ಮತದಾರರ ಹಕ್ಕಿಗೆ ಧಕ್ಕೆ: ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ನವದೆಹಲಿ: ಮಾರ್ಚ್‌ 31ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದು, ಚುನಾವಣಾ ಆಯೋಗದ ಕ್ರಮಗಳು ಬಂಗಾಳದಲ್ಲಿ ನಿಜವಾದ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಪಾಯವನ್ನುಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹಕ್ಕಿಗೆ
ಚುನಾವಣಾ ಆಯೋಗದ ಕ್ರಮವು ಜನರ ಪ್ರಜಾಪ್ರಭುತ್ವ ಮತ್ತು ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ತಮ್ಮ ಮೂರು ಪುಟಗಳ ಪತ್ರದಲ್ಲಿ ಆರೋಪಿಸಿದ್ದಾರೆ. ಹಕ್ಕಿಗೆ

ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಸಾವಿರಾರು ಕಳ್ಳ ಅರ್ಜಿಗಳನ್ನು ಸಲ್ಲಿಸಿ ರಾಜ್ಯದ ಹೊರಗಿನವರನ್ನು ಮತದಾರರ ಪಟ್ಟಿಗೆ ಸೇರಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಕೀಲರ ಕ್ಷೇಮನಿಧಿ ಸೌಲಭ್ಯ ಹೆಚ್ಚಳಕ್ಕೆ ಚಿಂತನೆ: ರಾಜ್ಯ ಸರ್ಕಾರದ

ಅವರು ತಮ್ಮ ಹೇಳಿಕೆಯಲ್ಲಿ ಇದು ಮತದಾರರನ್ನು ಹೈಜಾಕ್ ಮಾಡಲು ಮಾಡಿದ ಪ್ರಯತ್ನವಾಗಿದೆ. ಇದೇ ರೀತಿಯ ವಿಧಾನವನ್ನು ಬಿಜೆಪಿ ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲೂ ಬಳಸಿದೆ ಎಂದು ಆರೋಪಿಸಿದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯ ದೋಷಗಳನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗವು ಬಂಗಾಳದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಮೇಲೆ ನೇರ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.

60 ಲಕ್ಷಕ್ಕೂ ಹೆಚ್ಚು ಮತದಾರರು ಇನ್ನೂ ವಿಚಾರಣೆಯ ಹಂತದಲ್ಲಿದ್ದಾರೆ ಮತ್ತು ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ 200ಕ್ಕೂ ಹೆಚ್ಚು ಜೀವಗಳು ಈಗಾಗಲೇ ಬಲಿಯಾಗಿವೆ ಎಂದು ಹೇಳಿದ ಮಮತಾ ಬ್ಯಾನರ್ಜಿ, ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ನೋಡಿ: ಬೇರೆ ಜಾತಿಯಾಗಿದ್ದರೆ ಟಿಪ್ಪುಗೆ ಇಂದಿನ ಪರಿಸ್ಥಿತಿ ಬಂದಿರುತ್ತಿತ್ತೇ? – ಮುನೀರ್‌ ಕಾಟಿಪಳ್ಳ Janashakthi Media

Donate Janashakthi Media

Leave a Reply

Your email address will not be published. Required fields are marked *