ಯುಜಿಸಿ-ನೆಟ್‌ ಪರೀಕ್ಷಾ ಪತ್ರಿಕೆಗಳಲ್ಲಿಯೂ ದೋಷಗಳು- ಎನ್‌ಟಿಎ ಮತ್ತು ಎನ್‌ಇಪಿ ರದ್ದಿಗೆ ಆಗ್ರಹ

ಎನ್‌ಟಿಎ ಅಂದರೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  ಮತ್ತೆ ತನ್ನ ಅಸಮರ್ಥತೆಯನ್ನು ಪ್ರದರ್ಶಿಸಿದೆ. NEET ಪದವಿಪೂರ್ವ ಪರೀಕ್ಷೆಯ ಪತ್ರಿಕೆ ಸೋರಿಕೆಯ ನಂತರ ಈಗ ಪ್ರಾಧ್ಯಾಪಕ ಹುದ್ದೆಗಳು ಮತ್ತು ಜೂನಿಯರ್ ಸಂಶೋಧನಾ ಫೆಲೋಶಿಪ್‌ಗಳಿಗೆ ಅರ್ಹತೆಯನ್ನು ನಿರ್ಧರಿಸುವ ಪ್ರಮುಖ ಪರೀಕ್ಷೆಯಾದ ವಿಶ್ವವಿದ್ಯಾಲಯ ಅನುದಾನ ಆಯೋಗ-ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಯುಜಿಸಿ-ನೆಟ್ UGC-NET)ಯ ಪ್ರಶ್ನೆ ಪತ್ರಿಕೆಗಳಲ್ಲಿ ಬಹಳಷ್ಟು ದೋಷಗಳು ಕಂಡುಬಂದ ಕಾರಣ ಮೂರು ವಿಷಯಗಳಿಗೆ ಯುಜಿಸಿ-ಎನ್‌ಇಟಿ ಪರೀಕ್ಷೆಗಳನ್ನು ಮತ್ತೆ ನಡೆಸಬೇಕಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ ) ಘೋಷಿಸಬೇಕಾಗಿ ಬಂದಿದೆ. ಯುಜಿಸಿ-ನೆಟ್‌

ಇಂಗ್ಲಿಷ್ ಮತ್ತು ಕಾಮರ್ಸ್‌ ಪರೀಕ್ಷೆಗಳನ್ನು ಸೆಪ್ಟೆಂಬರ್ 9 ರಂದು ಮರು ನಡೆಸಲಾಗುವುದು ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳನ್ನು ಸೆಪ್ಟೆಂಬರ್ 10 ರಂದು ನಡೆಸಲಾಗುವುದು. ಯುಜಿಸಿ-ನೆಟ್ ನಡೆದ ಇತರ 84 ವಿಷಯಗಳ ಫಲಿತಾಂಶಗಳನ್ನು ನಿಗದಿಪಡಿಸಲಾಗಿದೆ ಎಂದು ಘೋಷಿಸಲಾಗುವುದು ಮತ್ತು ಸೀಟುಗಳ ಹಂಚಿಕೆಯನ್ನು ಕಡಿಮೆ ಮಾಡಲಾಗುವುದಿಲ್ಲ ಎಂದು ಎನ್‌ಟಿಎ ಪ್ರಕಟಿಸಿದೆ.

ಪರೀಕ್ಷೆಗಳ ಉತ್ತರ ಕೀಲಿಗಳನ್ನು ಆಗಸ್ಟ್ 16 ರಂದಷ್ಟೇ ಬಿಡುಗಡೆ ಮಾಡಲಾಯಿತು. ಈ  ವಿಳಂಬವೂ ಗಮನಾರ್ಹ ಟೀಕೆಗೆ ಕಾರಣವಾಗಿದೆ.

ದೋಷಗಳ ದೂರುಗಳನ್ನು ತನಿಖೆ ಮಾಡಲು ಮತ್ತು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಎನ್‌ಟಿಎ ಹೇಳಿದೆ.

“ಸಮಿತಿ ಮೂರು ಪ್ರಶ್ನೆಪತ್ರಿಕೆಗಳಲ್ಲಿ ಪ್ರಮುಖ ವಿದ್ವಾಂಸರ ಹೆಸರುಗಳಲ್ಲಿ ತಪ್ಪಾದ ಕಾಗುಣಿತ, ಪುಸ್ತಕ ಶೀರ್ಷಿಕೆಗಳಲ್ಲಿ ಗೋಜಲು, ಪ್ರಶ್ನೆಗಳ ಮೂಲ ಪದಗಳಲ್ಲಿ ದೋಷಗಳು, ವ್ಯಾಕರಣ ದೋಷಗಳು, ಲಿಂಗ ಮತ್ತು ಸಂಖ್ಯಾ ದೋಷಗಳು, ವಿರಾಮಚಿಹ್ನೆಗಳ ತಪ್ಪುಗಳು ಮತ್ತು ಸ್ಥಾಪಿತ ಪರಿಕಲ್ಪನೆಗಳಿಗೆ ಪ್ರಮಾಣಿತವಲ್ಲದ ಪದಗಳು ಮತ್ತು ಹಿಂದೆ ನಿರ್ವಹಿಸಲಾದ ಗಮನಾರ್ಹ ಸಂಖ್ಯೆಯ ಪ್ರಶ್ನೆಗಳ ಪುನರಾವರ್ತನೆ ಸೇರಿದಂತೆ ಹಲವು ವಾಸ್ತವಿಕ, ಬರವಣಿಗೆ ಮತ್ತು  ಅನುವಾದ ದೋಷಗಳನ್ನು ಹೊಂದಿವೆ ಎಂದು ಸಮಿತಿಯು ಕಂಡುಹಿಡಿದಿದೆ. ನ್ಯಾಯಯುತ ಮತ್ತು ದೋಷ-ಮುಕ್ತ ಪರೀಕ್ಷೆಯನ್ನು ನಡೆಸುವ ಹಿತದೃಷ್ಟಿಯಿಂದ, ಈ ಮೂರು ಪತ್ರಿಕೆಗಳನ್ನು ಮರು ನಡೆಸಬೇಕೆಂದು ಸಮಿತಿ ಶಿಫಾರಸು ಮಾಡಿದೆ, ”ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ :ಹನೂರು ಶೂಟೌಟ್‌: ಹೊಣೆ ಸಾಬೀತಾದರೆ ರಾಜೀನಾಮೆಗೆ ಸಿದ್ಧ ಎಂದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ

ನಾಚಿಕೆಗೇಡಿನ ಸಂಗತಿ- ಸಿಪಿಐ(ಎಂ) ಪೊಲಿಟ್‌ಬ್ಯುರೊ

ಎನ್.ಟಿ.ಎ. ನಡೆಸಿರುವ  ಮೂರು ಎನ್‌ಇಟಿ-ಯುಜಿಸಿ( NET-UGC )ಪರೀಕ್ಷಾ ಪತ್ರಿಕೆಗಳಲ್ಲಿಯೂ  ದೋಷಗಳು ಕಂಡು ಬಂದಿರುವ ಬೆಳಕಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಅವನತಿಗೆ ಮೂಲ ಕಾರಣವಾದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ, 2020(ಎನ್‌.ಇ.ಪಿ.) ಎರಡನ್ನೂ ರದ್ದುಗೊಳಿಸಬೇಕೆಂಬ  ಆಗ್ರಹವನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ  ಪುನರುಚ್ಚರಿಸಿದೆ. ಈ ನಾಚಿಕೆಗೇಡಿನ ಪ್ರಕರಣ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ಹೊಲಸನ್ನು ಮತ್ತೊಮ್ಮೆ ಬಹಿರಂಗಕ್ಕೆ ತಂದಿದೆ.ಮತ್ತು ಈ ಪರೀಕ್ಷೆಗಳನ್ನು ನಡೆಸಲು ಎನ್.ಟಿ.ಎ ಸಂಪೂರ್ಣವಾಗಿ  ಅಸಮರ್ಥತೆವಾಗಿದೆ ಎಂಬುದು ಬಟ್ಟ ಬಯಲಾಗಿದೆ ಎಂದು ಸಿಪಿಐ(ಎಂ) ಆಕ್ರೋಶ ವ್ಯಕ್ತಪಡಿಸಿದೆ.

ಶೋಚನೀಯ ಸಂಗತಿಯೆಂದರೆ, ರಾಷ್ಟ್ರೀಯ ಶಿಕ್ಷಣ ನೀತಿಯ ವಿನಾಶಕಾರಿ ಪರಿಣಾಮಗಳನ್ನು ನಿವಾರಿಸುವ ಬದಲು, ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ವ್ಯವಸ್ಥೆಯನ್ನು ಪ್ರಶ್ನಿಸುವವರನ್ನು ಗುರಿಯಾಗಿಸಿಕೊಂಡಿವೆ. ಸ್ಥಳೀಯ ಶಾಲೆಯೊಂದರ ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಜನಾಬ್ ಮಾಫಿಕ್‌ನ ಹತ್ಯೆಯು ಅವರ ಅಸಹಿಷ್ಣುತೆಯ ದ್ಯೋತಕವಾಗಿದೆ. ಸಿಪಿಐ(ಎಂ) ಈ ಹತ್ಯೆಯನ್ನು ಖಂಡಿಸುತ್ತದೆ ಎಂದಿರುವ ಪೊಲಿಟ್‌ಬ್ಯುರೊ, ಬಿಜೆಪಿ ಸರ್ಕಾರ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಅವರಿಗೆ ಶಿಕ್ಷೆಯನ್ನು ಖಾತರಿಪಡಿಸಬೇಕೆಂದು ಒತ್ತಾಯ ಪಡಿಸಿದೆ.

ಕೇಂದ್ರ ಸರಕಾರವೂ ಮತ್ತು ರಾಜ್ಯ ಸರ್ಕಾರಗಳೂ ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಶಿಕ್ಷಕರನ್ನು ಒಳಗೊಂಡಂತೆ ಮೂಲಭೂತ ಮೂಲಸೌಕರ್ಯಗಳನ್ನು ಖಚಿತಪಡಿಸಬೇಕು. ಶೈಕ್ಷಣಿಕ ಮೂಲಸೌಕರ್ಯವನ್ನು ಸುಧಾರಿಸಲು, ಸಾರ್ವಜನಿಕ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಪಾರದರ್ಶಕ, ದೋಷರಹಿತ ಪರೀಕ್ಷೆಗಳನ್ನು ನಡೆಸುವತ್ತ ಗಮನ ಕೇಂದ್ರೀಕರಿಸಬೇಕು. ವಿದ್ಯಾರ್ಥಿಗಳ ಸಬಲೀಕರಣ ಇಂತಹ ವಾಸ್ತವಿಕ ಕ್ರಮಗಳಿಂದ ಸಾಧ್ಯವೇ  ಹೊರತು ಪೊಳ್ಳು ಹೇಳಿಕೆಗಳು ಮತ್ತು ದಮನಕಾರಿ ಕ್ರಮಗಳಿಂದಲ್ಲ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ಯುಜಿಸಿ-ನೆಟ್‌

ಇದನ್ನೂ ನೋಡಿ : ಕ್ಯಾಸ್ಟ್ರೋ 100 | ಕ್ಯೂಬಾ ಆರೋಗ್ಯ–ಶಿಕ್ಷಣದಲ್ಲಿ ಜಗತ್ತಿಗೆ ಮಾದರಿಯಾಗಿದ್ದು ಹೇಗೆ? | ಭಾರತ ಏನು ಕಲಿಯಬೇಕು?

Donate Janashakthi Media

Leave a Reply

Your email address will not be published. Required fields are marked *