ದ್ವೇಷಕೋರತನದ ಈ ಕರಾಳ ದಿನಗಳಲ್ಲಿ ನ್ಯಾಯಾಂಗ

* ನೀಲೋತ್ಪಲ್ ಬಸು

ಶಾಸಕಾಂಗ ಮತ್ತು ಕಾರ್ಯಾಂಗದ  ಮೇಲೆ ನ್ಯಾಯಾಂಗದ ಅಂಕೆ ಒತ್ತಟ್ಟಿಗಿರಲಿ, ಸ್ವತಃ ತನ್ನ ಮೇಲೆಯೇ ನಿಯಂತ್ರಣ ಹೊಂದುವಲ್ಲಿ ನ್ಯಾಯಾಂಗ ವಿಫಲವಾಗಿರುದೊಡ್ಡ ಉದಾಹರಣೆ ನಮ್ಮ ಮುಂದಿದೆ. ನ್ಯಾಯಾಂಗವೇ ನೆಲೆಯನ್ನು ಬಿಟ್ಟುಕೊಡುವುದಾದರೆ, ಸಾಂವಿಧಾನಿಕ ವ್ಯವಸ್ಥೆ ಒತ್ತಟ್ಟಿಗಿರಲಿ, ಕಾನೂನಿನ ಆಡಳಿತವಾದರೂ  ಹೇಗೆ ತಾನೇ ಉಳಿದೀತು? ಇಲ್ಲಿ, ಸಮಾಧಾನದ ವಿಚಾರವೆಂದರೆ, ಕೆಳ ಹಂತದ ನ್ಯಾಯಾಂಗದಲ್ಲಿ ನ್ಯಾಯಾಧೀಶರುಗಳು  ಧೈರ್ಯದಿಂದ ಆದೇಶ ಹೊರಡಿಸಿದ ಪ್ರಕರಣಗಳಿವೆ ಎನ್ನುವುದು. ಆದರೆ ಇಂತಹ ದಿಟ್ಟ ದೃಷ್ಟಾಂತಗಳು ನಾಗರಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇನ್ನಷ್ಟು ಮರುಕಳಿಸಬಹುದೇ ಎನ್ನುವುದೇ ದೊಡ್ಡ ಪ್ರಶ್ನೆ. ಇದು ಸ್ವತಃ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುಲ್ಲಿ ಬಹು ಮಹತ್ವದ್ದಾಗಿದೆ. ದ್ವೇಷಕೋರತನ
* ಕನ್ನಡಕ್ಕೆ: ವಿಶ್ವ

ಭಾರತದಲ್ಲಿ ವಸಾಹತುಶಾಹಿ ವ್ಯವಸ್ಥೆಯನ್ನು ಬರ್ಖಾಸ್ತುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಅಂಕೆಗಳು ಮತ್ತು ಸಮತೋಲನಗಳು(checks & balances) ತತ್ವದ ಆಧಾರದ ಮೇಲೆ ಸಮಸ್ಥಿತಿಯನ್ನು ಖಾತರಿಪಡಿಸಲು ಸಂವಿಧಾನವನ್ನು ರೂಪಿಸಲಾಯಿತು.

