ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಉಳಿಸಲು ದೇಶವ್ಯಾಪಿ ಚಳುವಳಿ: ಮೇ 15 ರಂದು ಮುಷ್ಕರ

“ಮನರೆಗ ಉಳಿಸಿ-ವಿಬಿ-ಜಿರಾಮ್ (ಜಿ) ತಿರಸ್ಕರಿಸಿ” ಚಳುವಳಿ
“ಮನರೆಗ ಹೋರಾಟವು ಈಗ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ. ಇದು ಕೇವಲ ಒಂದು ಯೋಜನೆಯ ಬಗ್ಗೆ ಅಲ್ಲ, ಬದಲಿಗೆ,  ಭಾರತದಲ್ಲಿ ಲಕ್ಷಾಂತರ ಗ್ರಾಮೀಣ ಕಾರ್ಮಿಕರ ಜೀವನೋಪಾಯ, ಘನತೆ ಮತ್ತು ಅಸ್ತಿತ್ವದ ಬಗ್ಗೆ. ಗ್ರಾಮೀಣ ಉದ್ಯೋಗ  ಖಾತ್ರಿ ಕಾಯ್ದೆಯನ್ನು ಉಳಿಸುವುದು ಅತ್ಯಗತ್ಯ. ಈ ಕಾನೂನು ಜನರ ಚಳುವಳಿಯಿಂದ ಹುಟ್ಟಿಕೊಂಡಿದೆ ಮತ್ತು ಅದನ್ನು ಉಳಿಸಲು, ಮತ್ತೆ ಜನರ ಚಳುವಳಿಯ ಅಗತ್ಯವಿದೆ. ಸರ್ಕಾರ ಕೇಳದಿದ್ದರೆ, ಜನರು ಅವರು ಕೇಳುವಂತೆ ಮಾಡುತ್ತಾರೆ. ಮೇ 15 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರ ಮತ್ತು ನಂತರದ ಪ್ರತಿಭಟನೆಗಳು ಈ ಕಾಯ್ದೆಯ ಭವಿಷ್ಯವು ಬಲಗೊಳ್ಳುವತ್ತ ಸಾಗುತ್ತದೆಯೇ ಅಥವಾ ವಿಸರ್ಜನೆಯತ್ತವೆ ಎಂದು ನಿರ್ಧರಿಸುತ್ತದೆಎಂದು ನವದೆಹಲಿಯಲ್ಲಿ  ಮಾರ್ಚ್ 17ರಂದು ನಡೆದ ಎಂದು ನೀತಿ ಸಂವಾದ ಹೇಳಿದೆ.

ಗ್ರಾಮೀಣ ಉದ್ಯೋಗ ಬಿಕ್ಕಟ್ಟು ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೈಗೊಂಡಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೆಗ) ಯನ್ನು ರದ್ದುಗೊಳಿಸುವ ಕ್ರಮದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ವಿವಿಧ ರಾಜಕೀಯ ಪಕ್ಷಗಳ ಸಂಸದರು, ಕಾರ್ಮಿಕ ಸಂಘಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಅರ್ಥಶಾಸ್ತ್ರಜ್ಞರು ಮತ್ತು ಮನರೆಗ ಕೆಲಸಗಾರರು ಮಾರ್ಚ್ 17 ರಂದು ನವದೆಹಲಿಯ ಕನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಒಂದು ಸಾರ್ವಜನಿಕ ನೀತಿ ಸಂವಾದವನ್ನು ಆಯೋಜಿಸಿದರು.

ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯ ಹಕ್ಕು-ಆಧಾರಿತ ಚೌಕಟ್ಟನ್ನು ರಕ್ಷಿಸಲು ಮತ್ತು ಬಲಪಡಿಸಲು ಮಾರ್ಗಗಳನ್ನು ರೂಪಿಸುವ ಗುರಿಯೊಂದಿಗೆ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಟನೆಗಳ ಒಂದು ಐಕ್ಯ ವೇದಿಕೆಯು ನರೇಗ ಸಂಘರ್ಷ ಸಮಿತಿ (ಹೋರಾಟದ ರಂಗ) ಜೊತೆಗೆ ಈ ಸಂವಾದವನ್ನು ಏರ್ಪಡಿಸಿತ್ತು.

ಇದನ್ನೂ ಓದಿ: ಅನಿಲ ಬಿಕ್ಕಟ್ಟು: ಶಾಸಕರಿಗೂ ಊಟ ಸಿಗದ ಸ್ಥಿತಿ, ಪರಿಷತ್‌ನಲ್ಲಿ ಅಸಮಾಧಾನ

ಸಭೆಯು ರಾಷ್ಟ್ರವ್ಯಾಪಿ ಚಳುವಳಿಯ ಯೋಜನೆಗಳನ್ನು ರೂಪಿಸಿದೆ. 11-12 ಕ್ಕೂ ಹೆಚ್ಚು ಪಕ್ಷಗಳ ಸಂಸದರೊಂದಿಗೆ ಒಂದು ರಾಷ್ಟ್ರೀಯ ಸಭೆ ನಡೆಸಲು ಯೋಜಿಸಲಾಗಿದೆ. ಮೇ 15, 2026 ರಂದು ರಾಷ್ಟ್ರವ್ಯಾಪಿ ಮನರೆಗ ಮುಷ್ಕರವನ್ನುಸಂಘಟಿಸಲು ನಿರ್ಧರಿಸಲಾಯಿತು. ಪಂಚಾಯತ್ ಮಟ್ಟದಲ್ಲಿ ಸ್ಥಳೀಯ ಪ್ರತಿಭಟನೆಗಳು ನಡೆಯಲಿವೆ. 160-170 ಸಂಸದರು ಸಹಿ ಮಾಡಿದ ಮನವಿ ಪತ್ರವನ್ನು ಪ್ರಧಾನಿಗೆ ಸಲ್ಲಿಸಲಾಗುವುದು. ಮುಷ್ಕರದ ನಂತರ ದೆಹಲಿಯಲ್ಲಿ ದೊಡ್ಡ ಮತಪ್ರದರ್ಶನ ನಡೆಯಲಿದೆ. ಕೃಷಿ ಕಾರ್ಮಿಕರು, ಗ್ರಾಮೀಣ ಕಾರ್ಮಿಕರು ಮತ್ತು ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಲು ಒಂದು ಐಕ್ಯ ರಾಷ್ಟ್ರೀಯ ವೇದಿಕೆಯನ್ನು ರಚಿಸಲು ಕೂಡ ನಿರ್ಧರಿಸಲಾಗಿದೆ.

ವಿಬಿ-ಗ್ರಾಮ್(ಜಿ) ಕಾನೂನನ್ನು ತಕ್ಷಣ ರದ್ದುಗೊಳಿಸುವುದು, ಕನಿಷ್ಠ 200 ದಿನಗಳ ಉದ್ಯೋಗದ ಖಾತರಿಯೊಂದಿಗೆ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಬಲಪಡಿಸುವುದು, ದಿನಕ್ಕೆ ₹600-₹700 ಕನಿಷ್ಠ ಕೂಲಿಯನ್ನು ಖಚಿತಪಡಿಸುವುದು, ನಗರ ಪ್ರದೇಶಗಳಿಗೂ ಈ ಯೋಜನೆಯನ್ನು ವಿಸ್ತರಿಸುವುದು, ಗ್ರಾಮ ಸಭೆಗಳ ಪಾತ್ರವನ್ನು ಪುನಃಸ್ಥಾಪಿಸುವುದು ಮತ್ತು ಕಾರ್ಮಿಕರನ್ನು ಹೊರಗಿಡುವ ತಾಂತ್ರಿಕ ವ್ಯವಸ್ಥೆಗಳನ್ನು ತೆಗೆದುಹಾಕುವುದು ಸೇರಿದಂತೆ ಮನರೆಗ ಕುರಿತ ಬೇಡಿಕೆಗಳನ್ನು ಈ ಐಕ್ಯ ವೇದಿಕೆ ಪುನರುಚ್ಚರಿಸಿತು.

ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘದ (ಎಐಎಡಬ್ಲ್ಯುಯು) ಪ್ರಧಾನ ಕಾರ್ಯದರ್ಶಿ ಬಿ. ವೆಂಕಟ್, ಈ ಹೋರಾಟವು ಕೇವಲ ಒಂದು ಕಾನೂನಿನ ವಿರುದ್ಧವಲ್ಲ, ಬದಲಾಗಿ ಗ್ರಾಮೀಣ ಭಾರತದ ಅಸ್ತಿತ್ವ ಮತ್ತು ಘನತೆಗಾಗಿ ಹೋರಾಟವಾಗಿದೆ ಎಂದು ಒತ್ತಿ ಹೇಳಿದರು.

“ಮನರೆಗ ಒಂದೇ ಏಟಿನಲ್ಲಿ ನಿರ್ಮೂಲನೆಯಾಗಿಲ್ಲ, ಅದಕ್ಕೆ ನಿಧಾನವಾಗಿ ವಿಷ ಉಣ್ಣಿಸಲಾಯಿತು, ಪಾವತಿಗಳಲ್ಲಿನ ವಿಳಂಬ, ಅಪಾರದರ್ಶಕ ತಂತ್ರಜ್ಞಾನ ಮತ್ತು ಸತತವಾಗಿ ಕಡಿಮೆ ಹಣ ಒದಗಿಸಿ ಕೊರತೆಯು ಅದನ್ನು ದುರ್ಬಲಗೊಳಿಸಲಾಯಿತು. ಇವೆಲ್ಲಕ್ಕೆ ನಮ್ಮ ಪ್ರತಿಕ್ರಿಯೆ ಸಾಕಷ್ಟಿರಲಿಲ್ಲ ಎಂದು ನಾವು ಒಪ್ಪಿಕೊಳ್ಳಬೇಕು. ಈಗ ಒಂದು ಒಗ್ಗಟ್ಟಿನ ಸಾಮಾಜಿಕ ಚಳುವಳಿಯನ್ನು ಕಟ್ಟುವ ಸಮಯ” ಎಂದು ಭಾರತೀಯ ಆದಿವಾಸಿ ಪಕ್ಷದ ಸಂಸದ ರಾಜ್‌ಕುಮಾರ್ ರಾವತ್ ಹೇಳಿದರು.

ರಾಷ್ಟ್ರೀಯ ಜನತಾ ದಳ ದ ಸಂಸದ ಮನೋಜ್ ಝಾ,ಮನರೆಗ ಪ್ರಜಾಪ್ರಭುತ್ವ ಹಕ್ಕುಗಳ ನಿರ್ಣಾಯಕ ಒಂದು ಆಧಾರಸ್ತಂಭವೆಂದು ಬಣ್ಣಿಸುತ್ತ, “ಮನರೆಗ ಸಾಂವಿಧಾನಿಕ ಭರವಸೆಯನ್ನು ಒಂದು ಮೂರ್ತ ಹಕ್ಕನ್ನಾಗಿ ಪರಿವರ್ತಿಸಿತು. ನಾವು ಅದನ್ನು ರಕ್ಷಿಸಲು ವಿಫಲವಾದರೆ, ಇತರ ಎಲ್ಲಾ ಹಕ್ಕು ಆಧಾರಿತ ಕಾನೂನುಗಳು ಸಹ ಕ್ರಮೇಣ ಮಸುಕಾಗುತ್ತವೆ” ಎಂದು ಹೇಳಿದರು.

“ಮನರೆಗ ಸಾಂವಿಧಾನಿಕ ಭರವಸೆಯನ್ನು ಒಂದು ಮೂರ್ತ ಹಕ್ಕನ್ನಾಗಿ ಪರಿವರ್ತಿಸಿತು. ನಾವು ಅದನ್ನು ರಕ್ಷಿಸಲು ವಿಫಲವಾದರೆ, ಇತರ ಎಲ್ಲಾ ಹಕ್ಕು ಆಧಾರಿತ ಕಾನೂನುಗಳು ಸಹ ಕ್ರಮೇಣ ಮಸುಕಾಗುತ್ತವೆ”

ಇನ್ನೊಬ್ಬ ಸಂಸದ ಸಂಜಯ್ ಯಾದವ್ ಈ ಗ್ರಾಮೀಣ ದ್ಯೋಗ ಖಾತರಿ ಕಾಯ್ದೆಯ ಪರಿವರ್ತಕ ಪಾತ್ರವನ್ನು ಎತ್ತಿ ತೋರಿಸುತ್ತಾ, ಅದು ಒಂದು ಪರಿವರ್ತಕ ಶಕ್ತಿಯಾಗಿತ್ತು,  ಗ್ರಾಮೀಣ ಬಡವರಿಗೆ ಆರ್ಥಿಕ ಬೆಂಬಲವನ್ನು ಒದಗಿಸಿತು ಮತ್ತು ಕಾರ್ಮಿಕರಿಗೆ ಘನತೆಯನ್ನು ಪುನಃಸ್ಥಾಪಿಸಿತು ಎಂದರು ಮತ್ತು  ಈ ಸಬಲೀಕರಣವು ಪ್ರಸ್ತುತ ಸರ್ಕಾರದ ರಾಜಕೀಯಕ್ಕೆ ಸವಾಲು ಹಾಕುತ್ತದೆ ಎಂದು ಹೇಳಿದರು.

“ಈ ಸಂಪೂರ್ಣ ಕಾನೂನನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಇದನ್ನು ಸ್ಥಾಯಿ ಸಮಿತಿಗೆ ಕಳುಹಿಸಲಾಗಿಲ್ಲ, ಅಥವಾ ಕಾರ್ಮಿಕರು, ಪಂಚಾಯತ್‌ಗಳು ಅಥವಾ ರಾಜ್ಯಗಳ ಅಭಿಪ್ರಾಯವನ್ನು ಕೋರಲಾಗಿಲ್ಲ. ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ವಿಧಾನವಾಗಿದೆ” ಎಂದು ಸಾಮಾಜಿಕ ಕಾರ್ಯಕರ್ತ ನಿಖಿಲ್ ಡೇ ಹೇಳಿದರು. “ಹಳೆಯ ಕಾನೂನನ್ನು ರದ್ದುಗೊಳಿಸಲಾಗಿದೆ ಮತ್ತು ಬೇಡಿಕೆ ಆಧಾರಿತ ಉದ್ಯೋಗದ ಹಕ್ಕನ್ನು ತೆಗೆದುಹಾಕುವ ಹೊಸದನ್ನು ಪರಿಚಯಿಸಲಾಗಿದೆ. ಸರ್ಕಾರ ಅದನ್ನು ಬುಲ್ಡೋಜರ್ ಮೂಲಕ ಜಾರಿಗೆ ತಂದಿದೆ. ಈಗ, ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಲಾಗಿದೆ, ಅವರ ಸಾಮರ್ಥ್ಯ ಸೀಮಿತವಾಗಿದೆ” ಎಂದು ಅವರು ವಿವರಿಸಿದರು.

“ಹಳೆಯ ಕಾನೂನನ್ನು ರದ್ದುಗೊಳಿಸಲಾಗಿದೆ ಮತ್ತು ಬೇಡಿಕೆ ಆಧಾರಿತ ಉದ್ಯೋಗದ ಹಕ್ಕನ್ನು ತೆಗೆದುಹಾಕುವ ಹೊಸದನ್ನು ಪರಿಚಯಿಸಲಾಗಿದೆ. ಸರ್ಕಾರ ಅದನ್ನು ಬುಲ್ಡೋಜರ್ ಮೂಲಕ ಜಾರಿಗೆ ತಂದಿದೆ. ಈಗ, ಜವಾಬ್ದಾರಿಯನ್ನು ರಾಜ್ಯಗಳಿಗೆ ವರ್ಗಾಯಿಸಲಾಗಿದೆ, ಅವರ ಸಾಮರ್ಥ್ಯ ಸೀಮಿತವಾಗಿದೆ”

ಸಿಪಿಐ(ಎಂ) ಸಂಸದ ಅಮ್ರಾ ರಾಮ್, “ಗ್ರಾಮೀಣ ಕಾರ್ಮಿಕರಿಗೆ ಕೆಲಸ ಖಾತರಿಪಡಿಸಿದ ಮೊದಲ ಉಪಕ್ರಮವೆಂದರೆ ಮನರೆಗ. ಆದರೆ ಈಗ, ಅದನ್ನು ದುರ್ಬಲಗೊಳಿಸಲಾಗುತ್ತಿದೆ ಮತ್ತು ಯಾವುದೇ ನಿಜವಾದ ಖಾತರಿಗಳಿಲ್ಲದ ಕೇವಲ ಒಂದು ಸ್ಕೀಮಿನ ಮಟ್ಟಕ್ಕೆ ಇಳಿಸಲಾಗುತ್ತಿದೆ” ಎಂದು ಟೀಕಿಸಿದರು.

ಅವರು ತಳಮಟ್ಟದ ಸವಾಲುಗಳನ್ನು ಎತ್ತಿ ತೋರಿಸಿದರು: “100 ದಿನಗಳ ಕೆಲಸವನ್ನು ಖಚಿತಪಡಿಸಲಾಗುತ್ತಿಲ್ಲ, ಸಾವಿರಾರು ಕೋಟಿ ರೂ.ಪಾವತಿಗಳು ಬಾಕಿ ಉಳಿದಿವೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಆನ್‌ಲೈನ್ ಹಾಜರಾತಿ ನಿಯಮಗಳು ಅಪ್ರಾಯೋಗಿಕವಾಗಿವೆ. ಒಂದೆಡೆ, ಸರ್ಕಾರವು ಬಡವರಿಗೆ ಉದ್ಯೋಗವನ್ನು ಕಡಿತಗೊಳಿಸುತ್ತಿದೆ, ಮತ್ತು ಮತ್ತೊಂದೆಡೆ, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.”

“ಒಂದೆಡೆ, ಸರ್ಕಾರವು ಬಡವರಿಗೆ ಉದ್ಯೋಗವನ್ನು ಕಡಿತಗೊಳಿಸುತ್ತಿದೆ, ಮತ್ತು ಮತ್ತೊಂದೆಡೆ, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ.”

ಸಿಪಿಐ(ಎಂಎಲ್) ಸಂಸದ ರಾಜಾರಾಮ್ ಸಿಂಗ್, “ಇದು ಕೇವಲ ಸ್ಕೀಮ್  ಬದಲಾವಣೆಯಲ್ಲ, ಬಡವರ ಹಕ್ಕುಗಳನ್ನು ತೆಗೆದುಹಾಕುವ ಕ್ರಮವಾಗಿದೆ. ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಮತ್ತು 40% ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೇರುತ್ತಿದೆ” ಎಂದು ಹೇಳಿದರು. “ಇದು ಕೇವಲ ಉದ್ಯೋಗದ ಬಗ್ಗೆ ಅಲ್ಲ; ಇದು ಘನತೆಯ ವಿಷಯ” ಎಂದು ಅವರು ಹೇಳಿದರು.

ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆಯ (ಎನ್‌ಪಿಆರ್‌ಡಿ) ಪ್ರಧಾನ ಕಾರ್ಯದರ್ಶಿ ವಿ. ಮುರಳೀಧರನ್, ಅಂಗವಿಕಲರ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು: “ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಅತ್ಯಂತ ಸೀಮಿತವಾಗಿವೆ ಮತ್ತು ಅಂಗವಿಕಲ ವ್ಯಕ್ತಿಗಳಿಗೆ, ಪರಿಸ್ಥಿತಿ ಇನ್ನೂ ಕಷ್ಟಕರವಾಗಿದೆ. ಮನರೆಗ ಅವರಿಗೆ ಒಂದು ಜೀವನಾಡಿ. ಮನರೆಗವನ್ನು ದುರ್ಬಲಗೊಳಿಸುವ ಬದಲು, ಅಂಗವಿಕಲರಿಗೂ ಗೌರವಾನ್ವಿತ ಉದ್ಯೋಗವನ್ನು ಖಚಿತಪಡಿಸಿಕೊಳ್ಳಲು ಅದನ್ನು ಬಲಪಡಿಸಬೇಕು” ಎಂದು ಅವರು ಒತ್ತಾಯಿಸಿದರು.

ಇದನ್ನೂ ನೋಡಿ: ಮುಟ್ಟಿನ ರಜೆಜೆ ಏಕಿಷ್ಟು ಸಿಟ್ಟು , ಅದು ನಮ್ಮ ಹುಟ್ಟಿನ ಗುಟ್ಟು – ಕೆ.ಎಸ್.‌ ವಿಮಲಾ Janashakthi Media

ಮನರೆಗ ಹೋರಾಟವು ಈಗ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ ಎಂದು ಸ್ಪಷ್ಟಪಡಿಸಿದ ಈ ನೀತಿ ಸಂವಾದ, ಇದು ಕೇವಲ ಒಂದು ಯೋಜನೆಯ ಬಗ್ಗೆ ಅಲ್ಲ, ಬದಲಿಗೆ,  ಭಾರತದಲ್ಲಿ ಲಕ್ಷಾಂತರ ಗ್ರಾಮೀಣ ಕಾರ್ಮಿಕರ ಜೀವನೋಪಾಯ, ಘನತೆ ಮತ್ತು ಅಸ್ತಿತ್ವದ ಬಗ್ಗೆ ಎಂದು ಒತ್ತಿ ಹೇಳಿತು.  ನಿಖಿಲ್ ಡೇ ಹೇಳಿದಂತೆ, “ಗ್ರಾಮೀಣ ಉದ್ಯೋಗ  ಖಾತ್ರಿ ಕಾಯ್ದೆಯನ್ನು ಉಳಿಸುವುದು ಅತ್ಯಗತ್ಯ. ಈ ಕಾನೂನು ಜನರ ಚಳುವಳಿಯಿಂದ ಹುಟ್ಟಿಕೊಂಡಿದೆ ಮತ್ತು ಅದನ್ನು ಉಳಿಸಲು, ಮತ್ತೆ ಜನರ ಚಳುವಳಿಯ ಅಗತ್ಯವಿದೆ. ಸರ್ಕಾರ ಕೇಳದಿದ್ದರೆ, ಜನರು ಅವರು ಕೇಳುವಂತೆ ಮಾಡುತ್ತಾರೆ”

“ಮೇ 15 ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮುಷ್ಕರ ಮತ್ತು ನಂತರದ ಪ್ರತಿಭಟನೆಗಳು ಗ್ರಾಮೀಣ ದ್ಯೋಗ ಖಾತ್ರಿ ಕಾಯ್ದೆಯ ಭವಿಷ್ಯವು ಬಲಗೊಳ್ಳುವತ್ತ ಸಾಗುತ್ತದೆಯೇ ಅಥವಾ ವಿಸರ್ಜನೆಯತ್ತವೆ ಎಂದು ನಿರ್ಧರಿಸುತ್ತದೆ” ಎಂದು ಈ ಸಂವಾದ ಎಲ್ಲರ ಗಮನಕ್ಕೆ ತಂದಿದೆ.

ಕೃಪೆ: leftviews.in

Donate Janashakthi Media

Leave a Reply

Your email address will not be published. Required fields are marked *