ಬಿಡದಿ ಟೌನ್ ಶಿಪ್ ಯೋಜನೆ ಅನುಷ್ಠಾನ ಖಂಡಿಸಿ; ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ರೈತರ ಬೃಹತ್ ರಸ್ತೆ ತಡೆ

ಬೆಂಗಳೂರು: ಸುಮಾರು 9640 ಎಕರೆ ಫಲವತ್ತಾದ, ಸಮೃದ್ದ ನೀರಾವರಿ ಹಾಗೂ ಬಹು ವಾರ್ಷಿಕ ಬೆಳೆ ಇರುವ ಕೃಷಿ ಭೂಮಿ ಮೇಲೆ ಬಿಡದಿ ಸಮಗ್ರ ಉಪ ನಗರ ಯೋಜನೆ ವಿರೋಧಿಸಿ ಕಳೆದ 14 ತಿಂಗಳಿನಿಂದ ನಡೆಯುತ್ತಿದ್ದ ನಿರಂತರ ಆಹೋ ರಾತ್ರಿ ಧರಣಿ ಹೋರಾಟವು ಮೇ 11ರಂದು ಬಿಡದಿ ಕೈಗಾರಿಕಾ ಪ್ರದೇಶ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ದಿನವಿಡೀ ಬಂದ್ ಮಾಡುವ ಮೂಲಕ ತೀವ್ರ ಸ್ವರೂಪ ಪಡೆದಿದೆ.

ಏಪ್ರೀಲ್ 30 ರಂದು ರಾಜ್ಯ ಸಚಿವ ಸಂಪುಟ ನೀಡಿರುವ ಅನುಮೋದನೆ ವಾಪಸು ಪಡೆಯಬೇಕು. ಕೃಷಿ ಭೂಮಿ ಭೂ ಸ್ವಾಧೀನವನ್ನು ರದ್ದು ಪಡಿಸಬೇಕು, ಬೆಂಗಳೂರು ಸುತ್ತಲಿನ ಹಸಿರು ಪ್ರದೇಶವನ್ನು ರಕ್ಷಿಸಬೇಕು ಎಂದು ಒತ್ತಾಯಿಸುತ್ತಿರುವ ಸಹಸ್ರಾರು ಪ್ರತಿಭಟನಾಕಾರರು ಭೂ ಸ್ವಾಧೀನ ಪ್ರಕ್ರಿಯೆ ಯನ್ನು ನಿಲ್ಲಿಸಿ ರಾಜ್ಯ ಸರ್ಕಾರ ಮಾತುಕತೆಗೆ ದಿನಾಂಕ ನಿಗದಿ ಮಾಡುವವರೆಗೆ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು ಎಚ್ವರಿಸಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಸರ್ಕಾರ: ಮುಸ್ಲಿಂ ಸಮುದಾಯದಲ್ಲಿ ಹೆಚ್ಚಿದ ಆತಂಕ

ಸುಮಾರು 9640 ಎಕರೆ ಫಲವತ್ತಾದ, ಸಮೃದ್ದ ನೀರಾವರಿ ಹಾಗೂ ಬಹು ವಾರ್ಷಿಕ ಬೆಳೆ ಇರುವ ಕೃಷಿ ಭೂಮಿ ಮೇಲೆ ಬಿಡದಿ ಸಮಗ್ರ ಉಪ ನಗರ ಯೋಜನೆಯು ಭೂ ಸ್ವಾಧೀನಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಕಳೆದ 14 ತಿಂಗಳಿನಿಂದ ನಡೆಯುತ್ತಿದ್ದ ನಿರಂತರ ಆಹೋ ರಾತ್ರಿ ಧರಣಿ ಹೋರಾಟ ಇದೀಗ ಬಿಡದಿ ಕೈಗಾರಿಕಾ ಪ್ರದೇಶ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ದಿನವಿಡೀ ಬಂದ್ ಮಾಡುವ ಮೂಲಕ ತೀವ್ರ ಸ್ವರೂಪ ಪಡೆದಿದೆ.

“ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿ”, “ಭೂ ಸ್ವಾಧೀನ ರದ್ದುಪಡಿಸಿ”, “ಬೆಂಗಳೂರು ಸುತ್ತಲಿನ ಹಸಿರು ಪ್ರದೇಶವನ್ನು ಕಾಪಾಡಿ” ಎಂಬ ಘೋಷಣೆಗಳು ಪ್ರತಿಭಟನಾ ಸ್ಥಳದಲ್ಲಿ ಮೊಳಗಿದವು. ಏಪ್ರಿಲ್ 30ರಂದು ರಾಜ್ಯ ಸಚಿವ ಸಂಪುಟ ನೀಡಿರುವ ಅನುಮೋದನೆಯನ್ನು ತಕ್ಷಣ ವಾಪಸು ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸುವವರೆಗೆ ರಸ್ತೆ ತಡೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೈರಮಂಗಲ -ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಯಶವಂತ ಟಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಕಾಂ.ರಾಘವೇಂದ್ರ, ಎಸ್ ಎಫ್ ಐ ರಾಜ್ಯ ಕಾರ್ಯದರ್ಶಿ ಕಾಂ.ವಿಜಯಕುಮಾರ್, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷ ಬೈರೇಗೌಡ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಕಾಂ.ಮರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂ.ಅಂಕಪ್ಪ ಮುಂತಾದವರು ಮಾತಾನಾಡಿದರು.

ದಿನಾಂಕ 12-03-2025 ರಂದು ಗ್ರೇಟರ್ ಬೆಂಗಳೂರು ಪ್ರಾಧೀಕಾರದ ಬಿಡದಿ ನಗರ ಯೋಜನೆ ಉದ್ದೇಶಕ್ಕಾಗಿ ನಗರಾಭಿವೃದ್ಧಿ ಇಲಾಖೆ ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ 1987 ರ ಅಡಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರು ಸೇರಿದಂತೆ ಬಹುತೇಕ ರೈತರು ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ ನಿರಂತರ ಧರಣಿ ನಡೆಸುತ್ತಿದ್ದಾರೆ.

ಇದನ್ನೂ ನೋಡಿ: ಕರಾವಳಿ ಪ್ರವಾಸೋದ್ಯಮ : ಸ್ಥಳೀಯರ ಬದುಕು ಉಳಿಯಬೇಕೇ ಹೊರತು ಕಾರ್ಪೊರೇಟ್ ಲಾಭಕ್ಕಲ್ಲ – ಮುನೀರ್ ಕಾಟಿಪಳ್ಳ

Donate Janashakthi Media

Leave a Reply

Your email address will not be published. Required fields are marked *