ಪ್ರಸ್ತುತ ಕಾಲಘಟ್ಟದಲ್ಲಿ ಮುಖ್ಯವಾಗಿ ಹಿಂದುತ್ವದಿಂದ ಪ್ರೇರಿತವಾದ ದ್ವೇಷಕೋರತನದ ವಾತಾವರಣವು ಧಾರ್ಮಿಕ ನೆಲೆಯಲ್ಲಿ ಮಾತ್ರವಲ್ಲದೆ ಭಾರತದಂಥ ವೈವಿಧ್ಯಮಯ ಸಮಾಜದಲ್ಲಿ ಸಹಜವಾಗಿ ಇರುವ ಇತರ ಅಸ್ಮಿತೆಗಳ ಆಧಾರದಲ್ಲಿ ಕೂಡ ಕೆಲವು ಜನವಿಭಾಗಗಳನ್ನು  ʼಇತರರುʼ ಎಂದು ಪರಿಗಣಿಸುವ (othering) ಕಲ್ಪನೆಯಲ್ಲಿ ಬೇರೂರಿದೆ. ಇದು ಸಂವಿಧಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ  ಸರ್ವ ಸಮಾನ ಪೌರತ್ವದ ಅಡಿಪಾಯಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಕಲ್ಪನೆ ಎಂಬುದು ಸ್ಪಷ್ಟ. ಆದ್ದರಿಂದ, ಹಿಂದುತ್ವವು ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೆ ಪ್ರಾಬಲ್ಯ ಹೊಂದಿರುವ ಒಂದು ಸಿದ್ಧಾಂತವಾಗಿ ಹೊರಹೊಮ್ಮಿರುವಾಗ, ಅದು ನ್ಯಾಯಾಂಗವನ್ನೂ ಖಂಡಿತವಾಗಿಯೂ ಬಾಧಿಸುತ್ತದೆ. ನಮ್ಮ ಸಾಂವಿಧಾನಿಕ ವ್ಯವಸ್ಥೆಯು  ನ್ಯಾಯಾಂಗವನ್ನು ಸಂವಿಧಾನಿಕ ವರ್ತನೆಯ ಪಾಲಕನಾಗಿ ಚಿತ್ರಿಸಿದೆ. ಆದರೆ ಆಳುವ ಸಿದ್ಧಾಂತವು ಭದ್ರವಾಗಿ ಬೇರೂರಿರುವ ಈ ತತ್ವವನ್ನೂ ಬುಡಮೇಲು ಮಾಡುತ್ತಿದೆ. ಹಾಗಾಗಿ, ನಾವೀಗ ಈ ನ್ಯಾಯಾಂಗ ತತ್ವ, ಬಹಳಷ್ಟು ಸಂದರ್ಭಗಳಲ್ಲಿ ಒಳಗಿಂದಲೇ ಬುಡಮೇಲಾಗುತ್ತಿರುವುದನ್ನು ಕಾಣುತ್ತಿದ್ದೇವೆ.

ನ್ಯಾಯಾಂಗವು  ಎಲ್ಲ ಮಟ್ಟಗಳಲ್ಲಿ ಗಣತಂತ್ರ  ಸಂವಿಧಾನಕ್ಕೆ ಬದ್ಧವಾಗಿರಬೇಕು. ಅದಿಲ್ಲದಿದ್ದರೆ,  ಶಾಸಕಾಂಗ ಮತ್ತು ಕಾರ್ಯಾಂಗದ ಕೃತ್ಯಗಳ ಮೂಲಕ ವ್ಯಕ್ತವಾಗುತ್ತಿರುವಂತಹ  ಸೈದ್ಧಾಂತಿಕ ಪ್ರಾಬಲ್ಯವು ಉಂಟುಮಾಡುತ್ತಿರುವ ಒತ್ತಡಗಳ ನಡುವೆ ಸಾಂವಿಧಾನಿಕ ವ್ಯವಸ್ಥೆ ಹೆಚ್ಚೆಚ್ಚು ಅತಂತ್ರಗೊಳ್ಳುತ್ತಿದೆ. ಉಳಿದ ಎರಡು ಅಂಗಗಳ ಮೇಲೆ ನ್ಯಾಯಾಂಗದ ನಿಯಂತ್ರಣ ಒತ್ತಟ್ಟಿಗಿರಲಿ, ಸ್ವತಃ ತನ್ನ ಮೇಲೆಯೇ ನಿಯಂತ್ರಣ ಹೊಂದುವಲ್ಲಿ ನ್ಯಾಯಾಂಗ ವಿಫಲವಾಗಿರುವುದಕ್ಕೆ ಒಂದು ದೊಡ್ಡ ಉದಾಹರಣೆಯೆಂದರೆ, ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್‌ ನಿರುದ್ಯೋಗಿ ಯುವಜನರು ಮತ್ತು ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು (ಪಿಐಎಲ್) ನಡೆಸುವ ವಕೀಲರನ್ನು ಜಿರಲೆಗಳು ಎಂದು ಜರೆದದ್ದು. ಪರಿಸ್ಥಿತಿ ಈ ರೀತಿ ಅಧಃಪತನಗೊಂಡಿರುವುದಕ್ಕೆ ಏಕೈಕ  ಪ್ರತ್ಯೌಷಧಿಯೆಂದು ಸಾಂವಿಧಾನಿಕ ಅವಕಾಶವನ್ನು ಮತ್ತೆ ತಮ್ಮದಾಗಿಸಿಕೊಳ್ಳಲು  ಸಾರ್ವಜನಿಕ ಅವಕಾಶ ಮತ್ತು ಸಾರ್ವಜನಿಕ ಬೆಂಬಲವು ಪ್ರಯತ್ನಿಸಿರುವುದು ಸಂತೋಷದ ಸಂಗತಿ. ಜಿರಲೆ (ಕಾಕ್ರೋಚ್) ಟೀಕೆಯು ಪ್ರತಿಭಟನೆಯ ಹಕ್ಕಿನ ರಕ್ಷಣೆಗೆ ಮತ್ತು ಕಾರ್ಯಾಂಗವನ್ನು ಉತ್ತರದಾಯಿಯನ್ನಾಗಿ  ಮಾಡುವ ಕಿಚ್ಚಿಗೆ ನಾಂದಿಯಾಯಿತು. ಸಾರ್ವಜನಿಕ ಪರೀಕ್ಷೆಗಳ ಆರೋಗ್ಯ ಮತ್ತು ವಿಶ್ವಾಸಾರ್ಹತೆಯಂಥ ಪ್ರಮುಖ ವಿಷಯದ ಮೇಲೆ ಚಳವಳಿ ನಡೆಸುವ ಉನ್ನತ  ನೈತಿಕತೆ ಆಳುವವರ ಕಣ್ಣ ಕಿಸುರಾಗಿದೆ.

ವ್ಯಂಗ್ಯಚಿತ್ರ ಕೃಪೆ: ರಾಕೇಶ್‌ ರಂಜನ್‌

ಇದನ್ನೂ ಓದಿ : ಅಯೋಧ್ಯೆ ರಾಮ ಮಂದಿರ ದೇಣಿಗೆ ವಿವಾದ: ಟ್ರಸ್ಟ್ ಕಾರ್ಯವೈಖರಿ ಬಗ್ಗೆ ಹೆಚ್ಚಿದ ಪ್ರಶ್ನೆಗಳು

ನ್ಯಾಯಾಂಗವೇ ನೆಲೆ ಬಿಟ್ಟುಕೊಟ್ಟರೆ….

ಸ್ವತಃ ಸಿಜೆಐ ಅವರಿಗೇ ವೈಯಕ್ತಿಕವಾಗಿ ಸಂಬಂಧಪಟ್ಟಿರುವ ನ್ಯಾಯಾಂಗದ ಇನ್ನೊಂದು ಮುಖ್ಯ ನಿರ್ಧಾರವೆಂದರೆ, . ಚುನಾವಣಾ ಆಯೋಗದ ಸ್ವೇಚ್ಛಾಚಾರದ ನಿರ್ಧಾರವು  ಜನರನ್ನು ದೊಡ್ಡ ಪ್ರಮಾಣದಲ್ಲಿ ಮತದಾನದ ಸಾಂವಿಧಾನಿಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿ ಬಿಟ್ಟಿರುವುದು  ಮತದಾರರು  ಮತ್ತು ಅವರ  ಸಾಂವಿಧಾನಿಕ ಹಕ್ಕನ್ನು  ಹೊರಗಿಟ್ಟಿದೆ ಎಂಬುದನ್ನು   ಪರಿಶೀಲಿಸದೆ, ಅದು ಚುನಾವಣಾ ಆಯೋಗದ ಸ್ವಾತಂತ್ರ್ಯದ  ಪ್ರಶ್ನೆ ಎಂದು ನ್ಯಾಯಾಂಗ ಅದಕ್ಕೇ  ಆದ್ಯತೆ ನೀಡಿರುವುದು.  ಇದು ಒಂದು ರೀತಿಯಲ್ಲಿ ಸಾಂವಿಧಾನಿಕ ವ್ಯವಸ್ಥೆಯನ್ನು  ಬುಡಮೇಲು ಮಾಡುವುದಕ್ಕೆ  ಕೊಡುಗೆ ನೀಡಿದೆ. ಇಲ್ಲಿ ಆಯೋಗದ ಉತ್ತರದಾಯಿತ್ವದ  ಪ್ರಶ್ನೆಯೇ ಕಳೆದುಹೋಗಿದೆ, ಅದಿಲ್ಲದಿದ್ದರೆ, ಚುನಾವಣಾ ಆಯೋಗದ ಕ್ರಮಗಳು ರಾಜಕೀಯ ಹಿತಾಸಕ್ತಿಗಳಿಗೆ ಅನುಕೂಲ ಕಲ್ಪಿಸುವ  ದಬ್ಬಾಳಿಕೆಗೆ ಎಡೆ ಮಾಡಿಕೊಡುತ್ತವಷ್ಟೇ. ದ್ವೇಷಕೋರತನ

ಈ ಹಿಂದೆ, ಸ್ವತಃ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ ರವರೇ, ಅಯೋಧ್ಯೆ ಕುರಿತ ತೀರ್ಪನ್ನು ಮಸೀದಿಯನ್ನು ಕೆಡವಿ ಹಾಕಿದ ಹಿಂಸಾಚಾರದಲ್ಲಿ ತೊಡಗಿದ್ದವರ ಧಾರ್ಮಿಕ ನಂಬಿಕೆಗಳ ಆಧಾರದಲ್ಲೇ ನೀಡಲಾಗಿತ್ತು ಎಂಬ ಗುಟ್ಟನ್ನು  ಸಾರ್ವಜನಿಕ ಸಂದರ್ಶನವೊಂದರಲ್ಲಿ ರಟ್ಟು ಮಾಡಿದ್ದರು. ಬೇರೆ ಮಾತಿನಲ್ಲಿ ಹೇಳುವುದಾದರೆ, ಆದೇಶ ಹೊರಡಿಸಲಾಯಿತು; ಆದರೆ ಅದು ನ್ಯಾಯವನ್ನು ಒದಗಿಸುವಲ್ಲಿ ವಿಫಲವಾಗಿತ್ತು. ನ್ಯಾಯಾಂಗವೇ ನೆಲೆಯನ್ನು ಬಿಟ್ಟುಕೊಡುವುದಾದರೆ, ಸಾಂವಿಧಾನಿಕ ವ್ಯವಸ್ಥೆ ಒತ್ತಟ್ಟಿಗಿರಲಿ, ಕಾನೂನಿನ ಆಡಳಿತವಾದರೂ  ಹೇಗೆ ತಾನೇ ಉಳಿದೀತು?

ಸ್ವತಃ ಮುಖ್ಯ ನ್ಯಾಯಾಧೀಶ ಚಂದ್ರಚೂಡ್‌ ರವರೇ, ಅಯೋಧ್ಯೆ ಕುರಿತ ತೀರ್ಪನ್ನು ಮಸೀದಿಯನ್ನು ಕೆಡವಿ ಹಾಕಿದ ಹಿಂಸಾಚಾರದಲ್ಲಿ ತೊಡಗಿದ್ದವರ ಧಾರ್ಮಿಕ ನಂಬಿಕೆಗಳ ಆಧಾರದಲ್ಲೇ ನೀಡಲಾಗಿತ್ತು ಎಂಬ ಗುಟ್ಟನ್ನು  ಸಾರ್ವಜನಿಕ ಸಂದರ್ಶನವೊಂದರಲ್ಲಿ ರಟ್ಟು ಮಾಡಿದ್ದರು. ಬೇರೆ ಮಾತಿನಲ್ಲಿ ಹೇಳುವುದಾದರೆ, ಆದೇಶ ಹೊರಡಿಸಲಾಯಿತು; ಆದರೆ ಅದು ನ್ಯಾಯವನ್ನು ಒದಗಿಸುವಲ್ಲಿ ವಿಫಲವಾಗಿತ್ತು. ನ್ಯಾಯಾಂಗವೇ ನೆಲೆಯನ್ನು ಬಿಟ್ಟುಕೊಡುವುದಾದರೆ, ಸಾಂವಿಧಾನಿಕ ವ್ಯವಸ್ಥೆ ಒತ್ತಟ್ಟಿಗಿರಲಿ, ಕಾನೂನಿನ ಆಡಳಿತವಾದರೂ  ಹೇಗೆ ತಾನೇ ಉಳಿದೀತು?

