಕೆ ಆರಂಭಿಸಿದ್ದು, ಇಸ್ರೇಲ್, ಕೊಲ್ಲಿ ದೇಶಗಳಲ್ಲಿ ದಾಳಿ ತೀವ್ರವಾಗಿದೆ. ಯು.ಎಸ್-ಇಸ್ರೇಲ್ ಕೂಟಕ್ಕೆ ಮಿಲಿಟರಿಯಾಗಿಯೂ ತೀವ್ರ ಹಿನ್ನಡೆಯಾಗಿದೆ ಎಂಬ ವರದಿಗಳು ಬಂದಿವೆ. ಯು. ಎಸ್
‘ಮಾತುಕತೆ’ ಮತ್ತು; ಬೆದರಿಕೆ’ಗಳ ಟ್ರಂಪ್ ಡ್ರಾಮಾ
ಹಾಗಾಗಿ ಇರಾನ್ ಕೋರಿಕೆ ಮೇರೆಗೆ ಅದರ ಜತೆ ಕದನವಿರಾಮದ ಮಾತುಕತೆ ಆರಂಭವಾಗಿದೆ ಎಂದು ಕಳೆದ ವಾರದಿಂದಲೇ ಟ್ರಂಪ್ ಹೇಳುತ್ತ ಬಂದಿದ್ದಾರೆ. ಇರಾನ್ ಇದನ್ನು ನಿರಾಕರಿಸುತ್ತಾ ಬಂದಿದ್ದು, ‘ಟ್ರಂಪ್ ತಮ್ಮ ಜಾತೆ ತಾವು ಮಾತಾಡುತ್ತಿದ್ದಾರೆ’, ‘ಯುದ್ಧ ಆರಂಭಿಸಿದವರು ಯುದ್ಧ ನಿಲ್ಲಿಸಬೇಕು’, ‘ಯು.ಎಸ್ ನ್ನು ನಾವು ನಂಬುವುದಿಲ್ಲ, ಎರಡು ಬಾರಿ ಮಾತುಕತೆಗಳ ನಂತರವೂ ಮೋಸ ಮಾಡಿದ್ದಾರೆ’, ‘’ಯುದ್ಧದಲ್ಲಿ ಇರಾನ್ ಕೈಮೇಲಾಗಿರುವುದರಿಂದ ತನ್ನ ವ್ಯೂಹ ಬದಲಿಸಲು ಸಮಯಕ್ಕಾಗಿ ಯು.ಎಸ್ ಕದನವಿರಾಮದ ಮಾತಾಡುತ್ತಿದೆ’, ಯು.ಎಸ್ ಇರಾನ್ ತನ್ನ ಉದ್ದೇಶ ಪೂರ್ತಿಯಾಗುವವರೆಗೆ ಯುದ್ಧ ಮುಂದುವರೆಸುತ್ತದೆ’- ಎಂದೆಲ್ಲಾ ಇರಾನ್ ಇದನ್ನು ತಿರಸ್ಕರಿಸಿದೆ.
ಕಳೆದ ವಾರಾಂತ್ಯದಲ್ಲಿ ಮತ್ತೆ ರಾಗ ಬದಲಿಸಿದ ಟ್ರಂಪ್ 48 ಗಂಟೆಗಳಲ್ಲಿ ಹೊರ್ಮುಝ್ ತೆರೆಯದಿದ್ದರೆ, ಇಡೀ ಇರಾನ್ ನಲ್ಲಿ ವಿದ್ಯುತ್ ಕಡಿತ ಮಾಡಿ, ಕತ್ತಲು ಮಾಡುತ್ತೇವೆ’ ಎಂದು ಬೆದರಿಸಿದರು. ‘ಇದನ್ನು ಮಾಡಿದರೆ, ಕೊಲ್ಲಿ ದೇಶಗಳನ್ನು ಕತ್ತಲು ಮಾಡುವುದಲ್ಲದೆ, ತೈಲ/ಗ್ಯಾಸ್ ಸ್ಥಾವರಗಳ ಪೂರ್ಣ ನಿರ್ನಾಮ ಮಾಡುತ್ತೇವೆ’ ಎಂದು ಪ್ರತಿ ಬೆದರಿಕೆ ಹಾಕಿದ್ದಾರೆ. ಆ 48 ಗಂಟೆಗಳ ಕೊನೆಯಾಗುವ ಮೊದಲೇ ‘ಇರಾನಿನ ಗೌರವಾನ್ವಿತ ಹಿರಿಯ ನಾಯಕರ ಜತೆ ಮಾತುಕತೆ ಪ್ರಗತಿಯಲ್ಲಿದೆ. ಮೊದಲು ಕೊಟ್ಟ ಬೆದರಿಕೆಯ ಗಡುವನ್ನು 5 ದಿನ ಮುಂದುವರೆಸಿದ್ದೇವೆ’ ಎಂದರು. ಇರಾನ್ ಮತ್ತೆ ‘ಯಾವುದೇ ಮಾತುಕತೆ ನಡೆಸುತ್ತಿಲ್ಲ’ ಎಂದು ಸ್ಪಷ್ಟ ಪಡಿಸಿದೆ.
ಕದನ ವಿರಾಮ ತೀವ್ರ ಕ್ರಮಗಳಿಗೆ ಸಮಯ ಪಡೆಯಲೇ?
ಐಧು ದಿನದ ಕದನವಿರಾಮ ಅಗತ್ಯ ಬಿದ್ದರೆ ಯುದ್ಧವನ್ನು ಇನ್ನಷ್ಟು ಉಲ್ಬಣಗೊಳಿಸಲು ತಯಾರಿಗೆ ಸಮಯಾವಕಾಶ ಪಡೆಯಲು ಎಂದು ಇರಾನ್ ಮತ್ತು ಹಲವು ಸ್ವತಂತ್ರ ವೀಕ್ಷಕರು ಆಧಾರ ಸಮೇತ ಹೇಳಿದ್ದಾರೆ. ಈ ಮುಂದಿನ ಕೆಲವು ಕ್ರಮಗಳಿಗೆ ತಯಾರಿ ನಡೆಯುತ್ತಿದೆ ಎಂದು ವರದಿಯಾಗಿದೆ.
* ಖರ್ಗ ದ್ವೀಪದಲ್ಲಿ 2500 ಮರೀನ್ ಗಳನ್ನು ಇಳಿಸಿ ಅದನ್ನು ವಶಪಡಿಸಿಕೊಂಡು ಇರಾನಿನ ಆರ್ಥಿಕಕ್ಕೆ ಮರ್ಮಾಘಾತ ಮಾಡುವುದು. ಈ ಉದ್ದೇಶಕ್ಕೆ ಪಡೆಗಳು, ಉಪಕರಣಗಳು ಆಗಲೇ ರವಾನೆಯಾಗಿವೆ
* ಇರಾನಿನ ಕಿನಾರೆಯಲ್ಲಿ ವಿಮಾನದಿಂದ ಸಾವಿರ ಪಡೆಗಳನ್ನು ಇಳಿಸಿ ಪರ್ಶಿಯನ್ ಕೊಲ್ಲಿಯನ್ನು ನಿಯಂತ್ರಿಸುತ್ತಿರುವ ಇರಾನ್ ಪಡೆಗಳ ನಾಶ ಮಾಡುವುದು. ಈ ಉದ್ದೇಶಕ್ಕೆ ಸಹ ಪಡೆಗಳು, ಉಪಕರಣಗಳು ಆಗಲೇ ರವಾನೆಯಾಗಿವೆ
* ಹೊರ್ಮುಝ್ ಜಲಸಂಧಿಯನ್ನು ಬಲಪ್ರಯೋಗದಿಂದ ವಶ ಪಡಿಸಿಕೊಳ್ಳುವುದು
* ಇದ್ಯಾವುದು ಸಫಲವಾಗದಿದ್ದರೆ ಲಕ್ಷಾಂತರ ಪಡೆಗಳನ್ನು ಇಳಿಸಿ ಇರಾಕ್-ಮಾದರಿಯ ಪೂರ್ಣ ಪ್ರಮಾಣದ ಭೂಯುದ್ಧ ಮಾಡುವುದು
* ಇಸ್ರೇಲ್ ಸಹ ಮಿಲಿಟರಿಯಾಗಿ ಹಿನ್ನಡೆ ಅನಿಭವಿಸುತ್ತಿದ್ದು, ಹತಾಶೆಯಿಂದ ಅಣ್ವಸ್ತ್ರ ಬಳಕೆಯನ್ನೂ ಮಾಡಬಹುದು
ಈ ಎಲ್ಲ ಕ್ರಮಗಳು ಸುಲಭವೂ ಅಲ್ಲ, ಕಾರ್ಯಸಾಧುವೂ ಅಲ್ಲವೆಂದು ಯು.ಎಸ್ ಹಾಲಿ-ಮಾಜಿ ಮಿಲಿಟರಿ ತಜ್ಞರು ಹೇಳಿದ್ದಾರೆ. ಈ ಕ್ರಮಗಳನ್ನು ಕೈಗೊಂಡರೆ ರಶ್ಯ, ಚೀನಾ ಮಧ್ಯಪ್ರವೇಶ ಮಾಡುವ ಸಾಧ್ಯತೆಯೂ ಇದೆ. ಇವುಗಳಲ್ಲಿ ಒಂದಕ್ಕೆ ಪೂರ್ಣ ತಯಾರಿ ನಡೆಸಿ ಇದನ್ನು ಮಾಡುವ ಬೆದರಿಕೆ ಒಡ್ಡಿ ಮಾತುಕತೆಗಳಲ್ಲಿ ಮೇಲುಗೈ ಸಾಧಿಸುವ ತಂತ್ರವೂ ಇರಬಹುದು.
ಶಾಂತಿ ಮಾತುಕತೆಗಳು, ಷರತ್ತುಗಳು
ಈ ಗಂಭೀರ ಪರಿಸ್ಥಿತಿಯನ್ನು ಅರಿತ ಕೊಲ್ಲಿ ಮತ್ತಿತರ ದೇಶಗಳು ಶಾಂತಿ ಮಾತುಕತೆಗೆ ಪ್ರಯತ್ನ ತೀವ್ರಗೊಳಿಸಿವೆ. ಈ ನಡುವೆ ಪಾಕಿಸ್ತಾನ ಮಧ್ಯಸ್ತಿಕೆ ನಡೆಸುತ್ತಿರುವ ಘೊಷಣೆ ಮಾಡಿದ್ದು ಈ ವಾರಾಂತ್ಯದಲ್ಲಿ ಇಸ್ಲಾಮಾಬಾದ್ ನಲ್ಲಿ ಮಾತುಕತೆ ನಡೆಯಲಿದೆ ಎಂದಿದೆ. ಟ್ರಂಪ್ 15 ಅಂಶಗಳ ಪ್ರಸ್ತಾವ ಇಟ್ಟಿದ್ದಾರೆ. ಹೊರ್ಮುಝ್ ಜಲಸಂಧಿ ಹಿಂದಿನಂತೆ ಮುಕ್ತವಾಗಿಸುವುದು, ಯುರೇನಿಯಂ ಸಂಸ್ಕರಣೆ ನಿಲ್ಲಿಸಿ ಸಂಸ್ಕರಿತ ಯುರೇನಿಯಂ ಕೊಡುವುದು, ಕ್ಷಿಪಣಿ ಅಸ್ತ್ರಗಳನ್ನು ನಿಲ್ಲಿಸುವುದು ಇತ್ಯಾದಿ ಅದರಲ್ಲಿ ಸೇರಿದೆ. ಇದನ್ನು ಇರಾನಿಗೆ ಕೊಡಲಾಗಿದೆ. ಈ ಪ್ರಸ್ತಾವ ಬಂದಿದೆ, ಆದರೆ ಅದಕ್ಕೆ ಇರಾನ್ ಒಪ್ಪುವುದಿಲ್ಲ. ಇರಾನ್ ಹಿಂದೆ ಹಾಕಿರುವ ಷರತ್ತುಗಳನ್ನು ಒಳಗೊಂಡ ಪ್ರಸ್ತಾವ ಕೊಟ್ಟಿದೆ. ಕದನವಿರಾನದ ಪ್ರಶ್ನೆಯಿಲ್ಲ. ಇರಾನಿಗೆ ಒಪ್ಪಿಗೆಯಾಗುವ ಸಮಗ್ರ ಒಪ್ಪಂದವಾಗದೆ ಯುದ್ಧ ನಿಲ್ಲುವುದಿಲ್ಲವೆಂದು ಇರಾನ್ ಸ್ಪಷ್ಟ ಪಡಿಸಿದೆ. ಇರಾನ್ ಈ ಮುಂದಿನ ಶರತ್ತುಗಳನ್ನು ಹಾಕಿದೆ ಎನ್ನಲಾಗಿದೆ. ಯು. ಎಸ್ಯು. ಎಸ್
1. ಕೊಲ್ಲಿ ದೇಶಗಳ ಯು.ಎಸ್ ಮಿಲಿಟರಿ ನೆಲೆಗಳನ್ನು ಖಾಲಿ ಮಾಡಬೇಕು
2. ಯುರೇನಿಯಂ ಸಂಸ್ಕರಣ ದ ಇರಾನಿನ ಸಾರ್ವಭೌಮ ಹಕ್ಕು ಮಾನ್ಯ ಮಾಡಬೇಕು
3. ಹೊರ್ಮುಝ್ ಜಲಸಂಧಿ ಇರಾನಿನ ಸಾರ್ವಭೌಮತೆಗೆ ಒಳಪಟ್ಟಿದ್ದು ಮತ್ತು ಅದನ್ನು ಹಾದು ಹೋಗುವ ಹಡಗುಗಳಿಗೆ (ಪನಾಮಾ, ಸುಯೇಝ್ ಕಾಲುವೆಗಳಲ್ಲಿ ಇರುವಂತೆ) ಸುಂಕ ವಿಧಿಸುವ ಹಕ್ಕು ಮಾನ್ಯ ಮಾಡಬೇಕು.
4. ಆರ್ಥಿಕ ದಿಗ್ಬಂಧನವನ್ನು ಪೂರ್ಣವಾಗಿ ವಾಪಸು ತೆಗೆಯಬೇಕು ಮತ್ತು ದಿಗ್ಬಂಧನ ಮತ್ತು ಯುದ್ಧದಿಂದ ರಾನಿಗೆ ಆದ ನಷ್ಟ ಭರಿಸಬೇಕು
5. ಮುಂದೆ ಯು.ಎಸ್-ಇಸ್ರೇಲ್ ಯುದ್ಧ ಹೂಡದಂತೆ ಅಂತರರಾಷ್ಟ್ರೀಯ ಗ್ಯಾರಂಟಿ ಕೊಡಬೇಕು. ಎರಡೂ ಕಡೆಯ ಷರತ್ತುಗಳು ಕಠಿಣವಾಗಿದ್ದು ಚೀನ, ರಶ್ಯಾ ಮತ್ತಿತರ ಪ್ರಮುಖ ದೇಶಗಳ ಮಧ್ಯಪ್ರವೇಶವಿಲ್ಲದೆ ಒಂದು ಒಪ್ಪಂದಕ್ಕೆ ಬರುವುದು ಕಷ್ಟಸಾಧ್ಯ.
ಇರಾನ್ ಮೇಲೆ ಯು.ಎಸ್-ಇಸ್ರೇಲ್ ಯುದ್ಧದ ನಾಲ್ಕು ವಾರಗಳ ನಂತರ, ಜಗತ್ತು ಶಾಂತಿ ಮಾತುಕತೆ ಮತ್ತು ಯುದ್ಧದ ಇನ್ನಷ್ಟು ಉಲ್ಬಣದ ಸಾಧ್ಯತೆ ನಡುವೆ ಹೊಯ್ದಾಡುತ್ತಿದೆ.
ಇದನ್ನೂ ನೋಡಿ: “ನಮ್ಮ ಆರೋಗ್ಯ ಮತ್ತು ಕರ್ನಾಟಕ ಬಜೆಟ್ 2026–27” Janashakthi Media
