ರಾಜ್ಯಸಭೆ ಸ್ಥಾನ ಕಾಂಗ್ರೆಸ್‌ಗೆ: ಟಿವಿಕೆ ಮುಖ್ಯಸ್ಥ ವಿಜಯ್ ಘೋಷಣೆ

ಚೆನ್ನೈ: ಟಿವಿಕೆ (TVK) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಜೂನ್‌ 3ರಂದು ತಮ್ಮ ಪಕ್ಷದ ಮೈತ್ರಿ ಭಾಗಿಯಾಗಿರುವ ಕಾಂಗ್ರೆಸ್‌ಗೆ ರಾಜ್ಯಸಭೆಯ ಏಕೈಕ ಸ್ಥಾನವನ್ನು ನೀಡುವುದಾಗಿ ಘೋಷಿಸಿದರು. ಏಪ್ರಿಲ್ 23ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೈಲಂ ಕ್ಷೇತ್ರದಿಂದ ಗೆದ್ದ ನಂತರ ಎಐಎಡಿಎಂಕೆ ನಾಯಕ ಸಿ. ವೇ. ಶಣ್ಮುಗಂ ಅವರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ಖಾಲಿಯಾಗಿತ್ತು.

“ಈ ತಿಂಗಳ 18ರಂದು ತಮಿಳುನಾಡಿನಲ್ಲಿ ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಟಿವಿಕೆ ನೇತೃತ್ವದ ಮೈತ್ರಿಯ ಭಾಗವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನು ಮೀಸಲಿಡಲಾಗಿದೆ,” ಎಂದು ವಿಜಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟಿವಿಕೆ ಕಾಂಗ್ರೆಸ್‌ಗೆ ಈ ಸ್ಥಾನ ನೀಡಿದ ನಿರ್ಧಾರವು ರಾಷ್ಟ್ರಮಟ್ಟದ ನಾಯಕರೊಂದಿಗೆ ನಡೆದ ಪ್ರಮುಖ ಸಭೆಗಳ ಹಿನ್ನಲೆಯಲ್ಲಿ ಬಂದಿದೆ. ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಸೇರಿದಂತೆ ಹಲವರು ಕಾರ್ಯಾಲಯದಲ್ಲಿ ಸಭೆ ನಡೆಸಿದ್ದರು.

ಇದನ್ನೂ ಓದಿ: ‘ಕಾಕ್ರೋಚ್ ಜನತಾ ಪಾರ್ಟಿ’: ವ್ಯಂಗ್ಯದಿಂದ ಹುಟ್ಟಿದ ಯುವಕರ ಕೋಪ, ವ್ಯವಸ್ಥೆಗೆ ಸವಾಲು

ಮುಖ್ಯಮಂತ್ರಿ ವಿಜಯ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾದ ಬಳಿಕ ಚೋಡಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ, “ತಮಿಳುನಾಡಿನಿಂದ ರಾಜ್ಯಸಭೆ ಸ್ಥಾನ ದೊರಕುವುದರಿಂದ ಮೇಲ್ಮನೆಯಲ್ಲಿ ಕಾಂಗ್ರೆಸ್ ಹಾಜರಾತಿ ಇನ್ನಷ್ಟು ಬಲವಾಗುತ್ತದೆ,” ಎಂದು ಹೇಳಿದ್ದಾರೆ.

ರಾಜ್ಯದ ವಿಧಾನಸಭೆಯಲ್ಲಿ ಟಿವಿಕೆ ಅತಿ ದೊಡ್ಡ ಪಕ್ಷವಾಗಿರುವುದರಿಂದ, ಅದರ ಮೈತ್ರಿ ಪಕ್ಷ ಕಾಂಗ್ರೆಸ್ ರಾಜ್ಯಸಭೆ ಸ್ಥಾನವನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆಯಿದೆ.

ಚುನಾವಣಾ ಆಯೋಗ ಮೂಲಗಳ ಪ್ರಕಾರ, ನಾಮಪತ್ರ ಸಲ್ಲಿಕೆ ಜೂನ್ 1ರಿಂದ ಆರಂಭವಾಗಿದ್ದು ಜೂನ್ 8ರವರೆಗೆ ಮುಂದುವರಿಯಲಿದೆ. ಜೂನ್ 9ರಂದು ಪರಿಶೀಲನೆ ನಡೆಯಲಿದ್ದು, ಜೂನ್ 11 ಅಂತಿಮ ಹಿಂಪಡೆಯುವ ದಿನವಾಗಿದೆ.

ಜೂನ್ 18ರಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಯಿಂದ ಮತ ಎಣಿಕೆ ಪ್ರಾರಂಭವಾಗಲಿದೆ.

ಇದನ್ನೂ ನೋಡಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್‌ಟಿಎ ವಿರುದ್ಧ ಎಸ್‌ಎಫ್‌ಐ ಪ್ರತಿಭಟನೆ; ಕಾರ್ಯಕರ್ತರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *