ಹಾಸನ | ಸಿಐಟಿಯು 16ನೇ ಕರ್ನಾಟಕ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಹಾಸನ : ದೇಶಾದ್ಯಂತ ಕಾರ್ಮಿಕರ ಹಕ್ಕುಗಳಿಗಾಗಿ, ಜನಸಾಮಾನ್ಯರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಸಂಘಟನೆ ಸಿಐಟಿಯುವಿನ 16 ನೇ ಕರ್ನಾಟಕ ರಾಜ್ಯ ಸಮ್ಮೇಳನದವು 2025 ನವೆಂಬರ್ 13-15 ವರೆಗೆ ಮೂರು ದಿನಗಳ ಕಾಲ ಹಾಸನದಲ್ಲಿ ನಡೆಯಲಿದೆ. ಇತ್ತೀಚಿಗೆ ಹಾಸನದ ಶ್ರಮಾ ಕಛೇರಿಯಲ್ಲಿ ಸಮ್ಮೇಳನದ ಯಶಸ್ವಿಗೆಂದು ರಚನೆಯಾಗಿರುವ ಸ್ವಾಗತ ಸಮಿತಿಯ ಸಭೇಯನ್ನು ನಡೆಸಿ ಸಮ್ಮೇಳನದ ಅಧಿಕೃತ ಲಾಂಛನವನ್ನು ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷರು ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಧರ್ಮೇಶ್‌ರವರು ಇಂದು ಕಾರ್ಮಿಕ ವರ್ಗದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಅದರಲ್ಲೂ ಅಸಂಘಟಿತ ಕಾರ್ಮಿಕರು ಸರಿಯಾದ ಕನಿಷ್ಠ ಕೂಲಿಯಿಲ್ಲದೆ ಬದುಕನ್ನ ನಡೆಸಲಾಗದ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವ ನೀತಿಗಳ ಕುರಿತು ಚರ್ಚಿಸಿ ಮುಂದಿನ ಹೋರಾಟಗಳ ದಿಕ್ಕನ್ನು ರೂಪಿಸಲು ಹಾಸನದಲ್ಲಿ ಮೂರು ದಿನಗಳ ಕಾಲ ಕಾರ್ಮಿಕರ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಈ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಎಲ್ಲಾ ಕಾರ್ಮಿಕ ವಿಭಾಗಗಳಿಂದ ಆಯ್ದ 500 ಕ್ಕೂ ಹೆಚ್ಚು ಪ್ರತಿನಿಧಿಗಳಾಗಿ ಕಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳು ರಾಜ್ಯದ ಕಾರ್ಮಿಕ ವರ್ಗಕ್ಕೆ ಬಹಳ ಮಹತ್ತರವಾದದ್ದು ಎಂದರು.

ಇದನ್ನೂ ಓದಿ : ಕಲಬುರಗಿ | UGC ಯ ಫಲಿತಾಂಶ ಪಠ್ಯಕ್ರಮದ ಕರಡುಗೆ ಎಸ್‌ಎಫ್‌ಐ ವಿರೋಧ

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಎಚ್.ಎನ್. ಪರಮಶಿವಯ್ಯ ಅವರು ಮಾತನಾಡುತ್ತ ಹಾಸನ ಜಿಲ್ಲೆಯಲ್ಲಿ ಸಿಐಟಿಯು ಎಲ್ಲಾ ವಿಭಾಗದ ಜನರ ಕಷ್ಟಗಳಗೂ ಸ್ಪಂದಿಸುತ್ತಿದೆ, ಮಾತ್ರವಲ್ಲ ಹಲವು ನಿರ್ಣಾಯಕ ಹೋರಾಟಗಳನ್ನು ರೂಪಿಸಿ ಜಯಗಳಿಸುವುದರ ಮೂಲಕ ಜನತೆಗೆ ನ್ಯಾಯ ಒದಗಿಸಿದೆ. ಇಂತಹ ಸಂಘಟನೆಯ ಮಹತ್ತರವಾಗ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ಹಾಸನ ಜಿಲ್ಲೆಯ ಎಲ್ಲಾ ನಾಗರೀಕರ ಕರ್ತವ್ಯ, ಜಿಲ್ಲೆಗೆ ಬಂದ ಅತಿಥಿಗಳನ್ನು ಸತ್ಕರಿಸಿ ಕಳುಹಿಸಲು ಬೇಕಾದ ಸಕಲ ಸಿದ್ದತೆಗೆ ಜಿಲ್ಲೆಯ ಜನತೆ ಉದಾರವಾಗಿ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಸಭೆಯ ಆರಂಭದಲ್ಲಿ ಸ್ವಾಗತಿಸಿ ಪ್ರಾಸಾವಿಕ ಮಾತುಗಳನ್ನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ.ಪುಷ್ಪರವರು ಜಿಲ್ಲೆಯಲ್ಲಿರುವ ದೊಡ್ಡ ಸಂಖ್ಯೆಯ ರೈತ ಕಾರ್ಮಿಕರು ಈ ಸಮ್ಮೇಳನವನ್ನು ಯಶಸ್ವಿಗೊಳಿಸಲು ಕೈಜೋಡಿಸಬೇಕಿದೆ. ಆ ಮೂಲಕ ರಾಜ್ಯದ ಕಾರ್ಮಿಕ ಚಳುವಳಿಯ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶಮೂರ್ತಿ, ಸ್ವಾಗತ ಸಮಿತಿ ಖಜಾಂಚಿ ಜಿ.ಪಿ.ಸತ್ಯನಾರಾಯಣ, ಹಿರಿಯ ದಲಿತ ನಾಯಕರಾದ ಹುಲಿಕಲ್ ರಾಜಶೇಖರ್, ಸಂವಿಧಾನ ಓದು ಬಳಗದ ರಾಜ್ಯ ನಾಯಕರಾದ ರಾಜು ಗೊರೂರು, ಹಿರಿಯ ಮಾನವ ಹಕ್ಕುಗಳ ಹೋರಾಟಗಾರರಾದ ಇರ್ಷಾದ್ ಅಹಮದ್ ದೇಸಾಯಿ, ಮಾದಿಗ ದಂಡೋರ (ಎಂಆರ್‌ಎಚ್‌ಎಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, ಕ.ರಾ.ದ.ಸಂ.ಸ.(ಅಂಬೇಡ್ಕರ್‌ವಾದ) ರಾಜ್ಯ ಸಂಘಟನಾ ಸಂಚಾಲಕರಾದ ಈರೇಶ್ ಹಿರೇಹಳ್ಳಿ, ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ, ಎಲ್‌ಐಸಿ ನಿವೃತ್ತ ನೌಕರರ ಸಂಘದ ಮಂಜುನಾಥ್, ಬಿಜಿವಿಎಸ್-ಸಮತಾ ನಾಯಕಿ ಮಮತಾ ಶಿವು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್.ನವೀನ್‌ಕುಮಾರ್, ಡಿಎಚ್‌ಎಸ್ ಜಿಲ್ಲಾ ಸಂಚಾಲಕರಾದ ಪೃಥ್ವಿ ಎಂ.ಜಿ. ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ವಾಸುದೇವ ಕಲ್ಕೆರೆ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಇನ್ನೂ ಮುಂತಾದವರು ಸಭೆಯಲ್ಲಿ ಮಾತನಾಡಿ ಸಮ್ಮೇಳನದ ಯಶಸ್ಸಿಗೆ ಅಗತ್ಯವಾದ ಮಾರ್ಗದರ್ಶನ ನೀಡಿದರು.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | “ಕೊಂದವರು ಯಾರು ?” ಮಹಿಳಾ ಸಂಘಟನೆಗಳಿಂದ ಅಭಿಯಾನ Janashakthi Media

Donate Janashakthi Media

Leave a Reply

Your email address will not be published. Required fields are marked *