‘ಪಿಡಿಒ’ ಪರೀಕ್ಷೆಯ ನೇಮಕಾತಿಯಲ್ಲೂ ಭಾರಿ ಅಕ್ರಮ: ತನಿಖೆಯಲ್ಲಿ ಬಯಲು!

ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಳಿಕ ಇದರಲ್ಲಿ ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಗಂಭೀರವಾದ ಆರೋಪ ಇತ್ತೀಚಿಗೆ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕೆಪಿಎಸ್ಸಿ ತನಿಕ ತಂಡ ರಚನೆ ಮಾಡಿ ತನಿಖೆ ನಡೆಸುತ್ತಿರುವಾಗಲೇ ಕೆಪಿಎಸ್ಸಿ ವಿರುದ್ಧ ಮತ್ತೊಂದು ಅಕ್ರಮ ನಡೆದಿರುವುದಾಗಿ ತಿಳಿದುಬಂದಿದೆ. ಪಿಡಿಒ

2024ರ ಅ.27ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಎಫ್‌ಡಿಎ, ಎಸ್‌ಡಿಎ, ವಿಎಒ, ಪರೀಕ್ಷೆಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು, 2024ರ ಡಿ.8ರಂದು ಕೆಪಿಎಸ್ಸಿ ನಡೆಸಿದ ಪಿಡಿಒ ಪರೀಕ್ಷೆಯ ಅರ್ಹತಾ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ‘ಮತದಾನದ ಹಕ್ಕು ರಕ್ಷಿಸಿ’: ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಧರಣಿ

ಅದರಲ್ಲೂ ಕೆಲವರು ಪರಸ್ಪರ ಸಂಬಂಧಿಕರೇ ಆಗಿದ್ದು, ಇನ್ನು ಕೆಲವರು ರಾಜಕೀಯ ವ್ಯಕ್ತಿಗಳ ಆಪ್ತವಲಯದಲ್ಲಿ ಗುರುತಿಸಿಕೊಂಡವರೂ ಇದ್ದಾರೆ. ಕೆಎಎಸ್ ರೀತಿಯಲ್ಲೇ ಒಂದೇ ಕೊಠಡಿಯಲ್ಲಿ ಇದ್ದವರೇ ಇಲ್ಲೂ ಆಯ್ಕೆಯಾಗಿದ್ದಾರೆ. ಇದು ಹೇಗೆ ಸಾಧ್ಯ? ಈ ಬಗ್ಗೆಯೂ ಸೂಕ್ತ ತನಿಖೆ ಆಗಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಪಟ್ಟಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮದ ದೂರು ಲೋಕಭವನದ ಅಂಗಳ ತಲುಪಿದ್ದು, 15 ದಿನದಲ್ಲಿ ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಬಿಐ ತನಿಖೆ ಆಗದಿದ್ದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ರಾಜ್ಯ ಸರ್ಕಾರಕ್ಕೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಎಚ್ಚರಿಕೆ ನೀಡಿದೆ.

ಇದನ್ನೂ ನೋಡಿ: ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media

Donate Janashakthi Media

Leave a Reply

Your email address will not be published. Required fields are marked *