ಬೆಂಗಳೂರು: ಜೂನ್ 11ರ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ದಲಿತ ಸಂಘಟನೆ ಸಮಿತಿ ಆಯೋಜಿಸಿರುವ ಪ್ರತಿಭಟನೆ ಹಿನ್ನೆಲೆ, ಕೇಂದ್ರ ವಾಣಿಜ್ಯ ವಲಯ (ಸಿಬಿಡಿ)ಯಲ್ಲಿ ವಾಹನ ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ತಾತ್ಕಾಲಿಕ ನಿರ್ಬಂಧಗಳು ಮತ್ತು ಮಾರ್ಗ ಬದಲಾವಣೆಗಳನ್ನು ಘೋಷಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಿಂದ ಕೆಜಿ ರಸ್ತೆಯ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಬರುವ ವಾಹನಗಳು ಬಲಕ್ಕೆ ತಿರುಗಿ ಮಹಾರಾಣಿ ಅಂಡರ್‌ಪಾಸ್ ರಸ್ತೆ ಮತ್ತು ಪ್ಯಾಲೆಸ್ ಕ್ರಾಸ್ ರಸ್ತೆಯ ಮೂಲಕ ಸಾಗುವಂತೆ ಸೂಚಿಸಲಾಗಿದೆ.
ಫ್ರೀಡಂ ಪಾರ್ಕ್ ಜಂಕ್ಷನ್ ಮತ್ತು ಕನಕದಾಸ ವೃತ್ತದ ನಡುವೆ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಪ್ರತಿಭಟನೆ ಅವಧಿಯಲ್ಲಿ ಈ ಮಾರ್ಗದಲ್ಲಿ ಯಾವುದೇ ವಾಹನಗಳಿಗೆ ಅನುಮತಿ ಇರುವುದಿಲ್ಲ.
ಇದನ್ನೂ ಓದಿ: ಶಿಕ್ಷಣ ನಿಯಂತ್ರಣ ಪ್ರಾಧಿಕಾರ ರಚನೆ – ಸಭೆ ಕರೆಯುವ ಲಿಖಿತ ಭರವಸೆ: ಹೋರಾಟ ಹಿಂಪಡೆದ ಎಸ್‌ಎಫ್‌ಐ
ಖೋಡೆ ಜಂಕ್ಷನ್‌ನಿಂದ ಕೆಆರ್ ವೃತ್ತದ ಕಡೆಗೆ ಸಾಗುವ ವಾಹನ ಸವಾರರು ಟ್ರಾಫಿಕ್ ಗದ್ದಲ ತಪ್ಪಿಸಲು ಓಲ್ಡ್ ಜೆಡಿಎಸ್ ಕಚೇರಿ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ. ನಗರ ರೈಲು ನಿಲ್ದಾಣದಿಂದ ಫ್ಲೈಓವರ್ ರಸ್ತೆಯ ಮೂಲಕ ಫ್ರೀಡಂ ಪಾರ್ಕ್ ಕಡೆಗೆ ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ ಸಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಟ್ರಾಫಿಕ್ ಸುಗಮತೆಗೆ, ಸಾಮಾನ್ಯವಾಗಿ ಏಕಮಾರ್ಗವಾಗಿರುವ ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್ ಜಂಕ್ಷನ್ ವರೆಗೆ ಇರುವ ರಸ್ತೆ ತಾತ್ಕಾಲಿಕವಾಗಿ ದ್ವಿಮಾರ್ಗವಾಗಿ ಪರಿವರ್ತಿಸಲಾಗಿದೆ.
ಗಾಂಧೀನಗರದ ಕಡೆಗೆ ತೆರಳುವ ಪ್ರಯಾಣಿಕರು ಈ ಮಾರ್ಗವನ್ನು ಪರ್ಯಾಯವಾಗಿ ಬಳಸಬಹುದು.
ಇದಲ್ಲದೆ, ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್ ವರೆಗೆ ಹಾಗೂ ವಿ. ರಾಮಚಂದ್ರ ರಸ್ತೆ, ಕಾಲಿದಾಸ ರಸ್ತೆ, ಪ್ಯಾಲೆಸ್ ರಸ್ತೆ ಮತ್ತು ಕೆಜಿ ರಸ್ತೆಯಲ್ಲಿ ಎಲ್ಲಾ ವಿಧದ ವಾಹನಗಳ ಪಾರ್ಕಿಂಗ್‌ನ್ನು ಪೊಲೀಸರು ನಿಷೇಧಿಸಿದ್ದಾರೆ.
ಇದನ್ನೂ ನೋಡಿ: ಹಾಸನ | ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಮೋದಿ ಪ್ರತಿಕೃತಿ ದಹನ Janashakthi Media
