ಒಂದೇ ಬಾರಿಗೆ ಎರಡು ಟಿ20 ತಂಡಗಳು ಕಣಕ್ಕೆ – ಬಿಸಿಸಿಐ ನಿರ್ಧಾರ!

ನವದೆಹಲಿ: ಭಾರತ ತಂಡದಲ್ಲಿ ಸ್ಥಾನ ಪಡೆಯಲು ಭಾರೀ ಪೈಪೋಟಿ ನಡೆಯುತ್ತಿದೆ. ಎಲ್ಲಾ ಯುವ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಲು ಮತ್ತು ಭಾರತ ತಂಡದಲ್ಲಿ ಸ್ಥಾನ ಗಳಿಸಲು ಶ್ರಮಿಸುತ್ತಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ ಇದಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಎರಡು

ಸ್ಟಾರ್ ಆಟಗಾರರಿಗೆ ಮಾತ್ರವಲ್ಲದೆ ದೇಶೀಯ ಮತ್ತು ಐಪಿಎಲ್‌ (IPL) ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿರುವ ಯುವ ಆಟಗಾರರಿಗೂ ಅವಕಾಶಗಳನ್ನು ನೀಡುವುದು ಬಿಸಿಸಿಐ (BCCI) ಗೆ ದೊಡ್ಡ ಸವಾಲಾಗಿದೆ. ಈ ಸಂದರ್ಭದಲ್ಲಿ, ಬಿಸಿಸಿಐ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಸಿಸಿಐ ಪ್ರತಿಯೊಬ್ಬ ಪ್ರತಿಭಾನ್ವಿತ ಆಟಗಾರನಿಗೆ ಅವಕಾಶಗಳನ್ನು ನೀಡುವತ್ತ ಸಾಗುತ್ತಿದೆ.

ಭಾರತ ತಂಡಕ್ಕೆ ಸೇರಿಸಿಕೊಳ್ಳಲು ಲಭ್ಯವಿರುವ ಆಟಗಾರರ ಸಂಖ್ಯೆಯನ್ನು ಆಧರಿಸಿ ಬಿಸಿಸಿಐ ಕನಿಷ್ಠ 30 ರಿಂದ 35 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಿದೆ. ಒಂದೇ ಸಮಯದಲ್ಲಿ ಎರಡು ತಂಡಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲು ಕೆಲಸ ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಲಿಂಗಪ್ಪರ ಕೃಷಿಭೂಮಿಯಲ್ಲಿ ಅರಣ್ಯ ಇಲಾಖೆ ದೌರ್ಜನ್ಯ ಆರೋಪ; ರೈತ ಸಂಘ ಪರಿಶೀಲನೆ

ಸೂರ್ಯಕುಮಾರ್​ಗೆ ಪರೀಕ್ಷೆ?

ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳಲ್ಲಿ ಎರಡು ಟಿ20 ಭಾರತ ತಂಡಗಳು ಕಣಕ್ಕೀಳಿಯಲಿವೆ. ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಬ್ಯಾಟರ್ ಶ್ರೇಯಸ್ ಅಯ್ಯರ್ ನಾಯಕತ್ವದ ವಿಷಯದಲ್ಲೂ ಮುಂದಿದ್ದಾರೆ. ಅಯ್ಯರ್‌ಗೆ ತಂಡವನ್ನು ಹಸ್ತಾಂತರಿಸಲು ಮೈದಾನ ಸಿದ್ಧವಾಗುತ್ತಿದೆ. ಸೂರ್ಯಕುಮಾರ್ ಯಾದವ್ ಅಥವಾ ಬೇರೆ ಯಾರಾದರೂ ಎರಡನೇ ತಂಡದ ನಾಯಕರಾಗಬಹುದು.

ಎನ್​​ಡಿಟಿವಿಯ ವರದಿ ಪ್ರಕಾರ , ಬಿಸಿಸಿಐ ಕೆಲಸದ ಹೊರೆ ನಿರ್ವಹಿಸಲು ಮತ್ತು ಆಟಗಾರರ ಗುಂಪನ್ನು ವಿಸ್ತರಿಸಲು ಎರಡು ತಂಡಗಳು ಕಣಕ್ಕೀಳಿಸಲು ಯೋಜಿಸುತ್ತಿದೆ. ಬಹು ಟೂರ್ನಿಗಳು ಮತ್ತು ಸರಣಿಗಳು ಅತಿಕ್ರಮಿಸುವುದರಿಂದ, ಭಾರತವು ಏಕಕಾಲದಲ್ಲಿ ಎರಡು ವಿಭಿನ್ನ ಟಿ20 ತಂಡಗಳನ್ನು ಕಣಕ್ಕಿಳಿಸಬಹುದು.

ಬಿಗ್ ಮಾಸ್ಟರ್ ಪ್ಲಾನ್?

ಒಂದೇ ಸಮಯದಲ್ಲಿ ಎರಡು ಟಿ20 ಭಾರತ ತಂಡಗಳನ್ನು ಕಣಕ್ಕೀಳಿಸಲು ರೆಡಿಯಾಗುತ್ತಿರುವ ಮಾಸ್ಟರ್ ಪ್ಲಾನ್ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳು ಬಹುತೇಕ ಒಂದೇ ಸಮಯದಲ್ಲಿ ಬರುತ್ತಿವೆ. ಅದಕ್ಕಾಗಿಯೇ ನಾವು ಎರಡೂ ತಂಡಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದೇವೆ. ಅದಕ್ಕಾಗಿ 30 ರಿಂದ 35 ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗೆ ಈ ಪಟ್ಟಿಯಿಂದ ಆಯ್ಕೆಯಾಗುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರಿಗೆ ಇದು ಯಾವಾಗಲೂ ಒಂದು ಅವಕಾಶವಾಗಿದೆ. ಎರಡೂ ತಂಡಗಳನ್ನು ಬಲಿಷ್ಠಗೊಳಿಸುವ ಗುರಿಯೊಂದಿಗೆ ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ನೋಡಿ: ಸಂವಿಧಾನ ಮೌಲ್ಯಗಳ ಪ್ರತಿಧ್ವನಿ: ಸಂವಿಧಾನ ಗೀತೆ | ರವಿ ಮರಿಯಪ್ಪ – ಗುರುರಾಜ ದೇಸಾಯಿ ಮಾತಯಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *