ರಾಯಚೂರು: ದೇವದುರ್ಗ ಕ್ಷೇತ್ರದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಟೋಲ್‌ಗಳನ್ನು ಕೂಡಲೇ ತೆರವು ಮಾಡುವಂತೆ ಆಗ್ರಹಿಸಿ ಜೆಡಿಎಸ್ ಶಾಸಕಿ ಜಿ. ಕರೆಮ್ಮ ನಾಯಕ ಕೆಡಿಪಿ ಸಭೆಯಲ್ಲೇ ಧರಣಿ ನಡೆಸಿದ ಘಟನೆ ಜುಲೈ 18ರಂದು ನಡೆಯಿತು.
ಜಿ.ಪಂ. ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಟೋಲ್ ಬಂದ್ ಮಾಡಿಸುವವರೆಗೆ ನಾನು ಏಳುವುದಿಲ್ಲ ಎಂದು ಕುಳಿತುಬಿಟ್ಟರು. ಅವೈಜ್ಞಾನಿಕ
ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದಲ್ಲಿ ಕೇವಲ 40 ಕಿ.ಮೀ. ಅಂತರದಲ್ಲಿ ಎರಡು ಟೋಲ್ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಬೆಂಬಲಿಗರು, ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ವ್ಯಾಪಾರಿಗಳಿಗೆ ಮತ್ತೊಂದು ಶಾಕ್: ಯುಪಿಐ ಬಿಟ್ಟು ಕ್ಯಾಶ್ ಪಡೆದರೂ ತೆರಿಗೆ ಅನ್ವಯ
ಜನರಿಗೆ ತೊಂದರೆ ಆಗುವುದನ್ನು ಪ್ರಶ್ನಿಸಿದರೆ ಈ ರೀತಿ ಮಾಡಿ ಕಿರುಕುಳ ಕೊಡುತ್ತಿದ್ದಾರೆ. ದಲಿತ ಮಹಿಳೆ ಎಂದೂ ಲೆಕ್ಕಿಸುತ್ತಿಲ್ಲ. ನಮ್ಮವರ ವಿರುದ್ಧ 20 ನಿಮಿಷದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರು ಹಾಗೂ ಇತರ ಶಾಸಕರು ಮನವೊಲಿಸಿದರೂ ಕರೆಮ್ಮ ನಾಯಕ ಕೇಳಲಿಲ್ಲ. ಕೊನೆಗೆ ಸಚಿವರು ನಾನು ಲೋಕೋಪಯೋಗಿ ಸಚಿವರ ಜತೆ ಮಾತನಾಡುತ್ತೇನೆ. ಅಲ್ಲಿವರೆಗೆ ತಾತ್ಕಾಲಿಕ ವಾಗಿ ಟೋಲ್ ಬಂದ್ ಮಾಡಿಸುವಂತೆ ಡಿಸಿಗೆ ನಿರ್ದೇಶನ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕರೆಮ್ಮ, ನಾನು ಮರಳಿ ಹೋಗುವುದರೊಳಗೆ ಟೋಲ್ ಬಂದ್ ಆಗಿರಬೇಕು. ಇಲ್ಲವಾದರೆ ರಸ್ತೆಯಲ್ಲೇ ಧರಣಿ ಮಾಡುವುದಾಗಿ ಎಚ್ಚರಿಸಿದರು.
ಇದನ್ನೂ ನೋಡಿ: ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ Janashakthi Media #WorldSnakeDay