ದಿಟ್ಟ ದೃಷ್ಟಾಂತಗಳು

ಆದರೆ, ಸಮಾಧಾನದ ವಿಚಾರವೆಂದರೆ, ಕೆಳ ಹಂತದ ನ್ಯಾಯಾಂಗದಲ್ಲಿ ನ್ಯಾಯಾಧೀಶರುಗಳು  ಧೈರ್ಯದಿಂದ ಆದೇಶ ಹೊರಡಿಸಿದ ಪ್ರಕರಣಗಳಿವೆ ಎನ್ನುವುದು. ಮಧ್ಯ ಪ್ರದೇಶದಲ್ಲಿ 2022ರಲ್ಲಿ ದೊಂಬಿಯೊಂದು ಬಡಿದು ಸಾಯಿಸಿದ  ಪ್ರಕರಣದಲ್ಲಿ ಆರೋಪಿಗಳಾದ ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜಡ್ಜ್ ತಬಸ್ಸುಂ ಖಾನ್ ವಿರುದ್ಧ ಆನ್‌ಲೈನ್‌ನಲ್ಲಿ ದ್ವೇಷ ಪ್ರಚಾರವನ್ನು ಉದ್ರೇಕಿಸಿ. ಜನರ ಗಮನವನ್ನು ತೀರ್ಪಿನ ಮಹತ್ವದ ಬದಲಿಗೆ, ಆಕೆಯ ಧಾರ್ಮಿಕ ಗುರುತಿನ ಕಡೆಗೆ ತಿರುಗಿಸಲಾಯಿತು. ಇದು  ಕೋಮು ದ್ವೇಷ ಮತ್ತು ಕೊಲೆ ಬೆದರಿಕೆಗಳಿಗೆ ಕಾರಣವಾದಾಗ  ಹೈಕೋರ್ಟ್ ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಜಡ್ಜ್ ಖಾನ್‌ರಿಗೆ ಪೊಲೀಸ್ ರಕ್ಷಣೆಯನ್ನು ಒದಗಿಸಲಾಯಿತು. ಇಡೀ ಕಾನೂನು ಸಮುದಾಯವು ನ್ಯಾಯಾಧೀಶರ ವಿರುದ್ಧದ ದ್ವೇಷ ಪ್ರಚಾರ ಹಾಗೂ ಕಿರುಕುಳವನ್ನು ಖಂಡಿಸಿದ್ದು ಮತ್ತು  ಇಂಥ ದಾಳಿಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕುಂದಿಸುತ್ತವೆ ಹಾಗೂ ಕಾನೂನು ಆಡಳಿತದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಅಳಿಸಿ ಹಾಕುತ್ತವೆ ಎಂದು ಎಚ್ಚರಿಸಿರುವುದು ಉತ್ತಮ ಬೆಳವಣಿಗೆ. ದ್ವೇಷಕೋರತನ

ಜಡ್ಜ್ ತಬಸ್ಸುಂ ಖಾನ್

ಈ ಆದೇಶವನ್ನು ಕಾನೂನಿನ ಸೂಕ್ಷ್ಮ ಪರಿಶೀಲನೆ ಹಾಗೂ ಪ್ರಕ್ರಿಯೆ ಸಂಪೂರ್ಣಗೊಂಡ ನಂತರವಷ್ಟೇ ನೀಡಲಾಗಿತ್ತು. ಗಮನಾರ್ಹ ಸಂಗತಿಯೆಂದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಿಂದನೆಗಳು ನ್ಯಾಯಾಲಯ ಕಂಡುಕೊಂಡ ಸಂಗತಿಗಳ ಬಗ್ಗೆ ಏನೇನೂ ಹೇಳಿಲ್ಲ. ಆದ್ದರಿಂದ, ನ್ಯಾಯಾಲಯದ ಆದೇಶ  ವಾಸ್ತವವಾಗಿ ಹಿರಿಯ ವಕೀಲರು, ವಕೀಲರ ಸಂಘಗಳು ಸೇರಿದಂತೆ ಸಮಸ್ತ ಕಾನೂನು ಸಮುದಾಯ,  ರಾಜಕಾರಣಿಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಒಂದಾಗಿ, ನ್ಯಾಯಾಧೀಶರ ಪರವಾಗಿ ನಿಲ್ಲಲು ಸ್ಫೂರ್ತಿದಾಯಕವಾಯಿತು. ಇದೊಂದು `ಗಂಭೀರ ವಿಚಾರ’ ಎಂದು ಹೇಳಿ ಅವರೆಲ್ಲರೂ ಒಂದಾಗಿದ್ದರು. ಇಂಥ ಬೆದರಿಕೆಗಳು `ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಅಧಿಕಾರಿಗಳ ನಿರ್ಭೀತ ಕಾರ್ಯಕ್ಕೆ ನೇರವಾಗಿ ಅಡ್ಡಿಯಾಗುತ್ತವೆ’ ಎಂದು ಮಧ್ಯ ಪ್ರದೇಶ ಹೈಕೋರ್ಟಿನ  ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು. ಈ ರೀತಿಯ ಬೆದರಿಕೆಗೆ ಕಾರಣರಾದವರನ್ನು ಬಂಧಿಸುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ ಪೀಠ ನಿರ್ದೇಶನವನ್ನೂ ಕೊಟ್ಟಿತು. ನ್ಯಾಯಾಧೀಶೆಗೆ  ಪೊಲೀಸ್ ರಕ್ಷಣೆ ಮುಂದುವರಿಯ ಬೇಕೆಂದೂ ಅದು ಸೂಚಿಸಿತು. ಜಡ್ಜ್‌ ಖಾನ್ ಕೆಲಸ ಮಾಡುವ ಕೋರ್ಟಿನ  ಬಾರ್ ಅಸೋಸಿಯೇಶನ್ ಅಧ್ಯಕ್ಷರು ಈ ಪ್ರಕರಣದಲ್ಲಿ ಗಣನೀಯ ಸಾಂಸ್ಥಿಕ ಕ್ರಮ ಇಲ್ಲದಿರುವುದನ್ನು ಪ್ರಶ್ನಿಸಿದ್ದಾರೆ. ʼಗೋರಕ್ಷಕರು’ ಎಂದು ಹೇಳಿಕೊಳ್ಳುವವರು ನಡೆಸಿದ ದೊಂಬಿ ಹಲ್ಲೆಯಿಂದಾಗಿ ಸಾವು ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಇದಾಗಿತ್ತು.

