ನಾವು ಬಡವರಿರಬಹುದು ಆದರೆ ಘನತೆಯುಳ್ಳವರು, ಸಂಘಟಿತರು; ಸತ್ಯ ನಮ್ಮ ಕಡೆ ಇದೆ, ನಾವು ಶ್ರೀಮಂತ ಶಾಸಕರ ಜನವಿರೋಧಿ ಸಂಚನ್ನು ಸೋಲಿಸುತ್ತೇವೆ
ಬೆಂಗಳೂರು: ನಗರದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರವನ್ನು ನಿಷೇಧಿಸಲು ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ರೂಪಿಸುತ್ತಿರುವ ನೀತಿಯನ್ನು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ತೀವ್ರವಾಗಿ ಖಂಡಿಸುತ್ತದೆ. ಈ ನೀತಿ ಕೇವಲ ಅಕ್ರಮ ಹಾಗೂ ಸಂವಿಧಾನ ವಿರೋಧಿಯಷ್ಟೇ ಅಲ್ಲ, ನಗರವನ್ನು ಬಡವರಿಂದ ಖಾಲಿ ಮಾಡಿ ಶ್ರೀಮಂತರಿಗೆ ಮೀಸಲು ಮಾಡುವ ಅನ್ಯಾಯಕರ ಸಂಚು !
1. ಕಾನೂನು ಜಾರಿಗೆ ತರದೇ ವ್ಯಾಪಾರಿಗಳಿಗೆ ಶಿಕ್ಷೆ
“ಬೀದಿ ವ್ಯಾಪಾರಿಗಳು (ಜೀವನೋಪಾಯದ ರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ, 2014”ರ ಸೆಕ್ಷನ್ 2(ಎಲ್) ಪ್ರಕಾರ, ಬೀದಿ, ಫುಟ್ಪಾತ್, ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ವಸ್ತುಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವ ಯಾರನ್ನಾದರೂ “ಬೀದಿ ವ್ಯಾಪಾರಿ” ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಕಾಯ್ದೆ ಜಾರಿಗೆ ಬಂದಿದ್ದು ದಶಕ ಕಳೆದರೂ, ಸಮಗ್ರ ಸಮೀಕ್ಷೆಗಳು ಪೂರ್ಣಗೊಂಡಿಲ್ಲ, ಎಲ್ಲ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳು ನೀಡಲಾಗಿಲ್ಲ ಮತ್ತು ಸಾವಿರಾರು ಜನರು ಪಟ್ಟಿಯಿಂದ ಹೊರಗಿದ್ದಾರೆ. ನಿಷೇಧ
ಆಡಳಿತ ಹಾಗು ವಿರೋಧ ಪಕ್ಷದ ಸಂಸದರು ಇರುವ ಕೇಂದ್ರ ಮಟ್ಟದ ನಗರಾಭಿವೃದ್ಧಿ ಕುರಿತ ಸಂಸದೀಯ ಸ್ಥಾಯಿ ಸಮಿತಿ (Parliamentary Standing Committee on Urban Development) ಕೂಡ ಈ ಕಾಯ್ದೆ ಸರಿಯಾಗಿ ಜಾರಿಯಾಗಿಲ್ಲವೆಂದು ತನ್ನ ವರದಿಯಲ್ಲಿ August 6, 2021 ರಂದು ಸ್ಪಷ್ಟವಾಗಿ ಹೇಳಿದೆ. ಸರ್ಕಾರ ತನ್ನ ಕರ್ತವ್ಯವನ್ನು ನಿಭಾಯಿಸದಿದ್ದರೂ ವ್ಯಾಪಾರಿಗಳಿಗೆ ಶಿಕ್ಷೆ ವಿಧಿಸುವುದು ಸಂಪೂರ್ಣ ಅನ್ಯಾಯಕರವಾಗಿದೆ. ನಿಷೇಧ
ಇದನ್ನೂ ಓದಿ: ತ್ರಿಪುರಾ| ADC ಚುನಾವಣೆ ದಿನಾಂಕ ಬದಲಾವಣೆ: ಏಪ್ರಿಲ್ 12ರಂದು ಮತದಾನ
2. ಸಂಪೂರ್ಣ ನಿಷೇಧ ಕಾನೂನು ವಿರೋಧಿ
ರಸ್ತೆಗಳ ವರ್ಗಗಳನ್ನು ಆಧರಿಸಿ ಸಂಪೂರ್ಣವಾಗಿ ಬೀದಿ ವ್ಯಾಪಾರವನ್ನು ನಿಷೇಧಿಸುವುದು ಕಾನೂನಿಗೆ ವಿರುದ್ಧವಾಗಿದೆ. ಈಗಾಗಲೇ ಹೇಳಿದಹಾಗೆ ಬೀದಿ ವ್ಯಾಪಾರಿಗಳ ಕಾಯ್ದೆಯಲ್ಲಿ ರಸ್ತೆಬದಿಯಲ್ಲಿ ವ್ಯಾಪಾರ ಮಾಡಬಹುದು ಎಂದು ಸ್ಪಷ್ಟವಾಗಿದೆ. ಜೊತೆಗೆ, ಕಾಯ್ದೆ ಪ್ರಕಾರ ಎಲ್ಲಿ ವ್ಯಾಪಾರ ಮಾಡಬಹುದು , ಮಾಡಬಾರದು ಎಂಬುದರ ಬಗ್ಗೆ ಟೌನ್ ವೆಂಡಿಂಗ್ ಸಮಿತಿಗಳಲ್ಲಿ (TVC) ತೀರ್ಮಾನ ತೆಗೆದುಕೊಳ್ಳಬೇಕು. ನಿಷೇಧ
ದುರಾದ್ರಷ್ಟವಷಾತ್ , ಹೊಸ ಐದು ನಗರಪಾಲಿಕೆಗಳು ಆದಮೇಲೆ ಇನ್ನು ಸಹ ಪಟ್ಟಣವಾಯ್ಪಾರ ಸಮಿತಿ ರಚನೆಯಾಗಿಲ್ಲ. Supreme Court of India ಹಲವಾರು ತೀರ್ಪುಗಳಲ್ಲಿ ಬೀದಿ ವ್ಯಾಪಾರವು ಜೀವನೋಪಾಯದ ಮೂಲಭೂತ ಹಕ್ಕಿನ ಭಾಗವೆಂದು ಸ್ಪಷ್ಟಪಡಿಸಿದ್ದು, ಪಾದಚಾರಿಗಳು ಮತ್ತು ವ್ಯಾಪಾರಿಗಳು ಪರಸ್ಪರ ವಿರೋಧಿಗಳಲ್ಲ, ಇಬ್ಬರ ಹಕ್ಕುಗಳನ್ನೂ ಸಮನ್ವಯಗೊಳಿಸಬೇಕು ಎಂದು ಹೇಳಿದೆ.
3. ಬೀದಿ ವ್ಯಾಪಾರಿಗಳು ನಗರವನ್ನು ಸುರಕ್ಷಿತವಾಗಿಸುತ್ತಾರೆ
ಬೀದಿ ವ್ಯಾಪಾರಿಗಳು ಸಮಸ್ಯೆಯಲ್ಲ, ಪರಿಹಾರದ ಭಾಗ. ನಾವು ಬೀದಿಲಿ ಇರುವುದರಿಂದ ಬೀದಿಗಳನ್ನು ಜೀವಂತವಾಗಿಡುವುದರಿಂದ ಚೈನ್ ಕಳವು, ಲೈಂಗಿಕ ಕಿರುಕುಳ ಮುಂತಾದ ಅಪರಾಧಗಳನ್ನು ಕಡಿಮೆ ಮಾಡುತ್ತಾರೆ. ನಿಷೇಧ
ಬೀದಿಯಲ್ಲಿ ಜನರ ಸಂಚಾರವನ್ನು ಹೆಚ್ಚಿಸುವ ಮೂಲಕ ಮಹಿಳೆಯರಿಗೆ ಮತ್ತು ಸಾಮಾನ್ಯ ನಾಗರಿಕರಿಗೆ ಸುರಕ್ಷತೆ ಒದಗಿಸುತ್ತಾರೆ. ನಾವು ನಗರವನ್ನು ಸ್ವಚ್ಛ ಮತ್ತು ಸಕ್ರಿಯವಾಗಿರಲು ಸಹಾಯ ಮಾಡುತ್ತಾರೆ. ಇಂತಹ ವ್ಯಾಪಾರಿಗಳನ್ನು ತೆಗೆದುಹಾಕುವುದರಿಂದ ನಗರಕ್ಕೆ ಅಪಾಯವಾಗುತ್ತದೆ ಮತ್ತು ನಿರ್ಜೀವವಾಗುತ್ತದೆ.
