ನವದೆಹಲಿ: ಇತ್ತೀಚಿಗೆ ಭಾರತದ ಮೊದಲ ಕಾನೂನುಬದ್ಧ ನಿಷ್ಕ್ರಿಯ ದಯಾಮರಣಕ್ಕೆ (Passive Euthanasia) ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದೂ, ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ 32 ವರ್ಷ ವಯಸ್ಸಿನ ಹರೀಶ್ ರಾಣಾ ನಿಧನರಾಗಿದ್ದಾರೆ.
2013 ರಲ್ಲಿ ಸಂಭವಿಸಿದ ಅಪಘಾತದ ನಂತರ ಹರೀಶ್ ರಾಣಾ ಅವರು ಮೆದುಳಿನ ಗಾಯದಿಂದಾಗಿ ಕೋಮಾದಲ್ಲಿದ್ದರು. ಭಾರತದ ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 11, 2026 ರಂದು ಅವರ ಕುಟುಂಬದ ಮನವಿಯ ಮೇರೆಗೆ ನಿಷ್ಕ್ರಿಯ ದಯಾಮರಣಕ್ಕೆ ಅನುಮೋದನೆ ನೀಡಿತು. ಇದು ಭಾರತದ ಇತಿಹಾಸದಲ್ಲಿ ಇಂತಹ ಮೊದಲ ಪ್ರಕರಣವಾಗಿದೆ.
ವೈದ್ಯಕೀಯ ಮಂಡಳಿಯು ಹರೀಶ್ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವರದಿ ಮಾಡಿತ್ತು. ಇದರಿಂದಾಗಿ ಕುಟುಂಬವು ಅವರ ಸಂಕಟವನ್ನು ಕೊನೆಗೊಳಿಸಲು ಈ ನಿರ್ಧಾರ ಕೈಗೊಂಡಿತು.
2013 ರಿಂದ ಕೋಮಾದಲ್ಲಿದ್ದ 31 ವರ್ಷದ ಅವರನ್ನು ಗಾಜಿಯಾಬಾದ್‌ನ ಮನೆಯಿಂದ ಏಮ್ಸ್ ನಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ರೋಟರಿ ಕ್ಯಾನ್ಸರ್ ಆಸ್ಪತ್ರೆಯ ಉಪಶಾಮಕ ನಿಗಾ ಘಟಕಕ್ಕೆ ಶನಿವಾರ ಸ್ಥಳಾಂತರಿಸಲಾಗಿತ್ತು.
ಹರೀಶ್ ರಾಣಾಗೆ ನಿಷ್ಕ್ರಿಯ ದಯಾಮರಣವನ್ನು ಅನುಮತಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಏಮ್ಸ್ ದಯಾಮರಣ ಪ್ರಕ್ರಿಯೆ ಆರಂಭಿಸಿತ್ತು.
ಇದನ್ನೂ ನೋಡಿ: “ಕರ್ನಾಟಕದಲ್ಲಿ SIR: ಬೂತ್ ಮಟ್ಟದ ಜಾಗೃತಿ – ವಂಚನೆ ತಡೆಯುವ ಹೊಣೆ ಯಾರದ್ದು?” Janashakthi Media
