ಲೇಬರ್ ಕೋಡ್ ವಿರುದ್ಧ ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ ಮನವಿ

ಬೆಂಗಳೂರು: ಮಾರ್ಚ್ 6 ರಂದು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ಕಟ್ಟಡ ಕಾರ್ಮಿಕರ‌ ಕಲ್ಯಾಣಕ್ಕಾಗಿ ಮೀಸಲಾದ ನಿಧಿಯಿಂದ ಶ್ರಮಿಕ ವಸತಿ ಶಾಲೆ ಹಾಗೂ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ಹಾಗೂ‌ ಹೊಸ ಲೇಬರ್‌ ಕೋಡ್ ಗಳಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಬದುಕಿನ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಆಗ್ರಹಿಸಿ ರಾಜ್ಯಾದ್ಯಂತ ವಿಧಾನ ಸಭಾ‌ ಸ್ಪೀಕರ್, ಸಚಿವರು ಹಾಗೂ ಶಾಸಕರುಗಳಿಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಮನವಿಗಳನ್ನು ಸಲ್ಲಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಸಿಐಟಿಯು ನೇತೃತ್ವದಲ್ಲಿ ದ.ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದ ಶಾಸಕರು ಹಾಗು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್, ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಮಂಕಾಳು ಎಸ್.ವೈದ್ಯ, ಟಿ.ನರಸೀಪುರ ಕ್ಷೇತ್ರದ ಶಾಸಕರು ಸಚಿವರಾದ ಎಚ್.ಮಹಾದೇವಪ್ಪ, ಸೇಡಂ ಶಾಸಕರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ್, ಆಳಂದ ಶಾಸಕರು ಹಾಗೂ ನೀತಿ ಆಯೋಗದ ಉಪಾಧ್ಯಕ್ಷ .ಬಿ.ಆರ್.ಪಾಟೀಲ್ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ,ಚಾಮರಾಜ ಕ್ಷೇತ್ರದ ಕೆ.ಹರೀಶ ಗೌಡ, ಕೃಷ್ಣರಾಜ ಕ್ಷೇತ್ರದ  ಶಾಸಕ ಶ್ರೀ ವತ್ಸ್, ಕೊಪ್ಪಳ ‌ಕ್ಷೇತ್ರದ ಶಾಸಕ ರಾಘವೇಂದ್ರ ಇಟ್ನಾಳ್, ದೇವದುರ್ಗ ಶಾಸಕಿ ಶ್ರೀಮತಿ ‌ಕರೇಮ್ಮ.

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹೊಸಪೇಟೆ ಶಾಸಕ ಎ.ಆರ್.ಗವಿಯಪ್ಪ, ಕೂಡ್ಲಿಗಿ ಶಾಸಕರಾದ ಡಾ; ಶ್ರೀನಿವಾಸ, ರಾಮದುರ್ಗ ಕ್ಷೇತ್ರದ ಶಾಸಕರಾದ ಅಶೋಕ ಪಟ್ಟಣ ಶೆಟ್ಟಿ,ಕುಂದಾಪುರ ಶಾಸಕರಾದ ಕಿರಣ ಕುಮಾರ್ ಕೊಡ್ಗಿ, ಬೈಂದೂರು ಶಾಸಕರಾ ಗುರುರಾಜ ಗಂಟಿ, ಟಿ.ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜ್,ಬೀದರ್ ದಕ್ಷಿಣದ ಡಾ; ಶೈಲೇಂದ್ರ ಚಲ್ದಲೆ, ವಿಧಾನ ಪರಿಷತ್ ಸದಸ್ಯ ರಾದ ಡಾ ಭೀಮರಾವ್ ಪಾಟೀಲ್,ಹುಕ್ಕೇರಿ ಶಾಸಕ ಗಣೇಶ ಹುಕ್ಕೇರಿ,ಅಪ್ಜಲ್ ಪುರ ಶಾಸಕ ಎಂವೈ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮಲ್ಲಿಮಟ್.

