ಉದ್ಯೋಗಾಕಾಂಕ್ಷಿಗಳ ಧರಣಿಗೆ ಅನುಮತಿ ನಿರಾಕರಣೆ; ಹೋರಾಟಗಾರರ ಬಂಧನ – ಎಐಡಿವೈಓ ಖಂಡನೆ

ನವದೆಹಲಿ: ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಗೆ ಪ್ರತಿಭಟನಾ ಧರಣಿ ನಡೆಸಲು ವಿನಾಕಾರಣ ಅನುಮತಿ ನಿರಾಕರಿಸಿ, ಧರಣಿ ನಡೆಯುವ ಸ್ಥಳಕ್ಕೆ ತೆರಳಲು ಬಿಡದೆ ಹೋರಾಟಗಾರರನ್ನು ಬಂಧನ ಮಾಡಿರುವ ಸರ್ಕಾರದ ದಮನಕಾರಿ ನಡೆಯನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೖಸೇಷನ್ (ಎಐಡಿವೈಓ) ಉಗ್ರವಾಗಿ ಖಂಡಿಸುತ್ತದೆ. ಧರಣಿ

ಉದ್ಯೋಗಾಕಾಂಕ್ಷಿಗಳ ಬೇಡಿಕೆಗಳ ಪರಿಹರಿಸಲು ಇಲ್ಲಿಯವರೆಗೂ ಕಿಂಚಿತ್ತೂ ಸ್ಪಂದಿಸದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಇಂದು ಬೆಳಗ್ಗೆಯಿಂದಲೇ ಯಾವುದೇ ನೋಟೀಸ್ ನೀಡದೇ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧನ ಕ್ರಮವು ಜನತಂತ್ರವನ್ನು ಹಾಗೂ ವಿಶ್ವ ಮಾನವ ಹಕ್ಕುಗಳ ದಿನದಂದೇ ಮಾನವ ಹಕ್ಕುಗಳ ದಮನ ನಡೆಸಿರುವುದು ಅತ್ಯಂತ ಹೀನಾಯ ನಡೆಯಾಗಿದೆ. ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಪ್ರತಿಭಟನೆಯ ಕನಿಷ್ಠ ಹಕ್ಕನ್ನು ಕಸಿದುಕೊಳ್ಳಲಾಗಿದೆ.

ಉದ್ಯೋಗ ಆಕಾಂಕ್ಷಿಗಳು ಕಳೆದ ಮೂರು ತಿಂಗಳುಗಳಿಂದ ನಿರಂತರವಾಗಿ ಪ್ರಜಸತ್ತಾತ್ಮಕ ಮಾರ್ಗದ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಖುದ್ದಾಗಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳುತ್ತಲೇ ಇದ್ದರೂ, ಮುಖ್ಯ ಕಾರ್ಯದರ್ಶಿಗೆ ಉದ್ಯೋಗಾಕಾಂಕ್ಷಿಗಳ ಹಕ್ಕೊತ್ತಾಯಗಳ ಆಗ್ರಹಪತ್ರವನ್ನು ತಲುಪಿಸಿದ್ದರೂ ಸಹ ಕನಿಷ್ಠ ಮಟ್ಟದ ಸ್ಪಂದನೆಯನ್ನೂ ನೀಡದೆ, ಯಾವುದೇ ಬಾಧ್ಯತೆಯನ್ನು ತೋರಿಲ್ಲ. ಉದ್ಯೋಗಾಂಕ್ಷಿಗಳನ್ನು ಕಾಂಗ್ರೆಸ್ ಸರ್ಕಾರ ಯುವಜನರನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡಿದೆ.

ಇದನ್ನೂ ಓದಿ: ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೂ ಶೀಘ್ರದಲ್ಲೇ ಋತುಚಕ್ರದ ರಜೆ ಘೋಷಣೆ ಸಾದ್ಯತೆ!

ಉದ್ಯೋಗ ಕೇಳಿದರೆ ಲಾಟಿ ಬೀಸುವುದು, ಬಂಧನ ಮಾಡಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇನ್ನೊಂದೆಡೆ ಒಳಮಿಸಲಾತಿಯ ಕುಂಟು ನೆಪವನ್ನು ಮುಂದಿಟ್ಟುಕ್ಕೊಂಡು ಹಲವು ತಿಂಗಳುಗಳಿಂದ ನೇಮಕಾತಿಯನ್ನು ವಿಳಂಬ ಮಾಡುತ್ತಲೇ ಇರುವ ಕಾಂಗ್ರೆಸ್ ಸರ್ಕಾರವು ಇಂದು ಕಡು ಜನವಿರೋಧಿ ಕ್ರಮವನ್ನು ತೆಗೆದುಕೊಂಡು ಜನತಂತ್ರದ ಹರಣ ಮಾಡಿದೆ. ಸರ್ಕಾರದ ಈ ದಮನಕಾರಿ ಕ್ರಮಕ್ಕೆ ಉದ್ಯೋಗಾಕಾಂಕ್ಷಿ ಗಳು ಬೆದರುವುದಿಲ್ಲ ಎನ್ನುವುದನ್ನು ಅರಿಯಬೇಕು.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಸಿದ್ದಲಿಂಗ ಬಾಗೇವಾಡಿ, ಸಹ ಸಂಚಾಲಕರಾದ ಭವಾನಿ ಶಂಕರ್ ಎಸ್ ಗೌಡ, ಚನ್ನಬಸವ ಜಾನೇಕಲ್, ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣವರ್, ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಜಗನ್ನಾಥ ಎಸ್. ಎಚ್, ಕರ್ನಾಟಕ ರಾಜ್ಯ ರೈತ ಸೇನಾ ರಾಜ್ಯ ಅಧ್ಯಕ್ಷರಾದ ಶಂಕರ್ ಅಂಬಲಿ, ಇನ್ನೋರ್ವ ರೈತ ಮುಖಂಡರಾದ ಸಿದ್ದುಗೌಡ ಮೋದಗಿ, ಉದ್ಯೋಗಾಕಾಂಕ್ಷಿ ಪಾಲಾಕ್ಷ.ಕೆ ಮತ್ತಿತರರನ್ನು ಬಂಧಿಸಲಾಗಿದೆ.

ಅವರನ್ನು ಈ ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದೂ ಸರ್ಕಾರವನ್ನು ಒತ್ತಾಯಿಸುತ್ತದೆ ಹಾಗೂ ಸರ್ಕಾರದ ಈ ದಬ್ಬಾಳಿಕೆಯ ನಡೆಯನ್ನು ಎದುರಿಸಿ ಹೋರಾಟ ಕಟ್ಟುತ್ತಿರುವ ಉದ್ಯೋಗಾಕಾಂಕ್ಷಿ ಯುವಜನತೆಯನ್ನು ಎಐಡಿವೈಓ ಅಭಿನಂದಿಸುತ್ತದೆ ಮತ್ತು ಎಲ್ಲ ನ್ಯಾಯಯುತ ಬೇಡಿಕೆಗಳು ಈಡೇರುವ ತನಕ ಈ ಹೋರಾಟದ ಕಾವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡುತ್ತದೆ.

ಇದನ್ನೂ ನೋಡಿ: ಧರ್ಮಸ್ಥಳ, ಮರಘಾ ಪ್ರಕರಣ | ಮಹಿಳೆಯರ ವಿರುದ್ಧ ಷಡ್ಯಂತ್ರಗಳು…! ಅಲ್ಲಿ ಇಲ್ಲಿ ಎಲ್ಲೆಲ್ಲೂ Janashakthi Media

Donate Janashakthi Media

Leave a Reply

Your email address will not be published. Required fields are marked *