4. ಪಾದಚಾರಿಗಳ ಸಮಸ್ಯೆಗೆ ನಿಜವಾದ ಕಾರಣಗಳು
ಬೆಂಗಳೂರು ನಗರದಲ್ಲಿ ಪಾದಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ವಾಸ್ತವಿಕವಾಗಿವೆ, ಆದರೆ ಅದಕ್ಕೆ ಬೀದಿ ವ್ಯಾಪಾರಿಗಳು ಕಾರಣರಲ್ಲ. ಸುಮಾರು 23 ಲಕ್ಷ ಖಾಸಗಿ ಕಾರ್ ಗಳಿಗೆ , 40 ಲಕ್ಷ ದ್ವಿಚಕ್ರವಾಹನಕ್ಕೆ ಜಾಗ ಕಲ್ಪಿಸಲು ರಸ್ತೆಗಳನ್ನು ಗಾಲ ಮಾಡಿ ಪಾದಚಾರಿ ಮಾರ್ಗಗಳ ಅಗಲ ಕಡಿಮೆಯಾಗಿದೆ . ವೇಗದ ಸಂಚಾರದಿಂದ ರಸ್ತೆ ದಾಟಲು ಆಗದ ಪರಿಸ್ಥಿತಿ, ದರ್ಶಿನಿ ಹೋಟೆಲ್ಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳ ಆಕ್ರಮಣ, ಶ್ರೀಮಂತರು ಅವರ ಮನೆ ಮುಂದೆ ಗಾರ್ಡನ್ ಮಾಡುವುದು ಪಾರ್ಕಿಂಗ್ ಮಾಡುವುದು, ಕಟ್ಟಡ ನಿರ್ಮಾಣದ ಕಸ ಪಾದಚಾರಿ ಮಾರ್ಗದಲ್ಲಿರುವುದು, ಟ್ರಾನ್ಸ್ಫಾರ್ಮರ್ಗಳ ಅಕ್ರಮ ಸ್ಥಾಪನೆ—ಇವೇ ಪ್ರಮುಖ ಕಾರಣಗಳು.
ರಸ್ತೆ ಬದಿಯಲ್ಲಿ ಶ್ರೀಮಂತರ ಕಾರ್ ಗಳಿಗೆ ಉಚಿತ ಪಾರ್ಕಿಂಗ್ ಗೆ ಇಷ್ಟೊಂದು ಜಾಗ ನೀಡುವ ನಗರವು ಬಡವರ ಜೀವನೋಪಾಯಕ್ಕೆ ಜಾಗ ಇಲ್ಲವೆಂದು ಹೇಳುವುದು ಅಮನಾವೀಯ.
5. ಮುಖ್ಯ ರಸ್ತೆಯಿಂದ ದುರುವಿರುವ “ನಿರ್ದಿಷ್ಟ ವಲಯಗಳು” ಜೀವನೋಪಾಯ ನಾಶ ಮಾಡುತ್ತವೆ
ವ್ಯಾಪಾರಿಗಳನ್ನು ಮುಖ್ಯ ರಸ್ತೆಯಿಂದ ದೂರವಿರುವ ನಿರ್ದಿಷ್ಟ ವಲಯಗಳಿಗೆ ಕಳುಹಿಸುವುದು ಅವರ ಬದುಕನ್ನೇ ಹಾಳುಮಾಡುತ್ತದೆ. ಗ್ರಾಹಕರ ನೈಸರ್ಗಿಕ ಸಂಚಾರದಿಂದ ಅವರನ್ನು ದೂರ ಮಾಡುವುದು ಅವರ ಆದಾಯವನ್ನು ಕುಗ್ಗಿಸುತ್ತದೆ ಮತ್ತು ಇಂತಹ ವಲಯಗಳು ಬಹುತೇಕ ಎಲ್ಲೆಡೆ ವಿಫಲವಾಗಿರುವುದನ್ನು ನಾವು ನೋಡಿದ್ದೇವೆ.
