ಬೆಂಗಳೂರು: ಮದ್ಯಪಾನ ಮಾಡುವುದಕ್ಕೆ ತಾನು ವಿರೋಧಿಯಲ್ಲ. ಆದರೆ ಅದು ವ್ಯಕ್ತಿಯ ಬದುಕನ್ನು ಹಾಳು ಮಾಡುವ ಮಟ್ಟಿಗೆ ವ್ಯಸನವಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮದ್ಯಪಾನ
ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಮದ್ಯಪಾನವನ್ನು ಸಂಪೂರ್ಣ ತಪ್ಪಿಸಬೇಕು ಎಂದು ಹೇಳುವುದಕ್ಕಿಂತ, ಅದು ಮಿತಿಯೊಳಗೆ ಇರಬೇಕು ಎಂಬ ಅರಿವು ಜನರಲ್ಲಿ ಮೂಡಬೇಕು ಎಂದು ಹೇಳಿದರು.
“ಅತಿಯಾಗಿ ಮದ್ಯ ಸೇವನೆ ಮಾಡಿದರೆ ಆರೋಗ್ಯ ಹದಗೆಡುತ್ತದೆ. ಕುಟುಂಬದಲ್ಲಿಯೂ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಮದ್ಯಪಾನ ಚಟವಾಗಿ ಬೆಳೆದು ವ್ಯಕ್ತಿಯ ಜೀವನವನ್ನು ಹಾಳು ಮಾಡಬಾರದು,” ಎಂದು ಅವರು ಅಭಿಪ್ರಾಯಪಟ್ಟರು. ಮದ್ಯಪಾನ
ಇದನ್ನೂ ಓದಿ : ತಮಿಳುನಾಡು ರಾಜಕೀಯ ಬೆಳವಣಿಗೆ | ಟಿವಿಕೆ ಸರ್ಕಾರ ರಚನೆಗೆ ಇನ್ನೂ ಎರಡು ಸ್ಥಾನಗಳ ಕೊರತೆ
ಇತಿಹಾಸ ಮತ್ತು ಪುರಾಣಗಳಲ್ಲಿಯೂ ಮದ್ಯಪಾನದ ಉಲ್ಲೇಖಗಳಿವೆ ಎಂದು ಹೇಳಿದ ಮುಖ್ಯಮಂತ್ರಿ, ಸಮಾಜದಲ್ಲಿ ಹಲವು ಕಾಲಗಳಿಂದಲೂ ಇದು ನಡೆದು ಬಂದಿದೆ. ಆದರೆ ಯಾವುದೇ ವಿಷಯ ಮಿತಿಮೀರಿದರೆ ಅದು ಅಪಾಯಕಾರಿಯಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಕುರಿತೂ ಉಲ್ಲೇಖಿಸಿದರು. 2023ರಲ್ಲಿ ಆರಂಭಿಸಲಾದ ನಾಲ್ಕು ಮಹಡಿಗಳ ಕಟ್ಟಡ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಇದಕ್ಕೆ ಸುಮಾರು 19.43 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಗೃತಿ, ಆರೋಗ್ಯಕರ ಜೀವನಶೈಲಿ ಮತ್ತು ಕುಟುಂಬದ ನೆಮ್ಮದಿ ಕಾಪಾಡುವುದು ಮುಖ್ಯ ಎಂದು ಮುಖ್ಯಮಂತ್ರಿ ಹೇಳಿದರು.
ಇದನ್ನೂ ನೋಡಿ : ಕರಾವಳಿ ಪ್ರವಾಸೋದ್ಯಮ : ಸ್ಥಳೀಯರ ಬದುಕು ಉಳಿಯಬೇಕೇ ಹೊರತು ಕಾರ್ಪೊರೇಟ್ ಲಾಭಕ್ಕಲ್ಲ – ಮುನೀರ್ ಕಾಟಿಪಳ್ಳ
