ಹಾವೇರಿ: ಇಲ್ಲಿಯ ನಗರಸಭೆ ಬಳಿ ಮಾರುಕಟ್ಟೆ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ್ದ ಮಹಾತ್ಮ ಗಾಂಧೀಜಿ ಪುತ್ಥಳಿಯು ಭಗ್ನಗೊಂಡು ಬಿದ್ದಿದ್ದು, ಈ ಬಗ್ಗೆ ಶಹರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಇದೇ ಸ್ಥಳದಲ್ಲಿದ್ದ ಪುತ್ಥಳಿಯು ಪೂರ್ಣ ಪ್ರಮಾಣದಲ್ಲಿ ನೆಲಕ್ಕೆ ಬಿದ್ದಿದೆ. ಪುತ್ಥಳಿ ಗಮನಿಸಿದ್ದ ಸ್ಥಳೀಯರು, ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಬೈಕ್ ಟ್ಯಾಕ್ಸಿ ಚಾಲಕರಿಗೆ ಮತ್ತೊಂದು ಶಾಕ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರ್ಕಾರ ಸಿದ್ಧ
ಸ್ಥಳಕ್ಕೆ ಬಂದ ಪೊಲೀಸರು, ಪುತ್ಥಳಿಯನ್ನು ಸುರಕ್ಷಿತವಾಗಿ ಇರಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
‘ಗಾಂಧೀಜಿ ಪುತ್ಥಳಿಯು ಆಕಸ್ಮಿಕವಾಗಿ ಬಿದ್ದಿದೆಯಾ? ಅಥವಾ ಯಾರಾದರೂ ಕಿತ್ತು ಹಾಕಿದ್ದಾರೆಯೂ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.
ಇದನ್ನೂ ನೋಡಿ: ಬಗೆದಷ್ಟೂ..ಮುಗಿಯದ SIR ಬಗ್ಗಡ : ದೇಶದ ಜನರನ್ನೇ ಪರದೇಶಿಗಳನ್ನಾಗಿಸುತ್ತಿದೆ Janashakthi Media
