ಹವಾಮಾನ ಬದಲಾವಣೆ ಎಚ್ಚರಿಕೆ: ಪ್ರತಿ 1°C ಏರಿಕೆಗೆ ಭಾರತದಲ್ಲಿ ಅಕ್ಕಿ ಉತ್ಪಾದನೆ 6.6% ಕುಸಿತ

ನವದೆಹಲಿ: ಭಾರತದಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಪ್ರತಿದಿನ ಅನ್ನವನ್ನು ಆಹಾರವಾಗಿ ಸೇವಿಸುತ್ತಾರೆ. ಇಲ್ಲಿ ಅದು ಕೇವಲ ಪಕ್ಕದ ತಿನಿಸಲ್ಲ , ದೇಶದ ಆಹಾರ ವ್ಯವಸ್ಥೆಯ ಬೆನ್ನೆಲುಬು. ಆದರೆ ಈಗ ಈ ಬೆನ್ನೆಲುಬು ನಿರೀಕ್ಷೆಗಿಂತ ಹೆಚ್ಚು ನಾಜೂಕಾಗಿದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ. ಹವಾಮಾನ

ಭೂಮಿಯ ತಾಪಮಾನವು ಪ್ರತಿಯೊಂದು 1 ಡಿಗ್ರಿ ಸೆಲ್ಸಿಯಸ್ ಏರಿದಾಗ, ಭಾರತದ ಅಕ್ಕಿ ಉತ್ಪಾದನೆ ಸುಮಾರು 6.6% ಕುಸಿಯುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಇದು ಹಿಂದಿನ ಮಾದರಿಗಳ ಅಂದಾಜಿಗಿಂತ ಮೂರು ಪಟ್ಟು ಹೆಚ್ಚು ಎಂಬುದು ವಿಜ್ಞಾನಿಗಳನ್ನು ಕಳವಳಗೊಳಿಸಿದೆ. ಹವಾಮಾನ

ಇದನ್ನೂ ಓದಿ: ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕನಿಗೆ ದ್ವಿಗುಣ ವಸೂಲಿ ಆರೋಪ

ಇದಕ್ಕೆ ಕಾರಣವೇನು? ಹೆಲ್ಮ್‌ಹೋಲ್ಟ್ಜ್ ಪರಿಸರ ಸಂಶೋಧನಾ ಕೇಂದ್ರದ ಸಂಶೋಧಕರು ಕೇವಲ ಕಂಪ್ಯೂಟರ್ ಮಾದರಿಗಳ ಮೇಲೆ ಅವಲಂಬಿಸದೆ, ವಿಶ್ವದಾದ್ಯಂತ 214 ಅಕ್ಕಿ ಹೊಲಗಳಲ್ಲಿ ನೈಜ ಮಾಹಿತಿ ಸಂಗ್ರಹಿಸಿದರು. ತಾಪಮಾನ ಏರಿಕೆಯಿಂದ ವಾಸ್ತವದಲ್ಲಿ ಏನಾಗುತ್ತದೆ ಎಂಬುದನ್ನು ಅಳೆಯಲಾಯಿತು. ಬಳಿಕ ಅದನ್ನು ಪ್ರಚಲಿತ ಏಳು ಪ್ರಮುಖ ಬೆಳೆ ಮಾದರಿಗಳೊಂದಿಗೆ ಹೋಲಿಸಲಾಯಿತು.

ಮಾದರಿಗಳು ಅಂದಾಜಿಸಿದ್ದ ನಷ್ಟ ಕೇವಲ 3.8% ಮಾತ್ರ. ಆದರೆ ನೈಜ ಹೊಲಗಳಲ್ಲಿ ಕಂಡುಬಂದ ನಷ್ಟ 8.1% ಆಗಿತ್ತು. ಅಂದರೆ, ಮಾದರಿಗಳ ಲೆಕ್ಕಾಚಾರದಲ್ಲಿ ಸುಮಾರು ಅರ್ಧ ಮಟ್ಟದ ವ್ಯತ್ಯಾಸ ಕಂಡುಬಂದಿದೆ.

ಈ ಪರಿಣಾಮದ ಹಿಂದೆ ಪ್ರಮುಖ ಕಾರಣ 30 ಡಿಗ್ರಿ ಸೆಲ್ಸಿಯಸ್ ಗಡಿ. ಅಕ್ಕಿ ಹೂ ಬೀಳುವ ಮತ್ತು ಧಾನ್ಯ ರೂಪುಗೊಳ್ಳುವ ಹಂತದಲ್ಲಿ ಈ ಗಡಿ ದಾಟಿದರೆ, ಹಾನಿ ವೇಗವಾಗಿ ಹೆಚ್ಚಾಗುತ್ತದೆ ಎಂದು ಅಧ್ಯಯನ ಸೂಚಿಸಿದೆ.

ಇದನ್ನೂ ನೋಡಿ: NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi

Donate Janashakthi Media

Leave a Reply

Your email address will not be published. Required fields are marked *