6. ದುರ್ಬಲ ವರ್ಗಗಳ ಮೇಲೆ ಅನ್ಯಾಯ
ಬೀದಿ ವ್ಯಾಪಾರಿಗಳು ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಗಾಡಿ ಬಿಡಬಾರದು, ಮನೆಗೆ ತಳ್ಳಿಕೊಂಡು ಹೋಗಬೇಕೆಂಬ ನೆನ್ನೆ ಪ್ರಸ್ತಾಪಿಸಿರುವ ಈ ಹೊಸ ನೀತಿ ಮುಖ್ಯವಾಗಿ ಹಿರಿಯ ನಾಗರಿಕರ ಮೇಲೆ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಬಡವರ ಮೇಲೆ ಪರಿಣಾಮ ಬೀರುತ್ತದೆ. ಹಲವಾರು ಹಿರಿಯರು ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ ಬೀದಿ ವ್ಯಾಪಾರವನ್ನೇ ಅವಲಂಬಿಸಿದ್ದಾರೆ.
ಅವರು ಗಾಡಿಯನ್ನು ತಳ್ಳಲು ಆಗುವುದಿಲ್ಲ. ಗಾಡಿ ತಳ್ಳುವ ದೈಹಿಕ ಸಾಹ್ಕ್ತಿ ಉಳ್ಳವರು ಸಹ ಸಣ್ಣ ಬಾಡಿಗೆ ಮನೆಗಳಲ್ಲಿ ವಾಸಿಸುವುದರಿಂದ ಗಾಡಿಗಳನ್ನು ಮನೆ ಆಚೆ ಇಡಲು ಸ್ಥಳವಿಲ್ಲ. ಇಂತಹ ವಾಸ್ತವಿಕತೆಯನ್ನು ಕಡೆಗಣಿಸಿ ಗಾಡಿಗಳನ್ನು ರಸ್ತೆ ಮೇಲೆ ಬಿಡಬಾರದೆಂದು ಹೇಳುವುದು ಸಂಪೂರ್ಣ ಅನ್ಯಾಯ ಮಾತ್ರವಲ್ಲ , ಶ್ರೀಮಂತ ಶಾಸಕರು ಬಡವರ ಜೀವನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಇರುವ ಭಕ್ಷಕರು ಎಂದು ತಿಳಿಯುತ್ತದೆ.
7. ಗುರುತಿನ ಚೀಟಿ ವ್ಯವಸ್ಥೆಯ ಮೂಲಕ ಹೊರತಾಕುವುದು
ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವುದಾಗಿ ಹೇಳುವುದು ಹೊರತಾಕುವ ಕ್ರಮವಾಗಿದೆ, ಏಕೆಂದರೆ ಸರ್ಕಾರವೇ ಎಲ್ಲಾ ಅರ್ಹ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ನೀಡಲು ವಿಫಲವಾಗಿದೆ. ಈ ಮೂಲಕ ಅತ್ಯಂತ ದುರ್ಬಲರನ್ನು “ಅಕ್ರಮ” ಎಂದು ಗುರುತಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
8. ರಾಜಕೀಯ ನಂಬಿಕೆ ದ್ರೋಹ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ತಂದಿತ್ತು. ರಾಹುಲ್ ಗಾಂಧಿ 2023ರ ಚುನಾವಣೆಗೆ ಮುನ್ನ ಬೀದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿ ಅವರ ರಕ್ಷಣೆಗೆ ಭರವಸೆ ನೀಡಿದ್ದರು. ಆದರೆ ಇಂದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅದೇ ಸರ್ಕಾರ ಈ ಹಕ್ಕುಗಳನ್ನು ಕುಗ್ಗಿಸುವ ನೀತಿಯನ್ನು ಮುಂದಿರಿಸುತ್ತಿದೆ. ಕಾಂಗ್ರೆಸ್ ಪಕ್ಶಕ್ಕೆ ನಮ್ಮ ಮತಗಳು ಮಾತ್ರ ಮುಖ್ಯವೇ? ನಮ್ಮ ಬದುಕು ಮುಖ್ಯವಲ್ಲವೇ?
ಎಲ್ಲಾ ಪಕ್ಷಗಳ ಶಾಸಕರು ಬೀದಿ ವ್ಯಾಪಾರಿಗಳ ವಿರುದ್ಧ ನಿಲುವು ತೆಗೆದುಕೊಂಡಿರುವುದಾಗಿ ವರದಿಯಾಗಿದೆ. ನಮ್ಮ ಸಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸುವ ಯಾವುದೇ ನಿಲುವನ್ನು ನಾವು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಉತ್ತರ ಕೇಳುತ್ತೇವೆ.ಬೀದಿ ವ್ಯಾಪಾರಿಗಳು ಮತ್ತು ಪಾದಚಾರಿಗಳ ನಡುವೆ ಸಂಘರ್ಷವಿದೆ ಎನ್ನುವ ವಾದ ತಪ್ಪಾಗಿದೆ. ಸೂಕ್ತ ಯೋಜನೆ ಮತ್ತು ರಾಜಕೀಯ ಇಚ್ಛಾಶಕ್ತಿಯಿದ್ದರೆ ಇಬ್ಬರೂ ಸಹ ರಸ್ತೆ ಮತ್ತು ಪಾದಚಾರಿ ಮಾರ್ಗವನ್ನು ಉಪಯೋಗಿಸಬಹುದು ಮತ್ತು ಪರಸ್ಪರ ಲಾಭಕರವಾಗಿರಬಹುದು. ಸಮಸ್ಯೆ ಜಾಗದ ಕೊರತೆಯಲ್ಲ—ಸಮಾನತೆಯ ಯೋಜನೆಗಳ ಕೊರತೆ.
ನಮ್ಮ ಹಕ್ಕೊತ್ತಾಯಗಳು
ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಬೀದಿ ವ್ಯಾಪಾರ ನಿಷೇಧಿಸುವ ಯಾವುದೇ ಪ್ರಸ್ತಾವನೆಯನ್ನು ತಕ್ಷಣ ಹಿಂಪಡೆಯಬೇಕು.
ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು. ಸಮಗ್ರ ಸಮೀಕ್ಷೆ ನಡೆಸಿ ಎಲ್ಲರಿಗೂ ಗುರುತಿನ ಚೀಟಿಗಳನ್ನು ನೀಡಬೇಕು.
ಹೊಸ ನಾಗರಪಾಲಿಕೆಗಳಲ್ಲಿ ಟೌನ್ ವೆಂಡಿಂಗ್ ಸಮಿತಿಗಳನ್ನು ರಚಿಸಿ , ಬಲಪಡಿಸಿ ವ್ಯಾಪಾರಿಗಳ ನೈಜ ಪ್ರತಿನಿಧಿತ್ವವನ್ನು ಖಚಿತಪಡಿಸಬೇಕು.
ಬಿಡಿ ವ್ಯಾಪಾರಿಗಳ ತೆರವು, ಜಪ್ತಿ ಮತ್ತು ಕಿರುಕುಳವನ್ನು ತಕ್ಷಣ ನಿಲ್ಲಿಸಬೇಕು.
ಬೀದಿ ವ್ಯಾಪಾರಿಗಳನ್ನು ಅಳಿಸಿ ಬೆಂಗಳೂರು “ವಿಶ್ವಮಟ್ಟದ ನಗರ”ವಾಗಲು ಸಾಧ್ಯವಿಲ್ಲ. ನಿಜವಾದ ನ್ಯಾಯಯುತ ನಗರವೆಂದರೆ ವ್ಯಾಪಾರಿಗಳು, ಪಾದಚಾರಿಗಳು ಮತ್ತು ಎಲ್ಲಾ ನಾಗರಿಕರು ಗೌರವ ಮತ್ತು ಹಕ್ಕುಗಳೊಂದಿಗೆ ಜಾಗವನ್ನು ಹಂಚಿಕೊಳ್ಳುವ ನಗರ.
ಇದನ್ನೂ ನೋಡಿ: ಪಿಚ್ಚರ್ ಪಯಣ – 170 | ಚಿತ್ರ : ಮ್ಯಾಗೆಲ್ಲನ್, ವಿಶ್ಲೇಷಣೆ : ಮ ಶ್ರಿ ಮುರಳಿ ಕೃಷ್ಣ Janashakthi Media
