ಜುಲೈ 13 ಕ್ಕೆ ಮಹಾನಾಯಕ ಸಾಮ್ರಾಟ್‌ ಅಶೋಕ ನಾಟಕ ಪ್ರದರ್ಶನ

ಬೆಂಗಳೂರು : ಸಾಮ್ರಾಟ್‌ ಅಶೋಕ್‌ ಚಕ್ರವರ್ತಿ ಜೀವನ ಆಧರಿತ “ಮಹಾನಾಯಕ ಸಾಮ್ರಾಟ್‌ ಆಶೋಕ” ಎಂಬ ನಾಟಕವು ಜುಲೈ 13 ರಂದು ಬೆಂಗಳೂರಿನ ಡಾ. ಬಿ ಅರ್‌ ಅಂಬೆಡ್ಕರ್‌ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ ಜೆ ಸಾಗರ್‌ ತಿಳಿಸಿದರು.

ಇಂದು ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಭಾರತದ ಇತಿಹಾಸದಲ್ಲಿ ಅನೇಕಾನೇಕ ರಾಜ ಮಹಾರಾಜರು ಚಕ್ರವರ್ತಿಗಳು ಆಗಿಹೋಗಿದಾರೆ. ತಮ್ಮ ಜನಪರ ಕಾಳಜಿಯಿಂದಾಗಿ ಚರಿತ್ರಯಲ್ಲಿ ಅಚ್ಚಂದ್ರಕರವಾಗಿ ಉಳಿದಿರುವ ಚಕ್ರವರ್ತಿಯೆಂದರೆ, ಅವರ ಆಡಳಿತವಧಿಯು ಸುವರ್ಣ ಅಕ್ಷರದಲ್ಲಿ ಬರೆದು ಇಡುವಂತದ್ದು. ಅಶೋಕ ಎಂಬುದೊಂದು ಅಸ್ಮರಣಿಯ ಹೆಸರು ಎಂದು ತಿಳಿಸಿದರು.

ಇದನ್ನೂ ಓದಿ : ಕೆಆರ್‌ಎಸ್ ಸೇರಿ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ವಿವರ ಇಲ್ಲಿದೆ ಅಶೋಕ

2314 ವರ್ಷಗಳ ಹಿಂದೆ ಅಶೋಕರು ಹುಟ್ಟಿದರು, ತಮ್ಮ 18 ನೇ ವಯಸ್ಸಿನಲ್ಲಿ ಅವಂತ ದೊರೆಯ ಮಗಳು ದೇವಿ ವಿಧಾಶಾನ್ನು ವಿವಾಹವಾದರು; 20 ನೇ ವಯಸ್ಸಿನಲ್ಲಿ ಆತ ಮಹೇಂದ್ರ ಎಂಬ ಮಗನಿಗೆ ತಂದೆಯಾದ. ಎರಡು ವರ್ಷಗಳ ನಂತರ ಸಂಗಮಿತ್ರೆ ಎಂಬ ಮಗಳು ಜನಿಸಿದಳು. ರಾಜ್ಯಭಾರವನ್ನು ವಹಿಸಿಕೊಂಡ ಬಳಿಕ ಚಕ್ರವರ್ತಿ ಅಶೋಕ ತನ್ನ ರಾಜ್ಯವನ್ನು ವಿಸ್ತರಿಸಿದ.ಅನೇಕ ಯುದ್ದಗಳನ್ನು ಮಾಡಿ ಗೆಲವು ಸಾಧಿಸಿದ. ಶೌರ್ಯ-ದಾನ-ದೂರದೃಷ್ಟಿ  ಹಾಗೂ ಮಾನವಿಯತೆಗಳಿಗಾಗಿ ವಿಶ್ವದ ಗಮನವನ್ನೇ ಸೆಳೆದ ಮಹಾನಾಯಕ ಎನ್ನಿಸಿಕೊಂಡ ಅಶೋಕ ತನ್ನ 44 ವರ್ಷದ ವಯಸ್ಸಿನಲ್ಲಿ ಕಳಿಂಗ ಯುದ್ದವನ್ನು ಮಾಡಿದ. ಅಲ್ಲಿ ಗೆಲವು ಸಾಧಿಸಿದರು, ಅಶೋಕ ಆ ಯುದ್ಧದ ಬಳಿಕ ವ್ಯಾಕುಲಗೊಂಡ ಅದುವರೆಗೂ ತಾನು ನಡೆಸಿದ ಯುದ್ಧಗಳಲ್ಲಿ ನಡೆದ ರಕ್ತಪಾತವನ್ನು ನೆನಪಿಸಿಕೊಂಡು ವಿಹ್ವಲನಾದ. ಬಂಧುಗಳನ್ನು ಕಳೆದುಕೊಂಡು ರೋದಿಸುತ್ತಿದ್ದ, ಸಹಸ್ರ ಸಹಸ್ರ ಮಹಿಳೆಯರ, ಕಂದಮ್ಮಗಳ ವೃದ್ಧರ ಆಕ್ರಂದನ ಅವನ ಮನಸ್ಸು ತುಂಬಿ ಬಿಟ್ಟಿತ್ತು, ಎಂದು ತಿಳಿಸಿದರು.

ಈ ನಾಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದು. ಈ ಕಾರ್ಯಕ್ರಮದಲ್ಲಿ ರಾಜ್ಯಸಬೆಯ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಚಿವರುಗಳಾದ ಡಾ.ಎಚ್‌ ಸಿ ಮಹಾದೇವಪ್ಪ,  ಡಿ ಕೆ ಶಿವಕುಮಾರ, ಡಾ. ಜಿ ಪರಮೇಶ್ವರ, ಸತೀಶ ಜಾರಕಿಹೊಳಿ, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ನೊಡಿ : ಸಾರ್ವತ್ರಿಕ ಮುಷ್ಕರ | ರೈತ ಕಾರ್ಮಿಕ ಸಂಘಟಿತ ಹೋರಾಟವೇ ಎಲ್ಲದಕ್ಕೂ ಪರಿಹಾರ | ಜುಲೈ 09Janashakthi Media ಅಶೋಕ

Donate Janashakthi Media

Leave a Reply

Your email address will not be published. Required fields are marked *