ಭಯ ಕರಗುತ್ತಿದೆ – ಸಾಮೂಹಿಕ ಧೈರ್ಯ ಸ್ಫೋಟಗೊಂಡಿದೆ

ಸೈಬರ್‌ಲೋಕದಲ್ಲಿ ʼಕಾಕ್ರೋಚ್‌ ಜನತಾ ಪಾರ್ಟಿʼಯ ಕ್ಷಿಪ್ರ ಬೆಳವಣಿಗೆಯು ವಾಸ್ತವದಲ್ಲಿ ಎಂದಿಗೂ ಪುನರಾವರ್ತಿಸುವುದಿಲ್ಲ ಎಂದು ಭಾವಿಸಿದ್ದವರು, ‘ಕಾಕ್ರೋಚ್ ಪಾರ್ಟಿಎಂಬುದು ಹೊಣೆಗಾರಿಕೆಯನ್ನು ಒತ್ತಾಯಿಸಲು ಸ್ಫೋಟಗೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದ ಸಾಮೂಹಿಕ ಆಕ್ರೋಶದ ಸಂಕೇತವಾಗಿತ್ತು ಎಂಬುದನ್ನು ಗುರುತಿಸುವಲ್ಲಿ ವಿಫಲರಾದರು. ದೇಶದ ಯುವಜನರು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಎಷ್ಟರಮಟ್ಟಿಗೆ ಹಿಂದಕ್ಕೆ ತಳ್ಳಲ್ಪಟ್ಟಿದ್ದರೆಂದರೆ , ಅವರಿಗೆ ಆಕ್ರೋಶ ಹೊರಹಾಕುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆ ಇರಲಿಲ್ಲ. ಜುಲೈ 20 ರಂದು ದಿಲ್ಲಿಯಲ್ಲಿ ಅವರು ಭಯವನ್ನು ಮೆಟ್ಟಿನಿಂತರು. ಅವರ ಕ್ರಿಯೆಗಳೇ ಸ್ವತಃ ಮಾತನಾಡಿದವು. ಅವರ ಸಾಮೂಹಿಕ ಧೈರ್ಯವು ಎದ್ದು ಕಾಣುತ್ತಿತ್ತು. ಇದರಿಂದಾಗಿ, ಪ್ರತಿಭಟನಾಕಾರರೊಂದಿಗೆ ಮಾತನಾಡಲು ಕೇಂದ್ರ ಸರ್ಕಾರವು ತೋರಿದ ಹಠಮಾರಿ ನಿರಾಕರಣೆಯು, ಕೊನೆಗೆ ಸಂವಾದದ ಒಂದು  ಸಣ್ಣ ಸೂಚನೆಗೆ ದಾರಿ ಮಾಡಿಕೊಡಬೇಕಾಯಿತು. ಭಯ

ನೀಲೋತ್ಪಲ್‌ ಬಸು

ಅನು:ಸಿಚಿ

ಇತಿಹಾಸದಲ್ಲಿ ಕಾಲವು ದೌಡಾಯಿಸುವ ಕ್ಷಣಗಳಿರುತ್ತವೆ. ಸಾಮೂಹಿಕ ಆಕ್ರೋಶ ಕಾಣುತ್ತಿಲ್ಲವಲ್ಲ ಎಂದು ಪೇಚಾಡುತ್ತಿದ್ದ ಅನೇಕ ಭಾರತೀಯರಿಗೆ ಈಗ ಸಮಾಧಾನವಾಗಿರಬಹುದು. ಕಾರ್ಯಾಂಗ, ಶಾಸಕಾಂಗ ಮತ್ತು ಕೊನೆಗೆ ನ್ಯಾಯಾಂಗವೂ ಸಹ ಒಂದಾಗುತ್ತಿರುವಂತೆ ಕಾಣುವ ರೀತಿಯ ಬೆಳವಣಿಗೆಗಳೊಂದಿಗೆ, ಬಹುತೇಕ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಪುನರಾವರ್ತನೆಯಂತೆ ಕಾಣುತ್ತಿತ್ತು. ಸ್ವಾತಂತ್ರ್ಯ ಹೋರಾಟ, ತ್ಯಾಗ-ಬಲಿದಾನಗಳು ಮತ್ತು ಪ್ರಜಾಸತ್ತಾತ್ಮಕ ಜಾತ್ಯತೀತ ಸಂವಿಧಾನ, ಇವೆಲ್ಲವೂ ತೀವ್ರ ಒತ್ತಡಕ್ಕೆ ಒಳಗಾದಂತೆ ತೋರುತ್ತಿದ್ದವು. ಜುಲೈ 20 ರಂದು ಕಾಕ್ರೋಚ್ ಜನತಾ ಪಕ್ಷ (ಸಿ.ಜೆ.ಪಿ.) ಪ್ರತಿಭಟನೆ ಮತ್ತು ʼಸಂಸತ್ ಚಲೋʼ ಗೆ ಕರೆ ನೀಡಿತು, ಆದರೆ ವಾಸ್ತವವಾಗಿ ಅದು ಸಂಘಟಿತ ಮತ್ತು ಸ್ವಯಂಪ್ರೇರಿತ ವಿದ್ಯಾರ್ಥಿ ಹೋರಾಟಗಳೆರಡರ ಸಂಗಮವಾಗಿ ಮಾರ್ಪಟ್ಟು ಇಡೀ ದೇಶವನ್ನೇ ಬೆರಗುಗೊಳಿಸಿತು.

ನಾವು ಮೊದಲೇ ಗಮನಿಸಿದಂತೆ, ಸೈಬರ್‌ಲೋಕದಲ್ಲಿ ಸಿ.ಜೆ.ಪಿ.ಯ ಚಂಡಮಾರುತದಂತಹ ಬೆಳವಣಿಗೆಯು ಅನೇಕರನ್ನು ಚಕಿತಗೊಳಿಸಿತು. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರಿಂದ ನೇರವಾಗಿ ಹರಿದುಬರುವ ಕೇಂದ್ರೀಕೃತ ಪರೀಕ್ಷೆ ಮತ್ತು ಪ್ರವೇಶ ನೀತಿಯು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಡಿಯಲ್ಲಿ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ನಡೆಸುವಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ. ಎನ್‌ಇಪಿ  ಎಂಬುದು ನಮ್ಮ ಇಡೀ ಶೈಕ್ಷಣಿಕ ಸಂರಚನೆಯನ್ನು ಕಾರ್ಪೊರೇಟ್-ಆರ್‌ಎಸ್‌ಎಸ್ ವಹಿಸಿಕೊಳ್ಳುವುದಕ್ಕೆ ಒಂದು ಮುಖವಾಡ ಎಂಬುದು ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ವಿನಾಶಕಾರಿ ಕೇಂದ್ರೀಕೃತ ಪ್ರವೇಶ ಪರೀಕ್ಷೆಯು ಬಹುಶಃ ಇದರ ಮುಕ್ತಾಯ ಬಿಂದು. ಇದರಿಂದಾಗಿ ವಿದ್ಯಾರ್ಥಿಗಳ ಮೇಲೆ ಉಂಟಾದ ಮಾನಸಿಕ ಆಘಾತ ಮತ್ತು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳ ಬಲವಂತದ ಆತ್ಮಹತ್ಯೆಗಳು ದೇಶದ ಸಾಕ್ಷಿಪ್ರಜ್ಞೆಯನ್ನು ಅಲುಗಾಡಿಸಿವೆ. ಅದು ಉಂಟು ಮಾಡಿದ ಅಧ್ವಾನ ಎಷ್ಟು ಅಗಾಧವಾಗಿತ್ತೆಂದರೆ, ಶಿಕ್ಷಣ ಸಚಿವಾಲಯ ಮತ್ತು ಸರ್ಕಾರವು ಅಂತಿಮವಾಗಿ ಮರುಪರೀಕ್ಷೆಗೆ ಒಪ್ಪಿಕೊಳ್ಳಬೇಕಾಯಿತು.

ಉತ್ತರದಾಯಿತ್ವದ ಭಾರೀ ಕೊರತೆ

ಆದಾಗ್ಯೂ, ಅಲ್ಲಿ ಕಿಂಚಿತ್ತೂ ಉತ್ತರದಾಯಿತ್ವ ಇರಲಿಲ್ಲ. ಎನ್‌ಟಿಎ ವಿಸರ್ಜನೆ ಮತ್ತು ಶಿಕ್ಷಣ ಸಚಿವರ ರಾಜೀನಾಮೆ ಕನಿಷ್ಠ ತಾರ್ಕಿಕ ಬೇಡಿಕೆಗಳಾಗಿದ್ದವು. ಆದರೆ ಆರೆಸ್ಸೆಸ್-ಕಾರ್ಪೊರೇಟ್ ದುಷ್ಟಕೂಟವು, ನರೇಂದ್ರ ಮೋದಿ ಸರ್ಕಾರವನ್ನು ಸಾಧನವಾಗಿಸಿಕೊಂಡು, ರಾಜಕೀಯ ಪ್ರಕ್ರಿಯೆಗಳು ಮತ್ತು ಆಡಳಿತವನ್ನು ತನಗೆ ಬೇಕಾದಂತೆ ತಿರುಚಿ, ಉತ್ತರದಾಯಿತ್ವವನ್ನು ನಿರಾಕರಿಸುವುದನ್ನೇ ಆಳ್ವಿಕೆಯ ತತ್ವವಾಗಿ ಸಾಂಸ್ಥಿಕಗೊಳಿಸಲು ಪ್ರಯತ್ನಿಸಿದೆ. ಅಲ್ಲೊಂದು ಎದ್ದು ಕಾಣುವಂತಹ ಮೌನವಿತ್ತು. ಮೋದಿ ಸ್ವತಃ ಪ್ರವೇಶ ಪರೀಕ್ಷೆಗಳನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ಭಾರತೀಯ ವಾಯುಪಡೆ (ಐಎಎಫ್) ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುತ್ತಿದೆ ಎಂಬ ವಿಲಕ್ಷಣ ಕಲ್ಪನೆಗಳು ಗಟ್ಟಿಯಾಗಿ ಕೇಳಿಬಂದವು.

ಪ್ರಶ್ನಿಸಿದವರು ಮತ್ತು ಪ್ರತಿಭಟಿಸಿದವರೆಲ್ಲರೂ ಜಿರಳೆಗಳು (ಕಾಕ್ರೋಚ್‌ಗಳು) ಎಂಬ ಮುಖ್ಯ ನ್ಯಾಯಾಧೀಶರ ಹೇಳಿಕೆಯು ಬಹುಶಃ ಇದರ ಚರಮಬಿಂದುವಾಯಿತು. ‘ಜಿರಳೆಗಳ ಪಕ್ಷ’ ಎಂಬ ಕಲ್ಪನೆಯು ಕಾಡ್ಗಿಚ್ಚಿನಂತೆ ಹರಡಿತು. ಆದ್ದರಿಂದ, ಸೈಬರ್‌ಲೋಕದಲ್ಲಿ ಸಿ.ಜೆ.ಪಿ.ಯ ಕ್ಷಿಪ್ರ ಬೆಳವಣಿಗೆಯು ವಾಸ್ತವದಲ್ಲಿ ಎಂದಿಗೂ ಪುನರಾವರ್ತಿಸುವುದಿಲ್ಲ ಎಂದು ಭಾವಿಸಿದ್ದವರು, ‘ಕಾಕ್ರೋಚ್ ಪಾರ್ಟಿ’ ಎಂಬುದು ಉತ್ತರದಾಯಿತ್ವವನ್ನು ಒತ್ತಾಯಿಸಲು ಸ್ಫೋಟಗೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದ ಸಾಮೂಹಿಕ ಆಕ್ರೋಶದ ವಿಚಾರದ ಸಂಕೇತವಾಗಿತ್ತು ಎಂಬುದನ್ನು ಗುರುತಿಸುವಲ್ಲಿ ವಿಫಲರಾದರು. ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವವರು ದೇಶದ ಯುವಜನರು ಎಂಬುದರಲ್ಲಿ ಎರಡು ಮಾತಿಲ್ಲ; ಅವರನ್ನು ಎಷ್ಟರಮಟ್ಟಿಗೆ ಹಿಂದಕ್ಕೆ ತಳ್ಳಲಾಗಿದೆ ಎಂದರೆ, ಅವರಿಗೆ ಆಕ್ರೋಶ ಹೊರಹಾಕುವುದನ್ನು ಬಿಟ್ಟು ಬೇರೆ ಯಾವುದೇ ಆಯ್ಕೆ ಇರಲಿಲ್ಲ.‌ ಭಯ

ಪ್ರಶ್ನಿಸಿದವರು ಮತ್ತು ಪ್ರತಿಭಟಿಸಿದವರೆಲ್ಲರೂ ಜಿರಳೆಗಳು (ಕಾಕ್ರೋಚ್‌ಗಳು) ಎಂಬ ಮುಖ್ಯ ನ್ಯಾಯಾಧೀಶರ ಹೇಳಿಕೆಯು ಬಹುಶಃ ಇದರ ಚರಮಬಿಂದುವಾಯಿತು. ‘ಜಿರಳೆಗಳ ಪಕ್ಷ’ ಎಂಬ ಕಲ್ಪನೆಯು ಕಾಡ್ಗಿಚ್ಚಿನಂತೆ ಹರಡಿತು. , ‘ಕಾಕ್ರೋಚ್ ಪಾರ್ಟಿ’ ಎಂಬುದು ಉತ್ತರದಾಯಿತ್ವವನ್ನು ಒತ್ತಾಯಿಸಲು ಸ್ಫೋಟಗೊಳ್ಳುವ ಮಾರ್ಗಗಳನ್ನು ಹುಡುಕುತ್ತಿದ್ದ ಸಾಮೂಹಿಕ ಆಕ್ರೋಶದ ವಿಚಾರದ ಸಂಕೇತವಾಗಿತ್ತು

ಇದನ್ನೂ ಓದಿ : 16ನೇ ವಯಸ್ಸಿನಲ್ಲಿ ಮದುವೆ, 29ನೇ ವಯಸ್ಸಿನಲ್ಲಿ IAS ಕನಸುಗಳಿಗೆ ದಾರಿ ತೋರಿದ ಪ್ರಿಯಾ

ಕೆಲವು ದಿನಗಳ ಹಿಂದೆ, ಉತ್ತರ ಪ್ರದೇಶದಲ್ಲಿ ಬಿ.ಟೆಕ್‌ನಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಯೊಬ್ಬರು ಸರ್ಕಾರಿ ಉದ್ಯೋಗವನ್ನು ಪಡೆಯಲು ನಡೆಸಿದ 50 ವಿಫಲ ಪ್ರಯತ್ನಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ನಿರುದ್ಯೋಗ ಸಮಸ್ಯೆಯ ಅಗಾಧ ಪ್ರಮಾಣವು ಯುವಜನರನ್ನು ಕಂಗಾಲು ಮಾಡುತ್ತಿದ್ದು, ಅವರ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳುವ ಸಣ್ಣದೊಂದು ಭರವಸೆಯನ್ನು ಸಹ ಕಸಿದುಕೊಳ್ಳುತ್ತಿದೆ. ಉದ್ಯೋಗದಲ್ಲಿ ಇರುವವರಿಗೂ ಸಹ, ಅವರ ನೈಜ ವೇತನವು ನಿರಂತರವಾಗಿ ಕುಸಿಯುತ್ತಿದೆ. ಯಾವುದೇ ಸಾರ್ವಜನಿಕ ಮಧ್ಯಪ್ರವೇಶವಿಲ್ಲದೆ ಹೊಸ ತಂತ್ರಜ್ಞಾನಗಳು ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಎಲ್ಲಾ ಹಂತಗಳಲ್ಲಿ, ಪ್ರಸ್ತುತ ಇರುವ ಅಸಮರ್ಪಕ ಹಾಗೂ ಕೆಳಮಟ್ಟದ ಉದ್ಯೋಗಗಳಿಗೂ ಬೆದರಿಕೆಯನ್ನೊಡ್ಡುತ್ತಿವೆ.

ಹೊಸ್ತಿಲನ್ನು ದಾಟಿರುವ ಸನ್ನಿವೇಶ

ಶಿಕ್ಷಣ ಕ್ಷೇತ್ರದಲ್ಲಿಯೂ ಪರಿಸ್ಥಿತಿ ಇಷ್ಟೇ ಭಯಾನಕವಾಗಿದೆ ಮತ್ತು ಸ್ವತಃ ಪ್ರವೇಶ ಪರೀಕ್ಷೆಯೇ ವಿದ್ಯಾರ್ಥಿಗಳಿಗೆ ಅತಿದೊಡ್ಡ ವಂಚನೆ ಎಸಗಿದೆ. ಇದು ಅಸಾಧಾರಣ ಪರಿಸ್ಥಿತಿಯಾಗಿದ್ದು, ಅಸಾಧಾರಣ ಪ್ರತಿಕ್ರಿಯೆಯನ್ನೇ ಬಯಸಿತ್ತು. ದೇಶದಲ್ಲಿ ಸಂಘಟಿತ ವಿದ್ಯಾರ್ಥಿ-ಯುವಜನ ಚಳುವಳಿಗಳು ಈ ವಿಷಯಗಳ ಬಗ್ಗೆ ಸಾಕಷ್ಟು ಕಾಲದಿಂದ ಧ್ವನಿ ಎತ್ತುತ್ತ ಬಂದಿವೆ ಮತ್ತು ಆಂದೋಲನ ನಡೆಸುತ್ತಿವೆ. ಈ ಸಂಘಟಿತ ಕ್ರಿಯಾಶೀಲತೆಯ ಸರಮಾಲೆಯು ಸರ್ಕಾರದ ನೀತಿಗಳಿಗೆ ಪ್ರತಿರೋಧದ ಸಾಧ್ಯವಾದಷ್ಟು ವಿಶಾಲವಾದ ಒಂದು ವೇದಿಕೆಯನ್ನು ಸೃಷ್ಟಿಸುವ ಅಗಾಧ ಸಾಧ್ಯತೆಯನ್ನು ಗುರುತಿಸಿತು.

ಹೊಸ ದಮನಕಾರಿ ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನವು, ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಮಿಕರ ಸ್ವಯಂಪ್ರೇರಿತ ಪ್ರತಿಭಟನೆಗಳು ಸ್ಪೋಟಗೊಳ್ಳುವುದಕ್ಕೆ ಕಾರಣವಾಗಿದೆ. ಸಾಂಪ್ರದಾಯಿಕ ಕಾರ್ಮಿಕ ಚಳುವಳಿ ದುರ್ಬಲವಾಗಿರುವ ಪ್ರದೇಶಗಳಲ್ಲಿ, ಉದ್ಯೋಗ ಖಾತರಿ ಯೋಜನೆ (MGNREGA) ಮೂಲಕ ಬೇಡಿಕೆ ಆಧಾರಿತ 100 ದಿನಗಳ ಉದ್ಯೋಗವನ್ನು ಹಂತ ಹಂತವಾಗಿ ರದ್ದುಗೊಳಿಸುವುದರ ಬಗ್ಗೆಯೂ ಅದೇ ರೀತಿಯ ಅಸಮಾಧಾನ ವ್ಯಕ್ತವಾಗುತ್ತಿದೆ. ಟ್ರಂಪ್‌ರ ಅಮೆರಿಕದ ಅನ್ಯಾಯದ ಸುಂಕ ಭಯೋತ್ಪಾದನೆ ಮತ್ತು ಅದನ್ನು ಪ್ರತಿಭಟಿಸದ ಕೇಂದ್ರ ಸರ್ಕಾರದ ಶೋಚನೀಯ ಶರಣಾಗತಿಯು ರೈತಾಪಿಗಳ ಅನಿಶ್ಚಿತತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಮೋದಿ ಆಡಳಿತದ ‘ಸತ್ಯೋತ್ತರ’ (Post-truth) ನಿರೂಪಣೆಯನ್ನು ಸ್ಥಾಪಿಸಲು ಹಗಲಿರುಳು ಶ್ರಮಿಸುತ್ತಿರುವ ಕಾರ್ಪೊರೇಟ್ ಒಡೆತನದ ʼಮಡಿಲ ಮಾಧ್ಯಮʼ(ಗೋದೀ ಮೀಡಿಯ)ಗಳ ವಾಕರಿಕೆ ಹುಟ್ಟಿಸುವ ವರ್ತನೆಯಿಂದ ಯುವಜನರ ಅಸಹಾಯಕತೆ ಇನ್ನಷ್ಟು ಉಲ್ಬಣಗೊಳ್ಳುತ್ತಿದೆ. ಭಾರತೀಯ ಜನತಾ ಪಕ್ಷದ ಬಳಿ ಇರುವ ಅಪಾರ ಹಣದಿಂದ ಶಾಸಕರು ಮತ್ತು ಸಂಸದರನ್ನು ಜಾನುವಾರುಗಳಂತೆ ಖರೀದಿ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಸಂಪೂರ್ಣ ಪರಿಹಾಸ್ಯವಾಗಿದ್ದು, ಇದು ಅಸಮಾಧಾನದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿದೆ. ಆದ್ದರಿಂದ, ಈಗಿನದು  ಹೊಸ್ತಿಲನ್ನು ದಾಟಿರುವ ಸನ್ನಿವೇಶ. ಪ್ರಶ್ನಿಸುವ ಹಕ್ಕು ಮತ್ತು ವಿಮರ್ಶಿಸುವ ಹಕ್ಕು, ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಮೂಲಭೂತ ಹಕ್ಕುಗಳಾಗಿವೆ. ಆದರೆ ಈಗಿನ ಕರಾಳ ಕಾಲದಲ್ಲಿ, ವಿಮರ್ಶೆ ಎಂಬುದು ಒಂದು ನಿಷೇಧಿತ ಆಲೋಚನೆಯಾಗಿದೆ. ಭಯ

ಭಾರತೀಯ ಜನತಾ ಪಕ್ಷದ ಬಳಿ ಇರುವ ಅಪಾರ ಹಣದಿಂದ ಶಾಸಕರು ಮತ್ತು ಸಂಸದರನ್ನು ಜಾನುವಾರುಗಳಂತೆ ಖರೀದಿ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಸಂಪೂರ್ಣ ಪರಿಹಾಸ್ಯವಾಗಿದ್ದು, ಇದು ಅಸಮಾಧಾನದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿದೆ. ಆದ್ದರಿಂದ, ಈಗಿನದು  ಹೊಸ್ತಿಲನ್ನು ದಾಟಿರುವ ಸನ್ನಿವೇಶ.

