ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ ಅಲ್ಲ. ಹೈಕಮಾಂಡ್ ಗೊಂದಲ ಪರಿಹಾರ ಮಾಡದೇ ಹೋದ್ರೆ ಪಕ್ಷಕ್ಕೆ ತೊಂದರೆಯಾಗಲಿದೆ ಎಂದು ಏಪ್ತಿಲ್ 16ರಂದು ಬೈ ಎಲೆಕ್ಷನ್ ಫಲಿತಾಂಶ ಬಂದ ನಂತರ ನಾಯಕತ್ವ ಚರ್ಚೆ ಆಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಾಗಡಿ ಶಾಸಕ ಹೆಚ್. ಸಿ. ಬಾಲಕೃಷ್ಣ ಹೇಳಿದ್ದಾರೆ. ಗೊಂದಲ
ನಮ್ಮಂತಹವರ ಬಳಿ ಇದನ್ನ ಕೇಳೋದು ಅಲ್ಲ. ಸೂಕ್ತ ವ್ಯಕ್ತಿಗಳ ಬಳಿ ಇದನ್ನ ಕೇಳಬೇಕು. ನಾಯಕತ್ವ ಚರ್ಚೆ ಮುಗಿದ ಅಧ್ಯಾಯ ಅಲ್ಲ. ಅದಕ್ಕೆ ಅಂತಿಮ ರೂಪ ಹೈಕಮಾಂಡ್ ಕೊಡಬೇಕು. ನಾವು ಯಾರು ಕೊಡೋಕೆ ಆಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ಒಂದು ಅನೈತಿಕ ಯುದ್ಧ, ತೈಲ-ಡಾಲರ್ ಕೊಂಡಿ ಮತ್ತು ವಿಶ್ವ ಅರ್ಥವ್ಯವಸ್ಥೆ
ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಜಮೀರ್ ವಿರುದ್ಧ ಕ್ರಮಕ್ಕೆ ಮುಸ್ಲಿಂ ನಾಯಕರ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಯಾಕೆ ಕ್ರಮ ಆಗಬೇಕು? ಏನು? ಅಂತ ನನಗೇನು ಸಂಪೂರ್ಣ ಗೊತ್ತಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರು ಅಲ್ಲ. ಪಕ್ಷದ ವಿರುದ್ಧ ಯಾರೇ ನಡೆದರೂ ತಪ್ಪು. ಸಿದ್ದರಾಮಯ್ಯ ಆಗಲಿ, ಡಿಕೆ ಶಿವಕುಮಾರ್ ಆಗಲಿ, ಜಮೀರ್ ಆಗಲಿ, ಬಾಲಕೃಷ್ಣ ಆಗಲಿ ಯಾರೇ ಪಕ್ಷದ ವಿರುದ್ಧ, ಪಕ್ಷದ ಬೆಳವಣಿಗೆಗೆ ಅಡಚಣೆ ಮಾಡಿದ್ರೆ ಎಲ್ಲರ ಮೇಲೆ ಕ್ರಮ ಆಗಬೇಕು ಎಂದರು.
ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಬಾಲಕೃಷ್ಣ, ನಾವು ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಇರೋ ಕಡೆ ಪ್ರಚಾರ ಮಾಡಿರಲಿಲ್ಲ. ಇಲ್ಲಿ ಅಲ್ಪಸಂಖ್ಯಾತರಿಂದ ಗೊಂದಲ ಆಗಿದೆ. ಆದರೆ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿಲ್ಲ, ಸಮಸ್ಯೆ ಬಂದಿದೆ ಅದಕ್ಕೆ ಪರಿಹಾರ ಹುಡುಕಬೇಕು ಅಷ್ಟೇ ಎಂದು ಹೇಳಿದ್ದಾರೆ.
ಇನ್ನೂ ದೊರೆ ಮೇಲೆ ಕ್ರಮ ಇಲ್ಲ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿ, ಡಿಕೆ ಶಿವಕುಮಾರ್ ಸದ್ಗುರು ಜೊತೆ ವೇದಿಕೆ ಹಂಚಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮ. ಧಾರ್ಮಿಕ ಕಾರ್ಯಕ್ರಮಕ್ಕೆ ಕರೆದಿದ್ದರು, ಅದಕ್ಕೆ ಡಿಕೆಶಿ ಹೋಗಿದ್ರು. ಅಲ್ಲಿಗೆ ಹೋಗಿ ರಾಹುಲ್ ಗಾಂಧಿ ಯಾರು ಅಂತ ಡಿಕೆಶಿ ಸದ್ಗುರುಗೆ ಪಾಠ ಹೇಳಿ ಬಂದಿದ್ದಾರೆ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡರು.
ಇದನ್ನೂ ನೋಡಿ: ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ | ಡಾ ಸಿದ್ದಲಿಗಯ್ಯ | ಪಿಚ್ಚಳ್ಳಿ ಶ್ರೀನಿವಾಸ Janashakthi Media
