ಏಪ್ರಿಲ್‌ನಲ್ಲಿ ಮೂರನೇ ಸುತ್ತಿನ ವಿಶೇಷ ತೀವ್ರ ಪರಿಷ್ಕರಣೆ: ಚುನಾವಣಾ ಆಯೋಗ

ನವದೆಹಲಿ: ಏಪ್ರಿಲ್‌ನಲ್ಲಿ ಮೂರನೇ ಸುತ್ತಿನ ವಿಶೇಷ ತೀವ್ರ ಪರಿಷ್ಕರಣೆ (SIR)ಯನ್ನು ಪ್ರಾರಂಭಿಸಲು ಕೇಂದ್ರ ಚುನಾವಣಾ ಆಯೋಗವು ಯೋಜಿಸುತ್ತಿದೆ. ಮೊದಲ ಹಂತದಲ್ಲಿ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಿದ್ದು, ಎರಡನೇ ಹಂತದಲ್ಲಿ ಒಂದು ಡಜನ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದೆ.
ಅದರಂತೆ ಮೂರನೇ ಸುತ್ತಿನ SIR ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ, ಫೆಬ್ರವರಿ 19ರಂದು ಚುನಾವಣಾ ಆಯೋಗವು ಕರ್ನಾಟಕ ಸೇರಿದಂತೆ ಉಳಿದ 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಚುನಾವಣಾ ಆಯೋಗವು “SIR ಪ್ರಕ್ರಿಯೆಯು ಏಪ್ರಿಲ್ 2026ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ” ಎಂದು ಹೇಳಿದೆ. ಏಪ್ರಿಲ್‌

SIR ಪೂರ್ವಸಿದ್ಧತಾ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಿರುವ ಚುನಾವಣಾ ಆಯೋಗ, ಪ್ರಕ್ರಿಯೆಯಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ತಿಳಿಸಿದೆ. ಅಕ್ಟೋಬರ್ 27, 2025 ರಂದು ಚುನಾವಣಾ ಆಯೋಗವು SIRನ 2ನೇ ಹಂತವನ್ನು ಘೋಷಿಸಿತ್ತು. ಏಪ್ರಿಲ್‌

ಇದನ್ನೂ ಓದಿ: ಶಿವಾಜಿ ಯಾರು? ಜನತೆಯ ನಿಜ ನಾಯಕ

ಬಿಹಾರ ಹೊರತುಪಡಿಸಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರೆ ಬರೆಯಲಾಗಿತ್ತು. ಆದಾಗ್ಯೂ, ಕೇವಲ 12 ರಾಜ್ಯಗಳಲ್ಲಿ SIR ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಈಗ ಮೂರನೇ ಹಂತದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಬಾಕಿ ಇರುವ ಎಲ್ಲಾ 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮೂರನೇ ಹಂತಕ್ಕೆ ಸಿದ್ಧರಾಗುವಂತೆ ಪತ್ರ ಬರೆಯಲಾಗಿದ್ದರೂ, ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ. ಈಗಾಗಲೇ 60 ಕೋಟಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, 39 ಕೋಟಿ ಮತದಾರರ ದಾಖಲೆಗಳನ್ನು ಪರಿಶೀಲಿಸಬೇಕಿದೆ.

ಪತ್ರದಲ್ಲಿ ಉಲ್ಲೇಖಿಸಿರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು:

ಕೇಂದ್ರ ಚುನಾವಣಾ ಆಯೋಗವು ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆಗೆ ಸಿದ್ದತೆ ಆರಂಭಿಸುವಂತೆ ಎಲ್ಲಾ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ SIR ಪ್ರಕ್ರಿಯೆ ಆರಂಭವಾಗಲಿದೆ.

ಮಣಿಪುರ, ಉತ್ತರಾಖಂಡ್, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಹಾರಾಷ್ಟ್ರ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರ ಮತ್ತು ತೆಲಂಗಾಣ ರಾಜ್ಯಗಳು ಮತ್ತು ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಲಡಾಖ್ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೂರನೇ ಹಂತದ SIR ಪ್ರಕ್ರಿಯೆ ನಡೆಯಲಿದೆ.

ಗಮನಾರ್ಹವಾಗಿ ಮೂರನೇ ಹಂತದ SIR ಪ್ರಕ್ರಿಯೆ ಜನಗಣತಿ 2027ರ ಮನೆ ಪಟ್ಟಿ ಹಂತದೊಂದಿಗೆ ಹೊಂದಿಕೆಯಾಗುತ್ತದೆ. ದೆಹಲಿ, ಹರಿಯಾಣ ಮತ್ತು ಒಡಿಶಾದಂತಹ ಕೆಲವು ರಾಜ್ಯಗಳು ಈಗಾಗಲೇ ತಮ್ಮ ಮನೆ ಪಟ್ಟಿ ಸಮಯಸೂಚಿಯನ್ನು ತಿಳಿಸಿರುವ ಕಾರಣ, ಈ ಸಮಯಸೂಚಿಗಳನ್ನು ಪರಿಷ್ಕರಿಸಬೇಕಾಗಬಹುದು ಅಥವಾ SIRನ ಮುಂದಿನ ಹಂತದಲ್ಲಿ ಸೇರಿಸಲು ಚುನಾವಣಾ ಆಯೋಗವನ್ನು
ವಿನಂತಿಸಬೇಕಾಗಬಹುದು.

ಮನೆ ಪಟ್ಟಿ ದಿನಾಂಕಗಳನ್ನು ಇನ್ನೂ ತಿಳಿಸದ ಕೆಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜೂನ್-ಜುಲೈ ನಂತರ ಮೊದಲ ಹಂತದ ಜನಗಣತಿಯನ್ನು ನಿಗದಿಪಡಿಸಲು ಆಯ್ಕೆ ಮಾಡಬಹುದು ಅಥವಾ SIRನ್ನು ನಂತರದ ಹಂತದಲ್ಲಿ ನಡೆಸಬೇಕೆಂದು ವಿನಂತಿಸಬಹುದು.

ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಶ್ನಿಸಿ ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ಆದರೆ SIR ಪ್ರಕ್ರಿಯೆಗೆ ಅಡ್ಡಿ ಸಲ್ಲದು ಎಂದು ಸುಪ್ರೀಂಕೋರ್ಟ್‌ ತಾಕೀತು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ನೋಡಿ: ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media

Donate Janashakthi Media

Leave a Reply

Your email address will not be published. Required fields are marked *