ಪಿಎಸ್ಐ ನೇಮಕಾತಿ ಹಗರಣ: ಆರ್.ಡಿ.ಪಾಟೀಲಗೆ ಮಧ್ಯಂತರ ‌ಜಾಮೀನು

ಕಲಬುರಗಿ: ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆಗಿರುವ ಆರ್.ಡಿ.ಪಾಟೀಲಗೆ ನವೆಂಬರ್‌ 19ರಂದು ಮೂರು ವಾರಗಳ ಮಧ್ಯಂತರ ‌ಜಾಮೀನು ಮಂಜೂರು ಮಾಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

‘ಮಗಳ‌‌ ಮದುವೆ‌ ಸಮಾರಂಭದ ಧಾರ್ಮಿಕ ‌ವಿಧಿಗಳನ್ನು ಡಿಸಂಬರ್.4ರೊಳಗೆ ಪೂರೈಸಬೇಕಿದ್ದು, ಮಧ್ಯಂತರ ಜಾಮೀನು ಮಂಜೂರು ‌ಮಾಡಬೇಕು’ ಎಂದು ಆರೋಪಿ ಆರ್.ಡಿ.ಪಾಟೀಲ ಸುಪ್ರೀಂಕೋರ್ಟ್ ಗೆ ಅರ್ಜಿ ‌ಸಲ್ಲಿಸಿದ್ದರು. ನೇಮಕಾತಿ

ಇದನ್ನೂ ಓದಿ: ಬೆಂಗಳೂರು | ಎಟಿಎಂ ಹಣ ತುಂಬುವ ವಾಹನವನ್ನೂ ಅಡ್ಡಗಟ್ಟಿ ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ₹7ಕೋಟಿ ದರೋಡೆ

ಅರ್ಜಿ ‌ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ.ವಿನೋದ ಚಂದ್ರ ಅವರ‌ ಏಕ ಸದಸ್ಯ‌ ನ್ಯಾಯಪೀಠವು, ‘ಪ್ರಕರಣದಲ್ಲಿ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ‌ದೊಡ್ಡ ಸಂಖ್ಯೆಯಲ್ಲಿ ಸಾಕ್ಷಿದಾರರಿರುವ ಕಾರಣ ‌ವಿಚಾರಣೆಗೆ ಇನ್ನಷ್ಟು ‌ಕಾಲಾವಕಾಶ ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಅರ್ಜಿದಾರರಿಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು ಎಂದು ಹೇಳಿದೆ.

ಜಾಮೀನು ‌ಅವಧಿ‌ ಮುಗಿದ ಬಳಿಕ ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದೂ ಸುಪ್ರೀಂಕೋರ್ಟ್, ‌ನಿರ್ದೇಶನ ನೀಡಿದೆ.

ಇದನ್ನೂ ನೋಡಿ: ನಿರಂಜನ ಜನಮುಖಿ ಬರಹಗಾರ: ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *