ಉತ್ತರಾಖಂಡ : ರಾಜಸ್ಥಾನದ ನಾಲ್ವರು ಬಿ.ಎಡ್ ವಿದ್ಯಾರ್ಥಿಗಳು ಉತ್ತರಾಖಂಡದಲ್ಲಿ ಮಳೆಯಿಂದಾಗಿ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವ ಕಾರಣ ಮುನ್ಸಿಯಾರಿ ಪರೀಕ್ಷಾ ಕೇಂದ್ರವನ್ನು ತಲುಪಲು ಹೆಲಿಕಾಪ್ಟರ್ ಬಾಡಿಗೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಸವದತ್ತಿ: |ಸವದತ್ತಿ ಯಲ್ಲಮ್ಮ ಪುರಸಭೆ ಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಸಚಿವ ಸಂಪುಟದಲ್ಲಿ ಅನುಮೋದನೆ
ಒಮರಾಮ್ ಜಾಟ್, ಮಂಗಲಾಂ ಜಾಟ್, ಪ್ರಕಾಶ್ ಗೋದಾರ ಜಾಟ್ ಮತ್ತು ನರಪತ್ ಕುಮಾರ್ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದ ವಿದ್ಯಾರ್ಥಿಗಳು.‘ಆಗಸ್ಟ್ 31ರಂದು ಹಲ್ದಾವಾನಿಗೆ ಬಂದಾಗ ಭೂಕುಸಿತದಿಂದ ಪರೀಕ್ಷಾ ಕೇಂದ್ರದ ಮಾರ್ಗಗಳಲ್ಲಿ ಸಂಚಾರಕ್ಕೆ ರದ್ದಾಗಿರುವುದು ತಿಳಿಯಿತು. ಹಲ್ದಾವಾನಿ ಮತ್ತು ಮುನ್ಸಿಯಾರಿ ನಡುವೆ ಹೆಲಿಕಾಪ್ಟರ್ ಸೇವೆ ನೀಡುವುದು ತಿಳಿಯಿತು. ಆದರೆ, ಹವಾಮಾನ ವೈಪರೀತ್ಯದಿಂದ ಸೇವೆಯನ್ನು ತಾತ್ಕಲಿಕವಾಗಿ ರದ್ದು ಮಾಡಲಾಗಿತ್ತು. ಆದರೆ ವಿಮಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಜೊತೆ ಮಾತನಾಡಿದ ಬಳಿಕ ಅವರು ನಮಗೆ ಸಹಾಯ ಮಾಡಿದರು’ ಎಂದು ವಿದ್ಯಾರ್ಥಿ ಒಮರಾಮ್ ಜಾಟ್ ತಿಳಿಸಿದರು.
ಏಕಮುಖ ಪ್ರಯಾಣಕ್ಕೆ ₹5,200 ಪಾವತಿಸಿದ್ದರು.
ಇದನ್ನೂ ನೋಡಿ: ಗೌರಿ ನೆನಪು : ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ Janashakthi Media
