ಕೋಲಾರ: ತೇರಹಳ್ಳಿ ಗ್ರಾಮದಲ್ಲಿ ‘ಗ್ರಾಮ ಬೆಳಕು’ ಸಂಸ್ಥೆಯನ್ನು ನಾಗವಜ್ರ ಭಂತೇಜಿ ಸೇರಿದಂತೆ ವಿವಿಧ ಗಣ್ಯರು ಅರಳಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಕೋಲಾರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಜಾನಂದ ಸುಬ್ಬಾರೆಡ್ಡಿ ಸ್ವಾಮಿಗಳು, ಗ್ರಾಮಗಳ ಬದಲಾವಣೆಗೆ ಜ್ಞಾನದ ಬೆಳಕು ಅಗತ್ಯವಿದ್ದು, ಆಧುನಿಕ ಸಮಾಜವನ್ನು ಹಾಳುಗೆಡವುತ್ತಿರುವ ತಾರತಮ್ಯಗಳನ್ನು ತೊರೆದು ಎಲ್ಲರನ್ನೂ ಸಮಾನವಾಗಿ ಕಾಣುವ ಗುಣ ಬೆಳೆಯಬೇಕು ಎಂದು ಆಶಿಸಿದರು.
ಇದನ್ನೂ ಓದಿ: ಕೊಲೆ ವಿಚಾರಣೆಯಲ್ಲಿ 40 ವರ್ಷಗಳ ‘ಅಸಾಧಾರಣ ವಿಳಂಬ’: ಹೈಕೋರ್ಟ್ನಲ್ಲಿ ಸುಪ್ರೀಂ ಕೋರ್ಟ್ ದೂರು
ಮತ್ತೊಬ್ಬ ಗಣ್ಯರಾದ ಗೋಪಿನಾಥ್ ಕರವಿ ಮಾತನಾಡಿ, ವಿಚಾರಗಳು ಕೇವಲ ಮಾತು, ಬರಹಕ್ಕೆ ಸೀಮಿತವಾಗದೆ ಕೃತಿಯಲ್ಲಿ ಮೂಡಿಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಭವ್ಯ ಮತ್ತು ಕಾವ್ಯ ಅವರಿಗೆ ‘ಗ್ರಾಮ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು ಹಾಗೂ ಸಮಾನತೆಗಾಗಿ ಸಹಭೋಜನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಶಿವಪ್ಪ ಅರಿವು, ತಹಶೀಲ್ದಾರ್ ಶ್ರೀನಿವಾಸರೆಡ್ಡಿ ಸೇರಿದಂತೆ ಹಲವು ಸಾಹಿತಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ
