ಯುಎಸ್‌-ಇಸ್ರೇಲಿ ಆಕ್ರಮಣದ ಬಗ್ಗೆ ಮೂರನೇ ಜಗತ್ತಿನ ಸರಕಾರಗಳ ಮೌನ: ನವ-ಉದಾರವಾದ ಉಂಟುಮಾಡಿರುವ ಎರಡು ಬಿರುಕುಗಳು

– ಪ್ರೊ. ಪ್ರಭಾತ್ಪಟ್ನಾಯಕ್
– ಅನು: ಕೆ.ಎಂ. ನಾಗರಾಜ್
ಇರಾನ್ ಮೇಲೆ ಯುಎಸ್-ಇಸ್ರೇಲಿ ಆಕ್ರಮಣದ ಎದುರು ಭಾರತ ಸರಕಾರದ ಪುಕ್ಕಲುತನದ  ನಿಲುವೂ ಸೇರಿದಂತೆ, ಜಾಗತಿಕ ದಕ್ಷಿಣದ ಹೆಚ್ಚಿನ ದೇಶಗಳ ಮೌನವು ಮೊದಲ ನೋಟದಲ್ಲಿ ಗೊಂದಲಕಾರಿಯಾಗಿ ತೋರುತ್ತದೆ. ಆದರೆ, ಈ ಮೌನಲ್ಲಿ ಅಂಥಹ ಗೊಂದಲವೇನಿಲ್ಲ. ನವ-ಉದಾರವಾದವು ಕೆಲ ಕಾಲದಿಂದ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದಲ್ಲಿ ಮೂಡಿಬಂದ ʼರಾಷ್ಟ್ರʼದ ಮತ್ತು ʼಅಲಿಪ್ತತೆʼಯ ಪರಿಕಲ್ಪನೆ ಈ ಎರಡನ್ನೂ ಬುಡಮೇಲು ಮಾಡುವಲ್ಲಿ, ಮತ್ತು ಅವುಗಳ ಸ್ಥಾನದಲ್ಲಿ ಸಾಮ್ರಾಜ್ಯಶಾಹಿಗೆ ಬೆಣ್ಣೆ ಹಚ್ಚುವುದಕ್ಕೆ ಆದ್ಯತೆ ನೀಡುವ ಪರ್ಯಾಯ ಪರಿಕಲ್ಪನೆಗಳನ್ನು ತರುವಲ್ಲಿ ತೊಡಗಿದೆ. ನಾವು ಇಂದು ನೋಡುತ್ತಿರುವುದು ಈ ಪ್ರಕ್ರಿಯೆಯ ಫಲಿತಾಂಶವನ್ನೇ. ಆದ್ದರಿಂದ ಜಾಗತಿಕ ದಕ್ಷಿಣದ ಸಾರ್ವಭೌಮತ್ವವನ್ನು ಮರಳಿ ಪಡೆಯುವ ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿರುವ ಇರಾನಿನ ಹೋರಾಟದಲ್ಲಿ ಇರಾನಿನ ಜನತೆಗೆ ಸೌಹಾರ್ದವನ್ನು ಜಾಗತಿಕ ದಕ್ಷಿಣದ ಜನತೆಯೇ ನೀಡಬೇಕೇ ವಿನಹ, ಪ್ರಸ್ತುತ ಆಳುವ ದೊಡ್ಡ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಸರ್ಕಾರಗಳಿಂದ ಅದನ್ನು ನಿರೀಕ್ಷಿಸಲಾಗದು. ಆಕ್ರಮಣ

ಇರಾನ್ ವಿರುದ್ಧ ಯುಎಸ್-ಇಸ್ರೇಲಿ ಯುದ್ಧದ ಕುರಿತ ಭಾರತ ಸರ್ಕಾರವು ನಿಲುವು ನಂಬಲಾಗದಷ್ಟು ಪುಕ್ಕಲುತನದಿಂದ ಕೂಡಿದೆ ಎಂಬುದನ್ನು ತೋರಿಸುತ್ತದೆ. ಬ್ರಿಟನ್‌ ಇತ್ತೀಚೆಗೆ ಕರೆದಿದ್ದ ಸುಮಾರು ಐವತ್ತು ದೇಶಗಳ ಸಭೆಯಲ್ಲಿ ಭಾರತವೂ ಭಾಗವಹಿಸಿತ್ತು. ಈ ಸಭೆಯಲ್ಲಿ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ್ದಕ್ಕಾಗಿ ಇರಾನನ್ನು ತೀವ್ರವಾಗಿ ಖಂಡಿಸಲಾಯಿತು. ಆದರೆ, ಇರಾನ್ ಮೇಲಿನ ಯುಎಸ್-ಇಸ್ರೇಲಿ ಆಕ್ರಮಣದ ವಿರುದ್ಧ ಒಂದೇ ಒಂದು ಮಾತೂ ಇರಲಿಲ್ಲ. ಅದೇ ರೀತಿಯಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೊಲ್ಲಿ ದೇಶಗಳ ಮೇಲೆ ದಾಳಿ ಮಾಡಿದ್ದಕ್ಕಾಗಿ ಇರಾನನ್ನು ಖಂಡಿಸುವ ನಿರ್ಣಯದ ಪ್ರಾಯೋಜಕರಲ್ಲಿ ಭಾರತವೂ ಒಂದು (ಕೊಲ್ಲಿ ದೇಶಗಳಲ್ಲಿರುವ ಅಮೇರಿಕದ ಮಿಲಿಟರಿ ನೆಲೆಗಳ ಮೇಲೆ ಮಾತ್ರ ಇರಾನ್ ದಾಳಿ ಮಾಡುತ್ತಿತ್ತು); ಮತ್ತೆ, ಈ ನಿರ್ಣಯದ ಸಂದರ್ಭದಲ್ಲೂ ಸಹ ಇರಾನ್ ಮೇಲೆ ಯುಎಸ್-ಇಸ್ರೇಲಿ ಆಕ್ರಮಣವನ್ನು ಖಂಡಿಸುವಲ್ಲಿ ಭಾರತದ ಒಂದು ಮಾತು ಸಹ ಇರಲಿಲ್ಲ. ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನೆಯ್‌ ಹತ್ಯೆಯ ಬಗ್ಗೆ ಶೋಕ ವ್ಯಕ್ತಪಡಿಸುವ ವಿಷಯದಲ್ಲಿ ಭಾರತವು ಹಲವಾರು ದಿನಗಳ ಸಮಯ ತೆಗೆದುಕೊಂಡಿತು ಎಂಬುದು ಮತ್ತು ಮಿನಾಬ್‌ನಲ್ಲಿ 175 ಮುಗ್ಧ ಶಾಲಾ ಬಾಲಕಿಯರ ಭೀಕರ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸುವ ವಿಷಯದಲ್ಲಿ ಹಲವಾರು ವಾರಗಳ ಸಮಯ ತೆಗೆದುಕೊಂಡಿತು ಎಂಬುದೂ ಸಹ ಗಮನಾರ್ಹವಾಗಿದೆ. ಆಕ್ರಮಣ

ಆದರೆ, ಈ ಪುಕ್ಕಲುತನವು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ: ಮೇಲೆ ತಿಳಿಸಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಒಂದು ಅಪ್ರಾಮಾಣಿಕ ಮತ್ತು ಇಬ್ಬಂದೀ ನಿರ್ಣಯದ ಸಹ-ಪ್ರಾಯೋಜಕರಾಗಿ 135 ದೇಶಗಳಿದ್ದವು, ಅದನ್ನು ಬೆಂಬಲಿಸದಿದ್ದರೆ ಅಮೆರಿಕನ್ನರಿಗೆ ಕೋಪ ಬರುತ್ತದೆ ಎಂಬ ಭಯದಿಂದ. ಹಾಗೆ ನೋಡಿದರೆ, ಇಡೀ ವಿಶ್ವದ ಬೆರಳೆಣಿಕೆಯ ದೇಶಗಳನ್ನು ಹೊರತುಪಡಿಸಿದರೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲಿ ಕೂಟವು ನಡೆಸಿದ ಕಾನೂನುಬಾಹಿರ ಮತ್ತು ಅನೈತಿಕ ಯುದ್ಧವನ್ನು ನೇರವಾಗಿ ಖಂಡಿಸುವ ಕೆಚ್ಚೆದೆಯನ್ನು ಯಾರೂ ಹೊಂದಿರಲಿಲ್ಲ ಎಂಬುದು ಒಂದು ಕಳವಳಕಾರೀ ವಿಷಯವೂ ಹೌದು. ಏಕೆಂದರೆ, ಇರಾನ್ ಮೇಲಿನ ದಾಳಿಯು ವಸಾಹತುಶಾಹಿಯನ್ನು ಕಳಚಿ ಹಾಕುವ ಹೋರಾಟದ ತಿರುಳಾಗಿದ್ದ ಮತ್ತು ಇಡೀ ವಸಾಹತೋತ್ತರ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದ್ದ ರಾಷ್ಟ್ರಗಳ ಸಾರ್ವಭೌಮತ್ವದ ಪರಿಕಲ್ಪನೆಯ ಸಂಪೂರ್ಣ ನಿರಾಕರಣೆಯಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಯುದ್ಧವು ವಸಾಹತುಶಾಹಿಯನ್ನು ಕಳಚಿಹಾಕುವ ಪರಿಕಲ್ಪನೆಯ ತರ್ಕಾಧಾರವನ್ನೇ ನಾಶಪಡಿಸುತ್ತದೆ. ಆಕ್ರಮಣ

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣದಿಂದ `ಐಸ್‌ ಕ್ರೀಮ್’ ಅಂಗಡಿ ತೆರೆದ ಮಹಿಳೆ!

ಮೂರನೇ ಜಗತ್ತಿನ ದೇಶಗಳ ಈ ಪುಕ್ಕಲುತನವೂ ಸಹ ದಿಗ್ಭ್ರಮೆಗೊಳಿಸುವ ಒಂದು ವಿಷಯವೇ: ಇವು ಒಂದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರದ ಸ್ಥಾನಮಾನವನ್ನು ಪಡೆದುಕೊಳ್ಳಲು ವಸಾಹತುಶಾಹಿಯ ವಿರುದ್ಧವಾಗಿ   ಸುದೀರ್ಘವಾಗಿ ಕಷ್ಟಪಟ್ಟು ಹೋರಾಟ ಮಾಡಿದ ದೇಶಗಳೇ ಹೌದು. ಮೂರನೇ ಜಗತ್ತಿನ ರಾಷ್ಟ್ರವೊಂದರ ಇದೇ ಈ ಸಾರ್ವಭೌಮತ್ವವನ್ನು  ಅಮೆರಿಕ ಸಾಮ್ರಾಜ್ಯಶಾಹಿಯು ಸಶಸ್ತ್ರ ಬಲ ಪ್ರಯೋಗದ ಮೂಲಕ ಉಲ್ಲಂಘಿಸುತ್ತಿರುವಾಗ ಅದೇ ಮೂರನೇ ಜಗತ್ತಿನ ಆ ದೇಶಗಳು ಮೌನವಾಗಿರುವುದು ಸಾಧ್ಯವಾಗಿರುವುದಾದರೂ ಹೇಗೆ? ಆಕ್ರಮಣ

“ರಾಷ್ಟ್ರ”ದ ಪರಿಕಲ್ಪನೆಯಲ್ಲಿ ಬಿರುಕು

ಈ ಪ್ರಶ್ನೆಯ ಉತ್ತರವು, ನಿಸ್ಸಂದೇಹವಾಗಿಯೂ ಸಂಕೀರ್ಣವಾದುದೇ, ಅದರಲ್ಲಿ ನವ ಉದಾರವಾದವು ನಮ್ಮ ಜಗತ್ತಿಗೆ ಪರಿಚಯಿಸಿದ ಕನಿಷ್ಠ ಎರಡು ಬಿರುಕುಗಳನ್ನು ಗುರುತಿಸಬೇಕಾಗಿದೆ. ಒಂದು ಬಿರುಕು, ವಸಾಹತುಶಾಹಿ ವಿರೋಧಿ ಹೋರಾಟದಿಂದ ಅಸ್ತಿತ್ವಕ್ಕೆ ಬಂದ “ರಾಷ್ಟ್ರ”ದ ಪರಿಕಲ್ಪನೆಯಲ್ಲಿ ತಂದಿರುವಂತದ್ದು. ವಸಾಹತುಶಾಹಿ ವಿರೋಧಿ ಹೋರಾಟದಿಂದ ಅಸ್ತಿತ್ವಕ್ಕೆ ಬಂದ “ರಾಷ್ಟ್ರ”ದ ಬಗೆಗಿನ ಈ ಪರಿಕಲ್ಪನೆಯು ವೆಸ್ಟ್‌ಫ್ಯಾಲಿಯನ್ ಶಾಂತಿ ಒಪ್ಪಂದಗಳ ನಂತರ “ರಾಷ್ಟ್ರ”ದ ಬಗ್ಗೆ ಮೂಡಿಬಂದ ಯುರೋಪಿಯನ್ ಪರಿಕಲ್ಪನೆಗಿಂತ ಕನಿಷ್ಠ ಮೂರು ವಿಧಗಳಲ್ಲಿ ಭಿನ್ನವಾಗಿತ್ತು: ಮೊದಲನೆಯದಾಗಿ, ಈ “ರಾಷ್ಟ್ರ”ವು ಎಲ್ಲರನ್ನೂ ಒಳಗೊಂಡಿತ್ತು ಮತ್ತು ಅದು ಯಾವುದೇ “ಒಳಗಿನ ಶತ್ರು”ವನ್ನು ಗುರುತಿಸಲಿಲ್ಲ; ಎರಡನೆಯದಾಗಿ, ಯುರೋಪಿಯನ್ ರಾಷ್ಟ್ರವಾದದಂತಲ್ಲದೆ, ದೂರದ ದೇಶಗಳ ಸಂಪನ್ಮೂಲಗಳ ಮೇಲೆ ಕಣ್ಣು ಹಾಕುವುದಿಲ್ಲ ಎಂಬ ಅರ್ಥದಲ್ಲಿ ಯಾವುದೇ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳನ್ನು ತಾನಾಗಿಯೇ ದೂರವಿಟ್ಟಿತು; ಮತ್ತು ಮೂರನೆಯದಾಗಿ, ಅದು ರಾಷ್ಟ್ರವನ್ನು ಜನತೆಗಿಂತ ಬಹಳ ಎತ್ತರದಲ್ಲಿಟ್ಟು, ರಾಷ್ಟ್ರ ಸೇವೆಯನ್ನು ಆ ಜನತೆಯ ಒಂದು “ಕರ್ತವ್ಯ” ಎಂದು ಭಾವಿಸುವಂತಹ ದೈವತ್ವದ ಮಟ್ಟಕ್ಕೆ ಏರಿಸಲಿಲ್ಲ. ಆಕ್ರಮಣ

ಎಲ್ಲರನ್ನೂ ಒಳಗೊಳ್ಳುವ “ರಾಷ್ಟ್ರ”ದ ಈ ಪರಿಕಲ್ಪನೆಯು ವಸಾಹತುಶಾಹಿ ವಿರೋಧಿ ಹೋರಾಟವು ಒಂದು ಬಹು-ವರ್ಗಗಳ ಹೋರಾಟವಾಗಿತ್ತು ಎಂಬುದರ ಪ್ರತಿಫಲನವಾಗಿ ಸಾಕಾರಗೊಂಡಿತ್ತು; ಮತ್ತು ಸ್ವಾತಂತ್ರ್ಯದ ನಂತರ ಹೊಂದಿದ ನಿರ್ದೇಶಿತ (dirigiste) ನೀತಿಗಳ ಆರ್ಥಿಕ ಆಳ್ವಿಕೆಯು, ಅದು ಬಂಡವಾಳಶಾಹಿ ಮಾದರಿಯ ಅಭಿವೃದ್ಧಿಯನ್ನು ಪೋಷಿಸಿತಾದರೂ, “ರಾಷ್ಟ್ರೀಯ” ಅಭಿವೃದ್ಧಿಯನ್ನು ಸಾಧಿಸುವ ಹೆಸರಿನಲ್ಲಿ ಅತಿರೇಕದ ಬಂಡವಾಳಶಾಹಿಯನ್ನು ಒಂದು ಹಿಡಿತದಲ್ಲಿಡಲು ಪ್ರಯತ್ನಿಸಿತು. ಈ ಕ್ರಮವು ಅದರ ಬಹು-ವರ್ಗ ಬೆಂಬಲ ನೆಲೆಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿತ್ತು ಮತ್ತು ಏಕಸ್ವಾಮ್ಯ ಬಂಡವಾಳಶಾಹಿಗಳೂ ಸಹ ಆ ಸಮಯದಲ್ಲಿ ಈ ನಿಲುವಿನ ವಿರೋಧಿಗಳಾಗಿರಲಿಲ್ಲ, ಏಕೆಂದರೆ, ಸಾಮ್ರಾಜ್ಯಶಾಹಿಗೆ ಎದುರಾಗಿ ಪ್ರಭುತ್ವವು ಸ್ವಾಯತ್ತತೆಯನ್ನು ಚಲಾಯಿಸುವ ಒಂದು ಅಭಿವೃದ್ಧಿಯ ದಿಕ್ಕು ಅವರಿಗೂ ಬೇಕಾಗಿತ್ತು. ಬೃಹತ್‌ ಸಾರ್ವಜನಿಕ ವಲಯದ ಅಸ್ತಿತ್ವ ಈ ದಿಕ್ಪಥದ ಒಂದು ಭಾಗವಾಗಿತ್ತು.

