ಇಂಡಿ: ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ಶುಕ್ರವಾರ ಕರೆ ನೀಡಿದ ಇಂಡಿ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಕೃಷಿ ಮಾರುಕಟ್ಟೆ, ವರ್ತಕರ ಸಂಘ, ಪಟ್ಟಣದ ವಿವಿಧ ವ್ಯಾಪಾರಸ್ಥರು ಬಂದಲ್ಲಿ ಸ್ವಯಂ ಪ್ರೇರಿತ ಅಂಗಡಿಗಳನ್ನು ಬಂದ್ ಮಾಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಸ್ ಸಂಚಾರ ವಿರಳವಾಗಿತ್ತು. ಬಂದ್ ನಿಂದಾಗಿ ಬೇರೆ ಊರುಗಳಿಂದ ಪ್ರಯಾಣಿಕರಿಗೆ ತೊಂದರೆಯಾಯಿತು. ಇಂಡಿ
ಇದನ್ನೂ ಓದಿ : ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡಲು ಸರ್ಕಾರಕ್ಕೆ ಅಧಿಕಾರ ಇದೆ: ಬಸವರಾಜ ಬೊಮ್ಮಾಯಿ
ಐದನೇ ದಿನದ ಹೋರಾಟದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ, ಬಾಳು ಮುಳಜಿ, ಮಲ್ಲು ಗುಡ್ಲ, ಮಲ್ಲಿಕಾರ್ಜುನ ಕಿವಡೆ, ದೇವೆಂದ್ರ ಕುಂಬಾರ, ಕೆಆರ್ ಎಸ್ ಪಕ್ಷದ ಅಶೋಕ ಜಾಧವ, ರೇವಣ್ಣ ಹತ್ತಳ್ಳಿ, ಅನೀಲಗೌಡ ಬಿರಾದಾರ, ಅದೃಷಪ್ಪ ವಾಲಿ, ವೈದ್ಯರಾದ ಎಂ.ಎಚ್. ಅಂಕಲಗಿ ರಮೇಶ ಪೂಜಾರಿ, ಪರಮಾನಂದ ಬಿರಾದಾರ, ಶಿವರಾಜ ಕೊಪ್ಪ, ರಾಜು ತೋಳನೂರ, ಮುಖಂಡರಾದ ಕುಮಾರಗೌಡ ಪಾಟೀಲ ಇದ್ದರು. ಇಂಡಿ
ಬಸವೇಶ್ವರ ವೃತ್ತದಲ್ಲಿ ನಡೆದ ಸಭೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಕಂಬೋಗಿ, ಮಾಜಿ ಶಾಸಕ ರವಿಕಾಂತ ಪಾಟೀಲ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್ ಪಕ್ಷದ ಮುಖಂಡ ಬಿ.ಡಿ .ಪಾಟೀಲ, ವೈದ್ಯ ಅನೀಲ ವಾಲಿ, ಎಸ್.ಎಂ.ಕೋಳಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತಗೌಡ ಪಾಟೀಲ, ದಯಾಸಾಗರ ಪಾಟೀಲ, ಗುಂದವಾನ ಪಟೇಲ , ಶೀಲವಂತ ಉಮರಾಣಿ, ಅನೀಲಗೌಡ ಜಮಾದಾರ ಮುಂತಾದವರು ಮಾತನಾಡಿ, ರೈತರ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಚ್ಚರಿಕೆ ನೀಡಿದರು.
ಇದನ್ನೂ ನೋಡಿ : ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ 5500ನೀಡಬೇಕು – ಎನ್ ಎಲ್. ಭರತ್‌ರಾಜ್ Janashakthi Media
