ಕೊಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಕಹಳೆ ಮೊಳಗುತ್ತಿದ್ದಂತೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮಾರ್ಚ್ 20ರಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದು, ಈ ಸಂದರ್ಭದಲ್ಲಿ ಕೇಂದ್ರದ ಸರ್ಕಾರದ ವಿರುದ್ಧ ಪಿತೂರಿಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಧಾನಸಭಾ
ಬಂಗಾಳದ ಜನತೆಗೆ ಬಾಂಗ್ಲಾರ್ ಜೊನ್ನೊ ದಿದಿರ್ 10 ಪ್ರೊಟಿಗ್ಯಾ (ಬಂಗಾಳಕ್ಕಾಗಿ ದೀದಿಯ 10 ಪ್ರತಿಜ್ಞೆಗಳು) ಎಂಬ ಪ್ರಣಾಳಿಕೆಯನ್ನು ಸಿಎಂ ದೀದಿ ಬಿಡುಗಡೆ ಮಾಡಿದ್ದಾರೆ. ವಿಧಾನಸಭಾ
ಇದನ್ನೂ ಓದಿ: ಲಾಕಪ್ ಡೆತ್ ಪ್ರಕರಣ: CPI(M) ತೀವ್ರ ಖಂಡನೆ, ಸ್ವತಂತ್ರ ತನಿಖೆಗೆ ಆಗ್ರಹ
ಬಂಗಾಳಕ್ಕಾಗಿ ದೀದಿಯ ಪ್ರತಿಜ್ಞೆಗಳು
1. ಲಕ್ಷ್ಮಿರ್ ಭಂಡಾರ್ ಹೆಚ್ಚಳ: ಮಹಿಳೆಯರಿಗೆ ನೀಡಲಾಗುವ ಮಾಸಿಕ ಆರ್ಥಿಕ ನೆರವಿನಲ್ಲಿ 500 ರೂಪಾಯಿ ಹೆಚ್ಚಳ. ಇನ್ನು ಮುಂದೆ ಸಾಮಾನ್ಯ ವರ್ಗಕ್ಕೆ 1,500 ರೂ ಮತ್ತು SC/ST ಮಹಿಳೆಯರಿಗೆ 1,700 ರೂ ಲಭ್ಯ.
2. ಯುವ-ಸಾಥಿ ಯೋಜನೆ: ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 1,500 ರೂ ಆರ್ಥಿಕ ಸಹಾಯ.
3. ಬೃಹತ್ ಕೃಷಿ ಬಜೆಟ್: ರೈತರಿಗಾಗಿ 30,000 ಕೋಟಿ ರೂಪಾಯಿಗಳ ಪ್ರತ್ಯೇಕ ಬಜೆಟ್ ಸ್ಥಾಪನೆ ಮತ್ತು ಭೂಹೀನ ರೈತರಿಗೆ ವಿಶೇಷ ಬೆಂಬಲ.
4. ಪ್ರತಿ ಕುಟುಂಬಕ್ಕೂ ಪಕ್ಕಾ ಮನೆ: ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಮನೆ ಮತ್ತು ಕೊಳವೆ ಮೂಲಕ ಶುದ್ಧ ಕುಡಿಯುವ ನೀರಿನ ಭರವಸೆ.
5. ದುವಾರೆ ಚಿಕಿತ್ಸಾ (ಮನೆ ಬಾಗಿಲಿಗೆ ಆರೋಗ್ಯ): ಪ್ರತಿ ಬ್ಲಾಕ್‌ನಲ್ಲಿ ವಾರ್ಷಿಕ ಆರೋಗ್ಯ ಶಿಬಿರಗಳ ಆಯೋಜನೆ.
6. ಶಿಕ್ಷಣ ಕ್ರಾಂತಿ: ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸುವ ಭರವಸೆ.
7. ವ್ಯಾಪಾರದ ದ್ವಾರ ಬಂಗಾಳ: ಬಂದರುಗಳು ಮತ್ತು ಜಾಗತಿಕ ವ್ಯಾಪಾರ ಕೇಂದ್ರದ ಮೂಲಕ ಬಂಗಾಳವನ್ನು ಪೂರ್ವ ಭಾರತದ ಆರ್ಥಿಕ ಹಬ್ ಮಾಡುವುದು.
8. ಸಾಮಾಜಿಕ ಭದ್ರತೆ: ಹಿರಿಯ ನಾಗರಿಕರಿಗೆ ನಿರಂತರ ಪಿಂಚಣಿ ಮತ್ತು ಸುರಕ್ಷತಾ ಜಾಲದ ವಿಸ್ತರಣೆ.
9. ಆಡಳಿತಾತ್ಮಕ ಸುಧಾರಣೆ: ಏಳು ಹೊಸ ಜಿಲ್ಲೆಗಳ ಸ್ಥಾಪನೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಂಖ್ಯೆ ಹೆಚ್ಚಳ.ಅಘೋಷಿತ ರಾಷ್ಟ್ರಪತಿ ಆಳ್ವಿಕೆ .
ಬಂಗಾಳದಲ್ಲಿ ಪ್ರಸ್ತುತ ಅಘೋಷಿತ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.
ಚುನಾವಣೆ ಸೋಲುತ್ತೇವೆ ಎಂಬ ಭಯದಿಂದ ಬಿಜೆಪಿ ಇಡೀ ವ್ಯವಸ್ಥೆಯನ್ನು ಹಳಿತಪ್ಪಿಸಿದೆ, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರ ಸೇರಿ ಕ್ಷೇತ್ರಗಳ ಪುನರ್ವಿಂಗಡಣೆ ಮತ್ತು ಎನ್ಆರ್ಸಿ ಮೂಲಕ ಜನರ ಪೌರತ್ವ ಕಸಿದುಕೊಳ್ಳಲು ಸಂಚು ರೂಪಿಸಿವೆ ಎಂದು ಗಂಭೀರವಾಗಿ ಆರೋಪ ಮಾಡುತ್ತಾ, ಮೋದಿಜೀ, ನೀವು ಬಂಗಾಳದ ಬಗ್ಗೆ ಅಸೂಯೆ ಹೊಂದಿದ್ದೀರಿ ಎಂದು ಕಿಡಿಕಾರಿದರು. ವಿಧಾನಸಭಾ
ಪೌರತ್ವ ಕಸಿದುಕೊಳ್ಳುವ ಸಂಚು ಎಂದ ದೀದಿ
ಬಿಜೆಪಿಯ ಮೇಲೆ ವಾಗ್ದಾಳಿ ಮುಂದುವರಿಸಿದ ದೀದಿ, ಚುನಾವಣೆ ಮುಗಿದ ತಕ್ಷಣ ಎನ್ಆರ್ಸಿ ಮತ್ತು ಜನಗಣತಿಯ ಹೆಸರಿನಲ್ಲಿ ನಿಮ್ಮ ಪೌರತ್ವ ಕಸಿದುಕೊಳ್ಳಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಅವರು ಅಸೂಯೆಯಿಂದ ಇಡೀ ವ್ಯವಸ್ಥೆಯನ್ನು ಹಳಿತಪ್ಪಿಸಿದ್ದಾರೆ. ಆದರೆ ಬಂಗಾಳ ಯಾರಿಗೂ ಬಗ್ಗುವುದಿಲ್ಲ ಎಂದು ಗುಡುಗಿದರು. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಡ್ರೈವ್ ಸಮಯದಲ್ಲಿ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಸಿಎಂ ಮಮತಾ ಆರೋಪಿಸಿದರು.
ಬಂಗಾಳದ ಚುನಾವಣಾ ಕೌಂಟ್ ಡೌನ್
ಎರಡು ಹಂತಗಳಲ್ಲಿ ನಡೆಯಲಿರುವ ಈ ಚುನಾವಣೆ ಬಂಗಾಳದ ಭವಿಷ್ಯವನ್ನು ನಿರ್ಧರಿಸಲಿದೆ. ಒಂದು ಕಡೆ ಬಿಜೆಪಿಯ ಪರಿವರ್ತನಾ ಪಣ, ಇನ್ನೊಂದು ಕಡೆ ಮಮತಾ ಬ್ಯಾನರ್ಜಿಯವರ ಅಭಿವೃದ್ಧಿ ಮತ್ತು ಅಸ್ಮಿತೆಯ ಹೋರಾಟ. ದೀದಿಯ ಈ 10 ಪ್ರತಿಜ್ಞೆಗಳು ಮತದಾರರ ಮನ ಗೆಲ್ಲುತ್ತವೆಯೇ ಅಥವಾ ಬಿಜೆಪಿಯ ತಂತ್ರಗಾರಿಕೆ ಫಲ ನೀಡುತ್ತದೆಯೇ ಎಂಬುದು ಈಗಿನ ದೊಡ್ಡ ಕುತೂಹಲ. ಮೇ 4 ರಂದು ಹೊರಬೀಳಲಿರುವ ಫಲಿತಾಂಶ ಬಂಗಾಳದ ಮುಂದಿನ ಪಥವನ್ನು ನಿರ್ಧರಿಸಲಿದೆ.
ಇದನ್ನೂ ನೋಡಿ: “ಯುದ್ಧದಿಂದ ಅಡುಗೆಮನೆಗೆ: ಹೊರೆ ಯಾರಿಗೆ?” Janashakthi Media
