ಬೆಂಗಳೂರು: ಜಂತರ್ ಮಂತರ್‌ನಲ್ಲಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ನಾಯಕ ಟಿ.ಜಿ. ಮೋಹನ್‌ದಾಸ್ ಅವರ ಹೇಳಿಕೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ತೀವ್ರವಾಗಿ ಖಂಡಿಸಿದೆ. ಈ ಕುರಿತು ಸಂಘಟನೆಯ ಅಧ್ಯಕ್ಷೆ ಚಂದ್ರಕುಮಾರಿ ಮತ್ತು ಪ್ರಧಾನ ಕಾರ್ಯದರ್ಶಿ ದೇವಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೋಹನ್‌ದಾಸ್
ಜಂತರ್ ಮಂತರ್ ಸುತ್ತ ಕರ್ಫ್ಯೂ ಜಾರಿಗೊಳಿಸಬೇಕು ಹಾಗೂ “ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲುತ್ತಿದ್ದೆ” ಎಂದು ಮೋಹನ್‌ದಾಸ್ ಹೇಳಿದ್ದಾರೆ ಎನ್ನಲಾಗಿರುವ ಹೇಳಿಕೆ ಅತ್ಯಂತ ಪ್ರಚೋದನಕಾರಿ ಮತ್ತು ಖಂಡನೀಯ ಎಂದು ಎಐಡಿಡಬ್ಲ್ಯೂಎ ಹೇಳಿದೆ.
ಇದರ ಜೊತೆಗೆ, ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವ ಜಾತ್ಯತೀತ ಮನೋಭಾವದ ಯುವತಿಯರ ಕುರಿತು ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಸಮರ್ಥಿಸುವ ರೀತಿಯಲ್ಲಿ ಅವರು ಮಾತನಾಡಿರುವುದು ಅತ್ಯಂತ ಹೇಯ ಮತ್ತು ಅಸಹ್ಯಕರವಾಗಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಇವು ಸಾಮಾನ್ಯ ರಾಜಕೀಯ ಟೀಕೆಗಳಲ್ಲ. ವಿದ್ಯಾರ್ಥಿಗಳ ವಿರುದ್ಧ ನೇರವಾಗಿ ಹಿಂಸೆಗೆ ಪ್ರಚೋದನೆ ನೀಡುವ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸಹಜೀಕರಿಸುವ ಅಪಾಯಕಾರಿ ಹೇಳಿಕೆಗಳು ಎಂದು ಎಐಡಿಡಬ್ಲ್ಯೂಎ ಆರೋಪಿಸಿದೆ. ಇಂತಹ ಹೇಳಿಕೆಗಳು ಮಹಿಳಾ ವಿರೋಧಿ ಮತ್ತು ಸರ್ವಾಧಿಕಾರಿ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಎಂದು ಚಂದ್ರಕುಮಾರಿ ಮತ್ತು ದೇವಿ ಹೇಳಿದ್ದಾರೆ. ಮೋಹನ್‌ದಾಸ್
ಇದನ್ನೂ ಓದಿ : ಉತ್ತರ ಬಂಗಾಳದ ಚಹಾ ಉದ್ಯಮಕ್ಕೆ ಭಾರಿ ಬಿಕ್ಕಟ್ಟು!
ಶಾಂತಿಯುತವಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಕೊಲ್ಲಬೇಕು ಎಂಬ ಕರೆ ಸಂವಿಧಾನ ಖಾತರಿಪಡಿಸಿರುವ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ. ಮಹಿಳೆಯರು ಲೈಂಗಿಕ ದೌರ್ಜನ್ಯವನ್ನು ಬಯಸುತ್ತಾರೆ ಅಥವಾ ಅದನ್ನು ಅನುಭವಿಸುವುದನ್ನು ಇಷ್ಟಪಡುತ್ತಾರೆ ಎಂಬ ರೀತಿಯ ಹೇಳಿಕೆಗಳು ಅತ್ಯಾಚಾರ ಸಂಸ್ಕೃತಿಯನ್ನು ಉತ್ತೇಜಿಸುವುದಲ್ಲದೆ, ಮಹಿಳೆಯರ ಘನತೆ ಮತ್ತು ಸುರಕ್ಷಿತ ಬದುಕಿನ ಹಕ್ಕಿಗೂ ಧಕ್ಕೆ ತರುತ್ತವೆ ಎಂದು ಸಂಘಟನೆ ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಿ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಐಡಿಡಬ್ಲ್ಯೂಎ ಆಗ್ರಹಿಸಿದೆ.
ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪ್ರಜಾಪ್ರಭುತ್ವ ಪರ ಧ್ವನಿಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾತ್ಮಕ ವಾತಾವರಣವನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸುವಂತೆ ಸಂಘಟನೆಯ ಎಲ್ಲ ಘಟಕಗಳಿಗೆ ಕರೆ ನೀಡಲಾಗಿದೆ ಎಂದು ಅಧ್ಯಕ್ಷೆ ಚಂದ್ರಕುಮಾರಿ ಮತ್ತು ಪ್ರಧಾನ ಕಾರ್ಯದರ್ಶಿ ದೇವಿ ತಿಳಿಸಿದ್ದಾರೆ.
“ಕೊಲೆ ಕರೆಗಳು ಮತ್ತು ಲೈಂಗಿಕ ಹಿಂಸೆಯ ಸಮರ್ಥನೆ ಕುರಿತು ಸರ್ಕಾರ ಹಾಗೂ ಅಧಿಕಾರಿಗಳ ಮೌನವು ಇಂತಹ ಹೇಳಿಕೆಗಳಿಗೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ. ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಇಂತಹ ದಂಡಮುಕ್ತತೆಗೆ ಅವಕಾಶ ಇರಬಾರದು” ಎಂದು ಅವರು ಒತ್ತಾಯಿಸಿದ್ದಾರೆ.ಮೋಹನ್‌ದಾಸ್
ಇದನ್ನೂ ನೋಡಿ : NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi
