ಭಾರಿ ಭಾರಿ ಮೊತ್ತದ ಸಾಲಗಾರರಿಂದ ತಲೆ ಬೋಳಿಸಿಕೊಂಡ ನಮ್ಮ ಬ್ಯಾಂಕುಗಳು!

ಬರಗಾಲ, ಮಳೆ ಕೊರತೆ, ಬೆಳೆದ ಫಸಲಿಗೆ ಸಿಗದ ಅಗತ್ಯ ದರ, ಕೃಷಿಗೆ ಮಾಡಲೇಬೇಕಾದ ಅನಿವಾರ್ಯ ವೆಚ್ಚ, ಏರುತ್ತಿರುವ ಬೆಲೆಗಳ ಕಾರಣ ತಮ್ಮ ಬ್ಯಾಂಕ್ ಸಾಲ ಮನ್ನಾ ಮಾಡಿ ಎಂದು ರೈತ ಸಮುದಾಯ ಗೋಗರೆದರೆ ನಿರಾಕರಿಸುತ್ತಿದ್ದ ಕೇಂದ್ರ ಸರ್ಕಾರವು ದೇಶದ ಕೈಗಾರಿಕೋದ್ಯಮಿಗಳಿಂದ ತಲೆಬೋಳಿಸಿಕೊಂಡ ಸುದ್ದಿ ಬೆಚ್ಚಿಬೀಳಿಸುವಂತಿದೆ !

– ಟಿ. ಸುರೇಂದ್ರರಾವ್‌

ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗಳಿಗೆ ಸರ್ಕಾರ ಕೊಟ್ಟ ಉತ್ತರ ಯಾರನ್ನೂ ಬೆರಗುಗೊಳಿಸುತ್ತದೆ ! ಇಲ್ಲಿದೆ ನೋಡಿ ವಿವರ:

ಇದನ್ನೂ ಓದಿ: ಬೆಳ್ತಂಗಡಿ| ಅಪಾಯಕಾರಿ ನದಿಗೆ ಸೇತುವೆ: ವರದಿ ಕೇಳಿದ ನ್ಯಾಯಾಧೀಶರು

ಕಳೆದ ಐದು ವರ್ಷಗಳಲ್ಲಿ (2021 ರಿಂದ 2026 ರವರೆಗೆ) ಬ್ಯಾಂಕುಗಳಿಗೆ ಬರಬೇಕಿದ್ದ ಸಾಲದ ಮೊತ್ತ:

ರೂ.8,48,700 ಕೋಟಿ

ಬ್ಯಾಂಕುಗಳು ಉದ್ಯಮಿಗಳಿಂದ ಪಡೆದ ಮೊತ್ತ:

ರೂ.2,46,666 ಕೋಟಿ

ಬ್ಯಾಂಕುಗಳು ತಲೆಬೋಳಿಸಿಕೊಂಡ ಹಣ:

ರೂ.6,07,034 ಕೋಟಿ

ಇಷ್ಟು ದೊಡ್ಡ ಮಟ್ಟದ ಮೊತ್ತವನ್ನು “ಸಾಲಮನ್ನಾ” ಹೆಸರಿನಲ್ಲಿ ಕೈಗಾರಿಕೋದ್ಯಮಿಗಳಿಗೆ ಕೇಂದ್ರ ಸರ್ಕಾರ ನೀಡುವುದರ ಜತೆಯಲ್ಲೇ ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ, ಲಕ್ಷಾಂತರ ಕೋಟಿ ರೂಪಾಯಿಗಳ ಸಬ್ಸಿಡಿಯನ್ನೂ ನೀಡುತ್ತದೆ ಎಂಬ ಸಂಗತಿಯನ್ನು ಎಲ್ಲರೂ ತಿಳುದುಕೊಳ್ಳಲೇ ಬೇಕು.

ಇದನ್ನೂ ನೋಡಿ: ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್‌ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *