ಕರ್ನಾಟಕದಲ್ಲಿ ಆತ್ಮಹತ್ಯೆ ಹೆಚ್ಚಳ – NCRB ವರದಿ

ಬೆಂಗಳೂರು: ಮೇ 6ರಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ 2024ನೇ ಸಾಲಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಕೃಷಿ ವಲಯಕ್ಕೆ ಸಂಬಂಧಿಸಿದ ವ್ಯಕ್ತಿಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 2.22 ರಷ್ಟು ಇಳಿಕೆಯಾಗಿದೆ. ಆದರೆ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಪ್ರಮಾಣ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ
2024ರಲ್ಲಿ ದೇಶಾದ್ಯಂತ ಒಟ್ಟು 10,546 ಕೃಷಿ ವಲಯದ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ (2023) ಈ ಸಂಖ್ಯೆ 10,786 ಇತ್ತು.

ಇದನ್ನೂ ಓದಿ: ಯುಎಇ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ

ರೈತರು: 4,633 ಪ್ರಕರಣಗಳು.

ಕೃಷಿ ಕಾರ್ಮಿಕರು: 5,913 ಪ್ರಕರಣಗಳು.

ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಕೃಷಿ ವಲಯದ ಪಾಲು ಶೇ. 6.2 ರಷ್ಟಿದೆ.

ಕರ್ನಾಟಕದ ಸ್ಥಿತಿ

ಕೃಷಿ ಸಂಬಂಧಿತ ಆತ್ಮಹತ್ಯೆಗಳಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ.

ರೈತರು: 1,770 (ಹಿಂದಿನ ವರ್ಷ 1,425 ಇತ್ತು).

ಇದನ್ನೂ ನೋಡಿ: ಚುನಾವಣಾ ಫಲಿತಾಂಶ: ಗೆದ್ದವರು ಸೋಲಿಸಿದ್ದು ಯಾರನ್ನು? ಏನನ್ನು? Janashakthi Media

ಕೃಷಿ ಕಾರ್ಮಿಕರು: 1,201 (ಹಿಂದಿನ ವರ್ಷ 998 ಇತ್ತು).

ಕರ್ನಾಟಕದಲ್ಲಿ ಒಟ್ಟು 2,811 ಪುರುಷರು ಮತ್ತು 160 ಮಹಿಳೆಯರು ಕೃಷಿ ಬಿಕ್ಕಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ವಂತ ಭೂಮಿ ಹೊಂದಿದ್ದು ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆಯಲ್ಲಿ ಕರ್ನಾಟಕ (1,617) ಎರಡನೇ ಸ್ಥಾನದಲ್ಲಿದೆ.

ರಾಜ್ಯವಾರು ಪಟ್ಟಿ

ಸೈಬರ್‌ ಅಪರಾಧ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ನಗರವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಹೇಳಿದೆ.

ಈ ವರದಿಯ ಪ್ರಕಾರ, 2024ರಲ್ಲಿ ದೇಶದಲ್ಲಿ ಒಟ್ಟಾರೆ 34,958 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಬೆಂಗಳೂರು ನಗರ ಒಂದರಲ್ಲೇ 17,561 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನ ಬಳಿಕ 4,939 ಪ್ರಕರಣಗಳೊಂದಿಗೆ ಮುಂಬಯಿ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಹೈದರಾಬಾದ್‌ (4,009), ಚೆನ್ನೈ (1,882), ಪುಣೆ (1,504) ಮತ್ತು ಲಖನೌ (1,292) ನಗರಗಳಿವೆ.ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (404).  ಕರ್ನಾಟಕ ರಾಜ್ಯದಲ್ಲಿ 2024ರಲ್ಲಿ ಒಟ್ಟಾರೆ 21,993 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 2023ರಲ್ಲಿ 21,889 ಸೈಬರ್‌ ಪ್ರಕರಣಗಳು ದಾಖಲಾಗಿದ್ದವು. ಈ ಅಂಕಿ-ಸಂಖ್ಯೆಗಳನ್ನು ಅವಲೋಕಿಸಿದರೆ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್‌ ಅಪರಾಧಗಳು ಏರಿಕೆಯಾಗುತ್ತಿರುವುದು ದೃಢಪಟ್ಟಿದೆ.

2023ರಲ್ಲಿ ಬೆಂಗಳೂರಿನಲ್ಲಿ 17,631 ಸೈಬರ್‌ ಪ್ರಕರಣಗಳು ದಾಖಲಾಗಿದ್ದವು. ಅದೇ ರೀತಿ 2024ರಲ್ಲಿ 17,561 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 3,632 ಪ್ರಕರಣಗಳು ಇತ್ಯರ್ಥವಾಗಿವೆ. ಇನ್ನೂ 13,929 ಪ್ರಕರಣಗಳು ಬಾಕಿ ಉಳಿದಿವೆ. ಕರ್ನಾಟಕದಲ್ಲಿ 2024ರಲ್ಲಿ 5,096 ಸೈಬರ್‌ ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಇಡೀ ರಾಜ್ಯದ ಮುಕ್ಕಾಲು ಪ್ರಮಾಣದಷ್ಟು ಸೈಬರ್‌ ಪ್ರಕರಣಗಳು ಬೆಂಗಳೂರು ನಗರ ಒಂದರಲ್ಲೇ ದಾಖಲಾಗುತ್ತಿವೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *