ಬೆಂಗಳೂರು : ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟ್ಟರ್) ನಲ್ಲಿ ಕೆಲವು ಪೋಸ್ಟ್‌ಗಳು ಮತ್ತು ಖಾತೆಗಳನ್ನು ಗುರಿಯಾಗಿಸಿಕೊಂಡು ಸಮೂಹವಾಗಿ ರಿಪೋರ್ಟ್ ಮಾಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಹೊರಬಂದಿದೆ. ಈ ಬಗ್ಗೆ ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣವಾದ ಎಕ್ಷ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರ್ದಿಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಖಾತೆಗಳು ಮತ್ತು ಪೋಸ್ಟ್‌ಗಳನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿ ದೊಡ್ಡ ಪ್ರಮಾಣದಲ್ಲಿ ರಿಪೋರ್ಟ್ ಮಾಡಲಾಗುತ್ತಿದೆ. ಇದನ್ನು ಅವರು “ಸಂಯೋಜಿತ ಕಾರ್ಯಚರಣೆ” (coordinated activity) ಎಂದು ಶಂಕಿಸಿದ್ದಾರೆ.
ಈ ರೀತಿಯ ಕ್ರಮಗಳು ಡಿಜಿಟಲ್ ವೇದಿಕೆಗಳಲ್ಲಿ ಭಿನ್ನಮತಗಳನ್ನು ಮೌನಗೊಳಿಸಲು ಬಳಸಲಾಗುತ್ತಿವೆ ಎಂಬುದನ್ನೂ ಅವರು ಸೂಚಿಸಿದ್ದಾರೆ. ನಿರಂತರವಾಗಿ ಬೆದರಿಕೆ ಕರೆಗಳು ಹಾಗೂ ಅಪಮಾನಕಾರಿ ಸಂದೇಶಗಳು ಬರುತ್ತಿರುವುದಾಗಿ ಕೂಡ ಅವರು ಹೇಳಿಕೊಂಡಿದ್ದಾರೆ.
ಇಂತಹ ಬೆಳವಣಿಗೆಗಳು ಆನ್‌ಲೈನ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸವಾಲು ಎತ್ತುತ್ತವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗ ಹಾಗೂ ಸಂಯೋಜಿತ ಡಿಜಿಟಲ್ ಪ್ರಚಾರಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂಬ ಮಾತುಗಳೂ ಕೇಳಿಬರುತ್ತಿವೆ.
ಈ ತಾಂತ್ರಿಕ ಸಮಸ್ಯೆಯ ಕುರಿತಾಗಿ ಟ್ವಿಟ್ಟರ್ ಕೇಂದ್ರ ಕಚೇರಿಗೆ ಎಚ್ಚರಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ . ಸಮಸ್ಯೆಗಳಿಗೆ ಸ್ಪಂದಿಸದ ಕಾರಣಕ್ಕಾಗಿಯೇ ಅವರು ನಂತರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದ್ದರು ಎಂಬುವುದನ್ನು ಅವರು ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ಗಮನ ಸೆಳೆದಿದ್ದಾರೆ.