ಇದನ್ನೂ ಓದಿ: ಎ.ಕೆ. ಗೋಪಾಲನ್: ಸ್ವಾತಂತ್ರ್ಯ ಹೋರಾಟದಿಂದ ಕ್ರಾಂತಿಕಾರಿ ರಾಜಕೀಯದವರೆಗೆ

ಹುಮ್ನಾಬಾದ್ ಶಾಸಕ ಡಾ ಸಿದ್ಧಲಿಂಗ ಪಾಟೀಲ್ ಇದಲ್ಲದೆ ಹಗರಿಬೊಮ್ಮನಹಳ್ಳಿ,ಕಾಗವಾಡ, ಕ್ಷೇತ್ರದ ಶಾಸಕರು ಸೇರಿ ಇದುವರೆಗೂ ಮುವತ್ತಕ್ಕಿಂತ ಅಧಿಕ ಶಾಸಕರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ, ನಿಯೋಗ‌ ಮೂಲಕ  ಬಜೆಟ್ ನಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರುವ ನಿಧಿ ದುರ್ಬಳಕೆ ಹಾಗೂ ಹೊಸ ಲೇಬರ್ ಕೋಡ್ ಗಳಿಂದ ಆಗುತ್ತಿರುವ ಪರಿಣಾಮಗಳನ್ನು ತಡೆಗಟ್ಟಲು ಶಾಸಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕೆಂದು  ಎರಡು ಮನವಿಗಳನ್ನು ಪ್ರತಿ ಶಾಸಕರಿಗೆ ಸಲ್ಲಿಸಿ ಮನವರಿಕೆ ಮಾಡಿಕೊಡಲಾಗಿದೆ.

ಫೆಡರೇಶನ್ ಪರವಾಗಿ ಮನವಿಗಳನ್ನು ಸ್ವೀಕರಿಸಿದ ಸ್ಪೀಕರ್ ,ಸಚಿವರು,ಶಾಸಕರು ಪರಿಷತ್ ಸದಸ್ಯರು ಇಂದಿನಿಂದ  ಪುನಃ ಆರಂಭಗೊಳ್ಳುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿ  ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸುತ್ತವೆ ಆ ಮೂಲಕ ತಮ್ಮ ತಮ್ಮ ಮತ ಕ್ಷೇತ್ರದ ಮತದಾರರು ಆಗಿರುವ ಕಾರ್ಮಿಕರು ನೀಡಿರುವ ಈ ಮನವಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.

ರಾಜ್ಯದ ನಿರ್ಮಾಣ ವಲಯದ ಕಾರ್ಮಿಕರು ಮಂಡಿಸಿರುವ ಬೇಡಿಕೆಗಳು ಕುರಿತು ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಏಪ್ರಿಲ್20 ರಿಂದ ನಮ್ಮ ಸಂಘಟನೆ ಸ್ವತಂತ್ರವಾಗಿ ಇಲ್ಲವೇ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ನಲ್ಲಿ ಸಾವಿರಾರು ಕಾರ್ಮಿಕರ ಅನಿರ್ಧಿಷ್ಟ ಧರಣಿ ಆರಂಭಿಸಲು ಯೋಜನೆ ರೂಪಿಸಿದೆ ಎಂದು ಈ‌ಮೂಲಕ‌ ಎಚ್ಚರಿಕೆ ನೀಡಿದೆ.

ಮಾರ್ಚ್ 21-22 ರಂದು ಶಾಸಕರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಸಮಿತಿಗಳಿಗೂ ಅದರ ನಾಯಕರುಗಳಿಗೂ ಹಾಗೂ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಎಲ್ಲ ಜನಪ್ರತಿನಿಧಿಗಳಿಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಸಿಐಟಿಯು ಕೃತಜ್ಞತೆಗಳನ್ನು ಸಲ್ಲಿಸಿದೆ.

ಇದನ್ನೂ ನೋಡಿ: “ಕರ್ನಾಟಕದಲ್ಲಿ SIR: ಬೂತ್ ಮಟ್ಟದ ಜಾಗೃತಿ – ವಂಚನೆ ತಡೆಯುವ ಹೊಣೆ ಯಾರದ್ದು?” Janashakthi Media

Donate Janashakthi Media

Leave a Reply

Your email address will not be published. Required fields are marked *