ಪೌರರು ಸರಕಾರದ ಗುಲಾಮರಲ್ಲ

ಇನ್ನೊಂದು ಹೊಳೆಯುವ ಉದಾಹರಣೆಯೆಂದರೆ, ನ್ಯಾಯಮೂರ್ತಿ ಮಾಧವ ಜಮಾದಾರ್ ಮುಂಬೈ ಪೊಲೀಸನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡದ್ದು. ತಮ್ಮ ಗಡೀಪಾರಿನ ಆದೇಶಕ್ಕೆ ಆಧಾರವೇನು ಎಂದು ಅರ್ಜಿದಾರರು  ಸವಾಲು ಹಾಕಿದ್ದರು. `ಬಿಜೆಪಿ ಸರಕಾರಕ್ಕೆ ಧಿಕ್ಕಾರ, ಅಮಿತ್ ಷಾರಿಗೆ ಧಿಕ್ಕಾರ’ ಎಂದಷ್ಟೇ ಅರ್ಜಿದಾರರು ಘೋಷಣೆ ಕೂಗಿದ್ದರು. ನಾಗರಿಕರು ಇಂಥ ಘೊಷಣೆಗಳನ್ನು ಕೂಗಬಾರದೇಕೆ ?ಆ ಘೋಷಣೆ ಕೂಗಿದ್ದಕ್ಕೆ ಗಡಿಪಾರು ಶಿಕ್ಷೆ ಯಾಕೆ?  ಎಂದು ನ್ಯಾಯಾಧೀಶರು ಮುಂಬೈ ಪೊಲಿಸನ್ನು ಪ್ರಶ್ನಿಸಿದರು. ಮುಂದುವರೆದು, “ಏನಿದು? ಎಲ್ಲ ಪೌರರನ್ನು ಭಾರತ ಸರಕಾರದ ಗುಲಾಮರನ್ನಾಗಿ ಮಾಡಲಾಗುತ್ತಿದೆ….. ಅವರು ಪ್ರತಿಭಟನೆ ನಡೆಸುವಂತಿಲ್ಲ, ಚಳವಳಿ ಮಾಡುವಂತಿಲ್ಲ. ಇದೆಲ್ಲ ಏನು? ಇಂದು ಬಹಳಷ್ಟು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಅದನ್ನು ಜನರು ಪ್ರತಿಭಟಿಸಿದರೆ ಅವರ ವಿರುದ್ಧ ನೀವು ಕೇಸ್ ಜಡಿಯುತ್ತೀರಿ… ಏನಿದೆಲ್ಲ? ಪ್ರತಿಭಟಿಸುವುದು ಪ್ರಜೆಗಳ ಹಕ್ಕಾಗಿದೆ” ಎಂದು  ನ್ಯಾಯಮೂರ್ತಿ  ಜಮಾದಾರ್ ಟಿಪ್ಪಣಿ ಮಾಡಿದರು.

 

ನ್ಯಾಯಮೂರ್ತಿ ಮಾಧವ ಜಮಾದಾರ್

“ಪೊಲೀಸರು ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯ ಆಳುಗಳಲ್ಲ. ಅವರು ಸಾರ್ವಜನಿಕ ಸೇವಕರು. ….ನಿಮ್ಮ ಅಧಿಕಾರಿಗಳ ಮೇಲೆ ಭಾರಿ ದಂಡ ವಿಧಿಸುತ್ತೇನೆ”  ಎಂದು ಕೂಡ ನ್ಯಾಯಮೂರ್ತಿ ಜಮಾದಾರ್ ಎಚ್ಚರಿಸಿದರು. ಗಾಜಾದಲ್ಲಿನ ನರಹತ್ಯೆ ಖಂಡಿಸಿ ಸಿಪಿಐ (ಎಂ) ವ್ಯವಸ್ಥೆಗೊಳಿಸಿದ್ದ ಪ್ರತಿಭಟನೆ ಕಾರ್ಯಕ್ರಮದ ಮೇಲೆ ಮುಂಬೈ ಪೊಲೀಸರು ವಿಧಿಸಿದ್ದ ನಿರ್ಬಂಧವನ್ನು ತೆರವು ಗೊಳಿಸುವಂತೆ ಆದೇಶ ನೀಡಿದ್ದು ಇದೇ ಬಾಂಬೆ ಹೈಕೋರ್ಟ್ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

“ಏನಿದು? ಎಲ್ಲ ಪೌರರನ್ನು ಭಾರತ ಸರಕಾರದ ಗುಲಾಮರನ್ನಾಗಿ ಮಾಡಲಾಗುತ್ತಿದೆ….. ಅವರು ಪ್ರತಿಭಟನೆ ನಡೆಸುವಂತಿಲ್ಲ, ಚಳವಳಿ ಮಾಡುವಂತಿಲ್ಲ. ಇದೆಲ್ಲ ಏನು? ಇಂದು ಬಹಳಷ್ಟು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಅದನ್ನು ಜನರು ಪ್ರತಿಭಟಿಸಿದರೆ ಅವರ ವಿರುದ್ಧ ನೀವು ಕೇಸ್ ಜಡಿಯುತ್ತೀರಿ… ಏನಿದೆಲ್ಲ? ಪ್ರತಿಭಟಿಸುವುದು ಪ್ರಜೆಗಳ ಹಕ್ಕಾಗಿದೆ” ಎಂದು  ನ್ಯಾಯಮೂರ್ತಿ  ಜಮಾದಾರ್ ಟಿಪ್ಪಣಿ ಮಾಡಿದರು.

ಇದಕ್ಕೂ ಮೊದಲು, ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಮತದಾನದ ಹಕ್ಕನ್ನು ಕಳೆದುಕೊಂಡ ಜನರ ಮನವಿಗಳನ್ನು ಆಲಿಸಲು ಸುಪ್ರಿಂ ಕೋರ್ಟಿನ ಆದೇಶಕ್ಕೆ ಅನುಸಾರವಾಗಿಯೇ ರಚಿಸಲಾಗಿದ್ದ 19 ಟ್ರಿಬ್ಯುನಲ್‌ಗಳ ಪೈಕಿ ಒಂದು ಟ್ರಿಬ್ಯುನಲ್‌ನ ಮುಖ್ಯಸ್ಥರಾದ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ರವರಿಗೆ , ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದ್ದ 1777 ಹೆಸರುಗಳ  ಪೈಕಿ 1717 ಮತದಾರರನ್ನು ತಪ್ಪಾಗಿ ತೆಗೆದು ಹಾಕಲಾಗಿದೆ  ಎಂದು ಕಂಡು ಬಂದಿತು.  ಇದು ಅಲ್ಲಿ ಅಳಿಸಿ ಹಾಕಿದ ಒಟ್ಟು ಹೆಸರುಗಳಲ್ಲಿ ಶೇಕಡ 96ರಷ್ಟಾಗುತ್ತದೆ. ಅದೇ ಲೆಕ್ಕಾಚಾರದ ಪ್ರಕಾರ ಒಂದು ದೋಷಪೂರಿತ ಪ್ರಕ್ರಿಯೆಯಿಂದಾಗಿ ಮತ ಚಲಾಯಿಸಲಾಗದವರ  ಸಂಖ್ಯೆ 25 ಲಕ್ಷದಷ್ಟಾಗುತ್ತದೆ. ಇಂಥ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲು 20ರಿಂದ 25 ವರ್ಷಗಳೇ ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ. ದುರದೃಷ್ಟವಶಾತ್, ಇಂಥ ಎದ್ದು ಕಾಣುವ ದೋಷಗಳ ಹೊರತಾಗಿಯೂ ಎಸ್‌ಐಆರ್ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವುದು ಉನ್ನತ ನ್ಯಾಯಾಂಗಕ್ಕೆ ಕಾಣ ಬರುತ್ತಿಲ್ಲ.

ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ

ನಾವೀಗ, ಕೊಳ್ಳೆಗೆ ಇಳಿದಿರುವ  ಹಿಂದುತ್ವವು ಶಾಸಕಾಂಗ ಮತ್ತು ಕಾರ್ಯಾಂಗದ ಕ್ರಮಗಳನ್ನು  ಆಯುಧಗಳಾಗಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ನ್ಯಾಯಾಂಗವು ಕೆಲಸ ಮಾಡುವಂಥ ಸನ್ನಿವೇಶದ ಒಂದು ನಿರ್ಣಾಯಕ ಹೊಸ್ತಿಲನ್ನು ತಲುಪಿದ್ದೇವೆ. ಸಾಂವಿಧಾನಿಕ ವ್ಯವಸ್ಥೆಯನ್ನು ಪಾರುಮಾಡಲು ಸಾರ್ವಜನಿಕ ಅವಕಾಶಗಳು ಮತ್ತು ಸಾರ್ವಜನಿಕ ಪ್ರತಿಭಟನೆಗಳು ಮಾತ್ರವೇ  ಪ್ರತಿರೋಧದ ಏಕೈಕ ಅರ್ಥಪೂರ್ಣ ಹಾದಿಯಾಗಿ ಉಳಿದಿವೆ. ಆದರೆ, ನ್ಯಾಯಾಂಗವು ಇಂಥ ಸಾರ್ವಜನಿಕ ಕಾರ್ಯಾಚರಣೆಗಳಿಗೆ ಬೆಂಬಲ ಒದಗಿಸುವ ಧೈರ್ಯವನ್ನು ತಾಳುತ್ತದೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅಲ್ಲದೆ, ನ್ಯಾಯಾಧೀಶೆ  ಖಾನ್, ನ್ಯಾಯಮೂರ್ತಿ ಜಮಾದಾರ್ ಮತ್ತು ನ್ಯಾಯಮೂರ್ತಿ ಶಿವಜ್ಞಾನಂ ಅವರ ಇಂತಹ ದಿಟ್ಟ ದೃಷ್ಟಾಂತಗಳು ದಾಳಿಗಳನ್ನು ಹಿಮ್ಮೆಟ್ಟಿಸುವ ಹಾಗೂ ನಾಗರಿಕರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇನ್ನಷ್ಟು ಮರುಕಳಿಸಬಹುದೇ ಎನ್ನುವುದೂ ದೊಡ್ಡ ಪ್ರಶ್ನೆಯಾಗಿದೆ. ಇದು ಸ್ವತಃ ನ್ಯಾಯಾಂಗದ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಬಹು ಮಹತ್ವದ್ದಾಗಿದೆ. ದ್ವೇಷಕೋರತನ

(ಕೃಪೆ: ಪೀಪಲ್ಸ್‌ ಡೆಮಾಕ್ರಸಿ, ಜುಲೈ ೧೨)

ಇದನ್ನೂ ನೋಡಿ : ರಾಜ್ಯದ ನಿರುದ್ಯೋಗ ಪ್ರಮಾಣ ಶೇ.8.6: ಕಂಬಳದ ಉದ್ಯೋಗ ಕೊಡುವಿರಾ ಮುಖ್ಯಮಂತ್ರಿಗಳೇ? Janashakthi Media

Donate Janashakthi Media

Leave a Reply

Your email address will not be published. Required fields are marked *