ಇದಲ್ಲದೆ, ಈ ನಿರ್ದೇಶಿತ ನೀತಿಗಳ ಆರ್ಥಿಕ ವ್ಯವಸ್ಥೆ ಅನುಸರಿಸುತ್ತಿದ್ದ ಅಲಿಪ್ತ ನೀತಿಯು ಸಾಮ್ರಾಜ್ಯಶಾಹಿಯಿಂದ ಸ್ವಾಯತ್ತತೆ ಹೊಂದಿದ ಈ ಅಭಿವೃದ್ಧಿಯ ಅನ್ವೇಷಣೆಗೆ ಪೂರಕವಾಗಿತ್ತು. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕಿ, ಅಂತಹ ಆಳ್ವಿಕೆಗಳನ್ನು “ಮಧ್ಯಂತರ ಆಡಳಿತಗಳು” ಎಂದು ಕರೆಯುವ ಮತ್ತು ಮಧ್ಯಮ ವರ್ಗಗಳು ಅಂತಹ ಆಳ್ವಿಕೆಗಳಲ್ಲಿ ನಿರ್ಣಾಯಕ ಅಧಿಕಾರವನ್ನು ಹೊಂದಿವೆ ಎಂದು ಸೂಚಿಸುವ ತಪ್ಪು ಮಾಡಿದ್ದರು. ಆದರೂ, ಅವರು ಪ್ರಭುತ್ವ ಬಂಡವಾಳಶಾಹಿ (ಸಾರ್ವಜನಿಕ ವಲಯ) ಮತ್ತು ಅಲಿಪ್ತತೆ ಇವುಗಳನ್ನು ಈ ಆಳ್ವಿಕೆಗಳ ಎರಡು ವಿಶಿಷ್ಟ ಲಕ್ಷಣಗಳಾಗಿ ಗುರುತಿಸಿದ್ದ ಅಂಶವು ಸರಿಯಾಗಿತ್ತು. ಆಕ್ರಮಣ

ಬಂಡವಾಳದ ಜಾಗತೀಕರಣದೊಂದಿಗೆ ಬದಲಾದ ಮಾನದಂಡ

ಆದರೆ, ಬಂಡವಾಳದ ಜಾಗತೀಕರಣದೊಂದಿಗೆ, ರೀತಿ ನೀತಿಗಳು ಬದಲಾದವು. ದೇಶೀಯ ಏಕಸ್ವಾಮ್ಯ ಬೂರ್ಜ್ವಾಗಳು ಜಾಗತೀಕರಣಗೊಂಡ ಬಂಡವಾಳದೊಂದಿಗೆ ತಮ್ಮನ್ನು ಸಮಗ್ರೀಕರಿಸಿಕೊಂಡವು. ಮತ್ತು ಮುಂದುವರೆದ ಬಂಡವಾಳಶಾಹಿ ದೇಶಗಳಿಂದ ಸಾಕಷ್ಟು ಪ್ರಮಾಣದಲ್ಲಿ  ಸ್ವಾಯತ್ತವಾಗಿ ಕಾಣುತ್ತಿದ್ದ ಅಭಿವೃದ್ಧಿ ಪಥವನ್ನು ಅನುಸರಿಸುವ ತಮ್ಮ ಕಾರ್ಯಸೂಚಿಯನ್ನು ಕೈಬಿಟ್ಟವು. ತಮ್ಮ ಮಕ್ಕಳನ್ನು ಮುಂದುವರೆದ ದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಮತ್ತು ಅಲ್ಲಿಯೇ ವಾಸಿಸಲು ಕಳುಹಿಸಲು ತವಕಪಡುವ ಸಮಾಜದ ಉನ್ನತ ವೃತ್ತಿಪರರ ಮತ್ತು ಅಧಿಕಾರಶಾಹಿ ವಿಭಾಗಗಳ ಕೆಲವು ಗುಂಪುಗಳು, ಈ ಜಾಗತೀಕರಣಗೊಂಡ ಬಂಡವಾಳದ ಆಶ್ರಯಲ್ಲಿ ಹೊರಹೊಮ್ಮಿದ ನವ-ಉದಾರವಾದಿ ಆಳ್ವಿಕೆಯ ಬೆಂಬಲಿಗರಾದರು. ಶ್ರೀಮಂತ ಭೂಮಾಲೀಕರುಗಳೂ ಸಹ ಈ ಹೊಸ ನವ-ಉದಾರವಾದಿ ವ್ಯವಸ್ಥೆಯೊಳಗೆ ತಮ್ಮ ಭವಿಷ್ಯವನ್ನು ಅರಸಿ ಹೊರಟರು. ಈ ಹೊಸ ವ್ಯವಸ್ಥೆಯು ಅತಿರೇಕದ ಮತ್ತು ಲಂಗುಲಗಾಮಿಲ್ಲದ ಬಂಡವಾಳಶಾಹಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ, ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ಕಿರು ಉತ್ಪಾದಕರು ಮತ್ತು ಕೆಳಗಿನ ಸಂಬಳದಾರರ ಮೇಲೆ ತೀವ್ರವಾಗಿ ಎರಗಿತು. ಮತ್ತು, ವಸಾಹತುಶಾಹಿ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ ರೂಪುಗೊಂಡ ವರ್ಗಮೈತ್ರಿಯೊಳಗೆ ಒಂದು ಒಡಕನ್ನುಂಟುಮಾಡಿತು. ಆಕ್ರಮಣ

ಸಾಮ್ರಾಜ್ಯಶಾಹೀ ಆಳ್ವಿಕೆಯಿಂದ ಹೊರಬಂದ “ರಾಷ್ಟ್ರ” ದ ಸ್ವಾತಂತ್ರ್ಯವು, ಎಲ್ಲಕ್ಕಿಂತಲೂ ಮುಖ್ಯವಾದ ಗುರಿಯಾಗುವ ಬದಲು, ಅದು ಒಂದು ನವ ಉದಾರವಾದಿ ವ್ಯವಸ್ಥೆಯ ಪರಿಸರದೊಳಗೆ ಸರಕಾರಕ್ಕೆ ಅಪೇಕ್ಷಿತವಾದ ಅಥವಾ ಪ್ರಸ್ತುತವಾದ ಒಂದು ವಿಷಯವಾಗಿ ಉಳಿಯಲಿಲ್ಲ.ಇದುವೇ “ಬಿರುಕಿನ” ಮೊದಲ ನಿದರ್ಶನ. ಈ ಬಿರುಕಿನ ಕಾರಣದಿಂದಾಗಿ, ಒಂದು ನವ ಉದಾರವಾದಿ ಆಳ್ವಿಕೆಯ ಸರ್ಕಾರಕ್ಕೆ,  ಯಾವುದೇ ಒಂದು ನಿರ್ದಿಷ್ಟ ನಿಲುವು ರಾಷ್ಟ್ರೀಯ ಸಾರ್ವಭೌಮತ್ವವನ್ನು ರಕ್ಷಿಸುತ್ತದೆಯೇ ಎಂಬುದು ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನದಂಡವಾಗಿರದೆ, ಅದು ಹೊಸ ಅರ್ಥದಲ್ಲಿ “ರಾಷ್ಟ್ರ”ಕ್ಕೆ ಸಮಾನ ಎಂದು ಪರಿಗಣಿಸಲ್ಪಡುವ ದೊಡ್ಡ ಬಂಡವಾಳದ ಭೌತಿಕ ಹಿತಾಸಕ್ತಿಗಳನ್ನು ಉತ್ತೇಜಿಸುತ್ತದೆಯೇ ಎಂಬುದೇ ಮಾನದಂಡವಾಯಿತು. ಜಾಗತಿಕ ದಕ್ಷಿಣದ ದೇಶಗಳಲ್ಲಿ ದೊಡ್ಡ ಬಂಡವಾಳದ ಹಿತಾಸಕ್ತಿಗಳ ದೃಷ್ಟಿಯಲ್ಲಿ ಯುಎಸ್-ಇಸ್ರೇಲಿ ಮೈತ್ರಿಯ ಪರವಾಗಿ ನಿಲ್ಲುವುದು ಆಕ್ರಮಣದ ಒಟ್ಟಾರೆ ಬಲಿಪಶುವಾದ ಇರಾನಿನೊಂದಿಗೆ ನಿಲ್ಲುವುದಕ್ಕಿಂತ ಹೆಚ್ಚು ಅನುಕೂಲಕರವಾಗಿದೆ ಎಂದು ತೋರುತ್ತದೆ.

ಇದೀಗ ಮುಂದುವರೆದ ಬಂಡವಾಳಶಾಹಿ ದೇಶಗಳ ವಿರುದ್ಧವಿರುವ  “ರಾಷ್ಟ್ರ”ವು  ಗಮನದ ಕೇಂದ್ರವಾಗಿ ಉಳಿಯಲಿಲ್ಲ. ಬದಲಿಗೆ, ಕೇವಲ ಜಿಡಿಪಿ ಬೆಳವಣಿಗೆಯ ದರಗಳನ್ನಷ್ಟೇ ಪರಿಗಣಿಸುವ ತ್ವರಿತ “ಅಭಿವೃದ್ಧಿ”ಯನ್ನು ಸಾಧಿಸುವ ಹಾದಿಯಲ್ಲಿ ಅಡ್ಡ ನಿಂತ ಸಾಮಾಜಿಕ ಗುಂಪುಗಳ ವಿರುದ್ಧ ಬಹುರಾಷ್ಟ್ರೀಯ ಬಂಡವಾಳವೂ ಸೇರಿದಂತೆ ದೊಡ್ಡ ಬಂಡವಾಳವು ಆ ಗಮನವನ್ನು  ಆಕ್ರಮಿಸಿಕೊಂಡಿತು. ದೊಡ್ಡ ಬಂಡವಾಳದ ಹಿತಾಸಕ್ತಿಯನ್ನೇ ಒಂದು ಕೈಚಳಕದ ಮೂಲಕ “ರಾಷ್ಟ್ರೀಯ ಹಿತಾಸಕ್ತಿ” ಎಂದು ಗುರುತಿಸಲಾಯಿತು ಮತ್ತು ಅದನ್ನು ಉತ್ತೇಜಿಸುವುದು ಎಲ್ಲ ವರ್ಗಗಳ ಕರ್ತವ್ಯವಾಯಿತು. “ರಾಷ್ಟ್ರ” ಎಂಬ ಪದದ ಅರ್ಥವ್ಯಾಪ್ತಿಯಲ್ಲಾದ ಈ ಪಲ್ಲಟ ವಸಾಹತುಶಾಹಿ ವಿರೋಧಿ ಹೋರಾಟವು ಅಸ್ತಿತ್ವಕ್ಕೆ ತರಲು ಬಯಸಿದ್ದ “ರಾಷ್ಟ್ರ”ದ ಪರಿಕಲ್ಪನೆಯಲ್ಲಿ ಒಂದು ಬಿರುಕು ಮೂಡಿದೆ ಎಂಬುದನ್ನು ಸೂಚಿಸಿತು. ಸಾಮ್ರಾಜ್ಯಶಾಹೀ ಆಳ್ವಿಕೆಯಿಂದ ಹೊರಬಂದ “ರಾಷ್ಟ್ರ” ದ ಸ್ವಾತಂತ್ರ್ಯವು, ಎಲ್ಲಕ್ಕಿಂತಲೂ ಮುಖ್ಯವಾದ ಗುರಿಯಾಗುವ ಬದಲು, ಅದು ಒಂದು ನವ ಉದಾರವಾದಿ ವ್ಯವಸ್ಥೆಯ ಪರಿಸರದೊಳಗೆ ಸರಕಾರಕ್ಕೆ ಅಪೇಕ್ಷಿತವಾದ ಅಥವಾ ಪ್ರಸ್ತುತವಾದ ಒಂದು ವಿಷಯವಾಗಿ ಉಳಿಯಲಿಲ್ಲ.

ಇದುವೇ ಮೇಲೆ ಹೇಳಿದ “ಬಿರುಕಿನ” ಮೊದಲ ನಿದರ್ಶನ. ಈ ಬಿರುಕಿನ ಕಾರಣದಿಂದಾಗಿ, ಒಂದು ನವ ಉದಾರವಾದಿ ಆಳ್ವಿಕೆಯ ಸರ್ಕಾರಕ್ಕೆ,  ಯಾವುದೇ ಒಂದು ನಿರ್ದಿಷ್ಟ ನಿಲುವು ರಾಷ್ಟ್ರೀಯ ಸಾರ್ವಭೌಮತ್ವವನ್ನು ರಕ್ಷಿಸುತ್ತದೆಯೇ ಎಂಬುದು ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾನದಂಡವಾಗಿರದೆ, ಅದು ಹೊಸ ಅರ್ಥದಲ್ಲಿ “ರಾಷ್ಟ್ರ”ಕ್ಕೆ ಸಮಾನ ಎಂದು ಪರಿಗಣಿಸಲ್ಪಡುವ ದೊಡ್ಡ ಬಂಡವಾಳದ ಭೌತಿಕ ಹಿತಾಸಕ್ತಿಗಳನ್ನು ಉತ್ತೇಜಿಸುತ್ತದೆಯೇ ಎಂಬುದೇ ಮಾನದಂಡವಾಯಿತು. ಜಾಗತಿಕ ದಕ್ಷಿಣದ ದೇಶಗಳಲ್ಲಿ ದೊಡ್ಡ ಬಂಡವಾಳದ ಹಿತಾಸಕ್ತಿಗಳ ದೃಷ್ಟಿಯಲ್ಲಿ ಯುಎಸ್-ಇಸ್ರೇಲಿ ಮೈತ್ರಿಯ ಪರವಾಗಿ ನಿಲ್ಲುವುದು ಆಕ್ರಮಣದ ಒಟ್ಟಾರೆ ಬಲಿಪಶುವಾದ ಇರಾನಿನೊಂದಿಗೆ ನಿಲ್ಲುವುದಕ್ಕಿಂತ ಹೆಚ್ಚು ಅನುಕೂಲಕರವಾಗಿದೆ ಎಂದು ತೋರುತ್ತದೆ. ಇದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಲ್ಲಿ ಮತ್ತು ಇತರ ನಿರ್ಣಯಗಳಲ್ಲಿ ಈ ಮೊದಲು ಉಲ್ಲೇಖಿಸಿದ ಮೌನವನ್ನು ಸ್ವಲ್ಪ ಮಟ್ಟಿಗೆ ವಿವರಿಸುತ್ತದೆ.

ಅಲಿಪ್ತತೆಯ ಪರಿಕಲ್ಪನೆಯಲ್ಲಿ ಬಿರುಕು

ನವ- ಉದಾರವಾದಿ ಆಳ್ವಿಕೆಯಿಂದ ಉಂಟಾದ ಎರಡನೆಯ “ಬಿರುಕು” ಕೂಡ ಇದೆ. ನವ-ಉದಾರವಾದವು ರಫ್ತು-ಪ್ರಧಾನ ಬೆಳವಣಿಗೆಗೆ ನಾಂದಿಯಾಗುತ್ತದೆ ಮತ್ತು ಅದು ಹಿಂದಿನ ನಿರ್ದೇಶಿತ ನೀತಿಗಳ ಆಳ್ವಿಕೆಗೆ ಹೋಲಿಸಿದರೆ ಎಲ್ಲ ದೇಶಗಳಿಗೂ ಉನ್ನತ ಜಿಡಿಪಿ ಬೆಳವಣಿಗೆ ದರವನ್ನು ತರುತ್ತದೆ ಎಂಬುದಾಗಿ ಹೇಳಿ ನವ-ಉದಾರವಾದೀ ನೀತಿಗಳನ್ನು ಜಾಗತಿಕ ದಕ್ಷಿಣದ ದೇಶಗಳಿಗೆ “ಮಾರಾಟ” ಮಾಡಲಾಯಿತು. ಆದರೆ, ಈ ದಾವೆಯು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ. ಹೆಚ್ಚು ಹೆಚ್ಚು ದೇಶಗಳು ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರವನ್ನು ಅನುಸರಿಸಿದಾಗ ಒಟ್ಟು ವಿಶ್ವ ಬೇಡಿಕೆಯ ಬೆಳವಣಿಗೆಯ ದರವು ಏರಿಕೆಯಾಗುವುದಿಲ್ಲ. ಹಾಗಾಗಿ, ಎಲ್ಲ ದೇಶಗಳಿಗೂ ಈ ಕಾರ್ಯತಂತ್ರವನ್ನು ಸಾಮಾನ್ಯೀಕರಿಸುವ ನವ-ಉದಾರವಾದಿ ಆಳ್ವಿಕೆಯು ವಾಸ್ತವವಾಗಿ ಪರಸ್ಪರನ್ನು ಸೋಲಿಸುವ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳುವ, “ನಿಮ್ಮ ನೆರೆಯವರನು ಹಾಳಾಗಲಿ” ಎಂಬ ಕಾರ್ಯತಂತ್ರವನ್ನು ಅನುಸರಿಸಲು ಒತ್ತಾಯಿಸುವ ವ್ಯವಸ್ಥೆಯಾಗುತ್ತದೆ.

ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರದ ಅಡಿಯಲ್ಲಿ ಕೆಲವು ದೇಶಗಳು ಉನ್ನತ ಬೆಳವಣಿಗೆ ದರವನ್ನು, ಮೊದಲಿಗಿಂತ ಬೆಳವಣಿಗೆಯ ಕೆಳ ದರವನ್ನು ಈಗ ಅನುಭವಿಸುತ್ತಿರುವ ದೇಶಗಳಿಗೆ ನಷ್ಟವನ್ನುಂಟುಮಾಡುವ ಮೂಲಕ ಸಾಧಿಸಿರುತ್ತವೆ. ಪರಸ್ಪರನ್ನು ಮೀರಿಸುವ ಸ್ಪರ್ಧೆಯಲ್ಲಿ ತೊಡಗಿದ ದೇಶಗಳು ಪರಸ್ಪರ “ಸಹಕರಿಸುತ್ತಿವೆ” ಎಂದಂತೂ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ನವ-ಉದಾರವಾದಿ ಕಾರ್ಯತಂತ್ರದ ಅನುಸರಣೆ ಸಾಮಾನ್ಯ ಸಂಗತಿಯಾದುದರ ಪರಿಣಾಮವಾಗಿ ಸಾಮ್ರಾಜ್ಯಶಾಹಿಯನ್ನು ಧೈರ್ಯವಾಗಿ ಎದುರಿಸಲು ಜತೆಯಾಗಿ ನಿಂತ ಜಾಗತಿಕ ದಕ್ಷಿಣದ ದೇಶಗಳು ತಮ್ಮ ಅಲಿಪ್ತತೆಯ ಪಥವನ್ನು ಕಾರ್ಯತಃ ತ್ಯಜಿಸುವಂತಾಗಿದೆ. ಈಗ, ಜಾಗತಿಕ ದಕ್ಷಿಣದ ಎಲ್ಲ ದೇಶಗಳೂ ಉನ್ನತ ಜಿಡಿಪಿ ಬೆಳವಣಿಗೆಯನ್ನು ಸಾಧಿಸುವ ಗೀಳಿನಲ್ಲಿವೆ. ಈ ಉದ್ದೇಶಕ್ಕಾಗಿ ಮುಂದುವರೆದ ದೇಶಗಳಿಂದ ಬೃಹತ್‌ ಹೂಡಿಕೆಯನ್ನು ಸೆಳೆಯುವ ಗೀಳಿನಲ್ಲಿವೆ. ಹೂಡಿಕೆಯ ಗಾತ್ರದಲ್ಲಿ ತಮ್ಮ ನೆರೆಯ ದೇಶಗಳನ್ನು ಮೀರಿಸುವ ಸಲುವಾಗಿ ಸಾಮ್ರಾಜ್ಯಶಾಹಿಗೆ ಬೆಣ್ಣೆ ಹಚ್ಚುತ್ತಿವೆ. ಇದು ಅಲಿಪ್ತ ಚಳವಳಿಯಲ್ಲಿ ಉಂಟಾದ ಬಿರುಕಿಗೆ ಕಾರಣವಾಗಿದೆ ಮತ್ತು ಇದು ನಾವು ಉಲ್ಲೇಖಿಸಿದ ಬಿರುಕುಗಳಲ್ಲಿ ಎರಡನೆಯದು.

ನವ-ಉದಾರವಾದಿ ಕಾರ್ಯತಂತ್ರದ ಅನುಸರಣೆ ಸಾಮಾನ್ಯ ಸಂಗತಿಯಾದುದರ ಪರಿಣಾಮವಾಗಿ ಸಾಮ್ರಾಜ್ಯಶಾಹಿಯನ್ನು ಧೈರ್ಯವಾಗಿ ಎದುರಿಸಲು ಜತೆಯಾಗಿ ನಿಂತ ಜಾಗತಿಕ ದಕ್ಷಿಣದ ದೇಶಗಳು ತಮ್ಮ ಅಲಿಪ್ತತೆಯ ಪಥವನ್ನು ಕಾರ್ಯತಃ ತ್ಯಜಿಸುವಂತಾಗಿದೆ. ಈಗ, ಜಾಗತಿಕ ದಕ್ಷಿಣದ ಎಲ್ಲ ದೇಶಗಳೂ ಉನ್ನತ ಜಿಡಿಪಿ ಬೆಳವಣಿಗೆಯನ್ನು ಸಾಧಿಸುವ ಗೀಳಿನಲ್ಲಿವೆ. ಈ ಉದ್ದೇಶಕ್ಕಾಗಿ ಮುಂದುವರೆದ ದೇಶಗಳಿಂದ ಬೃಹತ್‌ ಹೂಡಿಕೆಯನ್ನು ಸೆಳೆಯುವ ಗೀಳಿನಲ್ಲಿವೆ. ಹೂಡಿಕೆಯ ಗಾತ್ರದಲ್ಲಿ ತಮ್ಮ ನೆರೆಯ ದೇಶಗಳನ್ನು ಮೀರಿಸುವ ಸಲುವಾಗಿ ಸಾಮ್ರಾಜ್ಯಶಾಹಿಗೆ ಬೆಣ್ಣೆ ಹಚ್ಚುತ್ತಿವೆ. ಇದು ಅಲಿಪ್ತ ಚಳವಳಿಯಲ್ಲಿ ಉಂಟಾದ ಬಿರುಕಿಗೆ ಕಾರಣವಾಗಿದೆ ಮತ್ತು ಇದು ಎರಡನೆಯ ಬಿರುಕು.

ನವ-ಉದಾರವಾದೀ ಪ್ರಕ್ರಿಯೆಯ ಫಲಿತ

ಇರಾನ್ ಮೇಲೆ ಯುಎಸ್-ಇಸ್ರೇಲಿ ಆಕ್ರಮಣದ ಎದುರು ಜಾಗತಿಕ ದಕ್ಷಿಣದ ಹೆಚ್ಚಿನ ದೇಶಗಳ ಮೌನವು ಮೊದಲ ನೋಟದಲ್ಲಿ ಗೊಂದಲಕಾರಿಯಾಗಿ ತೋರುತ್ತದೆ. ಆದರೆ, ಈ ಮೌನದಲ್ಲಿ ಅಂಥಹ ಗೊಂದಲವೇನಿಲ್ಲ. ನವ-ಉದಾರವಾದವು ಕೆಲ ಕಾಲದಿಂದ ರಾಷ್ಟ್ರದ ಪರಿಕಲ್ಪನೆ ಮತ್ತು ಅಲಿಪ್ತತೆಯ ಪರಿಕಲ್ಪನೆ ಈ ಎರಡನ್ನೂ ಬುಡಮೇಲು ಮಾಡುವಲ್ಲಿ, ಈ ಪರಿಕಲ್ಪನೆಗಳನ್ನು ನಿರೂಪಿಸುವ ಸಾಮ್ರಾಜ್ಯಶಾಹಿ-ವಿರೋಧಿ ತಿರುಳನ್ನು ತ್ಯಜಿಸುವಲ್ಲಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವುಗಳ ಸ್ಥಾನದಲ್ಲಿ ಸಾಮ್ರಾಜ್ಯಶಾಹಿಗೆ ಬೆಣ್ಣೆ ಹಚ್ಚುವುದಕ್ಕೆ ಆದ್ಯತೆ ನೀಡುವ ಪರ್ಯಾಯ ಪರಿಕಲ್ಪನೆಗಳನ್ನು ತರುವಲ್ಲಿ ತೊಡಗಿದೆ. ನಾವು ಇಂದು ನೋಡುತ್ತಿರುವುದು ಈ ಪ್ರಕ್ರಿಯೆಯ ಫಲಿತಾಂಶವನ್ನೇ.

ಬಂಡವಾಳಶಾಹಿಯು ತನ್ನ ವಿರುದ್ಧದ ಯಾವುದೇ ಸಾಮೂಹಿಕ ಆಚರಣೆಗೆ, ಅದು  ಕೇವಲ ಟ್ರೇಡ್ ಯೂನಿಯನ್ ಕ್ರಿಯೆಯಾದರೂ ಸಹ, ವೈಷಮ್ಯವನ್ನು ತೋರುತ್ತದೆ. ಸಂಯಮವಿಲ್ಲದ ಮತ್ತು ಲಂಗುಲಗಾಮಿಲ್ಲದ ಬಂಡವಾಳಶಾಹಿಗೆ ಮರಳುವ ನವ ಉದಾರವಾದಿ ಬಂಡವಾಳಶಾಹಿಯು, ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ವರ್ಗಗಳ ಮೈತ್ರಿಯನ್ನು ಮುರಿಯುವ ಮೂಲಕ ಮತ್ತು ಸಾಮ್ರಾಜ್ಯಶಾಹಿ ಆಧಿಪತ್ಯಕ್ಕೆ ವಿರೋಧವಾಗಿ ಸಾಮೂಹಿಕವಾಗಿ ನಿಂತಿದ್ದ ಜಾಗತಿಕ ದಕ್ಷಿಣದ ದೇಶಗಳ ಅಲಿಪ್ತ ಚಳವಳಿಯನ್ನು ಬುಡಮೇಲು ಮಾಡುವ ಮೂಲಕ ಅವುಗಳನ್ನು ಕುಬ್ಜಗೊಳಿಸುವ  ಪ್ರವೃತ್ತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುತ್ತಿದೆ.

ಯುಎಸ್-ಇಸ್ರೇಲಿ ಮೈತ್ರಿಕೂಟದ ವಿರುದ್ಧ ಇರಾನಿನ ಹೋರಾಟವು ಜಾಗತಿಕ ದಕ್ಷಿಣದ ಸಾರ್ವಭೌಮತ್ವವನ್ನು ಮರಳಿ ಪಡೆಯುವ ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ. ಅದಕ್ಕಾಗಿ ಇರಾನಿನ ಜನತೆಗೆ ತಮ್ಮ ಸೌಹಾರ್ಧವನ್ನು ಜಾಗತಿಕ ದಕ್ಷಿಣದ ಜನತೆಯೇ ವ್ಯಕ್ತಪಡಿಸಬೇಕೇ ವಿನಹ, ಪ್ರಸ್ತುತ ಆಳುವ ಹಿರಿ ಬೂರ್ಜ್ವಾಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಸರ್ಕಾರಗಳಲ್ಲ. ಆಕ್ರಮಣ

ಇದನ್ನೂ ನೋಡಿ: ಬ್ರಿಟಿಷರಎದೆ ನಡುಗಿಸಿದ ಕ್ರಾಂತಿಕಾರಿ: ವಿವೇಕಾನಂದರ ಸಹೋದರ ಭೂಪೇಂದ್ರನಾಥ ದತ್ತ Janashakthi Media

Donate Janashakthi Media