ಎಂಎಲ್‌ಎ ಗಳು, ಎಂಪಿಗಳು , ಪ್ರತಿಬಟನಾಕಾರರು 

ವ್ಯಂಗ್ಯಚಿತ್ರ ಕೃಪೆ: ಅಲೋಕ್‌ ನಿರಂತರ್‌, ಸಕಾಳ್

ಸೌಂದರ್ಯವಿರುವುದು ಬೀದಿಯಲ್ಲಿ

ಆದ್ದರಿಂದ, ಜುಲೈ 20 ರಂದು ದಿಲ್ಲಿಯಲ್ಲಿ ಯುವಜನರು ಏನು ಮಾಡಿದರೋ  ಅದನ್ನು ಮಾಡಿದರು. ಅವರು ಭಯವನ್ನು ಮೆಟ್ಟಿನಿಂತರು. ಅವರ ಕ್ರಿಯೆಗಳೇ ಸ್ವತಃ ಮಾತನಾಡಿದವು. ಅವರ ಸಾಮೂಹಿಕ ಧೈರ್ಯವು ಎದ್ದು ಕಾಣುತ್ತಿತ್ತು. ಮಾತುಕತೆಯನ್ನು ನಿರಾಕರಿಸಿದ್ದು, ಅದರ ಬದಲಾಗಿ ಪ್ರದರ್ಶಿಸಿದ ಕ್ರೂರತೆಯು ಇಸ್ರೇಲ್‌ ದೇಶದ ನೇತನ್ಯಾಹು ಆಟದಂತೆಯೇ ಇತ್ತು. ದಿಲ್ಲಿಯಲ್ಲಿನ ಈ ಹೋರಾಟವು ಪ್ರತ್ಯೇಕ ಬೆಳವಣಿಗೆಯಲ್ಲ. ಇದು ಈಗಾಗಲೇ ದೇಶಾದ್ಯಂತ ಪ್ರತಿಭಟನೆಗಳಿಗೆ ಪ್ರಚೋದನೆಯಾಗಿ ಕಾರ್ಯನಿರ್ವಹಿಸಿದೆ ಮತ್ತು ಅಲ್ಲಿ ಪ್ರತಿಭಟನೆಗಳು ನಡೆದಿವೆ ಮತ್ತು ಮುಂದುವರಿಯುತ್ತವೆ. ಪ್ರತಿಭಟನಾಕಾರರೊಂದಿಗೆ ಮಾತನಾಡಲು ಕೇಂದ್ರ ಸರ್ಕಾರವು ತೋರಿದ ಹಠಮಾರಿ ನಿರಾಕರಣೆಯು, ಕೊನೆಗೆ ಸಂವಾದದ ಒಂದು  ಸಣ್ಣ ಸೂಚನೆಗೆ ದಾರಿ ಮಾಡಿಕೊಡಬೇಕಾಯಿತು.

ಆದಾಗ್ಯೂ, ಕಾಲವೇ ತನ್ನ ಎಲ್ಲ ತೊಂದರೆಗಳನ್ನು ಶಮನಗೊಳಿಸಿ ಪರಿಸ್ಥಿತಿಯನ್ನು ಎಂದಿನ ಸ್ಥಿತಿಗೆ ತರುತ್ತದೆ ಎಂದು ಕೇಂದ್ರ ಸರ್ಕಾರ ಕಲ್ಪಿಸಿಕೊಳ್ಳುತ್ತಿರುವಂತೆಯೇ, ಸರಣಿ ಪ್ರತಿಕ್ರಿಯೆಗಳು ಸ್ಫೋಟಗೊಳ್ಳಲಿವೆ, ಸರಕಾರವು ಊಹಿಸಲೂ ಸಾಧ್ಯವಾಗದಂತಹ ಪರಿಣಾಮಗಳನ್ನು ಎದುರಿಸಬೇಕಾಗಿ ಬಂದರೆ  ಅದಕ್ಕೆ ಸ್ವತಃ ಅವರೇ ಜವಾಬ್ದಾರರಾಗಲಿದ್ದಾರೆ ವಿನಃ ಬೇರಾರೂ ಅಲ್ಲ. ಸೋನಮ್ ವಾಂಗ್ಚುಕ್ ಒಂದು ಅತ್ಯಂತ ಮಹತ್ವದ ಪ್ರಶ್ನೆಯತ್ತ ಗಮನ ಕೇಂದ್ರೀಕರಿಸಲು ಮಾಡಿದ ಉದಾತ್ತ ಪ್ರಯತ್ನಗಳ ಹೊರತಾಗಿಯೂ, ಪರಿಸ್ಥಿತಿ ಈಗ ಅವರನ್ನೂ ಮೀರಿ ಬೆಳೆದು ಸಾಮೂಹಿಕ ಒಡೆತನವನ್ನು ಪಡೆದುಕೊಂಡಿದೆ ಎಂಬುದನ್ನು ಗುರುತಿಸಲೇಬೇಕು. ‘ಮಡಿಲ ಮಾಧ್ಯಮ’ ಕೂಡ ಈಗ ಮುಖ ಮುಚ್ಚಿಕೊಳ್ಳಲು ಜಾಗ ಹುಡುಕುತ್ತಿದೆ. ನೆಲಮಟ್ಟದಲ್ಲಿ ಏನು ನಡೆದಿದೆ ಎಂಬುದರ ಮೇಲೆ ಪರದೆ ಎಳೆಯಲು ತಮ್ಮ ಹುಸಿ ಕಥನಗಳನ್ನು  ಹೇಗೆ ತಳ್ಳಬೇಕು ಎಂಬುದು ಅವರಿಗೆ ತೋಚುತ್ತಿಲ್ಲ; ಜನರು ‘ಅರಸ ಬೆತ್ತಲೆ’ ಎಂದು ಬಹಿರಂಗವಾಗಿ ಬೊಟ್ಟು ಮಾಡಿ ತೋರಿಸಲಿದ್ದಾರೆ.

ಅಂತಿಮವಾಗಿ, ಪ್ರಜಾಪ್ರಭುತ್ವಕ್ಕೆ ಎಷ್ಟೇ ಬೆದರಿಕೆಯಿದ್ದರೂ ಅದು ಸತ್ತಿಲ್ಲ ಎಂಬುದನ್ನು ನಾವು ಗುರುತಿಸಬೇಕಾಗಿದೆ. ಅದು ಇನ್ನೂ ಗಟ್ಟಿಯಾಗೇ ಉಸಿರಾಡುತ್ತಿದೆ. ಫ್ರಾನ್ಸ್‌ನಲ್ಲಿ 1968 ರ ಮೇ ತಿಂಗಳ ವಿದ್ಯಾರ್ಥಿ ಚಳವಳಿಯ ಸಮಯದಲ್ಲಿ ಪ್ರಸಿದ್ಧಿಗೆ ಬಂದ ‘ಸೌಂದರ್ಯವಿರುವುದು ಬೀದಿಯಲ್ಲಿ’ (the beauty is in the street) ಎಂಬ ಮಾತನ್ನು ಒಬ್ಬರು  ನೆನಪಿಸಿದ್ದಾರೆ. ಅಂದು ಈ ಮಾತು  ವಿದ್ಯಾರ್ಥಿಗಳನ್ನು ನಿದ್ದೆಯಿಂದೆಬ್ಬಿಸಿ ಅವರು ವಿಯೆಟ್ನಾಂನ ಅಪವಿತ್ರ ಯುದ್ಧದೊಂದಿಗೆ ಶಿಕ್ಷಣ ಪ್ರಕ್ರಿಯೆಯ ಮಿಲಿಟರೀಕರಣವನ್ನು ಹಿಮ್ಮೆಟ್ಟಿಸುವ ಮೂಲಕ ಇತಿಹಾಸ ಬರೆಯುವಂತೆ ಮಾಡಿತ್ತು. ಬೀದಿಗಳಿಗೆ ಆ ಸಾಮರ್ಥ್ಯವಿದೆ. ಮುಂಬರುವ ದಿನಗಳಲ್ಲಿ, ಯುವಜನರಲ್ಲಿರುವ ಸ್ವಯಂಪ್ರೇರಿತ ಮತ್ತು ಸಂಘಟಿತ ಶಕ್ತಿಗಳು ಯೋಜನೆ ರೂಪಿಸಿ, ತಮ್ಮ ನ್ಯಾಯಯುತ ಆಕ್ರೋಶಕ್ಕೆ ಸರಿಯಾದ ಒಂದು ದಿಕ್ಕು ನೀಡಲು ಸಂಯೋಜನೆ ನಡೆಸಬೇಕಾಗಿದೆ. ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಪಕ್ಷಗಳು ಅವರ ಭವಿಷ್ಯದ ಕ್ರಿಯೆಗಳು ಹಾಗೂ ಪ್ರಯತ್ನಗಳಿಗೆ ಬೆಂಬಲವಾಗಿ ಸೌಹಾರ್ದದಿಂದ ನಿಲ್ಲುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಭಯ

ಇದನ್ನೂ ನೋಡಿ : ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ

Donate Janashakthi Media

Leave a Reply

Your email address will not be published. Required fields are marked *